ಡೈನಾಮಿಕ್ ಪ್ರಿನ್ಸ್ ಇನ್ಮುಂದೆ ‘ಗಣ’ ಟೀಸರ್ ರಿಲೀಸ್ ಮಾಡಿದ ಚಂದ್ರಲೇಖಾ- (ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯ ‘ಗಣ’ ಸಿನಿಮಾದ ಟ್ರೇಲರನ್ನ ಪ್ರಜ್ವಲ್ ತಾಯಿ ಚಂದ್ರಲೇಖಾ. ಬಿಡುಗಡೆ ಮಾಡಿದರು. ಹರಿ ಪ್ರಸಾದ್ ಜಕ್ಕ ಅವರ ನಿರ್ದೇಶನದಲ್ಲಿ…ತಾಯಿ)
ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯ ‘ಗಣ’ ಸಿನಿಮಾದ ಟ್ರೇಲರನ್ನ ಪ್ರಜ್ವಲ್ ತಾಯಿ ಚಂದ್ರಲೇಖಾ. ಬಿಡುಗಡೆ ಮಾಡಿದರು. ಹರಿ ಪ್ರಸಾದ್ ಜಕ್ಕ ಅವರ ನಿರ್ದೇಶನದಲ್ಲಿ ಮೂಡಿಬಂದ ಮೊದಲ ಕನ್ನಡ ಸಿನಿಮಾ ಗಣ. ‘ಗಣ’ ಚಿತ್ರಕ್ಕೆ ಬೆಂಗಳೂರು-ಮೈಸೂರಿನಲ್ಲಿ ಚಿತ್ರೀಕರಣ ಕೆಲಸ ನಡೆದಿದೆ. ‘ನೆನೊಕ್ಕಡೇನೆ’, ‘100% ಲವ್’ ಮುಂತಾದ ಸಿನಿಮಾಗಳಿಗೆ ಸುಕುಮಾರ್ ಜೊತೆಗೆ ರೈಟರ್ ಆಗಿ ಕೆಲಸ ಮಾಡಿರುವ ಹರಿ ಪ್ರಸಾದ್, ತೆಲುಗಿನಲ್ಲಿ ಬೇಡಿಕೆಯ ಸ್ಕ್ರಿಪ್ಟ್ ರೈಟರ್. ಎರಡು ಸಿನಿಮಾಗಳಿಗೆ ನಿರ್ದೇಶನವನ್ನೂ ಮಾಡಿರುವ ಹರಿ ಪ್ರಸಾದ್ ಜಕ್ಕ ಅವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ನೀಡಿದ್ದಾರೆ. ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ‘ಗಣ ಚಿತ್ರದಲ್ಲಿ ಪ್ರಜ್ವಲ್ ಎದುರು ಯಶಾ ಶಿವಕುಮಾರ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಹೆಗ್ಡೆ, ವೇದಿಕಾ ಕುಮಾರ್, ಮಾಸ್ಟರ್ ರಘುನಂದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿವರಾಜ್ ಕೆ.ಆರ್. ಪೇಟೆ, ಕೃಷಿ ತಾಪಂಡ, ಸಂಪತ್ ರಾಜ್, ರವಿ ಕಾಳೆ, ರಮೇಶ್ ಭಟ್, ಉಮೇಶ್, ಸಿದ್ಲಿಂಗು ಶ್ರೀಧರ್, ಬಾಬು ಹಿರಣ್ಣಯ್ಯ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣವಿದ್ದು , ಹರೀಶ್ ಕೊಮ್ಮೆ ಸಂಖಲನ ಮಾಡಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್