Karnataka Bhagya

Author name: Karnatakabhagya

ನಾಳೆ ಗಣಿಯ “ಸಖತ್” ಟೈಟಲ್ ಸಾಂಗ್ ರಿಲೀಸ್..

ಸುನಿ – ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್. ಈ ಜೋಡಿ ಜೊತೆಯಾಗಿ ಪ್ರೇಕ್ಷಕರಿಗೆ ಸಖತ್ ಕಾಮಿಡಿ ಹೂರಣ ಬಡಿಸಲು ಸಜ್ಜಾಗಿದ್ದಾರೆ. ಸಖತ್ ಸಿನಿಮಾ ಮೂಲಕ ಸಿನಿಪ್ರೇಕ್ಷಕ ಕುಲವನ್ನು‌ ನಗುವಿನ ಅಲೆಯಲ್ಲಿ ತೇಲಿಸಲು ರೆಡಿಯಾಗಿದ್ದಾರೆ. ನಾಳೆ  ಸಖತ್ ಸಿನಿಮಾದ ಟೈಟಲ್ ರಿಲೀಸ್ ಆಗ್ತಿದೆ. ಗಣೇಶ್ ಅವರನ್ನ ಹೊಸ ಅವತಾರದಲ್ಲಿ ನೋಡಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್  ಬಂಡವಾಳ ಹೂಡಿದ್ದಾರೆ. ಸದ್ಯ ಸ್ಯಾಂಪಲ್ಸ್ ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಖತ್ ಸಿನಿಮಾ ನವೆಂಬರ್ 26 ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ ಕಾಮಿಡಿ ಜೊತೆ ರಿಯಾಲಿಟಿ ಸುತ್ತ ಎಣೆಯಲಾಗಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ಪೋಷಕ ಪಾತ್ರ ನಿಭಾಯಿಸಿದ್ದಾರೆ.

ನಾಳೆ ಗಣಿಯ “ಸಖತ್” ಟೈಟಲ್ ಸಾಂಗ್ ರಿಲೀಸ್.. Read More »

ಕೆವಿಎನ್ ತೆಕ್ಕೆಗೆ ಬಾಹುಬಲಿ ಸೂತ್ರಧಾರ ರಾಜಮೌಳಿಯ ‘RRR’ ಸಿನಿಮಾ ವಿತರಣೆ ಹಕ್ಕು…

ಬಾಹುಬಲಿ ಸೃಷ್ಟಿಕರ್ತ ಎಸ್.ಎಸ್ ರಾಜಮೌಳಿ ಸಿನಿಮಾ ಅಂದ್ರೆ ಜಗದಗಲ‌ ನಿರೀಕ್ಷೆ ಇರುತ್ತೆ. ಈಗ ಅಷ್ಟೇ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಆರ್ ಆರ್ ಆರ್. ಪೋಸ್ಟರ್, ಮೇಕಿಂಗ್, ಟೀಸರ್ ಹಾಗೂ ಸಾಂಗ್ ಮೂಲಕ ಕುತೂಹಲದ ಕಾರ್ಮೋಡದಂತಿರುವ ಆರ್ ಆರ್ ಆರ್ ಅಂಗಳದಿಂದ ಬಡಾ ಬ್ರೇಕಿಂಗ್‌ ನ್ಯೂಸ್ ವೊಂದು‌ ರಿವೀಲ್ ಆಗಿದೆ. ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್, ಬ್ಯೂಟಿಫುಲ್ ಆಲಿಯಾ ಭಟ್ ಹೀಗೆ ಬಹುದೊಡ್ಡ ತಾರಾಗಣ‌ ನಟಿಸಿರುವ ತ್ರಿಬಲ್ ಆರ್ ಸಿನಿಮಾ ಕನ್ನಡ, ತೆಲುಗು, ಹಿಂದಿ,‌ತಮಿಳು ಹಾಗೂ‌ ಮಾಲಯಾಳಂ ಭಾಷೆಯಲ್ಲಿ‌ ಮೂಡಿ ಬರ್ತಿದೆ. ಪಂಚ ಭಾಷೆಯಲ್ಲಿ ತೆರೆಗಪ್ಪಳಿಸಲಿರುವ ಆರ್ ಆರ್ ಆರ್ ಸಿನಿಮಾದ‌ ಕರ್ನಾಟಕ ಡಿಸ್ಟ್ರಿಬ್ಯೂಷನ್ ಹಕ್ಕು‌ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ತೆಕ್ಕೆಗೆ ಸೇರ್ಪಡೆಯಾಗಿದೆ.ರಾಜ್ಯಾದ್ಯಂತ ಆರ್ ಆರ್ ಆರ್ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ಕೆವಿಎನ್ ಪ್ರೊಡಕ್ಷನ್ ಹೊತ್ತುಕೊಂಡಿದೆ. ಈಗಾಗ್ಲೇ ಕೆವಿಎನ್ ಪ್ರೊಡಕ್ಷನ್ ಹೌಸ್ , ಸಖತ್, ಬೈ‌ ಟು‌‌ ಲವ್ ಹಾಗೂ ನಿಖಿಲ್ ಕುಮಾರಸ್ವಾಮಿ, ಧ್ರುವ ಸರ್ಜಾಗೂ ಒಂದು ಸಿನಿಮಾ ಮಾಡ್ತಿದೆ. ಈ ಸಿನಿಮಾಗಳ ನಿರ್ಮಾಣದ‌ ಜೊತೆಗೆ ವಿತರಣೆ ಹಕ್ಕಿನ ಜವಾಬ್ದಾರಿಯನ್ನು ಕೆವಿಎನ್ ಅದ್ಭುತವಾಗಿ‌ ನಿರ್ವಹಿಸ್ತಿದೆ. ಒಂದ್ಕಡೆ ಆರ್ ಆರ್ ಆರ್ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ಪ್ರೊಡಕ್ಷನ್ ಹೌಸ್ ಸೇರ್ಪಡೆಯಾದ್ರೆ ಮತ್ತೊಂದ್ಕಡೆ ಆರ್ ಆರ್ ಆರ್ ಸಿನಿಮಾದ ಹಳ್ಳಿ ನಾಟು ಯೂಟ್ಯೂಬ್ ನಲ್ಲಿ‌ ಧೂಳ್ ಎಬ್ಬಿಸ್ತಿದೆ. ರಾಮ್ ಚರಣ್ ಹಾಗೂ ತಾರಕ್ ಭರ್ಜರಿ ಸ್ಟೆಪ್ಸ್ ಜೊತೆಗೆ ಕೀರವಾಣಿ‌ ಮ್ಯೂಸಿಕ್ ಕಿಕ್ ಮತ್ತೊಂದು‌ ಲೆವೆಲ್. ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಿರುವ ಆರ್ ಆರ್ ಆರ್ ಸಿನಿಮಾ ಜನವರಿ 7 ರಂದು ವಿಶ್ವಾದ್ಯಂತ ತೆರೆಗೆ ಬರ್ತಿದೆ

ಕೆವಿಎನ್ ತೆಕ್ಕೆಗೆ ಬಾಹುಬಲಿ ಸೂತ್ರಧಾರ ರಾಜಮೌಳಿಯ ‘RRR’ ಸಿನಿಮಾ ವಿತರಣೆ ಹಕ್ಕು… Read More »

ಜೀವ ಭಗವಂತನ ಕೃಪೆ ಅದನ್ನು ಕಾಪಾಡುವುದು ಮನುಷ್ಯನ ಧರ್ಮ.

ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ಹರ್ಷ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಇಂದು ತೆರೆಕಂಡಿದೆ. ಪುರಾಣಗಳಲ್ಲಿ ಬರುವ ಸಮುದ್ರಮಥನದಲ್ಲಿ ಸೃಷ್ಟಿಯಾದ ಧನ್ವಂತರಿಯ ವೈಶಿಷ್ಟತೆ ಹಿನ್ನೆಲೆಯನ್ನು ಇಟ್ಟುಕೊಂಡು ಮಿತೋಲಜಿ ಮತ್ತು ರಿಯಾಲಿಟಿ ಯನ್ನು ತಮ್ಮ ಫ್ಯಾಂಟಸಿ ಲೋಕದಲ್ಲಿ ಬಹಳ ಅದ್ಭುತವಾಗಿ ರಚಿಸಿದ್ದಾರೆ ಡೈರೆಕ್ಟರ್ ಹರ್ಷ. ಅರವಳ್ಳಿ ಎನ್ನುವ ಊರಲ್ಲಿ ಗೂಂಡಾಗಿರಿ ಮೂಲಕ ಹಫ್ತಾ ವಸೂಲಿ ಮಾಡುತ್ತಾ ಜನರ ಮೇಲೆ ಹಿಡಿತ ಸಾಧಿಸಿರುವ ಅಲಮೇಲಮ್ಮನ ತಮ್ಮನಾದ ಅಂಜಿ ಮದುವೆ ವಿಚಾರವಾಗಿ ಊರಿಗೆ ಬರುತ್ತಾನೆ.ಮಾನವೀಯತೆ ಅಹಿಂಸೆ ದಯೆ ಮತ್ತು ಕರುಣ ಶೀಲತೆಯನ್ನು ನಂಬಿರುವ ಮುಗ್ದ ವ್ಯಕ್ತಿ , ನಂತರ ಒದಗುವ ತನ್ನ ಅಕ್ಕ ಮತ್ತು ಪ್ರೀತಿಸಿದವಳನ್ನು ಪಾರು ಮಾಡಲಾಗದ ಸ್ಥಿತಿಯಿಂದ ಬಿಡಿಸಲಾಗದೆ ಅಸಹಾಯಕನಾಗಿ ಸೋತು ಹೋಗುವ ಅಂಜಿಯ ಪಾತ್ರ ಮತ್ತು ” ಜೀವ ಭಗವಂತನ ಕೃಪೆ ಅದನ್ನು ಉಳಿಸಿಕೊಳ್ಳುವುದು ಮನುಷ್ಯ ಧರ್ಮ” ಎಂದು ನಂಬಿಕೊಂಡು ವಿವೇಕವಿಲ್ಲದೆ ರಾಕ್ಷಸರಂತೆ ಬದುಕುತ್ತಿದ್ದ ಧನ್ವಂತರಿ ಜನಾಂಗದವರನ್ನು ಮನುಷ್ಯರನ್ನಾಗಿ ಬದಲಾಯಿಸಿ, ಧನ್ವಂತರಿಯ ವೈಶಿಷ್ಟ್ಯವನ್ನು ವೈದ್ಯ ರಂಗದಲ್ಲಿ ಪಸರಿಸಬೇಕು ಎಂದು ಧ್ಯೇಯ ತೊಟ್ಟು ಅವರಲ್ಲಿ ಧೈರ್ಯ ತುಂಬುವ ಸಾಹಸಿ ಭಜರಂಗಿ ಈ ಎರಡು ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ಸುಂದರವಾಗಿ ನಿಭಾಯಿಸಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ. ವಿವೇಕದ ಮೊಳಕೆ ಒಡೆದ ಬೀಜ ಬೆಳೆದು ಆಲೋಚನೆಗಳಲ್ಲಿ ತನ್ನನ್ನು ಭ್ರಷ್ಟಗೊಳಿಸಿಕೊಂಡು ಸುಂದರ ಬದುಕನ್ನು ಹೇಗೆ ದುರಂತಕ್ಕೆ ಒಳಪಡಿಸಿಕೊಳ್ಳುತ್ತಾರೆ ಮತ್ತು ಸೇವೆ ಅಪೇಕ್ಷೆಯಾಗಿ ನಂತರ ತಣಿವಿಲ್ಲದ ಆಸೆಯಾಗಿ ಹೇಗೆ ಬದಲಾಗುತ್ತದೆ ಎಂಬುದನ್ನು ಡೈರೆಕ್ಟರ್ ಹರ್ಷ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ.ಧನ್ವಂತರಿ ಜನಾಂಗದವರನ್ನು ಒಳ್ಳೆ ಮಾರ್ಗದಲ್ಲಿ ಬದಲಾಯಿಸುವ ಮತ್ತು ಆಯುರ್ವೇದದ ವಿಜ್ಞಾನವನ್ನು ತಿಳಿಸುವ ಭಜರಂಗಿ ಮತ್ತು ಅದೇ ಜನಾಂಗದವರನ್ನು ನಶ್ಯಪ್ರಪಂಚದ ಬೇಡಿಕೆ ಪೂರೈಸಲು ದೌರ್ಜನ್ಯದಿಂದ ಬಳಸಿಕೊಳ್ಳುತ್ತಿರುವ ಜಾಗ್ರವ ಮತ್ತು ಅದೇ ದಾರಿಯನ್ನು ಪಾಲಿಸಿ ಇನ್ನಷ್ಟು ಕ್ರೂರಿಯಾದ ಆತನ ಮಗ ಆರಕನ ನಡುವಿನ ಪೌರಾಣಿಕ ಶೈಲಿಯ ಸಂಭಾಷಣೆಯ ಮುಖಾಮುಖಿ ಮತ್ತು ಆಕ್ಷನ್ ನೋಡುಗರಿಗೆ ಹೆಚ್ಚು ಮನರಂಜನೆ ನೀಡುತ್ತದೆ. ಚಿತ್ರದಲ್ಲೇ ಅಂಜಿ ಮತ್ತು ಚಿನ್ಮಿನಿಕಿ ರೊಮ್ಯಾನ್ಸ್, ಅಲಮೇಲಮ್ಮನ ಪಾತ್ರವಹಿಸಿದ ಶೃತಿ, ಅಲಮೇಲಮ್ಮನ ಅಟ್ಟಹಾಸ ಖಂಡಿಸುವ ಚಿಮ್ಮಿನಿಕಿ ಪಾತ್ರದಲ್ಲಿ ಭಾವನಾ ಮೆನನ್, ಜೊತೆಯಲ್ಲಿ ಕುರಿ ಪ್ರತಾಪ್ , ಶಿವರಾಜ್ ಕೆ ಆರ್ ಪೇಟೆ , ಶಾಲಿನಿ ಅವರ ಕಾಮಿಡಿ ಚಿತ್ರದಲ್ಲಿ ಮನರಂಜನೆ ನೀಡುತ್ತದೆ. 2013ರಲ್ಲಿ ತೆರೆಕಂಡ ಭಜರಂಗಿಯಲ್ಲಿ ದುರಾಸೆಯ ಕ್ರೂರತೆಗೆ ಒಳಗಾದ ಭಯಾನಕ ಪಾತ್ರದಲ್ಲಿ ನಟಿಸಿದ್ದ ಸೌರವ್ ಲೋಕೇಶ್ ಈ ಚಿತ್ರದಲ್ಲಿ ಅದಕ್ಕೆ ವಿರುದ್ಧವಾದ ವಿಭಿನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.ಖಳನಾಯಕನ ಉಗ್ರ ರೂಪದ ಪಾತ್ರದಲ್ಲಿ ರಾಕ್ಷಸರಾಗಿ ಚೆಲುವರಾಜ್ ಮತ್ತು ಪ್ರಸನ್ನ ಭಾಗಿನ್ ಅಬ್ಬರಿಸಿದ್ದಾರೆ. ಚಿತ್ರದಲ್ಲಿ ಪಾತ್ರಗಳ ಹಾಗೂ ಕಥೆಯ ಹಿನ್ನಲೆ ಮತ್ತು ಅದರ ಕಾಲಘಟ್ಟದ ಪ್ರಸ್ತುತಿಗೆ ಸ್ಪಷ್ಟನೆಯನ್ನು ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಇದೆಲ್ಲದರ ಹೊರತಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ತಾಂತ್ರಿಕ ವಿಚಾರಕ್ಕೆ ಬಂದರೆ ಬಹಳ ಅಂತರದ ನಂತರ ಹರ್ಷ ಅವರ ಅದ್ಭುತವಾದ ಸಾಹಸಮಯ ಪ್ರಯತ್ನ, ಸ್ವಾಮಿ ಜೆ. ಅವರ ಸಿನೆಮಾಟೋಗ್ರಫಿ, ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಮತ್ತು ಅಚ್ಚರಿ ಮೂಡಿಸುವ ಅದ್ಭುತವಾದ ವಿಶುವಲ್ ಎಫೆಕ್ಟ್ಸ್ ಹರ್ಷ ಅವರ ಫ್ಯಾಂಟಸಿ ಲೋಕಕ್ಕೆ ಕರೆದೊಯ್ಯುತ್ತದೆ.ಒಟ್ಟಾರೆ ಅಂತೂ ಬಹಳ ಸಮಯದ ನಂತರ ಕನ್ನಡದಲ್ಲಿ ಒಂದು ಫ್ಯಾಂಟಸಿ ಸಿನಿಮಾ ಪುರಾಣದ ಹಿನ್ನೆಲೆ ಜೊತೆ ಒಂದು ಸುಂದರ ಸಂದೇಶವನ್ನು ತಲುಪಿಸುತ್ತದೆ. ಶಿವರಾಜಕುಮಾರ್ ಅವರ ವೃತ್ತಿಯಲ್ಲಿ ಬಹಳ ವಿಭಿನ್ನವಾದ ಸಿನಿಮಾ ಎಂದರೂ ತಪ್ಪಾಗಲಿಕ್ಕಿಲ್ಲ.

ಜೀವ ಭಗವಂತನ ಕೃಪೆ ಅದನ್ನು ಕಾಪಾಡುವುದು ಮನುಷ್ಯನ ಧರ್ಮ. Read More »

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಲಘು ಹೃದಯಾಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪವರ್ ಸ್ಟಾರ್ ನಿಧನಕ್ಕೆ ಇಡೀ ಚಿತ್ರರಂಗವೇ ಕಣ್ಣೀರಿಡುತ್ತಿದೆ. ಹೃದಯಾಘಾತ ಕಾಣಿಸಿಕೊಂಡ ಹಿನ್ನೆಲೆ ಇಂದು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಬೆಳ್ಳಂಬೆಳಗ್ಗೆ ಜಿಮ್‍ನಲ್ಲಿ ಕಸರತ್ತು ನಡೆಸುತ್ತಿರುವಾಗ ಲಘು ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ Read More »

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಲಘು ಹೃದಯಾಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪವರ್ ಸ್ಟಾರ್ ನಿಧನಕ್ಕೆ ಇಡೀ ಚಿತ್ರರಂಗವೇ ಕಣ್ಣೀರಿಡುತ್ತಿದೆ. ಹೃದಯಾಘಾತ ಕಾಣಿಸಿಕೊಂಡ ಹಿನ್ನೆಲೆ ಇಂದು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಬೆಳ್ಳಂಬೆಳಗ್ಗೆ ಜಿಮ್‍ನಲ್ಲಿ ಕಸರತ್ತು ನಡೆಸುತ್ತಿರುವಾಗ ಲಘು ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ Read More »

ಶರಣ್ ಬರ್ತಿದ್ದಾರೆ ‘ಅವತಾರ ಪುರುಷ’ರಾಗಿ, ಬರಮಾಡಿಕೊಳ್ಳಿ

ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ನಟನೆ ಹಾಗೂ ಸಂಭಾಷಣೆ ಮೂಲಕವೇ ಜನರಲ್ಲಿ ನಗು ಹುಟ್ಟಿಸುವ ನಟ ಶರಣ್ ಅಭಿನಯದ ಅವತಾರ ಪುರುಷ ಭರ್ಜರಿ ರಿಲೀಸ್ಗೆ ರೆಡಿಯಾಗುತ್ತಿದೆ. ಕೆ.ಜಿ.ಎಫ್ ನಂತೆ ಎರಡು ಭಾಗಗಳಲ್ಲಿ ಈ ಅವತಾರ ಪುರುಷನ ಆಗಮನವಾಗಲಿದ್ದು, ಅವರ ವೃತ್ತಿ ಬದುಕಿನ ಅತಿ ಹೆಚ್ಚು ಬಜೆಟ್ ಚಿತ್ರ ಎನ್ನಲಾಗುತ್ತಿದೆ. ನವೆಂಬರ್ ನಲ್ಲಿ ಅವತಾರ ಪುರುಷ ಬರಲಿದ್ದು, ದೀಪಾವಳಿಗೂ ಮೊದಲೇ ಬಿಗ್ ಸಪ್ರ್ರೈಸ್ ಕೊಡಲಿದ್ದಾರೆ ಶರಣ್ ಅಂಡ್ ಟೀಮ್. ಶರಣ್, ಅಶಿಕಾ ರಂಗನಾಥ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಮೇಕಿಂಗ್ ವಿಡಿಯೋವನ್ನು ರಿಲೀಸ್‍ಮಾಡುವ ಹುಮ್ಮಸಿನಲ್ಲಿದೆ ತಂಡ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರದಲ್ಲಿ ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ದೊಡ್ಡ ತಾರಾಗಣವಿರೋ ಚಿತ್ರದಲ್ಲಿರುವುದು ವಿಶೇಷ.

ಶರಣ್ ಬರ್ತಿದ್ದಾರೆ ‘ಅವತಾರ ಪುರುಷ’ರಾಗಿ, ಬರಮಾಡಿಕೊಳ್ಳಿ Read More »

ಡೊಳ್ಳು ಚಿತ್ರ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಭಾಜನ

ಅಪೇಕ್ಷ ಪವನ್ ಒಡೆಯರ್ ನಿರ್ಮಾಣದ, ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇತ್ತೀಚಿಗೆ ಇನೋವೇಟೀವ್ ಫಿಲಂ ಆಯೋಜಿಸಿದ್ದ 33 ದೇಶಗಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಡೊಳ್ಳು ಚಿತ್ರ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಈ ಚಿತ್ರ ಈಗಾಗಲೇ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಂತೆ ದಾದಾ ಫಾಲ್ಕೆ ಅಕಾಡೆಮಿ ಅತ್ಯುತ್ತಮ ಚಿತ್ರ ಎಂದೆನ್ನಿಸಿಕೊಂಡಿರೋ ಡೊಳ್ಳು ಜಗತ್ತಿನಾದ್ಯಂದ ಮತ್ತಷ್ಟು ಪ್ರಶಸ್ತಿಗಳನ್ನ ಗಳಿಸೋ ಭರವಸೆ ಹುಟ್ಟಿಸಿದೆ. ಈ ಬಗ್ಗೆ ಮಾತನಾಡಿದ ಸ್ಯಾಂಡಲ್‍ವುಡ್ ನಿರ್ದೇಶಕ ಪವನ್ ಒಡೆಯರ್ ಅವರು, ಈ ಚಲನಚಿತ್ರ ನನ್ನ ಒಂದು ವರ್ಷದ ಪ್ರತಿಫಲ. ನಾನು ನನ್ನ ಐಟಿ ಕೆಲಸವನ್ನು ತೊರೆದು ನನ್ನ ಕನಸಿನ ಹಿಂದೆ ಓಡಿದೆ. ಈ ಖುಷಿಯನ್ನು ಎಷ್ಟೇ ಹೇಳಿದರೂ ಕಡಿಮೆಯೇ ಎಂದ ಅವರು ಕೊಂಚ ಭಾವುಕರಾದರು. ಮುಂದಿನ ದಿನಗಳಲ್ಲಿ ಅಪೇಕ್ಷ ಪವನ್ ಒಡೆಯರ್ ನಿರ್ಮಾಣ ಸಂಸ್ಥೆಯಿಂದ ಉತ್ತಮ ಚಲನಚಿತ್ರಗಳು ಹೊರಬರಲಿದೆ ಎಂದು ಹೇಳಿದರು.

ಡೊಳ್ಳು ಚಿತ್ರ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಭಾಜನ Read More »

ರತ್ನನ್ ಪ್ರಪಂಚ ಚಿತ್ರ ವಿಮರ್ಶೆ

ಹೇಳ್ಕೊಳ್ಳೋಕೆ ಒಂದೂರು.. ತಲೆ ಮ್ಯಾಗೆ ಒಂದು ಸೂರು ಮಲಗಾಕೆ ಭೂಮ್ ತಾಯಿ ಮಂಚ.. ಅದು ಆ ರತ್ನನ್ ಪರಪಂಚ.. ಹೆತ್ತೋಳು ಒಂದೂರು.. ಒಡಹುಟ್ದೋರು ಎಲ್ಲ್ ಎಲ್ಲೇಲ್ ಇದಾರೋ.. ಹುಡುಕೋದು ಈ ರತ್ನನ ಪರಪಂಚ.. ಜನ್ಮ ಕೊಟ್ರೆ ಮಾತ್ರ ತಾಯಿ ಆಗಲ್ಲ.. ಒಡಹುಟ್ಟಿದ ಮಾತ್ರಕ್ಕೆ ಅದು ಸಂಬಂಧ ಆಗಲ್ಲ ಅನ್ನೋ ಯಾರು ಮುಟ್ಟದ ಕಥೆಯನ್ನ ಬರಹಗಾರ ರೋಹಿತ್ ಪದಕಿ ಅದ್ಭುತವಾಗಿ ಕಟ್ಟಿ ಮೊದಲ ನಿರ್ದೇಶನದಲ್ಲೇ ತಮ್ಮ ತಾಕತ್ ತೋರಿಸಿದ್ದಾರೆ. ಒಳ್ಳೋಳ್ಳೆ ಸಿನಿಮಾ ಕಥೆಗಳು ಒಳ್ಳೆ ನಟರಿಗೇನೆ ಸಿಗೋದು ಅನ್ನೋದಕ್ಕೆ ಡಾಲಿ ಧನಂಜಯರಿಗೆ ಸಿಕ್ಕಿರೋ ಈ ಸಿನಿಮಾನೇ ಸಾಕ್ಷಿ.. ಎಮೋಷನ್ಸ್-ಕಾಮಿಡಿ-ಥ್ರಿಲ್ಲು ಮೂರರ ಕಾಕ್ ಟೈಲ್ ರತ್ನನ್ ಪರಪಂಚ. ಸಖತ್ ಇಷ್ಟವಾಗೋ ಮಯೂರಿ ಪಾತ್ರದ ರೆಬಾ ಜಾನ್, ಪ್ರತಿ ಅಮ್ಮಂದಿರನ್ನ ನೆನೆಸೋ ಸರೋಜ ಪಾತ್ರದ ಉಮಾಶ್ರೀ ಜೊತೆ ಶೃತಿ. ಅದ್ಭುತ ನಟನೆಯ ಉಡಾಳ್ ಬಾಬು @ಪ್ರಮೋದ್, ಮುದ್ದಾಗಿ ಕಾಣೋ ಅನುಪ್ರಭಾಕರ್, ಅದು ಮಾಡಾಕೆ ಹೋಗಿ ಇದು ಮಾಡೋ ರವಿಶಂಕರ್,ಉಡಾಳನ ಮನದರಸಿ ಬೆಣ್ಣಿ ಯಾವ ಪಾತ್ರವೂ ಮರೆಯಲಾಗದ ಪಾತ್ರ. ಪಯಣದ ಕಾಮಿಡಿ ಡ್ರಾಮವನ್ನ ಕಣ್ತುಂಬುವಂತೆ ಚಿತ್ರಿಸಿರೋ ಶ್ರೀಶಾ, ಹಾಡುಗಳ ಮೂಲಕ ಸಖತ್ ಬ್ಯಾಕ್ ಗ್ರೌಂಡ್ ಸ್ಕೋರ್ ಸೇರಿ ವಾಟ್ ಎ ಮ್ಯೂಸಿಕ್ ಅನ್ನುವಂತೆ ಮಾಡೋ ಅಜನೀಶ್ ಸಿನಿಮಾದ ಉಸಿರು. ರತ್ನಾಕರ ಪಾತ್ರದಲ್ಲಿ ಧನು, ಸರೋಜ ಪಾತ್ರದಲ್ಲಿ ಉಮಾಶ್ರೀ ಎಂಟರ್ ಟೈನ್ ಮಾಡಿದ್ರೆ, ಉಡಾಳ್ ಪಾತ್ರದಲ್ಲಿ ಪ್ರಮೋದ್, ಯಲ್ಲವ್ವನ ಪಾತ್ರದಲ್ಲಿ ಶೃತಿ ಎಮೋಷನಲ್ ಮಾಡ್ತಾರೆ. ಸಿನಿಮಾ ನೋಡಿ ಒಂದು ಸತ್ಯ ಗೊತ್ತಾಯ್ತು. ಕೈಲಿರೋವರೆಗೋ ಕೈಲಿರೋ ಮಾಣಿಕ್ಯದ ಬೆಲೆ ಗೊತ್ತಾಗಲ್ಲ. ಯಾಕೋ ಸಿನಿಮಾವನ್ನ ಮತ್ತೆ ಮತ್ತೆ ನೋಡ್ಬೇಕು ಅನ್ನಿಸ್ತಿದೆ. ಸಾಧ್ಯವಾದ್ರೆ ಮನೆ ಮಂದಿ ಜೊತೆ ಕೂತು ನೋಡಿ. ಮಿಸ್ ಮಾಡ್ಬೇಡಿ. ವಿಮರ್ಶೆ – ಕಿರಣ್ ಚಂದ್ರ

ರತ್ನನ್ ಪ್ರಪಂಚ ಚಿತ್ರ ವಿಮರ್ಶೆ Read More »

ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್

ಕೊರೋನಾ ಮಹಾಮಾರಿ ಕಡಿಮೆಯಾದ ಹಿನ್ನೆಲೆ ಒಂದೊಂದೇ ಸಿನಿಮಾ ಶೂಟಿಂಗ್‍ಗಳು ಪ್ರಾರಂಭವಾಗಿದ್ದು, ಇನ್ನು ಕೆಲವು ಶೂಟಿಂಗ್‍ಗಳು ಮುಕ್ತಾಯಗೊಳ್ಳುತ್ತಿವೆ. ಇನ್ನಷ್ಟು ಸ್ಟಾರ್ ನಟರ ಸಿನಿಮಾಗಳು ಒಂದರ ನಂತರ ಒಂದು ಪೈಪೋಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇದೀಗ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದೇ ಖುಷಿಯಲ್ಲಿರುವ ರಕ್ಷಿತ್ ಶೆಟ್ಟಿ ತಮ್ಮೊಟ್ಟಿಗೆ ಕೆಲಸ ಮಾಡಿದ ತಂಡದ ಜೊತೆ ಮಾತನಾಡಿದ್ದಾರೆ. ಈ ಸಿನಿಮಾ ಗೆದ್ದರೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಏನಾದರೊಂದು ನನ್ನ ಕಡೆಯಿಂದ ಸಿಗುತ್ತದೆ ಎಂಬ ಮಾತನ್ನು ಹೇಳಿದ್ದಾರೆ. ಇದರ ಜೊತೆಗೆ ಈ ಸಿನಿಮಾವು ಡಿಸೆಂಬರ್ 31ರಂದು ಬಿಡುಗಡೆಗೊಳ್ಳಲಿದೆ. ಖುದ್ದಾಗಿ ರಕ್ಷಿತ್ ಶೆಟ್ಟಿ ಅವರೇ ಅನೌನ್ಸ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ 2016ರ ಡಿಸೆಂಬರ್ 30 ರಂದು ತೆರೆ ಕಂಡಿತ್ತು. ಅವನೇ ಶ್ರೀಮನ್ನಾರಾಯಣ ಚಿತ್ರ 2019ರ ಡಿಸೆಂಬರ್ 27ರಂದು ಬಿಡುಗಡೆಯಾಗಿತ್ತು. ಇದೀಗ #777 ಚಾರ್ಲಿ ಡಿಸೆಂಬರ್ ತಿಂಗಳಿನಲ್ಲಿಯೇ ಬಿಡುಗಡೆಯಾಗುತ್ತಿದೆ. ಈ ಹಿಂದೆ ರಿಕ್ಕಿ ಹಾಗೂ ಕಿರಿಕ್‌ ಪಾರ್ಟಿ ಚಿತ್ರಕ್ಕೆ ರಿಶಬ್ ಶೆಟ್ಟಿ ಜೊತೆ ಸಹ‌ ನಿರ್ದೇಶಕನಾಗಿ ಕೆಲಸ‌‌ ಮಾಡುವುದರ ಜೊತೆಗೆ ಕಥಾಸಂಗಮ ಚಿತ್ರದಲ್ಲಿ ಒಂದು ಕಥೆಯನ್ನು ನಿರ್ದೇಶನ ಮಾಡಿ ಬರವಸೆ ಹುಟಿಸಿದ್ದ ಕಿರಣ್ ರಾಜ್ ಈ ಸಿನಿಮಾದ ಕಥೆ, ಚಿತ್ರಕಥೆ ಜೊತೆಗೆ ಚೊಚ್ಚಲ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ, ಚಿತ್ರದಲ್ಲಿ ಸಂಗೀತಾ ಶೃಂಗೇರಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಲ್ಲದೇ ರಾಜ್.ಬಿ ಶೆಟ್ಟಿ, ದಾನಿಶ್ ಸೇಠ್, ಬಾಬಿ ಸಿಂಹ, ಮೊದಲಾದ ತಾರಾಗಣವಿದೆ.

ರಕ್ಷಿತ್ ಶೆಟ್ಟಿ ಅಭಿನಯದ #777 ಚಾರ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್ Read More »

ಪಶ್ಚಿಮ ಘಟ್ಟದ ಭೂಗತ ಲೋಕವನ್ನಾಧರಿಸಿದ ಬರೆದ “ಕಾರ್ಗಲ್ ನೈಟ್ಸ್” ಚಿತ್ರದ ಟ್ರೇಲರ್ ಗೆ ಸಕ್ಕತ್ ರೆಸ್ಪಾನ್ಸ್

ಒಂದು ಹೊಸ ಚಿತ್ರ ತಂಡ, ವಿಭಿನ್ನವಾದ ಕಾನ್ಸೆಪ್ಟ್ , ಜೊತೆಗೆ ಒಂದು ವಿನೂತನ ಪ್ತಯತ್ನವನ್ನ “ಕಾರ್ಗಲ್ ನೈಟ್ಸ್” ಎನ್ನುವ ಚಿತ್ರದ ಮೂಲಕ ತೆರೆಯ ಮೇಲೆ ತರುತ್ತಿದ್ದಾರೆ ಅರುಣ್ ಎ ಎನ್ ಆರ್ ಮತ್ತು ನಿರ್ದೇಶಕ ದೇವರಾಜ್ ಪೂಜಾರಿ. ಹೌದು ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ಬೆಳೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧಾರಿಸಿ ಚಿತ್ರಿಸಿರುವ ಈ ಚಿತ್ರ ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು ಇಂದು ಇದರ ಟ್ರೈಲರ್ A2 music YouTube ಚಾನಲ್ ನಲ್ಲಿ ಬಿಡುಗಡೆ ಮಾಡಲಾಯಿತು. 90 ರ ದಶಕದ ಕಾಲದ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ನಿಗೂಢವಾಗಿ ಸಾಗುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯ ವಾತಾವರಣವನ್ನು ಮಲ್ಲಿಕಾರ್ಜುನ್ ಮತ್ತು ಅವರ ತಂಡ ಅದ್ಭುತವಾಗಿ ಮರುಸೃಷ್ಟಿಸಿದ್ದು, ಪಶ್ಚಿಮ ಘಟ್ಟದ ಭೂಗತ ಲೋಕವನ್ನು ಅದ್ಬುತವಾಗಿ ಚಿತ್ರೀಕರಿಸಿದ್ದಾರೆ. ಇನ್ನೂಈ ಚಿತ್ರವನ್ನು ರೋಷನ್ ಲೋಕೇಶ್ ಸಂಕಲಿಸಿದ್ದು, ಸುರೇಂದ್ರನಾಥ್ ಬಿ ಆರ್ ಸಂಗೀತವನ್ನು ರಚಿಸಿದ್ದಾರೆ. ಹಾಗೆಯೇ ಈ ಚಿತ್ರದ ಇನ್ನೊಂದು ವಿಶೇಷತೆ ಅಂದರೆ ಚಿತ್ರದ ಕತೆಯನ್ನು ಸಾಗರ ತಾಲ್ಲೂಕು ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ರಚಿಸಿದ್ದಾರೆ. ಇನ್ನೂ ಯುವ ನಟ ಹರ್ಶಿಲ್ ಕೌಶಿಕ್ ಈ ಚಿತ್ರದ ಮುಖ್ಯ ಪಾತ್ರದಾರಿಯಗಿದ್ದು ನಾಯಕ ನಟನಾಗಿ ನಟಿಸುತ್ತಿದಾರೆ. ಇವರ ಜೊತೆಗೆ ರಾಗ್ ಯು ಆರ್ ಎಸ್ , ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಸೂಚನ್ ಶೆಟ್ಟಿ, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಈ ಚಿತ್ರದಲ್ಲಿ ತಮ್ಮ ವಿಭಿನ್ನವಾದ ಪಾತ್ರದ ಮೂಲಕ ಚಿತ್ರಕ್ಕೆ ಇನ್ನಷ್ಟೂ ಕಳೆ ತುಂಬಿದ್ದಾರೆ.

ಪಶ್ಚಿಮ ಘಟ್ಟದ ಭೂಗತ ಲೋಕವನ್ನಾಧರಿಸಿದ ಬರೆದ “ಕಾರ್ಗಲ್ ನೈಟ್ಸ್” ಚಿತ್ರದ ಟ್ರೇಲರ್ ಗೆ ಸಕ್ಕತ್ ರೆಸ್ಪಾನ್ಸ್ Read More »