Karnataka Bhagya

ವಿಮೋಚನಾ ಹೋರಾಟ ಎಲ್ಲರಿಗೂ ಪ್ರೇರಣೆ

ಯಾದಗಿರಿ : ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ನಾವಿಂದು ಅಮೂಲ್ಯ ಸ್ವಾತಂತ್ರö್ಯವನ್ನು ಅನುಭವಿಸುತ್ತಿದ್ದು, ಅವರ ಕನಸುಗಳ ಸಾಕಾರಕ್ಕೆ ನಾವು ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ವಿಮೋಚನಾ ಹೋರಾಟ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಹಲವು ವರ್ಷಗಳ ಕಾಲ ಹೈದರಾಬಾದ್ ಕರ್ನಾಟಕ ಪ್ರದೇಶವು ಹೈದ್ರಾಬಾದ್ ನಿಜಾಮನ ಅಧಿನದಲ್ಲಿದ್ದವು. ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಪ್ರದೇಶಗಳು ನಿಜಾಮನ ಆಳ್ವಿಕೆಯಲ್ಲಿದ್ದವು. ೧೯೪೭ರ ಆಗಸ್ಟ್ ೧೫ ರಂದು ನಮ್ಮ ಭಾರತ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕರೂ, ಈ ಅವಧಿಯಲ್ಲಿ ಸುಮಾರು ೫೬೨ ಸ್ವತಂತ್ರ ಸಂಸ್ಥಾನಗಳಿದ್ದು, ಅವುಗಳನ್ನು ಸ್ಥಳೀಯ ಅರಸರು ಆಳುತ್ತಿದ್ದರು, ಅದರಲ್ಲಿ
ಹೈದರಾಬಾದ ಸಂಸ್ಥಾನ ನಿಜಾಮನ ಮಂತ್ರಿ ಕಾಶಿಂ ರಜ್ವಿಯ ದೌರ್ಜನ್ಯದಿಂದಾಗಿ ಈ ಭಾಗದ ಜನತೆ ಹೋರಾಟಕ್ಕೆ ಇಳಿಯಬೇಕಾಯಿತು. ಇಂತಹ ಸಂದರ್ಭದಲ್ಲಿ ಇಲ್ಲಿಯ ಜನರು ಭಾರತದ ಒಕ್ಕೂಟದಲ್ಲಿ ಹೈದರಾಬಾದ ಕರ್ನಾಟಕವನ್ನು ಸೇರಿಸುವಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹಾಗೂ ಗೃಹ ಮಂತ್ರಿ ಹಾಗೂ ಭಾರತದ ಉಕ್ಕಿನ ಮನುಷ್ಯರೆಂದೇ ಕರೆಯಲ್ಪಡುವ ಸರ್ದಾರ್ ವಲ್ಲಭ್‌ಭಾಯಿ ಪಟೇಲರಿಗೆ ಮನವಿ ಸಲ್ಲಿಸಿದರು. ೧೯೪೮ರ ಸೆಪ್ಟೆಂಬರ್ ತಿಂಗಳಲ್ಲಿ ಅಂದಿನ ಗೃಹ ಮಂತ್ರಿಗಳಾದ ಸರ್ದಾರ್ ಪಟೇಲರು ಹೈದ್ರಾಬಾದ್ ಕರ್ನಾಟಕ ಜನರನ್ನು ಶೋಷಣೆಯಿಂದ ಮುಕ್ತರನ್ನಾಗಿ ಮಾಡಲು ಭಾರತದ ಸೇನೆಯನ್ನು ಹೈದರಾಬಾದ್‌ಗೆ ಕಳಿಸಿದರು. ಇದನ್ನು ಇತಿಹಾಸದಲ್ಲಿ ಪೊಲೀಸ್ ಕ್ರಮವೆಂದು ಬಣ್ಣಿಸಲಾಗಿದೆ.
ಭಾರತದ ಸೇನೆಯು ಹೈದರಾಬಾದ್ ಪ್ರವೇಶಿಸಿ ನಿಜಾಮನ ಸೈನ್ಯವನ್ನು ಬಗ್ಗು ಬಡಿದ ಪರಿಣಾಮ ನಿಜಾಮ ಭಾರತದ ಸೇನೆಗೆ ಶರಣಾದ. ಸರ್ದಾರ್ ಪಟೇಲರು ನಿಜಾಮನಿಂದ ಪತ್ರವನ್ನು ಬರೆಸಿಕೊಂಡರು. ನಿಜಾಮನು ಸ್ವತಃ ತಾನು ಸ್ವ ಇಚ್ಛೆಯಿಂದ ಭಾರತದ ಒಕ್ಕೂಟ ಸೇರುವುದಾಗಿ, ಇದಕ್ಕೆ ಯಾರ ಒತ್ತಡವೂ ಇಲ್ಲ ಎಂದು ಬರೆದುಕೊಡುವ ಮುಖಾಂತರ ೧೯೪೮ರ ಸೆಪ್ಟೆಂಬರ್ ೧೭ ರಂದು ಈ ಪ್ರದೇಶ ಸ್ವತಂತ್ರö ಭಾರತದಲ್ಲಿ ವಿಲಿನ ಆಗುವದರೊಂದಿಗೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಲಾಯಿತು ಎಂದು ಹೇಳಿದರು.
ನಮ್ಮ ದೇಶ ಭಾರತ, ನಾವೆಲ್ಲರೂ ಭಾರತೀಯರು, ಭಾರತವು ಪರಕಿಯರಿಂದ ಆಳಲ್ಪಟ್ಟು ಅವರ ಕಪಿಮುಷ್ಠಿಯಿಂದ ಹೊರಬರಲು ೧೯೪೭ರ ಆಗಸ್ಟ್ ೧೫ರ ವರೆಗೆ ಕಾಯಬೇಕಾಯಿತು. ಅಂತೆಯೇ ಕಲ್ಯಾಣ ಕರ್ನಾಟಕ ಭಾಗವು ೧೯೪೮ರ ಸೆಪ್ಟೆಂಬರ್ ೧೭ ರಂದು ಸ್ವತಂತ್ರ‍್ರಗೊAಡಿತು. ಹೈದ್ರಾಬಾದ್ ನಿಜಾಮ ಅಸಫ್‌ಜಾಹಿ, ರಾಜವಂಶದ ೭ನೇಯವರಾದ ಮೀರ್ ಉಸ್ಮಾನ್ ಅಲಿಖಾನ್ ಮೇಲೆ “ಆಪರೇಷನ್ ಪೋಲೋ” ಮೂಲಕ ಸರ್ದಾರ ವಲ್ಲಭಭಾಯಿ ಪಟೇಲರು ಭಾರತೀಯ ಸೇನಾಪಡೆಗಳಿಂದ ನೇರ ಕಾರ್ಯಾಚರಣೆ ಮಾಡುವಂತೆ, ಮಾಡಿ ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿದ ಸುದಿನ ಇದಾಗಿದೆ ಎಂದು ಹೇಳಿದರು.
ಅಹಿಂಸಾತ್ಮಕ ಹೋರಾಟದಲ್ಲಿ ನಮ್ಮ ಭಾಗದಲ್ಲಿ ಸ್ವಾಮಿ ರಮಾನಂದ ತೀರ್ಥರು ನೇತೃತ್ವವನ್ನು ವಹಿಸಿದ್ದರು. ಈ ಭಾಗ ಮುಕ್ತಿಯನ್ನು ಪಡೆಯಲು ೧೯೪೮ರ ಸೆಪ್ಟೆಂಬರ್ ೧೭ರ ವರೆಗೆ ಕಾಯಬೇಕಾಯಿತು ಎಂದು ಹೇಳಿದರು.
ಇದರ ಹಿಂದೆ ಹಲವರ ಹೋರಾಟ, ತ್ಯಾಗ ಬಲಿದಾನ ಇದೆ. ಇಂತಹ ಸಂದರ್ಭದಲ್ಲಿ ಸರ್ದಾರ್ ಶರಣಗೌಡ ಇನಾಂದಾರ, ಚನ್ನಬಸಪ್ಪ ಕುಳಿಗೇರಿ, ಹಕೀಕತರಾವ್ ಚಿಟಗುಪಕರ್, ರಾಮಚಂದ್ರಪ್ಪ ವೀರಪ್ಪ, ಜಗನ್ನಾಥರಾವ್ ಚಂಡ್ರಿಕಿ ಮುಂತಾದವರನ್ನು ಅವರು ಸ್ಮರಿಸಿದರು.
ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಹೊಂದಬೇಕಾದರೆ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು, ಕೈಗಾರಿಕೆ ಬೆಳವಣಿಗೆ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಬೇಕು. ಈ ಭಾಗಕ್ಕೆ ೩೭೧ (ಜೆ) ವಿಧಿ ಜಾರಿಯಿಂದ ಈ ಭಾಗದ ಜನರಲ್ಲಿ ವಿಶೇಷವಾಗಿ ಯುವಜನಾಂಗದಲ್ಲಿ ಆಶಾಭಾವನೆ ಮೂಡಿಸಿದೆ. ರಾಜ್ಯದ ೬.೪೦ ಕೋಟಿ ಜನಸಂಖ್ಯೆಯಲ್ಲಿ ೧.೨೦ ಕೋಟಿ ಜನರು ಈ ಭಾಗದಲ್ಲಿ ಇದ್ದು, ಈ ಭಾಗದಲ್ಲಿ ೩೭೧ (ಜೆ) ಜಾರಿಯಾಗಿದ್ದರಿಂದ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಉತ್ತಮ ಅವಕಾಶವನ್ನು ಪಡೆಯಲು ಹೆಚ್ಚು ಸಹಾಯಕಾರಿಯಾಗಿದೆ. ಈ ಭಾಗವು ಹಿಂದುಳಿದಿದೆ ಎಂಬ ಹಣಿಪಟ್ಟಿಯನ್ನು ಅಳಿಸಲು ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಗಳನ್ನು ಮಾಡುವಾಗ ಜವಾಬ್ದಾರಿಯುತವಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಈ ಭಾಗದ ಅಭಿವೃದ್ಧಿಯಲ್ಲಿ ಎಲ್ಲರ ಕಳಕಳಿ, ಭಾಗವಹಿಸುವಿಕೆ ಮುಖ್ಯ, ನಿಸ್ವಾರ್ಥ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಅತ್ಯಂತ ಅವಶ್ಯಕವಾಗಿದೆ ಎಂಬುದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಬಯಸುತ್ತೇನೆ. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕೃಷಿ, ಅಭಿವೃದ್ಧಿಪಡಿಸಲು ನಾವು ಬದ್ಧರಾಗೋಣ ನಾವೆಲ್ಲರೂ ಪ್ರಜ್ಞಾವಂತರಾಗೋಣ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು ಹಾಗೂ ಗಣ್ಯರು ರಾಷ್ಟç ಪ್ರಶಸ್ತಿ ಪಡೆದ ಯಾದಗಿರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜನಕೊಳ್ಳುರು ಇದರ ಅಧಿಕಾರಿ ಸಿಬ್ಬಂದಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರ ತಂದಿರುವ ಅಮೃತ ಮಹೋತ್ಸವದ ಕಲ್ಯಾಣ ಕರ್ನಾಟಕ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಮಕ್ಕಳ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಶಾಸಕರಾದ ಚೆನ್ನರೆಡ್ಡಿಗೌಡ ಪಾಟೀಲ್ ತುನ್ನೂರ್, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ಟಿ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಅರಣ್ಯ ಸಂರಕ್ಷಣಾಧಿಕಾರಿ ಕಾಜಲ್, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap