Karnataka Bhagya

ಅಂಕಣ

ಆಧಿಪುರುಷ್ ಸಿನಿಮಾ‌ ಚೆನ್ನಾಗಿಲ್ಲ‌, ಯುವಕನಿಗೆ ಥಳಿಸಿದ ಪ್ರಭಾಸ್ ಅಭಿಮಾನಿಗಳು ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್…!

ಪ್ರಭಾಸ್ ನಟನೆಯ ಬಹು‌ ನಿರೀಕ್ಷಿತ 500 ಕೋಟಿ‌‌ ವೆಚ್ಚದ ಸಿನಿಮಾ‌ “ಆದಿಪುರುಷ್” ದೇಶದಾದ್ಯಂತ ಸಿನಿಮಾ ನಿನ್ನೆ 5 ಭಾಷೆಗಳಲ್ಲಿ ತೆರೆಗೆ ಬಂದಿದೆ. ಸಿನಿಮಾ ನೋಡಿದ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೀರುವಾಗ ಯುವಕನೊಬ್ಬನಿಗೆ  ಪ್ರಭಾಸ್ ಅಭಿಮಾನಿಗಳು ಥಳಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಅಷ್ಟಕ್ಕು ಘಟನೆ ನಡೆದದ್ದು ಹೈದ್ರಾಬಾದ್ ನ ಪ್ರಸಾದ್ ಥಿಯೇಟರ್ ಬಳಿ.‌ಸಿನಿಮಾ ನೋಡಿದ ಕೆಲ ಅಭಿಮಾನಿಗಳು ಸಿನಿಮಾ ತುಂಬಾ ಅದ್ಭುತ ವಾಗಿ ಮೂಡಿ ಬಂದಿದೆ ಅಂತಾ ಪ್ರತಿಕ್ರಿಯೆ ನೀಡಿದ್ದಾರೆ.ಆದ್ರೆ ಈ ಯುವಕ‌ ಮಾತ್ರ ಸಿನಿಮಾ ಅಷ್ಟೊಂದು ಚೆನ್ನಾಗಿಲ್ಲ ರಾಮನ ಪಾತ್ರದಲ್ಲಿ ಪ್ರಭಾಸ್ ಅಷ್ಟೊಂದು ಸರಿಯಾಗಿ ನಟನೆ ಮಾಡಿಲ್ಲ ಆಚಾರ್ಯ ಚಿತ್ರದಲ್ಲಿ ಚಿರಂಜೀವಿಯನ್ನು ಎಷ್ಟು ಕೆಟ್ಟದಾಗಿ ತೋರಿಸಿದ್ರೋ ಆದಿಪುರುಷ್‌ ಚಿತ್ರದಲ್ಲಿ ಪ್ರಭಾಸ್‌ನನ್ನು ಅದೇ ರೀತಿ ತೋರಿಸಿದ್ದಾರೆ ಅಂದಿದ್ದಕ್ಕೆ ಘರಂ ಆದ ಪ್ರಭಾಸ್ ಅಭಿಮಾನಿಗಳು ಯುವಕನಿಗೆ ಥಳಿಸಿದ್ದಾರೆ. ಇದರಿಂದ ಕೆಲವು ಘಂಟೆಗಳ ಕಾಲ ಪರಿಸ್ಥಿತಿ ಗಂಭೀರವಾಗಿತ್ತು. ನಾನು ಹಲವು ಬಾರಿ ಸಿನಿಮಾ ರಿವ್ಯೂ ಕೊಟ್ಟಿದ್ದೇನೆ  ಆದ್ರೆ ನಂಗೆ ಯಾವಾತ್ತು ಈ ರೀತಿಯಾಗಿಲ್ಲ.ಆದರು ಪರವಾಗಿಲ್ಲ ಸಿನಿಮಾ ಮಾತ್ರ ಅಷ್ಟಕ್ಕೆ ಅಷ್ಟೆ ಅಂತಾ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದಾನೆ. ಚಿತ್ರದಲ್ಲಿ ಪ್ರಭಾಸ್‌ ರಾಮನಾಗಿ ಕೃತಿ ಸನನ್‌ ಸೀತಾಮಾತೆ ಹಾಗೂ ಸೈಫ್‌ ಅಲಿ ಖಾನ್‌ ರಾವಣನಾಗಿ ಅಬ್ಬರಿಸಿದ್ದಾರೆ. ಸಿನಿಮಾ 5 ಭಾಷೆಗಳಲ್ಲಿ ತಯಾರಾಗಿದ್ದು ಪ್ರಭಾಷ್‌ ಅಭಿಮಾನಿಗಳು ಸಿನಿಮಾ ಚೆನ್ನಾಗಿದೆ ಎಂದರೆ ಉಳಿದವರು ಸಿನಿಮಾ ಅಷ್ಟಕಷ್ಟೇ ಎನ್ನುತ್ತಿದ್ದಾರೆ.ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು ಟಿ ಸೀರೀಸ್‌ ಫಿಲ್ಮ್ಸ್‌ ನಿರ್ಮಾಣದ ಈ ಚಿತ್ರವನ್ನು ಭೂಷಣ್‌ ಕುಮಾರ್‌ ಕೃಷ್ಣ ಕುಮಾರ್‌ ನಿರ್ಮಿಸಿದ್ದು ಓಂ ರಾವತ್‌ ನಿರ್ದೇಶಿಸಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಆಧಿಪುರುಷ್ ಸಿನಿಮಾ‌ ಚೆನ್ನಾಗಿಲ್ಲ‌, ಯುವಕನಿಗೆ ಥಳಿಸಿದ ಪ್ರಭಾಸ್ ಅಭಿಮಾನಿಗಳು ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್…! Read More »

ಒಟಿಟಿಗೆ ಬಂದೇ ಬಿಟ್ಟಾ ಡೇರ್ ಡೆವಿಲ್ ಮುಸ್ತಾಫಾ:ಅಮೆಜಾನ್‌ ಪ್ರೈಂನಲ್ಲಿ ಡೇರ್‌ ಡೆವಿಲ್‌ ಮುಸ್ತಾಫಾ…!

Dare Devil Mustafa:ಮೇ 19ರಂದು ತೆರೆಕಂಡಿದ್ದ ಡೇರ್ ಡೆವಿಲ್ ಮುಸ್ತಾಫಾ ಪೂರ್ಣಚಂದ್ರ ತೇಜಸ್ವಿ ಆಧಾರಿತ ಕಥೆಯಾಗಿದೆ. ಮೇಕಿಂಗ್‌ ಮತ್ತು ಗಟ್ಟಿ ಕಂಟೆಂಟ್‌ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕರ್ನಾಟಕ ಮಾತ್ರವಲ್ಲದೆ, ಪಕ್ಕದ ರಾಜ್ಯದಲದಲಿಯೂ ಹೊಸ ಹೊಲೆ ಹುಟ್ಟುಹಾಕಿದ ಡೇರ್ ಡೆವಿಲ್ ಮುಸ್ತಾಫಾ ಚಿತ್ರಮಂದಿರದಲ್ಲಿ ಓಡುತ್ತಿರುವಾಗಲೇ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ವಿಚಾರವನ್ನು ಚಿತ್ರತಂಡ ರಿವೀಲ್‌ ಮಾಡದಿದ್ದರೂ, ಪ್ರೈಂ ಇಂಡಿಯಾ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದೆ. ಶಶಾಂಕ್‌ ಸೋಗಲ್‌ ನಿರ್ದೇಶನ‌ ಮಾಡಿರುವ ಸಿನಿಮಾಗೆ ಡಾಲಿ ಬೆನ್ನಾಗಿ ನಿಂತಿದ್ದರು.ನೋಡುಗರಿಂದಲೂ ಬಹುಪರಾಕ್‌ ಪಡೆದ ಸಿನಿಮಾ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದು ಈಗ ಓಟಿಟಿಯಲ್ಲಿ ಪ್ರದರ್ಶನ ಗೊಳ್ಳುತ್ತಿದೆ. ಡೇರ್‌ ಡೆವಿಲ್‌ ಮುಸ್ತಾಫಾ ತಂಡ:ಶಶಾಂಕ್ ಸೋಗಾಲ್ ನಿರ್ದೇಶನ ಮಾಡಿದ್ದಾರೆ, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಬರೆದಿರುವ ಸಾಹಿತ್ಯಕ್ಕೆ ನವನೀತ್‌ ಶ್ಯಾಮ್‌ ಸಂಗೀತ ನೀಡಿದ್ದಾರೆ. ರಾಹುಲ್‌ ರಾಯ್‌ ಛಾಯಾಗ್ರಹಣ ಚಿತ್ರಕ್ಕೆ ಇದೆ. ಸಿನಿಮಾದಲ್ಲಿ ಪ್ರಮುಖ ಪಾತ್ರಗಳಾದ ಮುಸ್ತಫಾ ಮಾತ್ರದಲ್ಲಿ ಶಿಶಿರ್‌ ಬೈಕಾಡಿ, ರಾಮಾನುಜ ಅಯ್ಯಂಗಾರಿ ಪಾತ್ರದಲ್ಲಿ ಆದಿತ್ಯ ಅಶ್ರೀ ನಟಿಸಿದ್ದಾರೆ. ಉಳಿದಂತೆ ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಹಿರಿಯ ನಟ ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಸೇರಿ ಅನೇಕ ಕಲಾವಿದರು ನಟಿಸಿದ್ದಾರೆ. .ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಒಟಿಟಿಗೆ ಬಂದೇ ಬಿಟ್ಟಾ ಡೇರ್ ಡೆವಿಲ್ ಮುಸ್ತಾಫಾ:ಅಮೆಜಾನ್‌ ಪ್ರೈಂನಲ್ಲಿ ಡೇರ್‌ ಡೆವಿಲ್‌ ಮುಸ್ತಾಫಾ…! Read More »

ಕೊನೆಗೂ ಗೆದ್ರಾ ಪ್ರಭಾಸ್;ಆದಿಪುರುಷ್ ಮೊದಲ ದಿನದ ಕಲೆಕ್ಷನ್ ಎಷ್ಟು..!

ಸಾಹೋ, ರಾಧೆ ಶ್ಯಾಮ್ ಸಿನಿಮಾದ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಗೆ ಒಂದು ಗೆಲುವು ಬೇಕಿತ್ತು ಅದರಂತೆ ಇಂದು ಆದಿಪುರುಷ್ ಸಿನಿಮಾ ಬಿಡುಗಡೆಗೊಂಡಿದ್ದು ಈ ಸಿನಿಮಾದಲ್ಲಾದರು ಪ್ರಭಾಸ್ ಗೆಲ್ತಾರ, ಸಿನಿಮಾ ನೋಡಿದ ಪ್ರೇಕ್ಷಕ ಮಹಾಪ್ರಭು ಏನಂದ ಇಲ್ಲಿದೆ ಕಂಪ್ಲೀಟ್ ಡೀಟೇಲ್. ಬಹುನಿರೀಕ್ಷಿತ ಆದಿಪುರುಷ್‌ ಸಿನಿಮಾ ಇಂದು ಬಿಡುಗಡೆ ಆಗಿದೆ. ನಟ ಪ್ರಭಾಸ್‌ ಪಾಲಿಗಂತೂ ಈ ಸಿನಿಮಾ ಅತೀ ವಿಶೇಷ.ವಿಶೇಷವಾಗಿ ರಾಮನ ಪಾತ್ರದಲ್ಲಿ ನಟಿಸಿರುವ ಪ್ರಭಾಸ್ ಗೆ ಈ ಸಿನಿಮಾ ಬಹುದೊಡ್ಡ ಯಶಸ್ಸು ತಂದು ಕೊಡುತ್ತದೆ, ಭಾರತದ ಸಿನಿಮಾ ಇಂಡಸ್ಟ್ರೀಯಲ್ಲಿ ಹೊಸ ಇತಿಹಾಸ ಬರೆಯುತ್ತದೆ,ಕಲೆಕ್ಷನ್ ಕೂಡ ದೊಡ್ಡಮಟ್ಟದಲ್ಲಿ ಇರಲಿದೆ ಅಂತಾ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಆದಿಪುರುಷ ಅಂದರೆ ರಾಮನ‌ ಅರ್ಧಾಂಗಿ ಮಾತಾ ಶ್ರಿ ಸೀತೆಯನ್ನ ರಾವಣ ಹತ್ತು ತಲೆಯ ರಾವಣ ಅಪಹರಣ ಮಾಡಿರುತ್ತಾನೆ, ಶ್ರೀ ಹನುಮಂತನ ಸಹಾಯದಿಂದ ಶ್ರೀ ರಾಮ ಯುದ್ಧದಲ್ಲಿ ರಾವಣನನ್ನ‌ ಸಂಹಾರ ಮಾಡಿ ಸೀತೆಯನ್ನ ಅಯೋಧ್ಯೆಗೆ ಕರೆ ತರುವುದೆ ಕಥೆಯ ಎಳೆ. ಬರೋಬ್ಬರಿ 500 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಿದೆ. ಮುಂಗಡ ಬುಕಿಂಗ್‌ ಶುರುವಾದ ಬಳಿಕವೇ 12 ಕೋಟಿ ಬಿಜಿನೆಸ್‌ ಮಾಡಿದ್ದ ಈ ಸಿನಿಮಾ, ಮೊದಲ ದಿನ ಎಷ್ಟು ಕೋಟಿ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರವೂ ಸದ್ದು ಮಾಡುತ್ತಿದೆ. ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದಿರುವ ಆದಿಪುರುಷ್‌ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.

ಕೊನೆಗೂ ಗೆದ್ರಾ ಪ್ರಭಾಸ್;ಆದಿಪುರುಷ್ ಮೊದಲ ದಿನದ ಕಲೆಕ್ಷನ್ ಎಷ್ಟು..! Read More »

“ಪ್ಯಾನ್ ಇಂಡಿಯಾ ಸ್ಟಾರ್” ಅಲ್ಲು ಅರ್ಜುನ್ ರ ಹೊಸ ಬ್ಯುಸಿನೆಸ್‌ ಹೇಗಿದೆAAA ಸಿನಿಮಾಸ್ ನಲ್ಲಿ‌ ಆದಿಪುರುಷ್ ಮೊದಲು ಪ್ರದರ್ಶನ ಗೊಳ್ಳಲಿದೆ.

ಸದ್ಯ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದ ಅಲ್ಲು ಅರ್ಜುನ್ ಹೊಸ ಉದ್ಯಮ ಪ್ರಾರಂಭಿಸಿದ್ದಾರೆ. ತಂದೆ ಒಡೆತನದ Aha ಒಟಿಟಿಯಲ್ಲಿಯೂ ಪಾಲುದಾರಾಗಿರುವ ಅಲ್ಲು ಅರ್ಜುನ್, ಹೊಸ ಸ್ಟುಡಿಯೋ ಕೂಡ ಶುರು ಮಾಡಿದ್ದಾರೆ. ಈ ಉದ್ಯಮಗಳ ಜೊತೆಯಲ್ಲಿ ಬನ್ನಿ ಐಶಾರಾಮಿ ಮಲ್ಟಿಪ್ಲೆಕ್ಸ್ ಪ್ರಾರಂಭಿಸಿದ್ದಾರೆ. ಈ ಚಿತ್ರಮಂದಿರಕ್ಕೆ ಎಎಎ ಸಿನಿಮಾಸ್ ಎಂದು ಹೆಸರಿಡಲಾಗಿದೆ. ಏಷ್ಯನ್ ಸಿನಿಮಾಸ್ ಸಹಭಾಗಿತ್ವದಲ್ಲಿ ಹೈದ್ರಾಬಾದ್ ನ ಅಮೀರ್ ಪೇಟೆಯಲ್ಲಿ ಎಎಸ್ ಸಿನಿಮಾಸ್ ನಿನ್ನೆ ಅದ್ಧೂರಿಯಾಗಿ ಶುಭರಾಂಭಗೊಂಡಿದೆ. ಅಲ್ಲು ಅರವಿಂದ್, ಸುನೀಲ್ ನಾರಂಗ್ ಹಾಗೂ ಅಲ್ಲು ಅರ್ಜುನ್ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಎಎ ಸಿನಿಮಾಸ್ ಒಟ್ಟಾರೆಯಾಗಿ ‌ಮೂರು ಲಕ್ಷ ಚದರ ಅಡಿ ಇದ್ದು, ಮೂರನೇ ಮಹಡಿಯಲ್ಲಿ 35 ಸಾವಿರ ಚದರ ಅಡಿಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ನಾಲ್ಕನೇ ಫ್ಲೋರ್​ನಲ್ಲಿ ಐದು ಸ್ಕ್ರೀನ್​ಗಳ ಎಎಎ ಚಿತ್ರಮಂದಿರವಿದೆ. ಸ್ಕ್ರೀನ್ 2ರಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿದೆ. ದಕ್ಷಿಣ ಭಾರತದದಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿರುವ ಏಕೈಕ ಮಲ್ಟಿಪ್ಲೆಕ್ಸ್ ಇದಾಗಿದೆ‌. ಅತ್ಯುತ್ತಮ ಸೌಂಡ್ ಸಿಸ್ಟಂ, ಸ್ಕ್ರೀನ್ ಹಾಗೂ ಆಸನ ವ್ಯವಸ್ಥೆಯನ್ನೂ ಎಎಎ ಸಿನಿಮಾಸ್ ಕಲ್ಪಿಸಿದೆ.

“ಪ್ಯಾನ್ ಇಂಡಿಯಾ ಸ್ಟಾರ್” ಅಲ್ಲು ಅರ್ಜುನ್ ರ ಹೊಸ ಬ್ಯುಸಿನೆಸ್‌ ಹೇಗಿದೆAAA ಸಿನಿಮಾಸ್ ನಲ್ಲಿ‌ ಆದಿಪುರುಷ್ ಮೊದಲು ಪ್ರದರ್ಶನ ಗೊಳ್ಳಲಿದೆ. Read More »

ಅವನು ಮತ್ತು ಉಳಿದವನು; ಸಪ್ತ ಸಾಗರದಾಚೆ ಎಲ್ಲೋ; ಸೈಡ್ A ಸೈಡ್ B…!ರಿಲೀಸ್‌ ದಿನಾಂಕ ಘೋಷಿಸಿದ ರಕ್ಷಿತ್‌ ಶೆಟ್ಟಿ.

ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೊನೆಗೂ ಬಿಡುಗಡೆಯ ಡೇಟನ್ನ‌ ಅನೋನ್ಸ್ ಮಾಡಿದ್ದು ಈ ವರ್ಷದ ಸೆಪ್ಟೆಂಬರ್ ಮತ್ತು ಅಕ್ಟೋಬರಗ ತಿಂಗಳಲ್ಲಿ ಸಿನಿಮಾ‌ ರಿಲೀಸ್ ಆಗಲಿದೆ. ಚಾರ್ಲಿ ಸಿನಿಮಾದ ಯಶಸ್ಸಿನ ಬಳಿಕ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಜತೆಗೆ ಆಗಮಿಸಲಿದ್ದಾರೆ. ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನಿರ್ದೇಶಿಸಿದ್ದ ಹೇಮಂತ್‌ ರಾವ್‌, ಎರಡನೇ ಬಾರಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ರಕ್ಷಿತ್‌ ಶೆಟ್ಟಿ ಜತೆ ಕೈ ಜೋಡಿಸಿದ್ದಾರೆ. ಈ ಹಿಂದೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂಬುದನ್ನು ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ಅದು ಅಧಿಕೃತವಾಗಿತ್ತು. ಇದೀಗ ಎರಡೂ ಭಾಗದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಿದೆ. ಒಂದೂವರೆ ತಿಂಗಳ ಅವಧಿಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ 1 ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ 2 ಚಿತ್ರ ಬಿಡುಗಡೆ ಆಗಲಿವೆ. ಮೊದಲ ಭಾಗ ಸೆಪ್ಟೆಂಬರ್‌ 1ರಂದು ರಿಲೀಸ್‌ ಆದರೆ, ಎರಡನೇ ಭಾಗ ಅಕ್ಟೋಬರ್‌ 20ರಂದು ಬಿಡುಗಡೆ ಆಗಲಿದೆ. ರಕ್ಷಿತ್‌ ಅಪ್ ಕಮಿಂಗ್ ಮೂವಿಸ್; ಹೊಂಬಾಳೆ ಫಿಲಂಸ್‌ ಜೊತೆಗೆ ರಿಚರ್ಡ್‌ ಆಂಟನಿ ಸಿನಿಮಾಕ್ಕಾಗಿ ರಕ್ಷಿತ್‌ ಹೆಚ್ಚು ಶ್ರಮ ವಹಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮುಗಿದ ಬಳಿಕ ರಿಚರ್ಡ್‌ ಆಂಟನಿ, ಪುಣ್ಯಕೋಟಿ 1, ಪುಣ್ಯಕೋಟಿ 2 ಮತ್ತು ಕಿರಿಕ್ ಪಾರ್ಟಿ 2 ಮಿಡ್‌ನೈಟ್‌ ಟು ಮೋಕ್ಷ ಈ ಐದು ಸಿನಿಮಾಗಳಲ್ಲಿ ರಕ್ಷಿತ್‌ ಬಿಜಿಯಾಗಲಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಅವನು ಮತ್ತು ಉಳಿದವನು; ಸಪ್ತ ಸಾಗರದಾಚೆ ಎಲ್ಲೋ; ಸೈಡ್ A ಸೈಡ್ B…!ರಿಲೀಸ್‌ ದಿನಾಂಕ ಘೋಷಿಸಿದ ರಕ್ಷಿತ್‌ ಶೆಟ್ಟಿ. Read More »

ಲೀಕಾಯ್ತು ತಮನ್ನಾಳ ಬೆಡ್ ರೂಂ ಸೀನ್;ಫ್ಯಾನ್ಸ್ ಫುಲ್ ಗರಂ…!

2016ರಲ್ಲಿ ಸ್ಕ್ರೀನ್‌ ಮೇಲೆ ಲಿಪ್‌ಲಾಕ್‌ ಸಹ ಮಾಡಲ್ಲ ಎಂದು ಹೇಳಿದ್ದ ಮಿಲ್ಕಿ ಬ್ಯೂಟಿ ತಮನ್ನಾಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೀಗ ವೈರಲ್‌ ಆಗುತ್ತಿವೆ. ಸೌತ್‌ ಸುಂದರಿ, ಮಿಲ್ಕಿ ಬ್ಯೂಟಿ ತಮನ್ನಾ ಕಳೆದ ಒಂದೂವರೆ ದಶಕದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಟಿ, ಸೌತ್‌ನ ಬಹುತೇಕ ಎಲ್ಲ ಸ್ಟಾರ್‌ಗಳ ಜತೆಗೆ ನಟಿಸಿ ಅಭಿಮಾನಿ ವಲಯದಲ್ಲಿಯೂ ಎಲ್ಲರ ಹಾಟ್‌ ಫೇವರಿಟ್‌ ಈ ನಟಿ. ನಟನೆ ಮತ್ತು ಸೌಂದರ್ಯದ ಮೂಲಕವೇ ಬಾಲಿವುಡ್‌ನಲ್ಲಿಯೂ ಚಾನ್ಸ್‌ ಗಿಟ್ಟಿಸಿಕೊಂಡು, ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡು, ಹಲವು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿರುವ ನಟಿ. ಸೋಷಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಮಗದಷ್ಟು ಸುದ್ದಿಯಲ್ಲಿದ್ದಾರೆ. ಹೌದು ರಾತ್ರೋ ರಾತ್ರಿ ನಟಿ ತಮನ್ನಾ ಭಾಟಿಯಾ ಅವರ ಒಂದಷ್ಟು ಹಸಿ ಬಿಸಿ ದೃಶ್ಯಗಳು ವೈರಲ್‌ ಆಗಿವೆ. ಅಭಿಮಾನಿ ವಲಯದಿಂದಲೂ ಇದು ತೀವ್ರ ಮುಜುಗರಕ್ಕೀಡು ಮಾಡಿದೆ. ಬೆಡ್‌ ರೂಮ್‌ ಸೀನ್‌ಗಳು, ಕಿಸ್ಸಿಂಗ್‌ ಸೀನ್‌ಗಳ ವಿಡಿಯೋ ತುಣುಕು ಮತ್ತು ಬೋಲ್ಡ್‌ ಅವತಾರದ ಫೋಟೋಗಳು ಹೊರಬಿದ್ದಿವೆ. ಅಭಿಮಾನಿ ವಲಯ ಗರಂ ನಟಿ ತಮನ್ನಾ ಸಿನಿಮಾ ಉದ್ಯಮದಲ್ಲಿ ತಮ್ಮದೇ ಆದ ಒಂದು ಸಿಸ್ಟಮ್‌ ಪಾಲಿಸುತ್ತ ಬಂದವರು. ಲಿಪ್‌ ಲಾಕ್‌ಗೂ ನಾನು ಅನುಮತಿ ನೀಡುವುದಿಲ್ಲ, ಆ ರೀತಿಯ ಯಾವುದೇ ದೃಶ್ಯಗಳಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು 2016ರಲ್ಲಿಯೇ ಹೇಳಿಕೊಂಡು ಅದನ್ನೇ ಮುಂದುವರಿಸಿಕೊಂಡು ಬಂದಿದ್ದರು. ಇದೀಗ ತಮನ್ನಾ ಅವರ ಹೊಸ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿವೆ. ಬೋಲ್ಡ್‌ ಸೀನ್‌ಗಳ ಮೂಲಕ ಎದುರಾಗಿ ಅಚ್ಚರಿ ಮೂಡಿಸಿದ್ದಾರೆ. ಜೀ ಕರ್ದಾ ಚಿತ್ರದ ಹಸಿ ಬಿಸಿ ತುಣುಕು ಈ ಸಿರೀಸ್‌ನಲ್ಲಿ ತಮನ್ನಾ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಈ ಹಿಂದೆ ಜೀ ಕರ್ದಾ ವೆಬ್‌ ಸರಣಿಯ ಟ್ರೇಲರ್‌ನಲ್ಲಿ ಈ ರೀತಿಯ ದೃಶ್ಯಗಳು ಕಂಡಿರಲಿಲ್ಲ. ಇದೀಗ ಸಿರೀಸ್‌ ರಿಲೀಸ್‌ ಆಗುತ್ತಿದ್ದಂತೆ, ತಮನ್ನಾ ನಯಾ ಅವತಾರ ಹೊರ ಬಿದ್ದಿದೆ.ಅರುಣಿಮಾ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ರೊಮ್ಯಾನ್ಸ್‌ ಡ್ರಾಮಾ ಶೈಲಿಯ ಜೀ ಕರ್ದಾ ವೆಬ್‌ ಸೀರಿಸ್‌ನಲ್ಲಿ ಒಟ್ಟು 8 ಏಪಿಸೋಡ್‌ಗಳಿವೆ. ತಮನ್ನಾ ಭಾಟಿಯಾ, ಸುಹಾಲಿ ನಾಯರ್‌, ಆಶಿಮ್‌ ಗುಲಾಟಿ, ಆನ್ಯಾ ಸಿಂಗ್‌, ಹುಸೇನ್‌ ದಲಾಲ್‌ ಸೇರಿ ಹಲವರು ನಟಿಸಿದ್ದಾರೆ. .ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಲೀಕಾಯ್ತು ತಮನ್ನಾಳ ಬೆಡ್ ರೂಂ ಸೀನ್;ಫ್ಯಾನ್ಸ್ ಫುಲ್ ಗರಂ…! Read More »

ಗರಡಿ ಸಿನಿಮಾದ ‘ಹೊಡಿರಲೆ ಹಲಗಿ’ ಟೈಟಲ್ ಟ್ರ್ಯಾಕ್ ರಿಲೀಸ್; ಸಖತ್ ಗರಂ ಗರಂ ಆಗಿ ಕಾಣ್ತಿದ್ದಾರೆ ನಿಶ್ವಿಕಾ ನಾಯ್ಡು..!

ಯೋಗರಾಜ್ ಭಟ್ ರವರ ನಿರ್ದೇಶನವೆ ಹಾಗೆ ಸದಾ ಹೊಸತನ್ನು ಹುಡುಕುವ ಮ್ಯಾಜಿಕಲ್ ರೈಟರ್ ಈ ಬಾರಿ  ಗರಡಿ ಸಿನಿಮಾವನ್ನ ತಯಾರು ಮಾಡಿದ್ದಾರೆ. ಅದರಲ್ಲು ಇಂದು ಸಿನಿಮಾದ ಹೊಡಿರಲೆ ಹಲಗಿ ಹೊಡಿರಲೆ ಹಲಗಿ ಮೊದಲ ಟೈಟಲ್ ಟ್ರಾಕನ್ನ ಲಾಂಚ್ ಮಾಡಲಾಗಿದ್ದು ಹುಡುಗರ ಫೇವರಿಟ್ ಸಾಂಗ್ ಆಗಿ ಉಳಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಸಾಂಗ್ ನಲ್ಲಿ ಡ್ಯಾನ್ಸಿಂಗ್ ಡಾಲ್ ನಿಶ್ವಿಕಾ ನಾಯ್ಡು ಸಖತ್ ಗರಂ ಗರಂ ಸ್ಟೆಪ್ಸ್ ಹಾಕಿದ್ದಾರೆ. ಹಳ್ಳಿಯ ಸೊಗಡಿನ ಕುಸ್ತಿಯನ್ನು ಸಾರುವ ಈ ಸಾಂಗ್ ಅಂತೂ ಮತ್ತೊಂದು ಹಿಟ್ ಸಾಂಗ್ ಆಗುವುದರಲ್ಲಿ ಯಾವುದೆ ಡೌಟ್ ಇಲ್ಲ. ಯುವನಟ ಸೂರ್ಯ ನಾಯಕನಟನಾಗಿದ್ರೆ ಸೋನಾಲ್ ಮೊಂಟೆಲೋ ಸಿನಿಮಾದಲ್ಲಿ ನಾಯಕಿನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಸಿ ಪಾಟೀಲ್ ವಿಶೇಷ ಪಾತ್ರದಲ್ಲಿ ಮಿಂಚಿದರೆ ಬಿಸಿ ಪಾಟೀಲ್ ಸೂರಜ್ ಖಳನಾಯಕನಾಗಿ ಕಾಣಿಸಿ ಕೊಳ್ತಿದ್ದಾರೆ. ಕೌರವ ಪ್ರೊಡಕ್ಷನ್ ಹೌಸ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಛಾಯಾಗ್ರಾಹಕ‌ ನಿರಂಜನ್ ಬಾಬು ಕೈ ಚಳಕವಿದೆ.ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ಟರ ಸಾಹಿತ್ಯವಿದ್ದು ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ .ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಗರಡಿ ಸಿನಿಮಾದ ‘ಹೊಡಿರಲೆ ಹಲಗಿ’ ಟೈಟಲ್ ಟ್ರ್ಯಾಕ್ ರಿಲೀಸ್; ಸಖತ್ ಗರಂ ಗರಂ ಆಗಿ ಕಾಣ್ತಿದ್ದಾರೆ ನಿಶ್ವಿಕಾ ನಾಯ್ಡು..! Read More »

ರಾವಣನ ಪಾತ್ರ ಮಾಡುತ್ತಿಲ್ಲ‌ ರಾಕಿಂಗ್ ಸ್ಟಾರ್ ಯಶ್..!ಪ್ಯಾನ್ಸ್ ಪುಲ್ ಕುಷ್.

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಬಳಿಕ ಹೊಸ ಸಿನಿಮಾ ಅನೋನ್ಸ್ ಮಾಡಿಲ್ಲ. ಹಾಗಾಗಿ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ನಡುವೆ ಕೆಜಿಎಫ್ ಸ್ಟಾರ್ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನಿತೇಶ್ ತಿವಾರಿ ಅವರ ಬಹುನಿರೀಕ್ಷೆಯ ರಾಮಾಯಣ ಚಿತ್ರದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ರಾಮಾಯಣ ಸಿನಿಮಾ..! ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ಆಲಿಯಾ ಭಟ್, ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವುದು ಅಧಿಕೃತ ಎನ್ನಲಾಗಿದೆ. ಈಗಾಗಲೇ ರಣಬೀರ್ ಲುಕ್ ಟೆಸ್ಟ್‌ನಲ್ಲಿ ನಿರತರಾಗಿದ್ದಾರಂತೆ. ಆದರೆ ರಾವಣನ ಪಾತ್ರ ಯಶ್ ಎನ್ನುವ ಸುದ್ದಿ ಹರಿದಾಡಿತ್ತು.ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ ರಾವಣನಾಗಿ ಯಶ್ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸೀತೆಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಆದರೀಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಯಶ್ ರಾವಣನಾಗಿ ನಟಿಸಲು ತಿರಸ್ಕರಿಸಿದ್ದಾರಂತೆ. ಮೂಲಗಳ ಪ್ರಕಾರ ಯಶ್ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲ ಎಂದು ಹೇಳಲಾಗ್ತಿದೆ. ಯಶ್ ರಾಮಾಯಣ ಕೈ ಬಿಡಲು ಕಾರಣ..! ಯಶ್ ನೆಗೆಟಿವ್ ಪಾತ್ರಗಳಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಅಭಿಮಾನಿಗಳು  ಏನು ಬಯಸುತ್ತಾರೆ ಅತ್ತಾ ಗಮನಕೊಟ್ಟು ಕಥೆ ಆಯ್ಕೆ ಮಾಡುವೂ ರಾಕಿಭಾಯ್ ಪ್ಲಾ್ ಪಾಯಿಂಟ್. ಅಲ್ಲದೇ ತನ್ನ ಕರಿಯರ್ ಉತ್ತುಂಗದಲ್ಲಿರುವ ಈ ಸಮಯದಲ್ಲಿ ನೆಗೆಟಿವ್ ಪಾತ್ರ ಮಾಡುವಂತ ರಿಸ್ಕ್ ಯಶ್ ತೆಗೆದುಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಕಂಗನಾ ರಣಾವತ್ ರಿಯಾಕ್ಷನ್; ಯಶ್ ಅವರನ್ನು ರಾವಣ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಅಸಮಾಧಾನ ಹೊರಹಾಕಿದ್ದರು. ರಾಮನ ಪಾತ್ರ ಮಾಡುತ್ತಿರುವ ರಣಬೀರ್ ವಿರುದ್ಧ ಆಕ್ರೋಶ ಹೊರಹಾಕಿ ಯಶ್ ಅವರನ್ನು ಹೊಗಳಿದ್ದರು. ಅಭಿಮಾನಿಗಳು ‘ಉತ್ತಮ ನಿರ್ಧಾರ’ ಎಂದು ಹೊಗಳುತ್ತಿದ್ದಾರೆ. ‘ರಾಮ ಪಾತ್ರಕ್ಕೆ ಪರಿಪೂರ್ಣರಾಗುತ್ತಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಬ್ಬರೂ ಹಿನ್ನೆಲೆಯಲ್ಲಿ ವಾನರ ಸೇನೆಯಲ್ಲಿ ಕಾಣಿಸಿಕೊಳ್ಳಲು ಪರಿಪೂರ್ಣರಾಗಲಿದ್ದಾರೆ’ ಎಂದು ಹೇಳಿದ್ದಾರೆ. ಹೆಣ್ಣುಬಾಕ-ಮಾದಕ ವ್ಯಸನಿ ರಾಮ, ಸೆಲ್ಫ್‌ಮೇಡ್ ಸ್ಟಾರ್‌ ರಾವಣ, ಇದೆಂತ ಕಲಿಯುಗ? ರಣಬೀರ್ ತೆಗಳಿ ಯಶ್ ಹೊಗಳಿದ ಕಂಗನಾ.. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ರಾವಣನ ಪಾತ್ರ ಮಾಡುತ್ತಿಲ್ಲ‌ ರಾಕಿಂಗ್ ಸ್ಟಾರ್ ಯಶ್..!ಪ್ಯಾನ್ಸ್ ಪುಲ್ ಕುಷ್. Read More »

ತೆಲುಗು ಸಿನಿಮಾ ‘ಭೀಮಾ’ಫಸ್ಟ್‌ ಲುಕ್‌ ರಿಲೀಸ್ ರಾಕಿಂಗ್ ಸ್ಟಾರ್ ಯಶ್ ಮಾಡಬೇಕಿದ್ದ ಸಿನಿಮಾ..

ಕೆಜಿಎಫ್-2 ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ‌‌ ಬಿಗ್ ಬಜೆಟ್ ಸಿನಿಮಾ ಯಾವುದು ಎಂದು ಪ್ರೇಕ್ಷಕರು ಕಾಯ್ತಿದ್ರು, ಆದ್ರೆ ಕೊರಿಯೋಗ್ರಾಫರ್ ಎ ಹರ್ಷ ರಾಕಿಭಾಯ್ ಗೆ ಆ್ಯಕನ್ ಕಟ್ ಹೇಳ್ತಾರೆ ಅಂತಾ ಸುದ್ದಿ ಹಬ್ಬಿತ್ತು,ಯಾವ ಕಾರಣಕ್ಕಾಗಿ ಯಶ್ ಕೈ ಯಿಂದ ‘ಭೀಮ’ ಸಿನಿಮಾ ಕೈ ಜಾರೀತು ಎಂದು ತಿಳಿದು ಬಂದಿಲ್ಲ. ಯಶ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಅಂತಾ ಅಂದುಕೊಂಡಿದ್ರು. ಕೊರಿಯೋಗ್ರಾಫರ್‌ ಎ ಹರ್ಷ ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ತೆಲುಗಿನಲ್ಲು ಹರ್ಷ ಆಕ್ಷನ್‌ ಕಟ್‌ ಹೇಳುತ್ತಿರುವ ಮೊದಲ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಸಿನಿಪ್ರಿಯರು ಈ ಪೋಸ್ಟರ್‌ ನೋಡಿ ಥ್ರಿಲ್‌ ಆಗಿದ್ದಾರೆ.ಟಾಲಿವುಡ್ ನಟ ಮ್ಯಾಚೋ ಸ್ಟಾರ್ ಗೋಪಿಚಂದ್ ‘ಭೀಮ’ ಆಗಿ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಇನು ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಹರ್ಷ ಅವರಿಗೆ ಇದು ಮೊದಲ ತೆಲುಗು ಸಿನಿಮಾಗಿದ್ದು,ಕೆಕೆ ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್‌ ಅಡಿ ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ.ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ಡಾ ರವಿವರ್ಮಾ ಸ್ಟಂಟ್ ಈ ಚಿತ್ರಕ್ಕೆ ಇದೆ.ಸದ್ಯಕ್ಕೆ ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ‘ಭೀಮ’ ಸಿನಿಮಾದ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾ ಬಳಗದ ಅಪ್ ಡೇಟನ್ನು ಚಿತ್ರತಂಡ ಸದ್ಯದ್ರಲ್ಲೆ ರಿವೀಲ್ ಮಾಡಲಿದೆ

ತೆಲುಗು ಸಿನಿಮಾ ‘ಭೀಮಾ’ಫಸ್ಟ್‌ ಲುಕ್‌ ರಿಲೀಸ್ ರಾಕಿಂಗ್ ಸ್ಟಾರ್ ಯಶ್ ಮಾಡಬೇಕಿದ್ದ ಸಿನಿಮಾ.. Read More »

ಆಸ್ಪತ್ರೆಗೆ ದಾಖಲಾದ ನಟಿ ರೋಜಾ ಸೆಲ್ವಮಣಿ;ನಟಿಯ ಆರೋಗ್ಯ ಈಗ ಹೇಗಿದೆ..?

ನಟಿ,ಸಚಿವೆ ಆರೋಗ್ಯದ ಪರಿಸ್ಥಿತಿ ಸ್ಥಿರವಾಗಿದ್ದು ಕೆಲವು ದಿನಗಳ ಕಾಲ ರೆಸ್ಟ್‌ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಇನ್ನು ಅಭಿಮಾನಿ ಬಳಗ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಪೂಜೆ,ಪುರಸ್ಕಾರ ಮಾಡಿಸುತ್ತಿದ್ದಾರಂತೆ 2021ರಲ್ಲಿ ಕೂಡಾ 2 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ನಟಿ,ರಾಜಕಾರಣಿ ರೋಜಾ ಸೆಲ್ವಮಣಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಸ್ಟಾರ್‌ ನಟಿಯಾಗಿ ಮಿಂಚಿದ್ದ ರೋಜಾ, ಈಗ ಸಿನಿಮಾಗಳಿಂದ ಸಂಪೂರ್ಣ ದೂರ ಉಳಿದಿದ್ದು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ, ತಾವು ಇಷ್ಟಪಟ್ಟಂತೆ ಸಚಿವೆ ಕೂಡಾ ಆಗಿದ್ದಾರೆ .ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

ಆಸ್ಪತ್ರೆಗೆ ದಾಖಲಾದ ನಟಿ ರೋಜಾ ಸೆಲ್ವಮಣಿ;ನಟಿಯ ಆರೋಗ್ಯ ಈಗ ಹೇಗಿದೆ..? Read More »

Scroll to Top