Karnataka Bhagya

ಅಂಕಣ

ಕಿರುತೆರೆಗೆ ಬರುತ್ತಿದ್ದಾನೆ ‘ತ್ರಿವಿಕ್ರಮ’.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸಿನಿಮಾ ಮಾಡಿದವರು, ಮಾಡುತ್ತಲಿದ್ದಾರೆ ಕೂಡ. ಸದ್ಯ ಅವರ ಇಬ್ಬರೂ ಪುತ್ರರು ಚಂದನವನಕ್ಕೆ ಕಾಲಿಟ್ಟಿದ್ದಾರೆ. ಯಶಸ್ಸಿನ ಆರಂಭ ಕೂಡ ಪಡೆಯುತ್ತಿದ್ದಾರೆ. ಈಗ ಸುದ್ದಿಯಲ್ಲಿರುವುದು ರವಿಮಾಮನ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್. ಇತ್ತೀಚಿಗಷ್ಟೇ ತೆರೆಕಂಡ ಅವರ ಮೊದಲ ಸಿನಿಮಾ ‘ತ್ರಿವಿಕ್ರಮ’ ಇದೀಗ ಕಿರುತೆರೆಗೆ ಬರಲು ಸಜ್ಜಾಗಿ ನಿಂತಿದೆ. ಇದೇ ಜೂನ್ 24ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದ ‘ತ್ರಿವಿಕ್ರಮ’ ಚಿತ್ರ, ತನ್ನ ಹಾಡುಗಳು ಹಾಗು ಪ್ರೀ-ರಿಲೀಸ್ ಕಾರ್ಯಕ್ರಮಗಳಿಂದ ಎಲ್ಲೆಡೆ ಸುದ್ದಿಯಲ್ಲಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಪಡೆದ ಈ ಸಿನಿಮಾ ಇದೀಗ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಇದೇ ಆಗಸ್ಟ್ 7ನೇ ತಾರೀಕಿನ ಸಂಜೆ 5:30ಕ್ಕೆ ‘ತ್ರಿವಿಕ್ರಮ’ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಹನಾ ಹೆಚ್ ಎಸ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ವಿಕ್ರಮ್ ರವಿಚಂದ್ರನ್, ಆಕಾಂಕ್ಷ ಶರ್ಮ, ಜಯಪ್ರಕಾಶ್, ಅಕ್ಷರ ಗೌಡ ಮುಂತಾದವರು ಬಣ್ಣ ಹಚ್ಚಿದ್ದಾರೆ. ಎಲ್ಲೆಡೆ ಗುಲ್ಲೆಬ್ಬಿಸಿದ್ದ ‘ತ್ರಿವಿಕ್ರಮ’ನನ್ನ ಥೀಯೇಟರ್ ನಲ್ಲಿ ನೋಡಲಾಗದೆ ಇದ್ದವರು, ಇದೇ ಆಗಸ್ಟ್ ಏಳನೇ ತಾರೀಕಿನಂದು ಟಿವಿ ಪರದೆ ಮೇಲೆ ಸುವರ್ಣ ವಾಹಿನಿಯಲ್ಲಿ ನೋಡಬಹುದಾಗಿದೆ.

ಕಿರುತೆರೆಗೆ ಬರುತ್ತಿದ್ದಾನೆ ‘ತ್ರಿವಿಕ್ರಮ’. Read More »

ಮಹೇಶ್ ಬಾಬು ಜೊತೆ ನಟಿಸಲಿದ್ದಾರ ಶ್ರೀಲೀಲಾ??

ಕನ್ನಡದ ನಟಿಮಣಿಯರು ಬೇರೆ ಭಾಷೆಯ ಚಿತ್ರರಂಗದಲ್ಲಿ ಹೋಗಿ ಮಿಂಚುವುದು ನಮಗೇನು ಹೊಸತಲ್ಲ. ಹಲವು ಕನ್ನಡದ ಹೀರೋಯಿನ್ ಗಳು ತಮಿಳು, ತೆಲುಗು ಜೊತೆಗೆ ಬಾಲಿವುಡ್ ನಲ್ಲೂ ಮೂಡಿ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಸದ್ಯ ಈ ಸಾಲಿಗೆ ಕನ್ನಡದ ಯುವನಟಿ ಶ್ರೀಲೀಲಾ ಸೇರಿಕೊಂಡಿದ್ದಾರೆ. ‘ಕಿಸ್’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಇವರು, ‘ಪೆಳ್ಳಿ ಸಂದ ಡಿ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿ, ಇದೀಗ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ. ಸದ್ಯ ಕೇಳಿಬರುತ್ತಿರುವ ಹೊಸ ಸುದ್ದಿಯೆಂದರೆ ಕನ್ನಡತಿ ಶ್ರೀಲೀಲಾ ಅವರು ತೆಲುಗಿನ ಸೂಪರ್ ಸ್ಟಾರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಮಹೇಶ್ ಬಾಬು ಅವರ ನೇ ಸಿನಿಮಾ, ತಾತ್ಕಾಲಿಕವಾಗಿ ‘ಎಸ್ ಎಸ್ ಎಂ ಬಿ 28(SSMB28)’ ಎಂದು ಕರೆಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಇದಷ್ಟೇ ಅಲ್ಲದೇ ಇನ್ನೂ ಸುಮಾರು ಐದು ತೆಲುಗು ಚಿತ್ರಗಳ ಜೊತೆಗೆ ಶ್ರೀಲೀಲಾ ಹೆಸರು ಕೇಳಿಬರುತ್ತಿದೆ. ‘ಮಾಸ್ ಮಹಾರಾಜ’ ರವಿತೇಜ ಅವರ ಜೊತೆ ‘ಧಮಾಕಾ’ ಎಂಬ ಚಿತ್ರದಲ್ಲಿಯೂ ಸಹ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರೆ. ಇನ್ನೂ ಪ್ರಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಚಲನ ಚಿತ್ರಮ್’ ಅಡಿಯಲ್ಲಿ, ಕಿರೀಟಿ ರೆಡ್ಡಿ ಅವರ ಜೊತೆಗೆ ಕನ್ನಡ ಹಾಗು ತೆಲುಗು ದ್ವಿಭಾಷ ಸಿನಿಮಾದಲ್ಲಿಯೂ ಸಹ ಶ್ರೀಲೀಲಾ ನಾಯಕಿ. ಇನ್ನು ಇತ್ತೀಚಿಗಷ್ಟೇ ಮುಹೂರ್ತ ಮುಗಿಸಿಕೊಂಡ ನಿತಿನ್ ಅವರ ಸಿನಿಮಾದಲ್ಲೂ ಶ್ರೀಲೀಲಾ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ‘ಪ್ರೊಡಕ್ಷನ್ ನಂಬರ್ 9’ ಎಂದು ಕರೆಯಲಾಗುತ್ತಿದೆ. ಅಷ್ಟೇ ಅಲ್ಲದೇ ದಿಗ್ಗಜ ಬಾಲಯ್ಯನವರ ಜೊತೆಗೆ, ಅವರ ಮಗಳ ಪಾತ್ರದಲ್ಲೂ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಶ್ರೀಲೀಲಾ ನಟಿಸುವುದು ಖಾತ್ರಿಯಾಗಿದೆ. ಹಾಗೆಯೇ ‘ಸಿತಾರ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ವೈಷ್ಣವ್ ತೇಜ್ ಅವರ ಜೊತೆಗೂ ಸಹ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ಒಟ್ಟಿನಲ್ಲಿ ಕನ್ನಡದಿಂದ ಆರಂಭಿಸಿ ಸದ್ಯ ತೆಲುಗಿನಲ್ಲೂ ಸಹ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ ಶ್ರೀಲೀಲಾ. ಒಟ್ಟು ಸುಮಾರು ಏಳು ತೆಲುಗು ಸಿನಿಮಾಗಳಲ್ಲಿ ಇವರು ನಟಿಸುತ್ತಿರುವುದು ಖಾತ್ರಿಯಾಗಿದ್ದು, ಯಾವಾಗ ಬರಲಿದೆ ಎಂದು ಕಾದುನೋಡಬೇಕಿದೆ.

ಮಹೇಶ್ ಬಾಬು ಜೊತೆ ನಟಿಸಲಿದ್ದಾರ ಶ್ರೀಲೀಲಾ?? Read More »

‘ವಿಕ್ರಾಂತ್ ರೋಣ’ನ ಜೊತೆ ಬರಲಿದ್ದಾನೆ ‘ಗಾಳಿಪಟ’ದ ಗಣೇಶ.

‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಸದ್ಯ ಬೆಳ್ಳಿತೆರೆಯ ಮೇಲೆ ರಾರಾಜಿಸುತ್ತಿದೆ. ಅದ್ಭುತ ಓಪನಿಂಗ್ ಕಂಡಂತಹ ಈ ಸಿನಿಮಾ ಎಲ್ಲಾ ಕಡೆಯಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕನ್ನಡ ಮಾತ್ರವಲ್ಲದೆ, ಪಂಚ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್ ನಲ್ಲೂ ಕೂಡ ಸಿನಿಮಾ ಬಿಡುಗಡೆಯಾಗಿದ್ದು, 3ಡಿಯಲ್ಲಿಯೂ ತೆರೆಕಂಡಿರುವುದು ಚಿತ್ರದ ಇನ್ನೊಂದು ವಿಶೇಷ. ಸದ್ಯ ಈ ಸಿನಿಮಾದ ಜೊತೆ ಕನ್ನಡದ ಇನ್ನೊಂದು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಗಾಳಿಪಟ 2’ ಕೈ ಜೋಡಿಸಿದೆ. ಆಗಸ್ಟ್ 12ರಂದು ಬಿಡುಗಡೆಯಾಗುತ್ತಿರುವ ಯೋಗರಾಜ್ ಭಟ್ ಅವರ ನಿರ್ದೇಶನದ ಕನ್ನಡಿಗರ ಮನಸ್ಸುಗಳು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ‘ಗಾಳಿಪಟ 2’. ಗಣೇಶ ಹಾಗು ಭಟ್ಟರ ಜೋಡಿಯಲ್ಲಿ ಬರುತ್ತಿರುವ ನಾಲ್ಕನೇ ಸಿನಿಮಾ ಇದಾದ್ದರಿಂದ ಚಿತ್ರದ ಬಗೆಗೆ ಹೆಚ್ಚಿನ ನಿರೀಕ್ಷೆಗಳಿವೆ. ಇತ್ತೀಚಿಗಷ್ಟೇ ಚಿತ್ರದ ನಾಯಕನ ಪಾತ್ರವಾದ ‘ಗಣೇಶ’ನ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಪಡೆದಿತ್ತು ಂ ಸದ್ಯ ಅದೇ ಟೀಸರ್ ಅನ್ನು ಎಲ್ಲೆಡೆ ಉತ್ತಮ ಪ್ರದರ್ಶನ ಪಡೆಯುತ್ತಿರೋ ‘ವಿಕ್ರಾಂತ್ ರೋಣ’ ಸಿನಿಮಾದ ಜೊತೆಗೆ ಜೋಡಿಸಲಾಗಿದೆ. ‘ವಿಕ್ರಾಂತ್ ರೋಣ’ ಸಿನಿಮಾದ 2ಡಿ ಆವೃತ್ತಿಯ ಜೊತೆಗೆ ಈ ಟೀಸರ್ ಪ್ರದರ್ಶನ ಕಾಣುತ್ತಿದೆ. ಇದೇ ಜುಲೈ 31ಕ್ಕೆ ‘ಗಾಳಿಪಟ 2’ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗುತ್ತಿದೆ.

‘ವಿಕ್ರಾಂತ್ ರೋಣ’ನ ಜೊತೆ ಬರಲಿದ್ದಾನೆ ‘ಗಾಳಿಪಟ’ದ ಗಣೇಶ. Read More »

ಬರುತ್ತಿದೆ ‘ಗಾಳಿಪಟ 2 ‘ಚಿತ್ರದ ಟ್ರೈಲರ್.

ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗಾಳಿಪಟ 2’ ತನ್ನ ಬಿಡುಗಡೆಯ ದಿನಾಂಕಕ್ಕೆ ಸನಿಹವಾಗುತ್ತಾ ಸಾಗುತ್ತಿದೆ. ನಿನ್ನೆಯಷ್ಟೇ(ಜುಲೈ 26) ಸಿನಿಮಾದ ಟೀಸರ್ ಒಂದು ಬಿಡುಗಡೆಯಾಗಿದ್ದು, ಹೊಟ್ಟೆಹುಣ್ಣಾಗಿಸುವಷ್ಟು ಈ ಸಿನಿಮಾ ನಗಿಸುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ‘ವಿಕಟಕವಿ’ ಯೋಗರಾಜ್ ಭಟ್ ಅವರಿಗೆ ಮರಳಿ ತಮ್ಮ ಯಶಸ್ಸು ಸಿಗಬಹುದೇನೋ ಎಂಬ ಆಸೆಯೂ ಒಂದಷ್ಟು ಜನರಲ್ಲಿದೆ. ಚುಟುಕಾಗಿ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿರೋ ಚಿತ್ರತಂಡ, ತನ್ನ ಟ್ರೈಲರ್ ಬಿಡುಗಡೆಯ ದಿನಾಂಕ ಹೊರಹಾಕಿದೆ. ‘ಗಾಳಿಪಟ’ ಯೋಗರಾಜ್ ಭಟ್ ಹಾಗು ಗಣೇಶ್ ಅವರ ಜೋಡಿಯಲ್ಲಿ ಮೂಡಿಬಂದಂತಹ ಒಂದು ಮರೆಯಲಾಗದ ಚಿತ್ರ. ಬಿಡುಗಡೆಯಾಗಿ ದಶಕಗಳೇ ಕಳೆದರೂ, ಇನ್ನೂ ಕೂಡ ಕನ್ನಡಿಗರ ಮನಗಳಲ್ಲಿ ವಿಶೇಷ ಸ್ಥಾನ ಪಡೆದಿದೆ ಈ ಸಿನಿಮಾ. ಸದ್ಯ ಅದೇ ಹೆಸರಿನಲ್ಲಿ ಯೋಗರಾಜ್ ಭಟ್ ಅವರೇ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮೂವರು ಸ್ನೇಹಿತರಾಗಿ, ಗಣೇಶ್, ದಿಗಂತ್ ಹಾಗು ಪವನ್ ಕುಮಾರ್ ಅವರು ನಟಿಸಿದ್ದಾರೆ. ಜೊತೆಗೆ ಶರ್ಮಿಳಾ ಮಂಡ್ರೆ, ವೈಭವಿ ಶಾಂಡಿಲ್ಯ, ಅನಂತ್ ನಾಗ್, ರಂಗಾಯಣ ರಘು ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದೇ ಆಗಸ್ಟ್ 12ಕ್ಕೆ ಸಿನಿಮಾ ತೆರೆಕಾಣುತ್ತಿದ್ದು, ಇದೇ ಜುಲೈ 31ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸದ್ಯ ಬಿಡುಗಡೆಯಾಗಿರೋ ಟೀಸರ್ ಒಂದು ಗಣೇಶ್ ಅವರ ಪಾತ್ರಪರಿಚಯ ನೀಡಿದ್ದು, ‘ಗಣೇಶ’ ಎಂಬ ಹೆಸರನ್ನೇ ಈ ಪಾತ್ರಕ್ಕೂ ಇಟ್ಟಿದ್ದು, ಹಳೆ ‘ಗಾಳಿಪಟ’ವನ್ನೇ ನೆನಪಿಸಿದಂತಿದೆ. ಇದೊಂದು ಕಾಲೇಜ್ ಲವ್ ಸ್ಟೋರಿ ಆಗಿರಲಿದ್ದು, ಅನಂತ್ ನಾಗ್ ಅವರು ಶಿಕ್ಷಕನ ಪಾತ್ರವಹಿಸಲಿದ್ದಾರೆ. ಇನ್ನೂ ಗಣೇಶನ ತಂದೆ ತಾಯಿಯಾಗಿ ಮೊದಲಿನಂತೆಯೇ ರಂಗಾಯಣ ರಘು ಹಾಗು ಸುಧಾ ಬೆಳವಾಡಿ ಅವರು ನಟಿಸಿದ್ದಾರೆ. ಗಣೇಶನ ಪ್ರೇಮಕಥೆಯ ನಾಯಕಿಯಾಗಿ ವೈಭವಿ ಶಾಂಡಿಲ್ಯಾ ಬಣ್ಣ ಹಚ್ಚಿದ್ದಾರೆ. ಒಂದಷ್ಟು ಭಾಗ ಪ್ರೇಕ್ಷಕರು ಮನತುಂಬಿ ನಗಲು ಈ ಚಿತ್ರಕ್ಕಾಗಿ ಕಾಯುತ್ತಿದ್ದು, ಸಿನಿಮಾ ಹೇಗಿರಲಿದೆ ಎಂದು ತೇರಮೇಲೆಯೇ ನೋಡಬೇಕಿದೆ.

ಬರುತ್ತಿದೆ ‘ಗಾಳಿಪಟ 2 ‘ಚಿತ್ರದ ಟ್ರೈಲರ್. Read More »

ಅಲಿಬಾಬನ ಅವತಾರದಲ್ಲಿ ಮೋಡಿ ಮಾಡಲಿದ್ದಾರೆ ಜೆಕೆ

ಕನ್ನಡ ಕಿರುತೆರೆಯಲ್ಲಿ ಜೆಕೆ ಅಭಿನಯದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಅಂದಿನ ಸಮಯಕ್ಕೆ ಭರ್ಜರಿಯಾಗಿ ಪ್ರಸಾರ ಕಂಡು ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಸಿಕ್ಕಾಪಟ್ಟೆ ಫೇಮಸ್ ಆದರು. ನಂತರದಲ್ಲಿ ಸ್ಯಾಂಡಲ್ವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅಶ್ವಿನಿ ನಕ್ಷತ್ರ ಧಾರಾವಾಹಿಯ ನಂತರ ಹಿಂದಿ ಕಿರುತೆರೆ ಕಡೆ ಮುಖ ಮಾಡಿದ ಜೆಕೆ, ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದರು. ಇದೀಗ ಮತ್ತೆ ಹಿಂದಿ ಸೀರಿಯಲ್ ನತ್ತ ಮತ್ತೆ ಮುಖ ಮಾಡಿದ್ದಾರೆ. ಹೌದು, ಹೊಸ ಸೀರಿಯಲ್ ನಲ್ಲಿ ಆಲಿಬಾಬನಾಗಿ ಜೆಕೆ ಕಾಣಿಸಿಕೊಳ್ಳಲಿದ್ದಾರೆ.ಇದೀಗ 5 ವರ್ಷಗಳ ನಂತರ ಹಿಂದಿ ಕಿರುತೆರೆಗೆ ಮತ್ತೆ ಕಾಲಿಟ್ಟಿದ್ದಾರೆ. ಹಿಂದಿಯ ಪ್ರಸಿದ್ಧ ನಿರ್ದೇಶಕ ಮಾನ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವ ‘ಆಲಿಬಾಬಾ ದಸ್ತಾನ್-ಎ-ಕಾಬೂಲ್‘ ಎಂಬ ಸೀರಿಯಲ್ ನಲ್ಲಿ ಜೆಕೆ ನಟಿಸಲಿದ್ದಾರೆ. ಈ ಸೀರಿಯಲ್ನ ಫಸ್ಟ್ ಲುಕ್ ರಿಲೀಸ್ ಆಗಿದೆ. ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫಸ್ಟ್ ಲುಕ್ ಫೋಟೋವನ್ನು ಹಂಚಿಕೊಂಡಿದ್ದು, ‘‘ಕಾಯುವಿಕೆ ಮುಗಿದಿದೆ! ಇಲ್ಲಿ ಕಾಲ್ಪನಿಕ ಪ್ರಪಂಚದ ಇತಿಹಾಸದಲ್ಲಿ ಭಯಾನಕ ದುಷ್ಟ ರಾಕ್ಷಸ ಬರುತ್ತಾನೆ. ಸೋನಿ ಸಬ್ ನಲ್ಲಿ ಆಲಿ ಬಾಬಾ ದಾಸ್ತಾನ್-ಎ-ಕಾಬೂಲ್ ಸೀರಿಯಲ್ ಬರಲಿದೆ. ಅಲಿಬಾಬಾ ಮತ್ತು 40 ಕಳ್ಳರು ಕಥೆಯಿಂದ ಸಣ್ಣ ಎಳೆಯನ್ನು ತೆಗೆದುಕೊಂಡು ಈ ಸೀರಿಯಲ್ ಅನ್ನು ರೂಪಿಸಲಾಗಿದೆ. ಸೀರಿಯಲ್ ಶೂಟಿಂಗ್ ಅನ್ನು ಲಡಾಖ್‌ನಲ್ಲಿ ಪ್ರಾರಂಭಿಸುತ್ತೇವೆ. ಅಲ್ಲದೇ ಈ ಸೀರಿಯಲ್ ಮೂಲಕ ನಾನು ಜನರ ನಿರೀಕ್ಷೆಯ ಮಟ್ಟವನ್ನು ತಲುಪುತ್ತೇನೆ ಎಂಬ ನಂಬಿಕೆ ಇದೆ‘’ ಎಂದು ಹೇಳಿದ್ದಾರೆ. ಇನ್ನು, ಕೆಲ ತಿಂಗಳುಗಳ ಹಿಂದೆ ಜೆಕೆ ಹಂಚಿಕೊಂಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅದಲ್ಲದೇ ಜೆಕೆ ವಿವಾಹವಾಗುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ‘ಈ ಸುದ್ದಿ ಸುಳ್ಳು, ಅದೆಷ್ಟು ಬಾರಿ ನನಗೆ ವಿವಾಹ ಮಾಡಿಸುತ್ತಾರೋ ಗೊತ್ತಿಲ್ಲ’ ಎನ್ನುವ ಮೂಲಕ ಸುಳ್ಳು ಸುದ್ದಿಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೆಕೆ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಹೀಗಾಗಿ ಇವರಿಬ್ಬರ ವಿವಾಹವಾಗಲಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಜೆಕೆ ಧಾರಾವಾಹಿ ಮಾತ್ರವಲ್ಲದೆ ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ರನ್ನರ್ ಅಪ್ ಆಗಿ ವಿಜೇತರಾದರು. ಇವುಗಳ ಮದ್ಯೆ ಸ್ಯಾಂಡಲ್ ವುಡ್ ನಲ್ಲಿ ಕೆಂಪೇಗೌಡ, ವರದನಾಯಕ, ಜರಾಸಂಧ, ಆ ಕರಾಳ ರಾತ್ರಿ, ವಿಷ್ಣುವರ್ಧನ, ವಿಸ್ಮಯ, ಜಸ್ಟ್ ಲವ್, ಮೇ 1, ಬೆಂಗಳೂರು 560023 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಸಿದ್ದು, ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಇವರೂ ಒಬ್ಬರು.

ಅಲಿಬಾಬನ ಅವತಾರದಲ್ಲಿ ಮೋಡಿ ಮಾಡಲಿದ್ದಾರೆ ಜೆಕೆ Read More »

‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ಯ ಒಟಿಟಿ ಪ್ರವೇಶ.

ಕನ್ನಡ ಚಿತ್ರರಂಗದಲ್ಲಿ ಹಲವು ಹೊಸ ಬಗೆಯ ಸಿನಿಮಾಗಳು ಬರುತ್ತಿವೆ. ಹೊಸತನ ಕೇವಲ ಚಿತ್ರದ ಮೇಕಿಂಗ್ ನಲ್ಲಿರದೆ, ಕಥೆಗಳಲ್ಲೂ ಕಾಣುತ್ತಿರುವುದು ಸಂತೋಷ. ಹಲವು ಸಮಾಜಸ್ನೇಹಿ ವಿಚಾರಗಳನ್ನು ಕೂಡ ನಮ್ಮ ಕನ್ನಡದ ಸಿನಿಮಾಗಳು ಹೊತ್ತು ತಂದಿರೋ ಉದಾಹರಣೆಗಳಿವೆ. ಅದರಲ್ಲೊಂದು ಇತ್ತೀಚೆಗೆ ಬಂದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’. ಸದ್ಯ ಈ ಸಿನಿಮಾ ಒಟಿಟಿ ಪರದೆ ಏರಿದೆ. ಮಧು ಚಂದ್ರ ಅವರು ಬರೆದು ನಿರ್ದೇಶಿಸಿರೋ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾದಲ್ಲಿ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್ ಹಾಗು ಮೇಘನಾ ರಾಜ್ ಅವರು ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಮೇ 13ರಂದು ಹಿರಿತೆರೆಮೇಲೆ ಬಿಡುಗಡೆಯಾಗಿದ್ದ ಈ ಸಿನಿಮಾ ಈಗಿನ ಮಕ್ಕಳ ಮೇಲೆ ಮೊಬೈಲ್ ಉಂಟುಮಾಡುತ್ತಿರುವ ದುಷ್ಪರಿಣಾಮಗಳ ಬಗ್ಗೆ ಹೇಳುತ್ತದೆ. ಶಾಲೆಗೆ ಹೋಗುವ ಮಕ್ಕಳು ಮೊಬೈಲ್ ಫೋನ್ ಗೆ ಅತಿಯಾಗಿ ಹೊಂದಿಕೊಂಡು, ಅದರಿಂದ ಅನುಭವಿಸುವ ತೊಂದರೆಗಳನ್ನು ಹಾಸ್ಯಭರಿತವಾಗಿ ತೆರೆಮೇಲೆ ತೋರಿಸಲಾಗಿದೆ. ಸದ್ಯ ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇದ್ದವರು, ಪ್ರೈಮ್ ವಿಡಿಯೋ ಮೂಲಕ ಈ ಸಿನಿಮಾವನ್ನ ಸದ್ಯ ನೋಡಬಹುದಾಗಿದೆ.

‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ಯ ಒಟಿಟಿ ಪ್ರವೇಶ. Read More »

ಚಿತ್ರಮಂದಿರಗಳಲ್ಲಿ ನೋಡಲು ಸಿಗದ ಇನ್ನೊಂದು ದೃಶ್ಯವನ್ನ ಬಿಡುಗಡೆ ಮಾಡಿದ ‘777 ಚಾರ್ಲಿ’.

‘777 ಚಾರ್ಲಿ’ ಈ ಹೆಸರು ಯಾರಿಗೇ ತಾನೇ ತಿಳಿದಿಲ್ಲ. ಚಾರ್ಲಿ ಎಂದ ತಕ್ಷಣ ಹೆಸರಾಂತ ಚಾರ್ಲಿ ಚಾಪ್ಲಿನ್ ಅವರನ್ನು ನೆನೆಯುತ್ತಿದ್ದ ಜನ, ಇದೀಗ ನಾಯಿಯೊಂದನ್ನ ನೆನಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಅವರ ಅಭಿನಯದ ‘777 ಚಾರ್ಲಿ’ ಸಿನಿಮಾ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಒಟಿಟಿ ಪರದೆ ಮೇಲೆ ಬರಲು ಕೂಡ ಸಜ್ಜಾಗಿದೆ. ಈ ನಡುವೆ ಥಿಯೇಟರ್ ಗಳಲ್ಲಿ ನೋಡಲು ಸಿಗದಿರುವಂತಹ ಸಿನಿಮಾದ ಅಂತಿಮ ಹಂತದಲ್ಲಿ ಡಿಲೀಟ್ ಮಾಡಲಾದ ದೃಶ್ಯವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಯೂಟ್ಯೂಬ್ ನಲ್ಲಿ, ಎಲ್ಲಾ ಭಾಷೆಗಳಲ್ಲೂ ಅಧಿಕೃತ ಚಾನೆಲ್ ಗಳಲ್ಲಿ ಈ ದೃಶ್ಯ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಜೂನ್ 10ರಂದು ಬೆಳ್ಳಿತೆರೆ ಮೇಲೆ ಬಿಡುಗಡೆಯಾದ ‘777 ಚಾರ್ಲಿ’ ಸಿನಿಮಾ ಪ್ರಪಂಚದಾದ್ಯಂತ ವಿವಿಧ ಭಾಷೆಗಳಲ್ಲಿ ಶ್ವಾನ-ಪ್ರೇಮಿಗಳನ್ನೂ, ಸಿನಿಪ್ರೇಮಿಗಳನ್ನೂ ಕಣ್ತುಂಬಿಕೊಂಡು ಸಿನಿಮಾ ನೋಡುವಂತೆ ಮಾಡಿತ್ತು. ಧರ್ಮ ಹಾಗು ಚಾರ್ಲಿಯ ಭಾವನಾತ್ಮಕ ಜೀವನಗಾಥೆಯನ್ನು ಸಾರುವ ಈ ಚಿತ್ರದ ಎರಡನೇ ಡಿಲೀಟ್ ಮಾಡಲಾದ ದೃಶ್ಯಾವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ದೃಶ್ಯದಲ್ಲಿ ರಕ್ಷಿತ್ ಶೆಟ್ಟಿಯವರ ಧರ್ಮ ಪಾತ್ರ, ತನ್ನ ಸಹೋದ್ಯೋಗಿಯಾದ ಉತ್ತರಕುಮಾರ್ ಅವರ ಜೊತೆಗೆ ನಡೆಸುವ ವಿಚಿತ್ರ ಸಂಭಾಷನೆಯೊಂದನ್ನು ಬಿಂಬಿಸಿದೆ. ಸಿನಿಮಾದಲ್ಲಿ ಚಾರ್ಲಿ ನಾಯಿಯ ಪಾತ್ರಕ್ಕೆ ಮಾತ್ರವಲ್ಲದೆ ರಕ್ಷಿತ್ ಅವರ ಈ ಧರ್ಮ ಪಾತ್ರವನ್ನು ಹಲವರು ಮೆಚ್ಚಿಕೊಂಡಿದ್ದರು. ಯಾರನ್ನು ಹಚ್ಚಿಕೊಳ್ಳದ ಧರ್ಮ, ತನ್ನಿಂದ ಕೆಲಸ ಹೇಳಿಸಿಕೊಳ್ಳಲು ಬಂದ ಉತ್ತರ ಕುಮಾರನಿಗೆ ಶಿಸ್ತಿನ ಪಾಠ ಹೇಳುವುದನ್ನು ಈ ದೃಶ್ಯದಲ್ಲಿ ಕಾಣಬಹುದಾಗಿದೆ. ಕಿರಣ್ ರಾಜ್ ಅವರು ರಚಿಸಿ ನಿರ್ದೇಶಿಸಿರುವ ‘777 ಚಾರ್ಲಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ 50ದಿನಗಳನ್ನು ಪೂರೈಸುವತ್ತ ಹೆಜ್ಜೆ ಹಾಕುತ್ತಿದೆ. ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ಶಾರ್ವರಿ ಮುಂತಾದ ನಟರು ಹಾಗು ಚಾರ್ಲಿ ನಾಯಿಯೂ ನಟಿಸಿರುವ ಈ ಸಿನಿಮಾ ಕಂಡವರೆಲ್ಲರ ಮನಸ್ಸಿನ ಖದವನ್ನ ತಟ್ಟಿದ್ದಂತೂ ಸತ್ಯ. ಇದೇ ಜುಲೈ 29ರಿಂದ ಸಿನಿಮಾ ‘ವೂಟ್’ ಆಪ್ ನಲ್ಲಿ ಪ್ರದರ್ಶನ ಕಾಣಲಿದ್ದು, ಸದ್ಯ ಸಿನಿಮಾದ ದೃಶ್ಯವೊಂದನ್ನು ಚಿತ್ರತಂಡ ಹೊರಹಾಕಿದೆ.

ಚಿತ್ರಮಂದಿರಗಳಲ್ಲಿ ನೋಡಲು ಸಿಗದ ಇನ್ನೊಂದು ದೃಶ್ಯವನ್ನ ಬಿಡುಗಡೆ ಮಾಡಿದ ‘777 ಚಾರ್ಲಿ’. Read More »

ಸದ್ಯ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎನ್ನುತ್ತಿದೆ ಒಟಿಟಿ!!

ಬೆಳ್ಳಿತೆರೆ ಮೇಲೆ ತೆರೆಕಂಡ ಸಿನಿಮಾಗಳಿಗೆ ಯಶಸ್ಸು ಎಷ್ಟು ಸಿಗುತ್ತದೋ, ಆದರೆ ಪ್ರೇಕ್ಷಕರನ್ನು ತಲುಪಲು ಎರಡೆರಡು ಅವಕಾಶ ದೊರೆಯುತ್ತದೆ ಎನ್ನಬಹುದು. ಚಿತ್ರಮಂದಿರಗಳಲ್ಲಿ ಒಂದಿಷ್ಟು ಕಾಲ ಓಟ ನಡೆಸಿ ನಂತರ ಇನ್ನೊಮ್ಮೆ ‘ಒಟಿಟಿ’ಯ ಮೂಲಕ ಕಿರುತೆರೆ ಪರದೆ ಮೇಲೆ ಸುದ್ದಿಯಲ್ಲಿರಬಹುದು. ಒಟಿಟಿಗೆ ಹೊಸ ಸಿನಿಮಾಗಳ ಸೇರ್ಪಡೆಗಳು ಆಗುತ್ತಲೇ ಇರುತ್ತವೆ. ಸದ್ಯ ಕನ್ನಡಿಗರ ಮನಸ್ಸಿಗೆ ಮುದ ನೀಡಿದ್ದ ಸಿನಿಮಾ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ತನ್ನ ಒಟಿಟಿ ಪಯಣ ನಡೆಸಿದೆ. ಇದೇ ಏಪ್ರಿಲ್ 29ರಂದು ಬೆಳ್ಳಿಪರದೆ ಮೇಲೆ ಬಿಡುಗಡೆಯಾಗಿದ್ದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ, ನೋಡಿದವರೆಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಒಂದು ಮೃದು ಮನಸಿನ ಮಧುರ ಕಥೆ ಎಂದು ಅದೇಷ್ಟೋ ಪ್ರೇಕ್ಷಕರು ಸಿನಿಮಾವನ್ನ ಕರೆದಿದ್ದರು. ಒಬ್ಬ ಸಾಮಾನ್ಯ ಮಲೆನಾಡಿನ ಯುವಕನ ಜೀವನದಲ್ಲಾಗುವ ಏರುಪೇರುಗಳನ್ನು ಹೊತ್ತು ತರುವ ಸಿನಿಮಾ ವೀಕ್ಷಕರಿಗೆ ಒಂದೊಳ್ಳೆ ವಿಷಯ ಹೇಳಿತ್ತು. ದಿಗಂತ್, ಐಂದ್ರಿತಾ ರೈ ಹಾಗು ರಂಜನಿ ರಾಘವನ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇದ್ದವರು, ಪ್ರೈಮ್ ವಿಡಿಯೋದಲ್ಲಿ ಸಿನಿಮಾವನ್ನ ಕಣ್ತುಂಬಿಕೊಳ್ಳಬಹುದಾಗಿದೆ.

ಸದ್ಯ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎನ್ನುತ್ತಿದೆ ಒಟಿಟಿ!! Read More »

ನಟನೆಯಿಂದ ಬ್ರೇಕ್ ತೆಗೆದುಕೊಂಡ ನಿತ್ಯಾ ಮೆನನ್… ಕಾರಣ ಏನು ಗೊತ್ತಾ?

ಸ್ಟಾರ್ ನಟಿ ನಿತ್ಯಾ ಮೆನನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಿತ್ಯಾ ಮೆನನ್ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರ ಎಲ್ಲೆಡೆ ಹರಿದಾಡಿತ್ತು. ಮಾತ್ರವಲ್ಲ ಮದುವೆ ಆಗಲೆಂದೇ ಅವರು ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಈ ವಿಚಾರಕ್ಕೆ ಅವರು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಹೌದು, ನಿತ್ಯಾ ಮೆನನ್ ಅವರು ಶೀಘ್ರವೇ ಮದುವೆ ಆಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಈಗ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಾವು ಸದ್ಯಕ್ಕಂತೂ ಮದುವೆ ಆಗುವ ಆಲೋಚನೆಯಲ್ಲಿ ಇಲ್ಲ ಎಂದಿರುವ ಅವರು, ಇದು ಬ್ರೇಕ್ ತೆಗೆದುಕೊಳ್ಳುವ ಸಮಯ ಎಂದು ಹೇಳಿದ್ದಾರೆ. ‘ನಾನು ಮದುವೆ ಆಗುತ್ತಿಲ್ಲ. ಈ ಸುದ್ದಿ ನಿಜಕ್ಕೆ ಹತ್ತಿರವಿಲ್ಲ. ಯಾರೋ ಬೇಸರ ಬಂದವರು ಒಂದು ಲೇಖನ ಬರೆಯಬೇಕು ಎಂದು ಈ ರೀತಿ ಬರೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಪಡೆಯದೇ ಸುದ್ದಿ ಪ್ರಕಟಿಸಲಾಗಿದೆ. ಮದುವೆ ವಿಚಾರದಲ್ಲಿ ನನ್ನದು ಸದ್ಯಕ್ಕಂತೂ ಯಾವುದೇ ಪ್ಲ್ಯಾನ್ ಇಲ್ಲ’ ಎಂದು ಹೇಳುವ ಮೂಲಕ ನಿತ್ಯಾ ಎಲ್ಲ ವದಂತಿಗೆ ತೆರೆ ಎಳೆದಿದ್ದಾರೆ. ತಾವು ನಟನೆಯಿಂದ ಬ್ರೇಕ್ ಪಡೆಯುತ್ತಿರುವ ಕುರಿತು ಮಾತನಾಡಿದ ಅವರು ‘‘ನಾನು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಒಂದಷ್ಟು ಸಿನಿಮಾ ಮಾಡಿದ ಮೇಲೆ ಒಂದು ಬ್ರೇಕ್ ಪಡೆಯುತ್ತೇನೆ. ರೋಬೋಟ್ ರೀತಿ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಂದು ವಿರಾಮ ಬೇಕಿದೆ’’ ಎಂದಿದ್ದಾರೆ. ಮುಂದುವರೆಸುತ್ತಾ ‘‘ಕಳೆದ ಒಂದು ವರ್ಷದಿಂದ ಸಾಕಷ್ಟು ಕೆಲಸ ಮಾಡಿದ್ದೇನೆ. ಐದಾರು ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಈ ಚಿತ್ರಕ್ಕಾಗಿ ನಾನು ನಿತ್ಯ ಕೆಲಸ ಮಾಡಿದ್ದೇನೆ. ಹೀಗಾಗಿ, ವಿರಾಮದ ಅಗತ್ಯವಿದೆ. ಇದು ಬ್ರೇಕ್ ತೆಗೆದುಕೊಳ್ಳುವ ಸಮಯ. ಈ ಸಮಯದಲ್ಲಿ ಸಾಕಷ್ಟು ಸುತ್ತಾಡುತ್ತೇನೆ’’ ಎಂದು ಹೇಳಿದ್ದಾರೆ. ಇದಲ್ಲದೆ ಮಲಯಾಳಂನ ಖ್ಯಾತ ನಟನ ಜತೆ ನಿತ್ಯಾ ಮದುವೆ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈಗ ಅವರಿಂದಲೇ ಇದಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ನಿತ್ಯಾ ಮೆನನ್ ಅವರು ಮದುವೆ ಆಗುತ್ತಿಲ್ಲ ಎನ್ನುವ ವಿಚಾರ ಕೇಳಿ ಕೆಲ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಆದಷ್ಟು ಬೇಗ ಅವರು ವಿವಾಹವಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.

ನಟನೆಯಿಂದ ಬ್ರೇಕ್ ತೆಗೆದುಕೊಂಡ ನಿತ್ಯಾ ಮೆನನ್… ಕಾರಣ ಏನು ಗೊತ್ತಾ? Read More »

‘ಕ್ರಾಂತಿ’ಗೆ ಧ್ವನಿಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾ ಬಹುನಿರೀಕ್ಷಿತ ‘ಕ್ರಾಂತಿ’, ಬಹುವೇಗದಲ್ಲಿ ತನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಚಿತ್ರ ಸದ್ಯ ಚಿತ್ರೀಕರಣದ ಘಟ್ಟದಲ್ಲಿದೆ. ಇತ್ತೀಚಿಗಷ್ಟೇ ಹೊರದೇಶವಾದ ಪೋಲ್ಯಾಂಡ್ ನಲ್ಲಿ ತಮ್ಮ ಒಂದು ಹಂತದ ಚಿತ್ರೀಕರಣವನ್ನು ‘ಕ್ರಾಂತಿ’ ಮುಗಿಸಿಕೊಂಡಿದ್ದು, ಅದರ ಸಂಭಂದಿತ ಫೋಟೋ ಒಂದು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ನಡುವೆ ದರ್ಶನ್ ಅವರು ‘ಕ್ರಾಂತಿ’ ಸಿನಿಮಾದ ಡಬ್ಬಿಂಗ್ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಪಡೆದಿರೋ ನಟರುಗಳಲ್ಲಿ ಒಬ್ಬರಾದ ದಾಸ ದರ್ಶನ್ ಅವರ 55ನೇ ಸಿನಿಮಾ ಎಂದರೆ ಅದರ ಬಗೆಗಿನ ಸಣ್ಣ ಸುದ್ದಿಗಳು ಸಹ ದೊಡ್ಡ ಸದ್ದು ಮಾಡುವುದು ಸಹಜ. ಸದ್ಯ ಸಿನಿಮಾದ ಬಹುಪಾಲು ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ದರ್ಶನ್ ಅವರ ಪಾತ್ರಕ್ಕೆ ಧ್ವನಿ ತುಂಬುವ ಕೆಲಸ ಆರಂಭಿಸಿದೆ. ದರ್ಶನ್ ಅವರು ಡಬ್ ಮಾಡುತ್ತಿರುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ‘ವಾಯ್ಸ್ ಒಫ್ ಕ್ರಾಂತಿ’ ಎಂದು ಬರೆದುಕೊಂಡಿದೆ ಚಿತ್ರತಂಡ. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ‘ಯಜಮಾನ’ ಸಿನಿಮಾದ ಮೂಲಕ ನಿರ್ದೇಶನದಲ್ಲಿ ಯಶಸ್ಸು ಕಂಡ ವಿ ಹರಿಕೃಷ್ಣ ಅವರು ‘ಕ್ರಾಂತಿ’ ಸಿನಿಮಾದ ಮೂಲಕ ಮತ್ತೊಮ್ಮೆ ದರ್ಶನ್ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ. ‘ಯಜಮಾನ’ ನಿರ್ಮಾಣ ಮಾಡಿದ್ದ ‘ಮೀಡಿಯಾ ಹೌಸ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಶೈಲಜಾ ನಾಗ್ ಹಾಗು ಸುರೇಶ ಬಿ ಅವರು ‘ಕ್ರಾಂತಿ’ಯ ನಿರ್ಮಾಣ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೇ, ದರ್ಶನ್ ಅವರೊಂದಿಗೆ ತಮ್ಮ ಮೊದಲ ಸಿನಿಮಾದಲ್ಲಿ ನಟಿಸಿದ್ದ ರಚಿತಾ ರಾಮ್ ಅವರು ‘ಕ್ರಾಂತಿ’ಯ ಮೂಲಕ ಮೂರನೇ ಬಾರಿ ದರ್ಶನ್ ಅವರ ಜೊತೆ ನಟಿಸುತ್ತಿದ್ದಾರೆ. ಇವರ ಜೊತೆ ಸುಮಲತಾ ಅಂಬರೀಷ್ ಹಾಗು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಕ್ಕ ಮಾಸ್ ಎಂಟರ್ಟೈನರ್ ಆಗಿರುವ ಸಾಧ್ಯತೆಯಿದ್ದು, ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಗುತ್ತಿದ್ದು, ಸಿನಿಮಾ ಯಾವಾಗ ತೆರೆಮೇಲೆ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

‘ಕ್ರಾಂತಿ’ಗೆ ಧ್ವನಿಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್. Read More »

Scroll to Top