Karnataka Bhagya

ಅಂಕಣ

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ,ಹಾಸ್ಟೆಲ್ ಒಳಗೆ ಸಿಕ್ಕಿಬಿದ್ದ ದೂದ್ ಪೇಡಾ ದಿಗಂತ್…!

ಇತ್ತಿಚಿನ‌ ದಿನಗಳಲ್ಲಿ ಸಿನಿಮಾ ಮಾಡುವುದು ಊಹೆಗೂ ನಿಲುಕದ ವಿಷಯವಾಗಿದೆ. ದೊಡ್ಡದಾಗಿ ಸಿನಿಮಾ ಮಾಡಬೇಕು ಸಿನಿಮವಾದ ಬಳಿಕ ಸಿನಿಮಾದ ಪ್ರಚಾರ ದೊಡ್ಡ ಮಟ್ಟದಲ್ಲಿ ಮಾಡಬೇಕು, ಪ್ರತಿ ವೀಕ್ಷಕನಿಗೂ ಸಿನಿಮಾದ ಮುಟ್ಟ ಬೇಕು ಅಂತಾ ಈಗಲೂ ಹಗಲು ರಾತ್ರಿ ಸಿನಿಮಾಗಾಗಿ‌ ಕಷ್ಟ ಪಡುವವರನ್ನ ನಾವು ಕಂಡಿದ್ದೇವೆ. ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸುತ್ತಿರುವುದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾತಂಡ.ಕೊನೆಗು ಹಾಸ್ಟೆಲ್ ಹುಡುಗರು ಬೇಕಾಗಿದ್ದರೆ ಚಿತ್ರ ತಂಡಕ್ಕೆ ಸ್ಟಾರ್ ನಟ ದೂದ್ ಪೇಡಾ ದಿಗಂತ್ ಅಡ್ಮಿಶನ್ ಆಗಿದ್ದಾರೆ. ಇದರಿಂದ ಹಾಸ್ಟೆಲ್ ಹುಡುಗರಿಗೆ ದೂದ್ ಪೇಡಾ ಸಿಹಿ ಸಿಕ್ಕಿದೆ. ಅಂದರೆ ದೂದ್ ಪೇಡಾ ದಿಗಂತ್ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುನೀತ್ ರಾಜಕುಮಾರ್, ರಮ್ಯಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೈನಿ ಶೆಟ್ಟಿ, ಪವನ್ ಕುಮಾರ್ ಬೆಂಬಲ ಕೊಟ್ಟಿರುವ ಈ ಚಿತ್ರದಲ್ಲಿ ದಿಗ್ಗಿ ಬಣ್ಣ ಹಚ್ಚಿದ್ದಾರೆ. ಆದ್ರೆ ದಿಗ್ಗಿಯ ಪಾತ್ರ ಏನು ಎಂಬುದನ್ನ ಚಿತ್ರತಂಡ ಗೌಪ್ಯವಾಗಿಟ್ಟಿದೆ.ಜುಲೈ 7ಕ್ಕೆ ದಿಗಂತ್ ಲುಕ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರಕ್ಕೆ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ.ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ.ಪ್ರತಿ ಬಾರಿ ಯುನಿಕ್ ಕಾನ್ಸಎಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರನು ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಖಲನವಿರಲಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ,ಹಾಸ್ಟೆಲ್ ಒಳಗೆ ಸಿಕ್ಕಿಬಿದ್ದ ದೂದ್ ಪೇಡಾ ದಿಗಂತ್…! Read More »

ಸಿಂಪಲ್ ಪೋಟೋಶೂಟ್ ಮೂಲಕ ಗಮನ ಸೆಳೆದ ಅನು ಸಿರಿಮನೆ..

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಜೊತೆ ಜೊತೆಯಲ್ಲಿ ಸೀರಿಯಲ್ ನಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ.ನಟಿ ಮೇಘಾ ಶೆಟ್ಟಿ ಕ್ಯೂಟ್ ಆಗಿ ಪೋಸ್ ಕೊಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂದಿದ್ದಾರೆ. ಭಿನ್ನ‌ ಭಿನ್ನವಾದ ಪೋಟೋ ಭಂಗಿಗೆ ಅಭಿಮಾನಿ ವರ್ಗ ಯೂ ಆರ್ ಲುಕಿಂಗ್ ಸೋ ಕ್ಯೂಟ್ ಅಂತಾ ಕಮೆಂಟ್ ಮಾಡಿದೆ. ಮೇಘಾ ಶೆಟ್ಟಿ ಶೇರ್ ಮಾಡಿರುವ ಫೋಟೋಗಳಿಗೆ ಸೋ ಕ್ಯೂಟ್, ಲವ್ಲಿ, ಸೂಪರ್, ಅನು ಅಂದವೇ ಅಂದ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಸಿಂಪಲ್ ಡ್ರೆಸ್‍ನಲ್ಲೇ ಮಿಂಚಿದ ಮೇಘಾ ಶೆಟ್ಟಿ ಕತ್ತಿಗೆ ತಮ್ಮ ಹೆಸರು ಇರೋ ಚಿನ್ನದ ಚೇನ್, ಕೈ ಲಿ ಹೈರ್ ಬ್ಯಾಂಡ್ ಹಾಕೊಂಡು ಸಿಂಪಲ್ ಸ್ಮೈಲ್ ಮಾಡ್ತಾ ಸಿಂಪಲ್ ಹುಡುಗರ ಹೃದಯ ದೋಚಿದ್ದಾರೆ. ಮೊನ್ನೆಯಷ್ಟೇ ಕನ್ನಡಕ ಹಾಕಿಕೊಂಡ ಫೋಟೋಗಳನ್ನು ಮೇಘಾ ಶೆಟ್ಟಿ ಶೇರ್ ಮಾಡಿದ್ದರು. ಫೋಟೋ ನೋಡಿ ಥೇಟ್ ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ತರ ಕಾಣ್ತಿದ್ದೀರಾ ಅಂತಾ ಅಭಿಮಾನಿಗಳು ಕಮೆಂಟ್ಸ್ ಹಾಕಿದ್ರು‌. ನೋಡೋಕೆ ಕ್ಯೂಟ್ ಆಗಿ ಇದ್ದು. ಮುದ್ದು ಮದ್ದಾಗಿ ಮಾತನಾಡುವ ಮೇಘಾ ಶೆಟ್ಟಿ ತಮ್ಮ ನಟನೆ ಮತ್ತು ವಿಭಿನ್ನ ಪೋಟೋ ಶೂಟ್ ಮೂಲಕವೇ ಜನರ ಗಮನ ಸೆಳೆಯುತ್ತಿದ್ದಾರೆ. ಇಷ್ಟೆಲ್ಲ ತಯಾರಿ ಮಾಡಿಕೊಳ್ಳುತ್ತಿರುವ ಮೇಘಾ ಶೆಟ್ಟಿ ಸದ್ಯಕ್ಕೆ ಯಾವ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಅಂತಾ ಕಾದು ನೋಡ ಬೇಕಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಸಿಂಪಲ್ ಪೋಟೋಶೂಟ್ ಮೂಲಕ ಗಮನ ಸೆಳೆದ ಅನು ಸಿರಿಮನೆ.. Read More »

ಕೊನೆಗೂ ಸಿಕ್ತು ಬಿಗ್ ಅಪ್ಡೇಟ್, kichcha 46 ಬಗ್ಗೆ ಸಿನಿತಂಡ ಕೊಟ್ಟ ಸುಳಿವು, ಜುಲೈ-2ಕ್ಕೆ ಟೀಸರ್ ಔಟ್..!

‘ವಿಕ್ರಾಂತ್​ ರೋಣ’ ಬಿಡುಗಡೆ ಆದ ಬಳಿಕ ಸುದೀಪ್​ ಅವರು ದೀರ್ಘ ಗ್ಯಾಪ್​ ಪಡೆದುಕೊಂಡಿದ್ದರು. ನಂತರ ಕ್ರಿಕೆಟ್​ ಕಡೆಗೆ ಗಮನ ನೀಡಿದ್ದರು. ಬಹಳ ದಿನಗಳ ಬಳಿಕ ಅವರು 46ನೇ ಸಿನಿಮಾದ ಕುರಿತು ಸಿನಿತಂಡ ಹೊಸ ಅಪ್​ಡೇಟ್​ ನೀಡಲಾಗಿದೆ. ಈ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕವನ್ನು ಬಹಿರಂಗ ಮಾಡಲಾಗಿದೆ. ಜುಲೈ 2ರಂದು ಬೆಳಗ್ಗೆ ‘ಕಿಚ್ಚ 46’ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಕಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್​’ ಜೊತೆ ಕಿಚ್ಚ ಸುದೀಪ್​ ಅವರು ಕೈ ಜೋಡಿಸಿದ್ದು, ಅದ್ದೂರಿ ಬಜೆಟ್​ನಲ್ಲಿ ‘ಕಿಚ್ಚ 46’ ಚಿತ್ರ ನಿರ್ಮಾಣ ಆಗುತ್ತಿದೆ. ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಎಸ್​. ಧಾನು ಅವರದ್ದು. ‘ಕಿಚ್ಚ 46’ ಚಿತ್ರದ ಟೀಸರ್​ ನೋಡಲು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಕಾದಿದ್ದಾರೆ. ಟೀಸರ್​ ರಿಲೀಸ್​ ಡೇಟ್​ ಯಾವುದು ಎಂಬುದನ್ನು ತಿಳಿಸುವ ಸಲುವಾಗಿ ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಕಾಣಿಸಿಕೊಂಡಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಕೊನೆಗೂ ಸಿಕ್ತು ಬಿಗ್ ಅಪ್ಡೇಟ್, kichcha 46 ಬಗ್ಗೆ ಸಿನಿತಂಡ ಕೊಟ್ಟ ಸುಳಿವು, ಜುಲೈ-2ಕ್ಕೆ ಟೀಸರ್ ಔಟ್..! Read More »

ನಟ ರಿಷಬ್ ಶೆಟ್ಟಿಗೆ ಒಲಿದ ವಿಶ್ವ ಶ್ರೇಷ್ಠ ಪ್ರಶಸ್ತಿ, ವೇದಿಕೆ ಮೇಲೆ ಪಂಚೆಯಲ್ಲಿ‌‌ ಮಿಂಚಿದ ಶೆಟ್ರು..!

ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ನಟ, ನಿರ್ದೇಶಕ, ನಿರ್ಮಾಪಕನಾಗಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ.ವಿಶೇಷ ಎಂದರೆ ಈಗ ರಿಷಬ್​​ಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರೆತಿದೆ. ಅಮೆರಿಕದ ವಾಷಿಂಗ್ಟನ್​ನ ಸಿಯಾಟಲ್​ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಈಗ ಅದ್ದೂರಿ ಕಾರ್ಯಕ್ರಮದಲ್ಲಿ ಈ ಅವಾರ್ಡ್ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆನೆಟರ್ ಡಾ. ದೆರೀಕ್ ಟ್ರಸ್ಫರ್ಡ್ ಹಾಜರಿ ಹಾಕಿದ್ದರು. ರಿಷಬ್ ಶೆಟ್ಟಿ‘ನನಗೆ ಅನೇಕ ಕಾರ್ಯಕ್ರಮಕ್ಕೆ ಬರೋಕೆ ಆಹ್ವಾನ ಇತ್ತು. ಆದರೆ, ಯಾವುದಕ್ಕೂ ಬರೋಕೆ ಆಗಿರಲಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ನಾನು ಆಗಮಿಸಿದೆ. ನನಗೆ ನಿಜಕ್ಕೂ ಖುಷಿ ಆಗುತ್ತಿದೆ. ಕನ್ನಡಿಗರ ನೋಡಲು ಸಾಕಷ್ಟು ಸಂತೋಷ ಆಗುತ್ತಿದೆ. ಕನ್ನಡಿಗರಿಂದಾಗಿ ನಾನು ಇಲ್ಲಿದ್ದೇನೆ’‘ಕಾಂತಾರ’ ಚಿತ್ರವನ್ನು ವಿಶ್ವದ ಅನೇಕರು ನೋಡಿದ್ದಾರೆ. ಆ ಸಾಲಿನಲ್ಲಿ ಟ್ರಸ್ಫರ್ಡ್ ಕೂಡ ಇದ್ದಾರೆ! ಈ ಚಿತ್ರವನ್ನು ಯೂನಿವರ್ಸಲ್ ಸಿನಿಮಾ ಎಂದು ಅವರು ಕರೆದಿದ್ದಾರೆ. ಅಮೆರಿಕ ಹಾಗೂ ವಾಷಿಂಗ್ಟನ್​ಗೆ ಕನ್ನಡಿಗರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ಟ್ರಸ್ಫರ್ಡ್ ಮೆಚ್ಚುಗೆ ಸೂಚಿಸಿದ್ದಾರೆ. ನಗರದ ಪ್ಯಾರಾಮೌಂಟ್ ಥಿಯೇಟರ್​ಗೆ 95 ವರ್ಷಗಳ ಇತಿಹಾಸ ಇದೆ‌. ಬರಾಕ್ ಒಬಾಮ ಸೇರಿ ಹಲವು ಗಣ್ಯರು ಈ ವೇದಿಕೆ ಮೇಲೆ ನಿಂತು ಭಾಷಣ ಮಾಡಿದ್ದರು. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ‌ ಅನ್ನೋದು ವಿಶೇಷ. ಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ನಟ ರಿಷಬ್ ಶೆಟ್ಟಿಗೆ ಒಲಿದ ವಿಶ್ವ ಶ್ರೇಷ್ಠ ಪ್ರಶಸ್ತಿ, ವೇದಿಕೆ ಮೇಲೆ ಪಂಚೆಯಲ್ಲಿ‌‌ ಮಿಂಚಿದ ಶೆಟ್ರು..! Read More »

‘ಗಜಿನಿ’ ಬೆಡಗಿ ಬಾಳಲ್ಲಿ ಬಿರುಗಾಳಿ? ವಿಚ್ಛೇದನಕ್ಕೆ ಮುಂದಾದ್ರಾ ನಟಿ ಆಸಿನ್?

ದಶಕದ ಹಿಂದೆ ಕೇರಳ ಕುಟ್ಟಿ ಆಸಿನ್ ಬಹುಬೇಡಿಕೆಯ ನಟಿಯಾಗಿ ಮೆರೆದರು. ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಗಮನ ಸೆಳೆದಿದ್ದರು. ವೃತ್ತಿಜೀವನದ ಉತ್ತುಂಗದಲ್ಲಿ ಇದ್ದಾಗಲೇ ‘ಗಜಿನಿ’ ಬೆಡಗಿ ಮದುವೆಯಾಗಿ ಚಿತ್ರರಂಗದಿಂದ ದೂರಾಗಿದ್ದರು. ಉದ್ಯಮಿ ರಾಹುಲ್ ಶರ್ಮಾ ಎಂಬುವವರ ಕೈ ಹಿಡಿದ ಚೆಲುವೆಗೆ ಒಬ್ಬ ಮಗಳು ಇದ್ದಾಳೆ. ಇದೀಗ ದಂಪತಿ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಬಿಪಿಎಲ್ ಮೊಬೈಲ್ ಜಾಹೀರಾತಿನಲ್ಲಿ ಮೊದಲ ಬಾರಿಗೆ ಆಸಿನ್ ಕಾಣಿಸಿಕೊಂಡಿದ್ದರು. ನಂತರ ನರೇಂದ್ರನ್ ಮಕಾನ್ ಜಯಕಾಂತನ್ ವಕಾ’ ಎನ್ನುವ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ತೆಲುಗಿನ ‘ಅಮ್ಮ ನಾನ್ನ ಓ ತಮಿಳು ಅಮ್ಮಾಯಿ’ ಸಿನಿಂಆ ದೊಡ್ಡ ಬ್ರೇಕ್ ಕೊಡ್ತು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸೂರ್ಯ ಜೊತೆ ನಟಿಸಿದ ‘ಗಜನಿ’ ಸಿನಿಮಾ ಆಕೆಗೆ ಬಾಲಿವುಡ್ ಬಾಗಿಲು ತೆರೆದಿತ್ತು. ನೋಡ ನೋಡುತ್ತಲೇ ಆಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್‌ ಕುಮಾರ್‌ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 2016ರಲ್ಲಿ ಉದ್ಯಮಿ ರಾಹುಲ್ ಶರ್ಮ ಜೊತೆ ಆಸಿನ್ ಹೊಸ ಬಾಳಿಗೆ ಕಾಲಿಟ್ಟರು. ನಂತರ ಚಿತ್ರರಂಗ ತೊರೆದು ಆಕೆ ತಮ್ಮ ಪತಿ ರಾಹುಲ್ ಜೊತೆ ಮೈಕ್ರೋ ಮ್ಯಾಕ್ಸ್ ಕಂಪನಿಯಲ್ಲೂ ಕೆಲಸ ಮಾಡಿದರು. ಇದೀಗ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರು ದೂರಾಗಲು ನಿರ್ಧರಿಸಿದ್ದಾರೆ ಎನ್ನುವ ವದಂತಿ ಹರಡಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ. ಸೋಷಿಯಲ್ ಮೀಡಿಯಾದಿಂದ ದೂರ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂದೆ ನಿಂತು ಆಸಿನ್ ಹಾಗೂ ರಾಹುಲ್ ಶರ್ಮ ಮದುವೆ ಮಾಡಿಸಿದ್ದರು ಎನ್ನಲಾಗಿತ್ತು. ಬಹಳ ದಿನಗಳ ಕಾಲ ದಂಪತಿ ಬಹಳ ಸಂತೋಷವಾಗಿ ಜೀವನ ಸಾಗಿಸಿದರು. ಫ್ಯಾಮಿಲಿ ವಕೇಷನ್ ಫೋಟೊಗಳು, ವಿಡಿಯೋಗಳು ವೈರಲ್ ಆಗುತ್ತಿತ್ತು. ಆದರೆ ನಂತರ ಆಕೆ ಸೋಶಿಯಲ್‌ ಮೀಡಿಯಾದಲ್ಲಿ ಸೈಲೆಂಟ್ ಆದರು. ಕಳೆದ ಕೆಲ ದಿನಗಳಿಂದ ಆಸಿನ್- ರಾಹುಲ್ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದೆ, ಶೀಘ್ರದಲ್ಲೇ ದಂಪತಿ ಡಿವೋರ್ಸ್ ತಗೋತ್ತಾರೆ ಅನ್ನೋ ಮಾತುಗಳು ಈಗ ಕೇಳಿಬರ್ತಿದೆ. ಆಸಿನ್ ಗಟ್ಟಿ ನಿರ್ಧಾರ? ಆಸಿನ್ ಪತಿ ರಾಹುಲ್ ಶರ್ಮಾ ಕೆಲ ದಿನಗಳಿಂದ ಬೇರೆ ಹುಡುಗಿಯ ಜೊತೆ ಅಫೇರ್ ಇಟ್ಟುಕೊಂಡಿದ್ದಾರಂತೆ, ಈ ವಿಷಯ ಗೊತ್ತಾಗಿ ಎಚ್ಚರಿಸಿದರೂ ಪ್ರಯೋಜನವಾಗಲಿಲ್ಲವಂತೆ. ಇದೇ ಕಾರಣಕ್ಕೆ ಆಸಿನ್ ಈಗ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಮಗಳು ಇದ್ದರೂ ಕೂಡ ಇಂತಾದೊಂದು ಗಟ್ಟಿ ನಿರ್ಧಾರಕ್ಕೆ ಕೇರಳ ಚೆಲುವೆ ಮನಸ್ಸು ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಸ್ಪಷ್ಟನೆ ನೀಡುತ್ತಾರಾ ದಂಪತಿ? ಮಾಲಿವುಡ್ ನಟಿ ಆಸಿನ್ ಡಿವೋರ್ಸ್ ಎಲ್ಲಾ ಸುಳ್ಳು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಬೆಂಕಿ ಇಲ್ದೇ ಹೊಗೆಯಾಡುವುದಿಲ್ಲ ಎನ್ನುವಂತೆ ಮತ್ತೆ ಕೆಲವರು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ವರ್ಷಗಳಲ್ಲಿ ನಟಿ ಆಸಿನ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಕಳೆದ 8 ತಿಂಗಳಿನಿಂದ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ. ಕೊನೆಯದಾಗಿ ಮಗಳ 5ನೇ ವರ್ಷದ ಹುಟ್ಟುಹಬ್ಬ ಆಚರಣೆ ಫೋಟಿಗಳನ್ನು ಹಂಚಿಕೊಂಡಿದ್ದರು. ಹಾಗಾಗಿ ಡಿವೋರ್ಸ್ ಗಾಸಿಪ್ ಬಗ್ಗೆ ದಂಪತಿ ಸ್ಪಷ್ಟನೆ ಕೊಡ್ತಾರಾ? ಕಾದು ನೋಡಬೇಕಿದೆ. ಸೂಪರ್ ಹಿಟ್ ಚಿತ್ರಗಳಲ್ಲಿ ಆಸಿನ್ 15 ವರ್ಷಗಳ ಸಿನಿಕರಿಯರ್‌ನಲ್ಲಿ ನಟಿ ಆಸಿನ್ ಕೇವಲ 25 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್, ದಳಪತಿ ವಿಜಯ್, ನಾಗಾರ್ಜುನ, ವೆಂಕಟೇಶ್‌ರಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದರು. ತೆಲುಗಿನ ‘ಶಿವಮಣಿ’, ‘ಘರ್ಷಣ’, ‘ಲಕ್ಷ್ಮಿ ನರಸಿಂಹ’ ತಮಿಳಿನ ‘ಗಜಿನಿ’, ‘ಪೋಕಿರಿ’, ‘ವರಲಾರು’ ಹಿಂದಿಯ ‘ಗಜಿನಿ’, ರೆಡಿ, ‘ಹೌಸ್‌ಫುಲ್‌- 2’, ‘ಭೋಲ್ ಬಚ್ಚನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಲಯಾಳಿ ಚೆಲುವೆ ನಟಿಸಿ ಗೆದ್ದಿದ್ದರು.

‘ಗಜಿನಿ’ ಬೆಡಗಿ ಬಾಳಲ್ಲಿ ಬಿರುಗಾಳಿ? ವಿಚ್ಛೇದನಕ್ಕೆ ಮುಂದಾದ್ರಾ ನಟಿ ಆಸಿನ್? Read More »

ಸಕ್ಸಸ್ ಕುಷಿಯಲ್ಲಿ ಅಗ್ರಸೇನಾ ತಂಡ,ಸಿನಿಮಾ ಗೆಲ್ಲಲು ಮಾಧ್ಯಮ ಕಾರಣ..!

ಕಳೆದವಾರ ತೆರೆಕಂಡ ಅಗ್ರಸೇನಾ ಸಿನಿಮಾ ರಾಜ್ಯದಲ್ಲಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ, ತಂದೆ ಮಗನ‌ ಬಾಂದವ್ಯವುಳ್ಳ ಕಥೆಯನ್ನ ಜನ ಮನತುಂಬಿ ಒಪ್ಪಿಕೊಂಡಿದ್ದಾರೆ.ಮಾಧ್ಯಮದ ಸಹಾಯದಿಂದ ಸಿನಿಮಾ ಇವತ್ತು ಇಷ್ಟು ಚೆನ್ನಾಗಿ ನಡಿತಿದೆ.ಸಿನಿಮಾದ ಬಗ್ಗೆ ಎಲ್ಲು ನೆಗೆಟೀವ್ ಕಮೆಂಟ್ಸ್ ಇಲ್ಲ. ಸಾಕಷ್ಟು ಜನರಿಗೆ ಸಿನಿಮಾ ರೀಚ್ ಆಗಿದೆ ಎಂದು ನಿರ್ಮಾಪಕ ಜಯರಾಂ ರೆಡ್ಡಿ ತಿಳಿಸಿದರು. ನಿರ್ದೇಶಕ- ಮುರುಗೇಶ್ಇದು ನಮ್ಮ ಗೆಲುವಲ್ಲ ಇದು ಮಾದ್ಯಮದವರ ಗೆಲುವು. ಪತ್ರಿಕೆಯಲ್ಲಿ ಸಿನಿಮಾದ ರಿವ್ಯೂ ನೋಡಿ ಸಾಕಷ್ಟು ಜನ‌ ಸಿನಿಮಾಗೆ ಬಂದಿದ್ದಾರೆ‌.ಸ್ವತಃ ಕರೆ ಮಾಡಿ ಜನ‌ ಸಿನಿಮಾದ ಬಗ್ಗೆ ಹಂಚಿಕೊಂಡಿದ್ದಾರೆ.ಇವತ್ತು ರಾಜ್ಯಾದ್ಯಂತ ಸಿನಿಮಾ ಒಳ್ಳೆ ಪ್ರತಿಕ್ರಿಯೆ ಪಡೆದಿದ್ದೇವೆ. ಕಥೆಯನ್ನ ನೋಡಿ ಯುವಕರು ಹೆಚ್ಚಾಗಿ ಬರ್ತಾ ಇದ್ದಾರೆ ತಂದೆ ತಾಯಿ ಆಧಾರಿತ ಈ ಸಿನಿಮಾ ನೋಡಿ ನಾವ್ ನಮ್ ತಂದೆ ತಾಯಿಯರನ್ನ ಹೆಚ್ಚಾಗಿ ನೋಡಿಕೊಳ್ತೇವೆ ಅಂತಾ ಜನ ಹೇಳ್ತಾ ಇದ್ದಾರೆ ಸಿನಿಮಾ ಗೆಲ್ಲೋದಕ್ಕೆ ಇದಕ್ಕಿಂತ ಇನ್ನೇನು ಬೇಕು… ಇದು ನನ್ನ ಜೀವನದ ಸಂತಸದ ಕ್ಷಣ ಎಂದರು.ನಾಯಕಿ ರಚನಾ- ಇವತ್ತು ನಮ್ ತಂಡ ಇಷ್ಟೊಂದು ಕುಷಿಯಲ್ಲಿ ಇರೋಕೆ ಸಿನಿಮಾ ಗೆದ್ದರೋದೆ ಕಾರಣ ಆ ಸಂತೋಷಕ್ಕೆ ಪ್ರಮುಖವಾಗಿ ಪತ್ರಕರ್ತರು ಕಾರಣ. ನಮ್ಮ ತಂಡ ಪ್ರತಿ ಹಂತದಲ್ಲು ಸಾಕಷ್ಟು ಸಹಾಯ ಮಾಡಿದೆ. ನಾಯಕ ಅಗಸ್ತ್ಯ ಬೆಳಗೆರೆ- ಈ ಒಂದು ಕುಷಿಯ ಕಾರ್ಯಕ್ಕೆ ಮಾಧ್ಯಮದವರೆಲ್ಲರು ಕಾರಣ ಇವತ್ತು ಜನ ನನ್ನನ್ನ ಕರ್ನಾಟಕದ ರಾಣಾ ದಗ್ಗುಬಾಟಿ ಅಂತಾ ಕರೆಯುತ್ತಿದ್ದಾರೆ ಇದನ್ನೆಲ್ಲ ಕೇಳಿದಾಗ ಸಾಕಷ್ಟು ಕುಷಿಯಾಗುತ್ತೆ ಈ ಸಿನಿಮಾದಲ್ಲಿ ನನಗೆ ಅವಕಾಶ ನೀಡಿದ ನಿರ್ದೇಶಕರಿಗು,ನಿರ್ಮಾಪಕರಿಗೂ ಧನ್ಯವಾದ ಹೇಳ್ತೇನೆ.ಚಿಕ್ಕ ವಯಸ್ಸಿನಲ್ಲೆ ತಂದೆಯನ್ನ ಕಳೆದುಕೊಂಡವನು ನಾನು ಸಿನಿಮಾದಲ್ಲಿ ದೊಡ್ಡದಾಗಿ ನಟಿಸಬೇಕೆಂಬ ಕನಸು ಈಗ ನನಸಾಗಿದೆ ನಿಮಗೆಲ್ಲ ನಾನು ಧನ್ಯ ಎಂದರು. ಚಿತ್ರದಲ್ಲಿ ಸಂಗೀತ ನಿರ್ದೇಶಕ ಎಂ.ಎಸ್ ತ್ಯಾಗುರಾಜು 5 ಹಾಡುಗಳನ್ನ ರಚಿಸಿದ್ದಾರೆ.ಆರ್.ಪಿ ರೆಡ್ಡಿ ಛಾಯಾಗ್ರಹಣ ಇದೆ, ಗೌಸ್ ಪೀರ್,ವಿಜಯ್ ಶಿವು ಬೆರಗಿ ಅವರ ಸಾಹಿತ್ಯ ಇದೆ.ವಿಜಯ್ ಎಂ ಕುಮಾರ್ ಅವರ ಸಂಖಲನ ಅಗ್ರಸೇನಾ ಸಿನಿಮಾಗೆ ಇದೆ.ಒಟ್ಟಾರೆ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗೆ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಸಕ್ಸಸ್ ಕುಷಿಯಲ್ಲಿ ಅಗ್ರಸೇನಾ ತಂಡ,ಸಿನಿಮಾ ಗೆಲ್ಲಲು ಮಾಧ್ಯಮ ಕಾರಣ..! Read More »

ಮಲೈಕಾ‌ ಅರೋರಾ ಹ್ಯಾಪಿ ಬರ್ತಡೆ ಮೈ ಸನ್ ಶೈನ್ ಅಂದದ್ದು ಯಾರಿಗೆ..! ಡಿವೋರ್ಸ್ ಬಳಿಕ ಮಲೈಕಾ ಜೊತೆ ಇರುವ ನಟ ಯಾರು..?

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಜೂನ್ 26 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟ ಅರ್ಜುನ್‌ ಕಪೂರ್‌ಗೆ ಮಲೈಕಾ ಸರ್ಪ್ರೈಸ್‌ ಕೊಟ್ಟಿದ್ದಾಳೆ.ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಜುನ್ ಪೋಟೊಗಳನ್ನ ಹಂಚಿಕೊಂಡಿದ್ದ ಮಲೈಕಾ ಅರೋರಾ ನನ್ನ ಸನ್‌ಶೈನ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಮಲೈಕಾ ಪೋಸ್ಟ್‌ಗೆ ಅರ್ಜುನ್‌ ಕಪೂರ್‌ ಲವ್‌ ಎಮೋಜಿ ರಿಪ್ಲೇ ಮಾಡಿದ್ದರು. ಅರ್ಜುನ್‌ ಕಪೂರ್‌ ಅಪಾರ್ಟ್‌ಮೆಂಟ್‌ಗೆ ಬಂದ ಕೂಡಲೇ ಬಲೂನ್‌ ಬ್ಲಾಸ್ಟ್‌ ಮಾಡಿದ್ದಾರೆ. ಪಾರ್ಟಿ ನಡುವೆ ಮಲೈಕಾ ಅರೋರ ತಾವೇ ಡ್ಯಾನ್ಸ್‌ ಮಾಡಿದ್ದ ದಿಲ್‌ ಸೆ ಚಿತ್ರದ ಚಯ್ಯಾ ಚಯ್ಯಾ ಹಾಡಿಗೆ ಡ್ಯಾನ್ಸ್‌ ಮಾಡಿ ಗೆಳೆಯನನ್ನು ರಂಜಿಸಿದ್ದಾರೆ. ಕೆಂಪು ಹಾಗೂ ಬಿಳಿ ಮಿಶ್ರಿತ ಬಾಡಿಕಾನ್‌ ಡ್ರೆಸ್‌ನಲ್ಲಿ ಮಲೈಕಾ ಸುಂದರವಾಗಿ ಕಾಣುತ್ತಿದ್ದಾರೆ .ಕೆಲವರು ಮಾತ್ರ ಸೋಷಿಯಲ್ ಮೀಡಿಯಾಗಳಲ್ಲಿ ಆಕೆ ಪಬ್ಲಿಕ್‌ ಸೆಳೆಯಲು ಇಷ್ಟೆಲ್ಲಾ ಡ್ರಾಮಾ ಮಾಡುತ್ತಿದ್ದಾರೆ. ನಿಮ್ಮಿಬ್ಬರ ಜೋಡಿ ಸ್ವಲ್ಪವೂ ಚೆನ್ನಾಗಿಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಆಂಟಿ ಎಂದು ರೇಗಿಸಿದ್ದಾರೆ. ಸಲ್ಮಾನ್‌ ಖಾನ್‌ ಸಹೋದರ ಅರ್ಜಾಜ್‌ ಖಾನ್‌ ಜತೆ ಡಿವೋರ್ಸ್‌ ಆದಾಗಿನಿಂದ ಮಲೈಕಾ ಅರ್ಜುನ ಕಪೂರ್‌ ಜೊತೆ ರಿಲೇಶನ್‌ನಲ್ಲಿದ್ದಾರೆ. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ವಯಸ್ಸಿನ ವಿಚಾರಕ್ಕೆ ಇಬ್ಬರೂ ಆಗ್ಗಾಗ್ಗೆ ಟ್ರೋಲ್‌ ಆಗುತ್ತಲೇ ಇದ್ದಾರೆ. ಇತ್ತೀಚೆಗೆ ಗಾಸಿಪ್‌ ಹರಿದಾಡಿತ್ತು. ಎಷ್ಟೇ ಟ್ರೋಲ್‌ ಆದ್ರೂ ತುಟಿ ಬಿಚ್ಚದ ಅರ್ಜುನ್‌ ಕಪೂರ್‌, ಈ ವಿಚಾರಕ್ಕೆ ಬಹಳ ಸಿಟ್ಟಾಗಿದ್ದರು. ಜನರು ನೆಗೆಟಿವ್‌ ವಿಚಾರಗಳ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಪತ್ರಕರ್ತರಿಗೆ ಇಂತಹ ವಿಚಾರಗಳು ಕಿವಿಗೆ ಮುಟ್ಟಿದಾಗ ಅದು ನಿಜವೋ ಇಲ್ಲವೋ ಎಂದು ಯೋಚನೆ ಮಾಡಬೇಕು ಎಂದಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಮಲೈಕಾ‌ ಅರೋರಾ ಹ್ಯಾಪಿ ಬರ್ತಡೆ ಮೈ ಸನ್ ಶೈನ್ ಅಂದದ್ದು ಯಾರಿಗೆ..! ಡಿವೋರ್ಸ್ ಬಳಿಕ ಮಲೈಕಾ ಜೊತೆ ಇರುವ ನಟ ಯಾರು..? Read More »

ಸ್ಪೈ ಚಿತ್ರದ ಟೀಸರ್ ಲಾಂಚ್, ಸುಭಾಸ್ ಚಂದ್ರ ಬೋಸ್ ನ ಸಾವಿನ ಸೀಕ್ರೆಟ್ ಈ ಸಿನಿಮಾದಲ್ಲಿದೆ- ನಾಯಕ ನಿಖಿಲ್ ಸಿದ್ದಾರ್ಥ್…!

ಸಾಕಷ್ಡು ಕುತೂಹಲ ಮೂಡಿಸಿದ್ದ ‘ಸ್ಪೈ’ ಚಿತ್ರತಂಡ ಕೊನೆಗು ಕನ್ನಡದಲ್ಲಿ ಟೀಸರ್ ಲಾಂಚ್ ಮಾಡಿದೆ. ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಾದ ಕೆಲ ಸತ್ಯ ಘಟನೆಗಳನ್ನ ಟೀಸರ್ ನಲ್ಲಿ ತೋರಿಸಲಾಗಿದೆ. ಆದರೆ‌ ಈ ಸತ್ಯ ಘಟನೆಗಳು ಪ್ರೇಕ್ಷಕನಿಗೆ ಹೇಗೆ ಹಿಡಿಸಲಿದೆ ಅಂತಾ ಜೂನ್ 29ರ ಬಳಿಕ ಗೊತ್ತಾಗಲಿದೆ. ಈ ಸಿನಿಮಾದಲ್ಲಿ ನಟ ನಿಖಿಲ್‌, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ‌ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ಕಾರ್ತಿಕೇಯ-2 ಹಾಗೂ 18 ಪೇಜಸ್‌ ಸಕ್ಸಸ್‌ ಬಳಿಕ ‘ಸ್ಪೈ’ ಸಿನಿಮಾದಲ್ಲಿ ನಿಖಿಲ್ ನಟಿಸಿದ್ದಾರೆ.ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸ್ಪೈ ಸಿನಿಮಾಗೆ ಖ್ಯಾತ ನಿರ್ದೇಶಕ/ಸಂಕಲನಕಾರರಾಗಿ ಗ್ಯಾರಿ ಬಿಹೆಚ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಎವರು ಮತ್ತು ಹಿಟ್‌ ಸಿನಿಮಾಗಳ ನಿರ್ಮಾಪಕ ಕೆ ರಾಜಶೇಖರ್‌ ರೆಡ್ಡಿ, ಚರಣ್‌ ರಾಜ್‌ ಉಪ್ಪಲಪತಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸ್ಪೈ ಚಿತ್ರದಲ್ಲಿ ಸನ್ಯಾ ಠಾಕೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅತಿಥಿ ಪಾತ್ರದಲ್ಲಿ ಬಾಹುಬಲಿ ಬಲ್ಲಾಳದೇವ ಖ್ಯಾತಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಅಭಿನವ್‌ ಗೋಮತಮ್, ಮಕರಂದ್‌ ದೇಶಪಾಂಡೆ, ನಿತಿನ್‌ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್‌, ಸೋನಿಯಾ ನರೇಶ್‌ ಮತ್ತು ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಕಾರ್ತಿಕೇಯ, ಕಾರ್ತಿಕೇಯ-2 ನಂತಹ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿಖಿಲ್ ಸಿದ್ಧಾರ್ಥ್ ಹೊಸ ಸಿನಿಮಾ ಸ್ಪೈ ಮೇಲೆ ಸಿನಿಮಾಭಿಮಾನಿಗಳಿಗೆ ಇನ್ನಷ್ಟು ನಿರೀಕ್ಷೆ ಹೆಚ್ಚಿದೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಸ್ಪೈ ಚಿತ್ರದ ಟೀಸರ್ ಲಾಂಚ್, ಸುಭಾಸ್ ಚಂದ್ರ ಬೋಸ್ ನ ಸಾವಿನ ಸೀಕ್ರೆಟ್ ಈ ಸಿನಿಮಾದಲ್ಲಿದೆ- ನಾಯಕ ನಿಖಿಲ್ ಸಿದ್ದಾರ್ಥ್…! Read More »

1000 ಕೋಟಿ ಬಜೆಟ್​ನಲ್ಲಿ ‘ಆದಿಪುರುಷ್​ 2’​ಓಂ‌ ರಾವತ್ ಐಡಿಯಾಗೆ ಪ್ರಭಾಸ್​ ಗ್ರೀನ್ ಸಿಗ್ನಲ್ ಕೊಟ್ರಾ…?

ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಚಿತ್ರ‘ಆದಿಪುರುಷ್’ ಬಿಡುಗಡೆಯಾಗಿ ಒಳ್ಳಡಯ ರೆಸ್ಪಾನ್ಸ್ ಪಡೆಯುವುದಕ್ಕಿಂತ ನೆಟಿಜನ್ಸ್ ಬಾಯಿಗೆ ಸಿಕ್ಕಿದ್ದೆ ಹೆಚ್ಚು. ಹೀಗಿರುವಾಗ ವಿವಾದದ ನಡುವೆಯು ನಿರ್ದೇಶಕ ಓಂ‌ ರಾವತ್ ಸಿನಿಮಾ ಕುರಿತಾಗಿ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ‘ತಾನಾಜಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದ ನಿರ್ದೇಶಕ ಓಂ ರಾವತ್​ ‘ಆದಿಪುರುಷ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದರಿಂದ ಹೈಪ್​ ಹೆಚ್ಚಿತ್ತು. ಆದರೆ ಚಿತ್ರ ಬಿಡುಗಡೆ ಆದ ಬಳಿಕ ಪ್ರೇಕ್ಷಕರಿಗೆ ಭಾರಿ ನಿರಾಸೆ ಆಯಿತು. ಜೂನ್​ 16ರಂದು ಬಿಡುಗಡೆಯಾದ ‘ಆದಿಪುರುಷ್​’ ಸಿನಿಮಾ ಈಗಲೂ ಟ್ರೋಲ್​ ಕಾಟ ಎದುರಿಸುತ್ತಿದೆ. ಅಚ್ಚರಿ ಏನೆಂದರೆ, ಈ ಸಿನಿಮಾಗೆ ಸೀಕ್ವೆಲ್​ ಮಾಡುವ ಆಲೋಚನೆ ಕೂಡ ನಿರ್ದೇಶಕ ಓಂ ರಾವತ್​ ಅವರಿಗೆ ಇತ್ತು! ಆದರೆ ಅದಕ್ಕೆ ಪ್ರಭಾಸ್​ ಅವರು ಒಪ್ಪಿಕೊಂಡಿರಲಿಲ್ಲ. ಸಿನಿಮಾಗಳನ್ನು ಎರಡು ಪಾರ್ಟ್​​ನಲ್ಲಿ ಮಾಡುವ ಟ್ರೆಂಡ್​ ಜೋರಾಗಿದೆ. ‘ಬಾಹುಬಲಿ’, ‘ಕೆಜಿಎಫ್​’ ಮುಂತಾದ ಸಿನಿಮಾಗಳು ಈ ಸೂತ್ರ ಅನುಸರಿಸಿ ಭರ್ಜರಿ ಲಾಭ ಮಾಡಿಕೊಂಡವು. ‘ಪುಷ್ಟ’ ಸಿನಿಮಾಗೂ ಸೀಕ್ವೆಲ್​ ಮೂಡಿಬರುತ್ತಿದೆ. ಮೊದಲ ಪಾರ್ಟ್​ ಬಿಡುಗಡೆ ಆದ ಬಳಿಕ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಆದಿಪುರುಷ್​ 2’ ಸಿನಿಮಾವನ್ನು ಮಾಡಬೇಕು ಎಂದು ಓಂ ರಾವುತ್​ ಆಲೋಚಿಸಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.‘ಆದಿಪುರುಷ್​’ ಸಿನಿಮಾತಂಡದವರು ರಾಮಾಯಣದ ಕಥೆಗೆ ಆಧುನಿಕ ಟಚ್​ ನೀಡಲು ಹೋಗಿ ಎಡವಿದರು. ಸೈಫ್​ ಅಲಿ ಖಾನ್​ ಮಾಡಿದ ರಾವಣನ ಪಾತ್ರ ನೋಡಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಆಂಜನೇಯನ ಪಾತ್ರದ ಸಂಭಾಷಣೆ ತೀರಾ ಕಳಪೆ ಆಗಿದೆ ಎಂಬ ಆಕ್ಷೇಪ ಕೂಡ ಎದುರಾಯಿತು. ಇದೆಲ್ಲದರ ಪರಿಣಾಮವಾಗಿ ಚಿತ್ರತಂಡಕ್ಕೆ ತೀವ್ರ ಮುಖಭಂಗ ಆಗಿದೆ.ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

1000 ಕೋಟಿ ಬಜೆಟ್​ನಲ್ಲಿ ‘ಆದಿಪುರುಷ್​ 2’​ಓಂ‌ ರಾವತ್ ಐಡಿಯಾಗೆ ಪ್ರಭಾಸ್​ ಗ್ರೀನ್ ಸಿಗ್ನಲ್ ಕೊಟ್ರಾ…? Read More »

ಡ್ರಗ್ ಕೇಸ್​ನಲ್ಲಿ ಗ್ಲಾಮಾರಸ್ ಬ್ಯೂಟಿ ಆಶು ರೆಡ್ಡಿ,ನಟಿಯ ಕಾಲಿಗೆ ಕಿಸ್ ಮಾಡಿದ್ದ ಆರ್​ಜಿವಿ

ಆಶು ರೆಡ್ಡಿ ಯಾರು ಗೊತ್ತಾ..! ಟಿವಿ ಸಂದರ್ಶನವೊಂದರಲ್ಲಿ ನಟಿಯ ಕಾಲಿಗೆ ಆರ್ ಜಿ ವಿ ಮುತ್ತಿಟ್ಟ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಸಂದರ್ಶನದಲ್ಲಿ ಆರ್ ಜಿ ವಿ ಜೊತೆ ಕಾಣಿಸಿಕೊಂಡವಳೆ ಆಶು ರೆಡ್ಡಿ. ಗ್ಲಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್​ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌದರಿ ಅವರು ಡ್ರಗ್ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದಾರೆ. ಆಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಕೆಪಿ ಚೌದರಿ ಅವರು ನೇರವಾಗಿ ಆಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಡ್ರಗ್ ವಿಚಾರದಲ್ಲಿ ನನಗೆ ಅವರಿಗೆ ಸಂಬಂಧ ಇದೆ ಎಂದು ಹೇಳಿಕೊಂಡಿಲ್ಲ. ಇವರ ಮಧ್ಯೆ ಲಿಂಕ್ ಇರುವ ವಿಚಾರ ಗೊತ್ತಾಗಿದ್ದು ಕೆಪಿ ಚೌದರಿ ವಿಚಾರಣೆ ವೇಳೆ. ಅವರ ಬಳಿ ಇದ್ದ ಮೂರು ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ‘ಬಿಗ್ ಬಾಸ್ ತೆಲುಗು’ ಈ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಇನ್​ಸ್ಟಾಗ್ರಾಮ್​ನಲ್ಲಿ ಅವರು ಬೋಲ್ಡ್ ಹಾಗೂ ಗ್ಲಾಮರಸ್ ಫೋಟೋ ಹಂಚಿಕೊಳ್ಳುತ್ತಾ ಸದಾ ಆಕ್ಟಿವ್ ಆಗಿದ್ದರು ಅವರ ಹೆಸರೀಗ ಡ್ರಗ್ಸ್ ಕೇಸಲ್ಲಿ ಆಶು ರೆಡ್ಡಿ ಹೆಸರು ಕೇಳಿ ಬಂದಿದೆ.ಅಷ್ಟಕ್ಕು ನೂರಾಕ್ಕು ಹೆಚ್ಚು ಬಾರಿ ಕೆಪಿ ಚೌದರಿ ಅವರಿಗೆ ಕರೆ ಮಾಡಿದ್ದು ಏಕೆ ಎನ್ನುವುದು ಪೊಲಿಸರಿಗೆ ಅನುಮಾನ ಹುಟ್ಟಿಸಿದೆ.

ಡ್ರಗ್ ಕೇಸ್​ನಲ್ಲಿ ಗ್ಲಾಮಾರಸ್ ಬ್ಯೂಟಿ ಆಶು ರೆಡ್ಡಿ,ನಟಿಯ ಕಾಲಿಗೆ ಕಿಸ್ ಮಾಡಿದ್ದ ಆರ್​ಜಿವಿ Read More »

Scroll to Top