Karnataka Bhagya

Author name: Nikita Agrawal

ಗಾಳಿಪಟ2 ಡಬ್ಬಿಂಗ್ ಮುಗಿಸಿದ ಗಣಪ

ಸ್ಯಾಂಡಲ್‌ವುಡ್‌ ನ ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರೋ ಗಾಳಿಪಟ೨ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಸದ್ಯ ಸಿನಿಮಾತಂಡ ಫೋಸ್ಟ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ…ಚಿತ್ರೀಕರಣ ಕಂಪ್ಲೀಟ್ ಆಯ್ತು ಅಂತ ಹೇಳಿದ್ದ ಸಿನಿಮಾತಂಡ ಸದ್ಯ ಡಬ್ಬಿಂಗ್ ಮುಗಿದಿದೆ ಅಂತಿದೆ.. ಸಿನಿಮಾವನ್ನ ಸೂರಜ್ ಪ್ರೊಡಕ್ಷನ್ ನಲ್ಲಿ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದು ಸದ್ಯ ಗಾಳಿಪಟ೨ ಸಿನಿಮಾದಲ್ಲಿನ ಗಣೇಶ್ ತಮ್ಮ ಪಾತ್ರದ ಡಬ್ಬಿಂಗ್ ಕೆಲಸವನ್ನು ಮುಗಿಸಿದ್ದಾರೆ …ಈ ವಿಚಾರವನ್ನ ನಿರ್ದೇಶಕ.ನಟ ಯೋಗರಾಜ್ ಭಟ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.. ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ

ಗಾಳಿಪಟ2 ಡಬ್ಬಿಂಗ್ ಮುಗಿಸಿದ ಗಣಪ Read More »

ಬಿಡುಗಡೆಗೂ ಮುನ್ನವೇ ಥಿಯೇಟರ್ ನಲ್ಲಿ ಆರ್ ಆರ್ ಆರ್ ಅಬ್ಬರ ಶುರು

ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ಟ್ರೇಲರ್ ಬಿಡುಗಡೆಗೆ ಸಕಲ ಸಿದ್ದತೆ ನಡೆದಿದೆ… ಆರ್ ಆರ್ ಆರ್ ಸಿನಿಮಾ ಟ್ರೇಲರ್ ಡಿಸೆಂಬರ್ _9ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ.. ಸಾಮಾನ್ಯವಾಗಿ ಸಿನಿಮಾ ಟ್ರೇಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗುತ್ತೆ.. ಇಲ್ಲವಾದಲ್ಲಿ ಪ್ರೇಸ್ ಮೀಟ್ ಮಾಡಿ ರಿಲೀಸ್ ಮಾಡಲಾಗುತ್ತೆ.. ಆದರೆ ಇದೇ ಮೊಟ್ಟ ಮೊದಲ‌ಬಾರಿಗೆ ಚಿತ್ರದ ಟ್ರೇಲರ್ ಥಿಯೇಟರ್ ಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಲಿದೆ… ಒಂದಲ್ಲ ಎರಡಲ್ಲ ಒಟ್ಟು ರಾಜ್ಯದ 30ಥಿಯೇಟರ್ ನಲ್ಲಿ ಆರ್ ಆರ್ ಆರ್ ಟ್ರೇಲರ್ ರಿಲೀಸ್ ಆಗ್ತಿದೆ ..ಹೌದು ನಾಳೆ ಆರ್ ಆರ್ ಆರ್ ಸಿನಿಮಾ ಟ್ರೇಲರ್ ಬಿಡುಗಡೆಗೆ ಸಖಲ ಸಿದ್ದತರ ನಡೆದಿದೆ… ಮೇಕಿಂಗ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ಕುತೂಹಲ ಹುಟ್ಟುಹಾಕಿರೋ RRR ಸಿನಿಮಾದ ಟ್ರೇಲರ್ ಯೂಟ್ಯೂಬ್ ಗೂ ಮೊದಲೇ ಥಿಯೇಟರ್ ಅಂಗಳದಲ್ಲಿ ಸೌಂಡ್ ಮಾಡಲಿದೆ.. RRR ಸಿನಿಮಾದ ವಿತರಣೆ ಹಕ್ಕು ಪಡೆದಿರುವ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ KVN, ರಾಜ್ಯದ 30 ಥಿಯೇಟರ್ ಗಳಲ್ಲಿ ಕನ್ನಡ ಅವತರಣಿಕೆಯ ಟ್ರೇಲರ್ ಬಿಡುಗಡೆ ಮಾಡುತ್ತಿದೆ. RRR ಸಿನಿಮಾದಲ್ಲಿ ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಕನ್ನಡ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ತ್ರಿಬಲ್ ಆರ್ ಸಿನಿಮಾವನ್ನು ರಾಜ್ಯಾದ್ಯಂತ ಪ್ರೇಕ್ಷಕರಿಗೆ ಅರ್ಪಿಸಲಿದೆ. ಜನವರಿ 7ರಂದು ಪಂಚ ಭಾಷೆಯಲ್ಲಿ RRR ಸಿನಿಮಾ ಬೆಳ್ಳಿಪರದೆಗೆ ಲಗ್ಗೆ ಇಡಲಿದೆ.

ಬಿಡುಗಡೆಗೂ ಮುನ್ನವೇ ಥಿಯೇಟರ್ ನಲ್ಲಿ ಆರ್ ಆರ್ ಆರ್ ಅಬ್ಬರ ಶುರು Read More »

ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸಾಹೋ ನಿರ್ದೇಶಕ ಸುಜಿತ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅಭಿನಯಿಸಿ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟ. ನಮ್ಮ ಕಿಚ್ಚನಿಗೆ ತೆಲುಗಿನ ಸಾಹೋ ಖ್ಯಾತಿಯ ನಿರ್ದೆಶಕ ಸುಜಿತ್ ಅವರು ಕಥೆ ಹೇಳಿದ್ದಾರೆ. ಇವರು ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಮಾನಡು ಸಿನಿಮಾ ಖ್ಯಾತಿಯ ನಿರ್ದೇಶಕ ವೆಂಕಟ್ ಪ್ರಭು ಅವರೂ ಕೂಡ ಕಿಚ್ಚ ಸುದೀಪ್ ಅವರಿಗೆ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಕಿಚ್ಚ ನ ನಿರ್ಧಾರ ಏನು ಎಂದು ಕಾದು ನೋಡಬೇಕಾಗಿದೆ.

ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸಾಹೋ ನಿರ್ದೇಶಕ ಸುಜಿತ್! Read More »

ಕತ್ರಿನಾ – ವಿಕ್ಕಿ ಮದುವೆಗೆ ನೂರು ಕೋಟಿ.- ಏನಿದು!

ಸ್ಟಾರ್ ನಟ ನಟಿಯರು ಮದುವೆಯಾಗುವುದು ಹಿಂದಿನಿಂದಲೂ ನಡೆದುಬಂದಿದೆ. ಇತ್ತೀಚಿನ ದಿನದಲ್ಲಿ ಸ್ಟಾರ್ ನಟನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಖುಷಿಯ ವಿಚಾರ. ಅಮಿತಾಬ್ ಬಚ್ಚನ್ ಜೋಡಿ, ಅಜಯ್ ದೇವಗನ್ – ಕಾಜಲ್ ಜೋಡಿ, ಅಭಿಷೇಕ್-ಐಶ್ವರ್ಯ ಜೋಡಿ, ದೀಪಿಕಾ – ರಣ್ವೀರ್ ಸಿಂಗ್ ಜೋಡಿ ಹೀಗೆ ಬಹಳಷ್ಟು ಸ್ಟಾರ್ ಜೋಡಿಗಳು ಬಿಟೌನ್ ನಲ್ಲಿ ಜೋಡಿಯಾಗಿವೆ. ಇದೀಗ ಕತ್ರೀನಾ – ವಿಕ್ಕಿ ಕೌಶಾಲ್ ಸರದಿ. ಈ ಜೋಡಿ ಮದುವೆ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಈ ಜೋಡಿಯ ಮದುವೆ ರಾಜಸ್ಥಾನದಲ್ಲಿ ನಡೆಯಲಿದೆ. ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಸಂಗೀತ ಕಾರ್ಯಕ್ರಮಕ್ಕೆ ಬರೋಬ್ಬರಿ ಕೋಟಿ ಕೋಟಿ ಖರ್ಚು ಮಾಡಿದ್ದಾರಂತೆ. ವಿಕ್ಕಿ ಹಾಗೂ ಕತ್ರೀನಾ 6 song ಗಳಿಗೆ ಸ್ಟೆಪ್ಸ್ ಹಾಕಲಿದ್ದಾರಂತೆ. ಇನ್ನು ಬಿಸಿ ಬಿಸಿ ವಿಚಾರ ಏನೆಂದರೆ ಈ ಜೋಡಿಯ ಮದುವೆ ವಿಡೀಯೋ ರೈಟ್ಸ್ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ OTT ಗೆ ಸೇಲ್ ಆಗಿದೆ. ಒಟ್ಟಾರೆ best wishes to ಕತ್ರೀನಾ ಹಾಗೂ ವಿಕ್ಕಿ ಜೋಡಿ.

ಕತ್ರಿನಾ – ವಿಕ್ಕಿ ಮದುವೆಗೆ ನೂರು ಕೋಟಿ.- ಏನಿದು! Read More »

ಚಿತ್ರರಂಗಕ್ಕೆ ಎಂಟ್ರಿಕೊಡಲು ಸಿದ್ದಳಾದ ತೆಂಡೂಲ್ಕರ್ ಪುತ್ರಿ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಚಿತ್ರರಂಗಕ್ಕೆ ಎಂಟ್ರಿಕೊಡುವ ಸಮಯ ಹತ್ತಿರದಲ್ಲೇ ಇದೆ…ಹೌದು ಈಗಾಗಲೇ‌ ಮಗ ಕ್ರಿಕೆಟ್ ಲೋಕಕ್ಕೆ ಎಂಟ್ರಿಕೊಟ್ಟಿದ್ದು ಈಗ ಮಗಳು ಸಾರಾ ತೆಂಡೂಲ್ಕರ್ ಬಣ್ಣದ ಲೋಕಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ… View this post on Instagram A post shared by Sara Tendulkar (@saratendulkar) ಇತ್ತೀಚಿನ‌ ದಿನಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಸಾರಾ ಹಂಚಿಕೊಳ್ಳುವ ಫೋಟೋ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ… ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಸಾರಾ, ಇಂಗ್ಲೆಂಡ್‌ನ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ನಿಂದ ಮೆಡಿಸಿನ್‌ನಲ್ಲಿ ಪದವಿ ಪಡೆದಿದ್ದಾರೆ… ಸದ್ಯ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಸಾರಾ ತೆಂಡುಲ್ಕರ್… ಸಾರಾ ಹೆಸರುವಾಸಿ ಬಟ್ಟೆ ಕಂಪನಿಯೊಂದಿಗೆ ಮಾಡಲ್ ಆಗಿ ಪೋಸ್ ಕೊಟ್ಟಿದ್ದಾರೆ…ಈ ವಿಡಿಯೋ ಫೋಟೋ ಎಲ್ಲೆಡೆ ಟ್ರೆಂಡ್ ಹುಟ್ಟುಹಾಕಿದೆ…ಸಾರಾ ಲುಕ್ ಗೆ ಎಲ್ಲರೂ ಬೋಲ್ಡ್ ಆಗಿದ್ದು ಸಿನಿಮಾರಂಗಕ್ಕೆ ಎಂಟ್ರಿಕೊಡುವಂತೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ…ಸದ್ಯ ಮಾಡೆಲಿಂಗ್ ಶುರು ಮಾಡಿರೋ ಸಾರಾ ಶೀಘ್ರದಲ್ಲೇ ಫಿಲ್ಮಂ ದುನಿಯಾಗೆ ಎಂಟ್ರಿಕೊಡಲಿದ್ದಾರೆ….

ಚಿತ್ರರಂಗಕ್ಕೆ ಎಂಟ್ರಿಕೊಡಲು ಸಿದ್ದಳಾದ ತೆಂಡೂಲ್ಕರ್ ಪುತ್ರಿ Read More »

ವಿವಾದ ಸುಳಿಯಲ್ಲಿ ಗರುಡ ಗಮನ ವೃಷಭ ವಾಹನ

ಇತ್ತೀಚೆಗಷ್ಟೆ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಗರುಡ ಗಮನ ವೃಷಭ ವಾಹನ ಸಿನಿಮಾ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ…ಸಿನಿಮಾದಲ್ಲಿ ಕ್ರೌರ್ಯ ಮೆರೆಯುವ ದೃಶ್ಯ ಕ್ಕೆ ಮಹದೇಶ್ವರನ ಜನಪದ ಹಾಡು ಬಳಕೆ ಮಾಡಲಾಗಿದೆ ಎಂದು ಚಿತ್ರತಂಡದ ವಿರುದ್ದ ಮೊಕದ್ದಮೆ ಹೂಡಲಾಗಿಗೆ…. ಚಿತ್ರದಲ್ಲಿನ‌ ಕ್ರೌರ್ಯತೆಯ ದೃಶ್ಯಕ್ಕೆ ಸೋಜುಗಾದ ಸೂಜುಮಲ್ಲಿಗೆ’ ಜನಪದ ಹಾಡು ಬಳಕೆ ಮಾಡಲಾಗಿದೆ ಎಂದು, ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದೆ.. ಮಹಾಸಭಾದ ರಾಜ್ಯಾಧ್ಯಕ್ಷ ವಿಜಯಕುಮಾರ್ ದಾವೆ ಹೂಡಿದ್ದಾರೆ… ಚಿತ್ರದಿಂದ ಮಹದೇಶ್ವರ ನ ಹಾಡು ತೆಗೆಯಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಅರ್ಜಿ ಹಾಕಿದ್ದಾರೆ…ಚಿತ್ರದ ನಿರ್ದೇಶಕ ರಾಜ್ ಬಿ.ಶೆಟ್ಟಿ, ನಟ ರಿಷಬ್ ಶೆಟ್ಟಿ, ನಿರ್ಮಾಪಕರಾದ ರವಿ ರೈ ಬಿ.ವಿ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ ವಿಜಯ ಕುಮಾರ್… ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತಿ ಗೀತೆಯನ್ನು ಹಿನ್ನೆಲೆ ಸಂಗೀತವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ….ಇದರಿಂದ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆಯಾಗುತ್ತಿದೆ ಎನ್ನುವುದು‌ ವಿಜಯ್ ಕುಮಾರ್ ಅವರ ವಾದವಾಗಿದೆ…

ವಿವಾದ ಸುಳಿಯಲ್ಲಿ ಗರುಡ ಗಮನ ವೃಷಭ ವಾಹನ Read More »

ಗಂಧದ ಗುಡಿಯಲ್ಲಿ ಅಪ್ಪು ಮಾಡಿದ ತ್ಯಾಗ ಏನು ಗೊತ್ತಾ??

ನಟ ಪುನೀತ್ ರಾಜ್ ಕುಮಾರ್ ತೆರೆಯ ಮೇಲಷ್ಟೇ ಅಲ್ಲದೆ ರಿಯಲ್ ಲೈಫ್ ನಲ್ಲಿಯೂ ಸಖತ್ ಸಿಂಪಲ್ ಆಗಿದ್ರು…. ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುತ್ತಿದ್ದ ಅಪ್ಪು ಜೀವನಪರ್ಯಂತ ಸಿಂಪಲ್ ಲೈಫ್ ಲೀಡ್ ಮಾಡಬೇಕೆಂದು ಬಯಸಿದವರು … ಅಪ್ಪು ರನ್ನ ಭೇಟಿ ಮಾಡಿದ ಪ್ರತಿಯೊಬ್ಬರಿಗೂ ಅವರ ಸರಳತೆಯ ಪರಿಚಯವಿತ್ತು… ಅದಷ್ಟೇ ಅಲ್ಲದೆ ಅವರು ಎಷ್ಟು ಸಿಂಪಲ್ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ …ಇತ್ತೀಚೆಗಷ್ಟೇ ಪುನೀತ್ ನಿರ್ಮಾಣದ ,ನಟನೆಯ ಡಾಕ್ಯುಮೆಂಟರಿ ಟೀಸರ್ ಬಿಡುಗಡೆಯಾಗಿದೆ …ಈ ಡಾಕ್ಯುಮೆಂಟರಿಯನ್ನು ಅಮೋಘವರ್ಷ ನಿರ್ದೇಶನ ಮಾಡಿದ್ದು ಟೀಸರ್ ಬಿಡುಗಡೆಗೂ ಮುನ್ನ ಟೀಸರ್ ನೋಡಿದ ಪುನೀತ್ ಈ ಟೀಸರ್ ನಲ್ಲಿ ನನ್ನ ಹೆಸರಿನ ಜೊತೆಗೆ ಪವರ್ ಸ್ಟಾರ್ …ಎನ್ನುವ ಬಿರುದು ಬೇಡ ಎಂದು ಹೇಳಿದ್ದರಂತೆ .. ಈ ಮೂಲಕ ಪುನೀತ್ ತಾವಾಗಿ ಇರಲು ಬಯಸಿದ್ದರು ಅಂದರೆ …ಸ್ಟಾರ್ ಗಿರಿ ಬಿಟ್ಟು ಸಾಮಾನ್ಯರಂತೆ ಎಲ್ಲರಲ್ಲಿಯೂ ಬೆರೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು ಎಂದು ಅಮೋಘವರ್ಷ ಹೇಳಿಕೊಂಡಿದ್ದಾರೆ .. ಗಂಧದಗುಡಿ ಡಾಕ್ಯುಮೆಂಟರಿ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆ ಆಗಿದ್ದು..ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.. ಮುಂದಿನ ವರ್ಷ ಗಂಧದ ಗುಡಿ ಸಿನಿಮಾ ರೀತಿಯಲ್ಲಿ ಥಿಯೇಟರ್ ನಲ್ಲಿ ಪ್ರದರ್ಶನವಾಗಲಿದೆ….

ಗಂಧದ ಗುಡಿಯಲ್ಲಿ ಅಪ್ಪು ಮಾಡಿದ ತ್ಯಾಗ ಏನು ಗೊತ್ತಾ?? Read More »

KGF chapter 2 – ಡಬ್ಬಿಂಗ್ ಮುಗಿಸಿದ ಅಧೀರ

ಪ್ರಶಂತ್ ನೀಲ್ ನಿರ್ದೇಶನ ಯಶ್ ಅಭಿನಯ ಹಾಗೂ ಸಂಜಯ್ ದತ್ತ್ ಅಭಿನಯದಿಂದ KGF2 ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸಂಜಯ್ ದತ್ತ್ ಅವರ ಲುಕ್ ಈಗಾಗಲೇ ಹವಾ ಪ್ರಾರಂಭಿಸಿದೆ. ಇದೀಗ ಸಂಜಯ್ ದತ್ತ್ ಅವರು ತಮ್ಮ ಅಧೀರ ಪಾತ್ರದ ಡಬ್ಬಿಂಗ್ ಮುಗಿಸಿದ್ದಾರೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. KGF chapter 2 ಏಪ್ರೀಲ್ 14 ರಂದು ದೇಶಾದ್ಯಂತ ರಿಲೀಸ್ ಆಗಲಿದೆ.

KGF chapter 2 – ಡಬ್ಬಿಂಗ್ ಮುಗಿಸಿದ ಅಧೀರ Read More »

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಂದು ಶುಭ ದಿನ, ವಿಕ್ರಾಂತ್ ರೋಣ ಬಿಡುಗಡೆ ಯಾವಾಗ!?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಯಶಸ್ಸಿನ ನಂತರ ಇದೀಗ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸುದೀಪ್ ಹಾಗೂ ಚಿತ್ರತಂಡದ ದೊಡ್ಡ ಮಟ್ಟದ ಗಮನ ವಿಕ್ರಾಂತ್ ರೋಣ ಸಿನಿಮಾ ಮೇಲಿದೆ. ವಿಕ್ರಾಂತ್ ರೋಣ ಪಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡಿದೆ. ಇದೀಗ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಬೇಕೆಂದು ಚಿತ್ರತಂಡ ಸಜ್ಜಾಗಿದೆ. ಜನವರಿಯಲ್ಲಿ ಸಿನಿಮಾ ರಿಲೀಸ್ ಮಾಡಬೇಕೆಂದಿದ್ದ ಚಿತ್ರತಂಡ ರಿಲೀಸ್ ದಿನಾಂಕವನ್ನು ಫೆಬ್ರವರಿ 24, 2022 ಕ್ಕೆ 14 ಭಾಷೆಗಳಲ್ಲಿ 3D version ತೆರೆಗೆ ತರಲು ನಿರ್ಧರಿಸಿದೆ. ಚಿತ್ರದಲ್ಲಿ ಸುದೀಪ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಿತರಂಗ ಖ್ಯಾತಿಯ ಅನುಪ್ ಬಂಡಾರಿ ನಿರ್ದೇಶದಲ್ಲಿ ನಿರೂಪ್ ಬಂಡಾರಿ ಹಾಗೂ ನೀತಾ ಅಶೋಕ್,ಶ್ರದ್ದಾ ಶ್ರೀನಾಥ್ ಹಾಗೂ ಜಾಕ್ವೆಲಿನ್ ಪರ್ನಾಂಡಿಸ್ ಅವರ ತಾರಾಗಣದಲ್ಲಿ ಚಿತ್ರ ವಿಶೇಷವಾಗಿ ಮೂಡಿಬಂದಿದೆ. ಶಾಲಿನಿ ಮಂಜುನಾಥ್ ಹಾಗೂ ಅಲಂಕಾರ್ ಪಾಂಡಿಯನ್ ವಿಕ್ರಾಂತ್ ರೋಣ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ರಿಲೀಸ್ ಗಾಗಿ ಕರುನಾಡು ಕಾದಿದೆ.

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಂದು ಶುಭ ದಿನ, ವಿಕ್ರಾಂತ್ ರೋಣ ಬಿಡುಗಡೆ ಯಾವಾಗ!? Read More »

ಒಂದೇ ಮಾಡೆಲ್ ಕಾರು ಖರೀದಿ ಮಾಡಿದ ಯಶ್ -ದರ್ಶನ್

ಸಾಮಾನ್ಯವಾಗಿ ಸೆಲಬ್ರೆಟಿಗಳು ಅಂದ್ರೆ ಅವ್ರ ಬಳಿ ಐಷಾರಾಮಿ ಕಾರುಗಳಿರೋದು ಕಾಮನ್ …ಅದೇ ರೀತಿ ನಟ ದರ್ಶನ್ ಬಳಿ ಸಾಕಷ್ಟು ಕಾರ್ ಗಳಿವೆ …ದರ್ಶನ್ ಅವ್ರಿಗೆ ಕಾರ್ ಕ್ರೇಜ್ ಕೊಂಚ ಹೆಚ್ಚಾಗಿಯೇ ಇದೆ…ಇನ್ನು ಯಶ್ ಅವ್ರಿಗೆ ಕಾರ್ ಕ್ರೇಜ್ ಇಲ್ಲವಾದರೂ ಅಗತ್ಯಕ್ಕೆ ತಕ್ಕಂತೆ ಕಾರ್ ಗಳನ್ನ ಖರೀದಿ ಮಾಡಿದ್ದಾರೆ… ಜೋಡೆತ್ತುಗಳು ಎಂದೇ ಕರೆಸಿಕೊಳ್ಳುವ ದರ್ಶನ್ ಮತ್ತು ಯಶ್ ಕೋಟಿ ಮೌಲ್ಯದ ಕಾರು ಖರೀದಿಸಿದ್ದಾರೆ. ದರ್ಶನ್ ಅವರಿಗೆ ಕಾರುಗಳ ಕ್ರೇಜ್ ಹೆಚ್ಚು. ದಚ್ಚು ಕಾರುಗಳ ಕಲೆಕ್ಷನ್ ನಲ್ಲಿ ಹಲವು ಲಕ್ಸುರಿ ಕಾರುಗಳಿವೆ. ಅವರ ಬಳಿ ಎಲ್ಲಾ ರೀತಿಯ ಹೊಸ ಮಾಡೆಲ್ನ ಕಾರುಗಳನ್ನ ನೋಡಬಹುದು. ಅವರು ಈಗಾಗಲೇ ಜಾಗ್ವಾರ್, ಆಡಿ‌ಕ್ಯೂ-7, ರೇಂಜ್ ರೋವರ್, ಲ್ಯಾಂಬೋರ್ಗಿನಿ ಸೇರಿ ಹತ್ತು ಹಲವು ಕಾರುಗಳನ್ನು ಹೊಂದಿದ್ದಾರೆ. ಈಗ ದರ್ಶನ್ ಕಾರುಗಳ ಕಲೆಕ್ಷನ್ ಗೆ ವೈಟ್ ಕಲರ್ನ ಟೊಯೋಟಾ ವೆಲ್ಫೇರ್ ಕಾರ್ ಸೇರಿಕೊಂಡಿದೆ. ಅಬ್ಬಾ 90 ಲಕ್ಷ ಇರೋ ಕಾರಿನ ಆನ್ ರೋಡ್ ರೇಟ್ 1 ಕೋಟಿ 20 ಲಕ್ಷ…. ದರ್ಶನ್ ಹಾಗೂ ಯಶ್ ಟೊಯೋಟಾ ವೆಲ್ ಫೇರ್ ಕಾರು ಖರೀದಿಸಿದ್ದು..ದರ್ಶನ್ ತಮಗಾಗಿ ಕಾರ್ ಖರೀದಿ ಮಾಡಿದ್ರೆ.. ರಾಕಿಂಗ್ ಸ್ಟಾರ್ ಯಶ್ ಅವರು ಅವರ ತಾಯಿಗೆ ಈ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ…

ಒಂದೇ ಮಾಡೆಲ್ ಕಾರು ಖರೀದಿ ಮಾಡಿದ ಯಶ್ -ದರ್ಶನ್ Read More »

Scroll to Top