ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಜೊತೆ ಜೊತೆಯಲ್ಲಿ ಸೀರಿಯಲ್ ನಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ.
ನಟಿ ಮೇಘಾ ಶೆಟ್ಟಿ ಕ್ಯೂಟ್ ಆಗಿ ಪೋಸ್ ಕೊಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂದಿದ್ದಾರೆ. ಭಿನ್ನ ಭಿನ್ನವಾದ ಪೋಟೋ ಭಂಗಿಗೆ ಅಭಿಮಾನಿ ವರ್ಗ ಯೂ ಆರ್ ಲುಕಿಂಗ್ ಸೋ ಕ್ಯೂಟ್ ಅಂತಾ ಕಮೆಂಟ್ ಮಾಡಿದೆ.
ಮೇಘಾ ಶೆಟ್ಟಿ ಶೇರ್ ಮಾಡಿರುವ ಫೋಟೋಗಳಿಗೆ ಸೋ ಕ್ಯೂಟ್, ಲವ್ಲಿ, ಸೂಪರ್, ಅನು ಅಂದವೇ ಅಂದ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಸಿಂಪಲ್ ಡ್ರೆಸ್‍ನಲ್ಲೇ ಮಿಂಚಿದ ಮೇಘಾ ಶೆಟ್ಟಿ ಕತ್ತಿಗೆ ತಮ್ಮ ಹೆಸರು ಇರೋ ಚಿನ್ನದ ಚೇನ್, ಕೈ ಲಿ ಹೈರ್ ಬ್ಯಾಂಡ್ ಹಾಕೊಂಡು ಸಿಂಪಲ್ ಸ್ಮೈಲ್ ಮಾಡ್ತಾ ಸಿಂಪಲ್ ಹುಡುಗರ ಹೃದಯ ದೋಚಿದ್ದಾರೆ.
ಮೊನ್ನೆಯಷ್ಟೇ ಕನ್ನಡಕ ಹಾಕಿಕೊಂಡ ಫೋಟೋಗಳನ್ನು ಮೇಘಾ ಶೆಟ್ಟಿ ಶೇರ್ ಮಾಡಿದ್ದರು. ಫೋಟೋ ನೋಡಿ ಥೇಟ್ ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ತರ ಕಾಣ್ತಿದ್ದೀರಾ ಅಂತಾ ಅಭಿಮಾನಿಗಳು ಕಮೆಂಟ್ಸ್ ಹಾಕಿದ್ರು. ನೋಡೋಕೆ ಕ್ಯೂಟ್ ಆಗಿ ಇದ್ದು. ಮುದ್ದು ಮದ್ದಾಗಿ ಮಾತನಾಡುವ ಮೇಘಾ ಶೆಟ್ಟಿ ತಮ್ಮ ನಟನೆ ಮತ್ತು ವಿಭಿನ್ನ ಪೋಟೋ ಶೂಟ್ ಮೂಲಕವೇ ಜನರ ಗಮನ ಸೆಳೆಯುತ್ತಿದ್ದಾರೆ. ಇಷ್ಟೆಲ್ಲ ತಯಾರಿ ಮಾಡಿಕೊಳ್ಳುತ್ತಿರುವ ಮೇಘಾ ಶೆಟ್ಟಿ ಸದ್ಯಕ್ಕೆ ಯಾವ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಅಂತಾ ಕಾದು ನೋಡ ಬೇಕಿದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್