ವಿಚ್ಚೇದನ ನಂತ್ರ ಹೊಸ ನಿರ್ಧಾರ ಮಾಡಿದ ಸಮಂತ
ನಟಿ ಸಮಂತಾ ನಾಗಚೈತನ್ಯ ರಿಂದ ವಿಚ್ಚೇದನ ಪಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ …ವಿಚ್ಛೇದನದ ನಂತರ ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ ಅದಷ್ಟೇ ಅಲ್ಲದೆ ತಮ್ಮ ಕೆರಿಯರ್ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತಿದ್ದಾರೆ …ಡಿವೋರ್ಸ್ ಆದ ನಂತರ ನಟಿ ಸಮಂತಾ ತಮ್ಮ ಕೆರಿಯರ್ ನಲ್ಲೇ ಈ ಹಿಂದೆ ತೆಗೆದುಕೊಳ್ಳದ ನಿರ್ಧಾರವನ್ನ ಈಗ ತೆಗೆದುಕೊಂಡಿದ್ದಾರೆ…. ಟಾಲಿವುಡ್ ಕಾಲಿವುಡ್ ನಲ್ಲಿ*ನಟಿಯಾಗಿ ಮಿಂಚುತ್ತಿರುವ ನಟಿ ಸಮಂತಾ ಈ ಹಿಂದೆ ಎಂದಿಗೂ ಯಾವುದೇ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿಲ್ಲ …ಆದರೆ ಇದೇ ಮೊದಲ ಬಾರಿಗೆ ಸಮಂತಾ ಪುಷ್ಪ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಳ್ಳಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ .. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಅಭಿನಯದ ಪುಷ್ಪಾ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಬಾಲಿವುಡ್ ನಟಿಯರು ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿಯಾಗಿತ್ತು… ಆದರೆ ಈಗ ಇದೆ ಸ್ಪೆಷಲ್ ಹಾಡಿನಲ್ಲಿ ಸಮಂತಾ ಅಭಿನಯ ಮಾಡಲಿದ್ದಾರೆ ಎಂದು ಸುದ್ದಿಯನ್ನ ಪುಷ್ಪ ಸಿನಿಮಾತಂಡ ಕನ್ಫರ್ಮ್ ಮಾಡಿದೆ..ಆದರೆ ಈ ಹಾಡು ಯಾವ ರೀತಿ ಇರಲಿದೆ ಅನ್ನೋದು ಸದ್ಯದ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ…ಇನ್ನು ಪುಷ್ಪ ಸಿನಿಮಾವನ್ನ ಸುಕುಮಾರ್ ನಿರ್ದೇಶನ ಮಾಡುತಿದ್ದು ಈ ಹಿಂದೆ ಸುಕುಮಾರ್ ನಿರ್ದೇಶನದ ರಂಗಸ್ಥಳಂ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ರು….
ವಿಚ್ಚೇದನ ನಂತ್ರ ಹೊಸ ನಿರ್ಧಾರ ಮಾಡಿದ ಸಮಂತ Read More »