ರಾಜ್ ಕಪ್ ಸೀಸನ್ 6ಗೆ ಭರ್ಜರಿ ತಯಾರಿ..! 12 ತಂಡ 27 ಮ್ಯಾಚ್..!
ಸ್ಯಾಂಡಲ್ವುಡ್ ನಲ್ಲಿ ಕ್ರಿಕೆಟ್ ಹಬ್ಬ ಶುರುವಾಗಿದ್ದುದುಬೈನಲ್ಲಿ ನಡೆಯುವ ಕ್ರೀಡೆಯಲ್ಲಿ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಭಾಗಿಯಾಗಲಿದ್ದಾರೆ.ಸೆಪ್ಟೆಂಬರ್ 10 ರಿಂದ ಕ್ರಿಕೆಟ್ ಹಬ್ಬ ಶುರುವಾಗಲಿದ್ದು ಸಿನಿ ತಾರಾಬಳಗ ಮತ್ತೆ ಒಗ್ಗೂಡಲಿದೆ. ಇಂದು ರಾಜ್ ಕಪ್ ಸೀಸನ್ 6 ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿ ಗೋಷ್ಠಿಯಲ್ಲಿ ಅನಿರುದ್, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್, ರಾಜೇಶ್ ಬ್ರಹ್ಮಾವರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಒಟ್ಟು 12 ತಂಡಗಳನಡುವೆ 27 ಪಂದ್ಯಗಳು ನಡೆಯಲಿದ್ದು ಎಲ್ಲಾ ಪಂದ್ಯಗಳನ್ನು ಭಾರತ ಸೇರಿದಂತೆ ಒಟ್ಟು 6 ದೇಶಗಳಲ್ಲಿ ದುಬೈ,ಶ್ರೀಲಂಕಾ,ಮಲೇಷಿಯಾ,ಸಿಂಗಾಪುರ್,ಬ್ಯಾಂಕಾಕ್ ನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು ಹೋದ ಬಾರಿಗಿಂತ ಈ ಬಾರಿ ಸಖತ್ ಎಂಟರ್ಟೇನ್ಮೆಂಟ್ ಇರಲಿದೆ. ಡಾ. ರಾಜ್ ಕಪ್ನಲ್ಲಿ ಡಾಲಿ ಧನಂಜಯ್, ಅನಿರುದ್ದ್, ಮದರಂಗಿ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ರಾಜುಗೌಡ ನೇತೃತ್ವದ ತಂಡಗಳು ಭಾಗಿಯಾಗಲಿವೆ.ಈ ಮಹತ್ವದ ಟೂರ್ನಿಗಾಗಿ ಸ್ಯಾಂಡಲ್ವುಡ್ನ ಎಲ್ಲಾ ಸಿನಿಮಾ ನಟರು, ತಂತ್ರಜ್ಞರ ಸೇರಿದಂತೆ ನಡೆ ನಟಿಯರೆಲ್ಲರೂ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್
ರಾಜ್ ಕಪ್ ಸೀಸನ್ 6ಗೆ ಭರ್ಜರಿ ತಯಾರಿ..! 12 ತಂಡ 27 ಮ್ಯಾಚ್..! Read More »