Karnataka Bhagya

ಇತರೆ

ಕಿರುತೆರೆಗೆ ಕಾಲಿಡುತ್ತಿದ್ದಾನೆ ‘ಸಲಗ’.

ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ ಅವರನ್ನು ನಿರ್ದೇಶಕನಾಗಿ ಗೆಲ್ಲಿಸಿದ ಸಿನಿಮಾ ‘ಸಲಗ’. ಮಂದಗತಿಯಲ್ಲಿ ಓಡುತ್ತಿದ್ದ ಅವರ ಸಿನಿಪಯಣಕ್ಕೆ ಅತೀವ ಚೈತನ್ಯ ತಂದುಕೊಟ್ಟ ಸಿನಿಮಾ ಇದು. ಚಿತ್ರಮಂದಿರಗಳಲ್ಲಿ ಕನ್ನಡಿಗರ ಮನಗೆದ್ದು, ಯಶಸ್ವಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ಇದೀಗ ಕಿರುತೆರೆಯ ಮೇಲೆ ಬರಲು ಸಜ್ಜಾಗಿದೆ. ಬಿಡುಗಡೆಯಾಗಿ ಸುಮಾರು ಒಂದು ವರ್ಷವೇ ಕಳೆಯುತ್ತಾ ಬಂದಮೇಲೆ ಇದೀಗ ಚಿತ್ರದ ಒಟಿಟಿ ಹಾಗು ಕಿರುತೆರೆ ಬಿಡುಗಡೆಯ ಬಗ್ಗೆ ಮಾತುಗಳು ಕೇಳುತ್ತಿದ್ದು, ಸಿನಿಮಾ ಕನ್ನಡದ ‘ಉದಯ ಟಿವಿ’ಯಲ್ಲಿ ಪ್ರದರ್ಶನ ಕಾಣಲಿರೋ ದಿನಾಂಕ ನಿಗದಿಯಾಗಿದೆ. 2021ರ ಅಕ್ಟೋಬರ್ 14ರಂದು ಬಿಡುಗಡೆಯಾಗಿದ್ದ ಪಕ್ಕ ರಾ ಆಕ್ಷನ್ ಎಂಟರ್ಟೈನರ್ ‘ಸಲಗ’. ಸ್ವತಃ ದುನಿಯಾ ವಿಜಯ್ ಅವರೇ ನಿರ್ದೇಶಿಸಿ, ಅವರೇ ನಾಯಕರಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಸಂಜನಾ ಆನಂದ್ ನಾಯಕಿಯಾಗಿ, ಹಾಗೇ ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ ಕೂಡ ನಟಿಸಿದ್ದರು. ಚರಣ್ ರಾಜ್ ಅವರ ಮೈ ನವೀರೇಳಿಸುವ ಸಂಗೀತ ಸಿನಿಮಾದಲ್ಲಿತ್ತು. ಇತ್ತೀಚೆಗಷ್ಟೇ ‘ಸನ್ ನೆಕ್ಸ್ಟ್(SUN NXT) ಆಪ್ ನಲ್ಲಿ ಸಿನಿಮಾ ಬರುತ್ತಿದೆ ಎಂದು ಚಿತ್ರತಂಡವೇ ಹೇಳಿದ್ದು, ಸದ್ಯ ನಿಖರ ದಿನಾಂಕ ಹೊರಬಿದ್ದಿಲ್ಲ. ಆದರೆ ಇದೇ ಜುಲೈ 24ರ ಸಂಜೆ 6:30kke ಸರಿಯಾಗಿ ‘ಸಲಗ’ ಸಿನಿಮಾ ‘ಉದಯ ಟಿವಿ’ಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿ ತೆರೆಕಾಣಲಿದೆ. ಈ ಬಗ್ಗೆ ‘ಉದಯ’ ವಾಹಿನಿಯವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಚಿತ್ರಕ್ಕಾಗಿ ಹಾತೊರೆದು ಕಾಯುತ್ತಿದ್ದ ಸಿನಿರಸಿಕರಿಗೆ ಈ ವಿಷಯ ಸಂತಸ ತಂದಿದೆ.

ಕಿರುತೆರೆಗೆ ಕಾಲಿಡುತ್ತಿದ್ದಾನೆ ‘ಸಲಗ’. Read More »

‘ರಾಘವೇಂದ್ರ ಸ್ಟೋರ್ಸ್’ ತೆರೆಮೇಲೆ ಸದ್ಯಕ್ಕಿಲ್ಲ

ಸದ್ಯ ಕನ್ನಡದ ಮುಂಚೂಣಿ ಸಿನಿಮಾ ನಿರ್ಮಾಣ ಸಂಸ್ಥೆ ಎಂದರೆ ಅದು ‘ಹೊಂಬಾಳೆ ಫಿಲಂಸ್’. ಕೆಜಿಎಫ್ ಸಿನಿಮಾದಿಂದ ತಮ್ಮ ಪ್ರಯತ್ನಕ್ಕೆ ಅತೀವ ಯಶಸ್ಸು ಪಡೆದ ಈ ಸಂಸ್ಥೆ ಸದ್ಯ ತಮ್ಮ ಕೈಯಲ್ಲಿ ಹಲವು ಸಿನಿಮಾಗಳನ್ನು ಇಟ್ಟುಕೊಂಡಿದೆ. ಅದರಲ್ಲಿ ಪಾನ್-ಇಂಡಿಯನ್ ಸಿನಿಮಾಗಳು ಮಾತ್ರವೇ ಅಲ್ಲದೇ ಏಕಭಾಷೆಯ ಸಿನಿಮಾಗಳು ಇವೆ. ಈ ಬಗೆಯ ಅಪ್ಪಟ ಕನ್ನಡ ಸಿನಿಮಾಗಳಲ್ಲಿ ಒಂದು ನವರಸ ನಾಯಕ ಜಗ್ಗೇಶ್ ಅವರ ಅಭಿನಯದ ಬಹುನಿರೀಕ್ಷಿತ ‘ರಾಘವೇಂದ್ರ ಸ್ಟೋರ್ಸ್’. ಈ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಧಾರ ಮಾಡಿದ್ದ ಚಿತ್ರತಂಡ ಇದೀಗ ಆ ನಿರ್ಧಾರವನ್ನು ಬದಲಾಯಿಸಿದೆ. ಕನ್ನಡದ ಹಿಟ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಸೃಷ್ಟಿಯಾದ ಈ ‘ರಾಘವೇಂದ್ರ ಸ್ಟೋರ್ಸ್’ನಲ್ಲಿ ಜಗ್ಗೇಶ್ ಹಾಗು ಶ್ವೇತ ಶ್ರೀವಾಸ್ತವ ಅವರು ಜೊತೆಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸುಮಧುರ ಸಂಗೀತ ಚಿತ್ರಕ್ಕೆ ಜೀವ ತುಂಬಲಿದೆ. ಇದೇ ಆಗಸ್ಟ್ 5ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಪೋಸ್ಟರ್ ಮೂಲಕ ಕನ್ನಡಿಗರಿಗೆ ತಿಳಿಸಿದ್ದ ಚಿತ್ರತಂಡ, ಸದ್ಯ ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದೆ. ಆ ಕಾರಣಗಳಾಗಲಿ ಅಥವಾ ಹೊಸ ಬಿಡುಗಡೆ ದಿನಾಂಕದ ಬಗ್ಗೆಯಾಗಲಿ ಯಾವುದೇ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಈಗಾಗಲೇ ಬಿಡುಗಡೆಯಾಗಿದ್ದ ಸಿನಿಮಾದ ಟೀಸರ್ ಇದೊಂದು ಹಾಸ್ಯಬರಿತ ಮನರಂಜನ ಚಿತ್ರ ಎಂಬುದನ್ನು ಸಾರಿ ಹೇಳಿತ್ತು. ಇದೀಗ ಚಿತ್ರ ತಡವಾಗಿ ತೆರೆಕಾಣಲಿದ್ದು, ಹೊಸ ಬಿಡುಗಡೆ ದಿನಾಂಕಕ್ಕಾಗಿ ಕಾದು ನೋಡಬೇಕಿದೆ.

‘ರಾಘವೇಂದ್ರ ಸ್ಟೋರ್ಸ್’ ತೆರೆಮೇಲೆ ಸದ್ಯಕ್ಕಿಲ್ಲ Read More »

ಹೊಸ ತಂತ್ರಜ್ಞಾನದ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾದ ‘ವಿಕ್ರಾಂತ್ ರೋಣ’.

ಸದ್ಯ ಕನ್ನಡಿಗರಷ್ಟೇ ಅಲ್ಲದೇ ದೇಶದಾದ್ಯಂತ ಸಿನಿರಸಿಕರು ಕಾಯುತ್ತಿರುವ ಸಿನಿಮಾಗಳಲ್ಲಿ ‘ವಿಕ್ರಾಂತ್ ರೋಣ’ಕೂಡ ಒಂದು. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅವರು ನಟಿಸಿರುವ ಈ ಸಿನಿಮಾ ಇದೇ ಜುಲೈ 28ರಿಂದ ವಿವಿಧ ಭಾಷೆಗಳಲ್ಲಿ,3ಡಿ ಯಲ್ಲಿ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಸದ್ಯ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿ ಆಗಿರುವ ಚಿತ್ರತಂಡ ತನ್ನ ಹೊಸ ಯೋಜನೆಯೊಂದನ್ನು ಹೊರಹಾಕಿದೆ. ‘ವಿಕ್ರಾಂತ್ ರೋಣ’ ಹಲವು ಭಾಷೆಗಳಲ್ಲಿ ತೆರೆಕಾಣುತ್ತಿರುವ ಚಿತ್ರ. ಕನ್ನಡದ ಸ್ವಂತವಾಗಿ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಹಾಗು ಇಂಗ್ಲೀಷ್ ನಲ್ಲೂ ಸಿನಿಮಾ ಸಿದ್ಧವಾಗಿದೆ. ಇದಕ್ಕೆ ಸಂಭಂಧಿಸಿದಂತೆ ಹೊಸ ತಂತ್ರಜ್ಞಾನವನ್ನು ಚಿತ್ರತಂಡ ಸಿದ್ದಪಡಿಸಿದೆ. ‘ಸಿನಿಡಬ್’ ಎಂಬ ಆಪ್ ಒಂದರ ಮೂಲಕ ತಮಗೆ ಬೇಕಾದ ಭಾಷೆಯಲ್ಲಿ ಚಿತ್ರಮಂದಿರದಲ್ಲೇ ಸಿನಿಮಾವನ್ನು ಪ್ರೇಕ್ಷಕರು ನೋಡಬಹುದಾಗಿದೆ. ಈ ಬಗ್ಗೆ ಸುದೀಪ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದು ಅದರ ಪ್ರಕಾರ, “ಈಗ ಒಬ್ಬ ಪ್ರೇಕ್ಷಕ ಆಂಧ್ರದಲ್ಲಿದ್ದಾರೆ. ಅವರಿಗೆ ಕನ್ನಡದಲ್ಲಿ ಸಿನಿಮಾ ನೋಡೋ ಇಚ್ಛೆಯಿರುತ್ತದೆ. ಆದರೆ ಅವರಿಗೆ ಸರಿಯಾಗುವ ಸಮಯದಲ್ಲಿ ಕನ್ನಡ ಆವೃತ್ತಿ ಅವರಿಗೆ ಅಲ್ಲಿ ಸಿಗುವುದಿಲ್ಲ. ಆಗ ಅವರು ತೆಲುಗು ಆವೃತ್ತಿಯ ಶೋ ಪ್ರವೇಶಿಸಿ, ಅಲ್ಲಿ ಈ ಆಪ್ ಓಪನ್ ಮಾಡಿ ಅಲ್ಲಿನ ಸಮಯ ಹಾಗು ಸ್ಥಳ ಹಾಕಿದಾಗ, ಆ ಆಪ್ ಅವರಿಗೆ ಕನ್ನಡ ಆವೃತ್ತಿಯ ಡೈಲಾಗ್ ಗಳನನ್ನು ನೀಡುತ್ತದೆ. ಈ ಪ್ರೇಕ್ಷಕರು ಅದನ್ನ ಈಯರ್ ಫೋನ್ ಬಳಸಿ ಕೇಳಬಹುದು. ಅಲ್ಲಿನ ಪರದೆ ಮೇಲೆ ಮೂಡುತ್ತಿರುವ ದೃಶ್ಯಕ್ಕೆ ಸರಿಯಾಗಿ ಈ ಆಪ್ ಡೈಲಾಗ್ ಗಳನ್ನು ನೀಡುತ್ತದೆ, ಅದು ಕೂಡ ಮ್ಯೂಸಿಕ್ ಸಮೇತ. ಆದರೆ ಇದಕ್ಕೆ ಥೀಯೇಟರ್ ನ ಒಳಗಿರುವುದು ಅವಶ್ಯಕ. ಹೊರಗಡೆಯಿಂದ ಈ ಸೌಲಭ್ಯ ಪಡೆಯಲಾಗುವುದಿಲ್ಲ” ಎಂದಿದ್ದಾರೆ. ಅನೂಪ್ ಭಂಡಾರಿ ಅವರ ನಿರ್ದೇಶನದ ‘ವಿಕ್ರಾಂತ್ ರೋಣ’ ಆರಂಭದಿಂದಲೂ ದೊಡ್ಡ ಮಟ್ಟದಲ್ಲೇ ಹೊಸ ಹೊಸ ಪ್ರಯತ್ನಗಳಿಗೆ ಹೆಸರಾಂದಂತ ಸಿನಿಮಾ. ಕಿಚ್ಚ ಸುದೀಪ್ ನಾಯಕನಾಗಿ ಹಾಗು ಅವರ ಜೊತೆಗೆ, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ ಫೆರ್ನಾಂಡಿಸ್ ಹಾಗು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ಜುಲೈ 28kke ಸಿನಿಮಾ ಬಿಡುಗಡೆಯಗುತ್ತಿದ್ದು, ಸಿನಿಮಾದ ಮೇಲೆ ಎಲ್ಲರ ನಿರೀಕ್ಷೆ ಮುಗಿಲಿನೆತ್ತರದಲ್ಲಿದೆ.

ಹೊಸ ತಂತ್ರಜ್ಞಾನದ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾದ ‘ವಿಕ್ರಾಂತ್ ರೋಣ’. Read More »

ಗಂಧದ ಗುಡಿ ಬಿಡುಗಡೆಯ ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್ ರಾಜಕುಮಾರ್

ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ‘ಗಂಧದಗುಡಿ’ ಥಿಯೇಟರ್ ನಲ್ಲಿ ತೆರೆ ಕಾಣಲು ಸಜ್ಜಾಗಿ ನಿಂತಿದೆ. ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿಗಳ ಕುರಿತ ಸಾಕ್ಷ್ಯಚಿತ್ರದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಅಪ್ಪು ಗಂಧದ ಗುಡಿ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಸಿನಿಮಾ ರಿಲೀಸ್ ದಿನಾಂಕ ಘೋಷಣೆಯಾಗಿದೆ. ಅಪ್ಪು ನಿಧನ ಹೊಂದಿದ ಹಿಂದಿನ ದಿನ, ಅಂದರೆ ಬರುವ ಅಕ್ಟೋಬರ್ 28ರಂದು ಗಂಧದ ಗುಡಿ ಸಿನಿಮಾ ತೆರೆ ಕಾಣಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ”ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಫ್ಯಾನ್ಸ್ ಭಾವುಕರಾಗಿ ಕಮೆಂಟ್ ಹಾಕುತ್ತಿದ್ದಾರೆ. ಇದಲ್ಲದೆ ಪುನೀತ್ ರಾಜಕುಮಾರ್ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿಮಾನ್ ಸಿನಿಮಾ ಆಗಸ್ಟ್ ನಲ್ಲಿ ತೆರೆಗೆ ಬರಲಿದೆ. ಇದಾದ ನಂತರ ಅಕ್ಟೋಬರ್ ನಲ್ಲಿ ರಿಲೀಸ್ ಆಗಲಿರುವ ಗಂಧದಗುಡಿಯೇ ಅವರ ಕೊನೆಯ ಸಿನಿಮಾವಾಗಿರಲಿದೆ. ಇದು ಥಿಯೇಟರ್ನಲ್ಲಿ ರಿಲೀಸ್ ಆಗಲಿರುವ ಪುನೀತ್ ಅವರ ಕೊನೆಯ ಚಿತ್ರ ಆಗಿರುವ ಕಾರಣಕ್ಕೆ ಫ್ಯಾನ್ಸ್ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಿದ್ದಾರೆ.

ಗಂಧದ ಗುಡಿ ಬಿಡುಗಡೆಯ ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್ ರಾಜಕುಮಾರ್ Read More »

ನಟ ರಿಷಿ ಅವರ ಹೊಸ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್.

ಚಂದನವನದ ಸಿಂಪಲ್ ಡೈರೆಕ್ಟರ್ ‘ಸಿಂಪಲ್’ ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದಂತಹ ಹಿಟ್ ಸಿನಿಮಾ ‘ಆಪರೇಷನ್ ಅಲಮೇಲಮ್ಮ’ದಲ್ಲಿನ ತಮ್ಮ ವಿಭಿನ್ನ ಅಭಿನಯದಿಂದ ಕನ್ನಡಿಗರ ಮನದ ಮನೆಮಾತಾದ ನಟ ರಿಷಿ ಅವರು. ನಂತರ ‘ಕವಲುದಾರಿ’, ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ ನ ಭರವಸೆಯ ನಟ ಎನಿಸಿಕೊಂಡಿದ್ದರು. ಇದೀಗ ಅವರ ಮುಂದಿನ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ. ಅದು ಕೂಡ ಸೀದಾ ಒಟಿಟಿ ಪರದೆ ಮೇಲೆ. ರಿಷಿ ನಟಿಸಿರುವ ಮುಂದಿನ ಸಿನಿಮಾ ‘ನೋಡಿ ಸ್ವಾಮಿ ಇವನು ಇರೋದೇ ಹೀಗೆ’ ಸೀದಾ ಒಟಿಟಿಯಲ್ಲಿ ಬಿಡುಗಡೆಯಗುವುದೆಂದು ಚಿತ್ರತಂಡ ಈ ಹಿಂದೆಯೇ ಘೋಷಣೆ ಮಾಡಿತ್ತು.’ಜೀ5′ ಸಂಸ್ಥೆ ಈ ಸಿನಿಮಾದ ಹಕ್ಕುಗಳನ್ನು ಕೂಡ ಪಡೆದಾಗಿತ್ತು. ಈಗ ‘ಜೀ5’ ನಲ್ಲಿ ಸಿನಿಮಾ ಬಿಡುಗಡೆಯಾಗುವ ದಿನಾಂಕವನ್ನ ಚಿತ್ರತಂಡ ತಿಳಿಸಿದೆ. ಇದೇ ಜುಲೈ 22ರಿಂದ ‘ಜೀ5(ZEE 5) ಆಪ್ ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಇಸ್ಲಾಹುದ್ದಿನ್ ಅವರ ನಿರ್ದೇಶನದ ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದೊಂದು ಹಾಸ್ಯಬರಿತ ಮನರಂಜನಾ ಚಿತ್ರ ಎಂದೂ ಟ್ರೈಲರ್ ಸಾರಿ ಹೇಳುತ್ತಿದೆ. ನಾಯಕ ರಿಷಿ ಅವರ ಜೊತೆಗೆ ಧನ್ಯ ಬಾಲಕೃಷ್ಣ, ಗ್ರೀಷ್ಮ ಶ್ರೀಧರ್, ನಾಗಭೂಷಣ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇದೇ ಜುಲೈ 22ರಿಂದ ಸಿನಿಮಾ ‘ಜೀ 5’ ಆಪ್ ನಲ್ಲಿ ಸಿನಿಮಾ ನೋಡಲು ಸಿಗಲಿದ್ದು, ಚಿತ್ರ ಎಷ್ಟು ನಗಿಸಲಿದೆ ಎಂದು ಕಾದು ನೋಡಬೇಕಿದೆ.

ನಟ ರಿಷಿ ಅವರ ಹೊಸ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್. Read More »

ಶಿವಣ್ಣನ ‘ಘೋಸ್ಟ್’ ತಂಡ ಸೇರಿದ ಕೆಜಿಎಫ್ ತಂತ್ರಜ್ಞ.

ಚಂದನವನದ ಚಿರಯುವಕ ‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್ ಅವರ 128ನೇ ಸಿನಿಮಾವಾಗಿ ಘೋಷಣೆಯಾಗಿರುವ ‘ಘೋಸ್ಟ್’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಶಿವಣ್ಣನ ಜನ್ಮದಿನದಂದು ಹೊರಬಿಟ್ಟಂತಹ ಪೋಸ್ಟರ್ ಒಂದು ಪಕ್ಕ ಮಾಸ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚು ಮಾಡುತ್ತಿದೆ. ಇನ್ನೂ ಚಿತ್ರೀಕರಣ ಆರಂಭವಾಗದ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ‘ಬೀರಬಲ್’ ಸಿನಿಮಾ ಖ್ಯಾತಿಯ ಎಂ ಜಿ ಶ್ರೀನಿವಾಸ್ ಅವರು. ಹಾಗಾಗಿ ಶಿವಣ್ಣ-ಶ್ರೀನಿ ಕಾಂಬಿನೇಶನ್ ಗೆ ಕನ್ನಡ ಸಿನಿರಸಿಕರು ಹಾತೊರೆದು ಕಾಯುತ್ತಿದ್ದಾರೆ. ಈ ನಡುವೆ ‘ಘೋಸ್ಟ್’ ತನ್ನ ತಂಡದ ಪರಿಚಯವನ್ನು ಅಭಿಮಾನಿಗಳಿಗೆ ನೀಡುತ್ತಿದೆ. ಶ್ರೀನಿ ಅಕಾ ಎಂ ಜಿ ಶ್ರೀನಿವಾಸ್ ರಚಿಸಿ ನಿರ್ದೇಶಿಸುತ್ತಿರುವ ಈ ಸಿನಿಮಾ ಒಂದು ಆಕ್ಷನ್ ಥ್ರಿಲರ್ ಕಥೆಯಾಗಿರಲಿದೆ. ಚಿತ್ರದ ತಾರಾಗಣದ ಬಗೆಗೆ ಹೆಚ್ಚಿನ ಮಾಹಿತಿ ಸಿಗದೇ ಇದ್ದರು, ನಿರ್ದೇಶಕ ಶ್ರೀನಿ ತಮ್ಮ ತಾಂತ್ರಿಕ ತಂಡದ ಬಗೆಗೆ ಹೊಸ ಸುದ್ದಿಗಳನ್ನು ಹೊರಹಾಕಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯ ಅವರು ತಂಡ ಸೇರಿದ್ದಾರೆ. ಕ್ಯಾಮೆರಾದ ಕಣ್ಣಾಗಿ ಮಹೇನ್ ಸಿಂಹ ಅವರು ಛಾಯಾಗ್ರಾಹಣ ಮಾಡಲಿದ್ದಾರೆ. ಸಂಭಾಷಣೆ ಬರೆಯಲು ಪ್ರಸನ್ನ ವಿ ಎಂ ಹಾಗು ಮಾಸ್ತಿ ಅವರನ್ನು ಆದುಕೊಂಡಿದ್ದಾರೆ. ಇನ್ನು ಚಿತ್ರದ ಆರ್ಟ್ ಡೈರೆಕ್ಟರ್ ಆಗಿ ‘ಕೆಜಿಎಫ್’ ಹಾಗು ಸಿನಿಮಾಗಳಲ್ಲಿ ಕೆಲಸ ಮಾಡಿ, ಪ್ರೇಕ್ಷಕರ ಪ್ರಶಂಸೆಗೆ ಒಳಗಾಗಿರುವ ಶಿವಕುಮಾರ್ ಅವರು ‘ಘೋಸ್ಟ್’ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಸದ್ಯದ ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಇವರದೇ ಕೈಚಳಕವಿದೆ. ಒಟ್ಟಿನಲ್ಲಿ ಶಿವರಾಜಕುಮಾರ್ ಅವರಿಗಾಗಿ ಕಾಯುತ್ತಿರುವ ಹಲವು ಸಿನಿಮಾಗಳಲ್ಲಿ ಈ ಸಿನಿಮಾ ಎಲ್ಲರ ದೃಷ್ಟಿಯನ್ನ ತನ್ನತ್ತ ತರಿಸಿಕೊಂಡಿರುವ ಸಿನಿಮಾ. ಚಿತ್ರದ ತಂತ್ರಜ್ಞ ತಂಡವೇ ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ಏರಿಸುತ್ತಿರುವಾಗ ಇನ್ನು ತಾರಾಗಣ ಎಷ್ಟರ ಮಟ್ಟಿಗಿನ ಪ್ರಭಾವ ಮೂಡಿಸಲಿದೆ ಎಂದು ಕಾದುನೋಡಬೇಕಿದೆ.

ಶಿವಣ್ಣನ ‘ಘೋಸ್ಟ್’ ತಂಡ ಸೇರಿದ ಕೆಜಿಎಫ್ ತಂತ್ರಜ್ಞ. Read More »

‘ವಿಕ್ರಾಂತ್ ರೋಣ’ನ ವಿವಿಧ ವಿತರಕರು.

ಸ್ಯಾಂಡಲ್ವುಡ್ ನಿಂದ ಬರುತ್ತಿರುವ ಮುಂದಿನ ಪಾನ್-ಇಂಡಿಯನ್ ಸಿನಿಮಾ, ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲು ದಿನಗಣನೆ ಆರಂಭವಾಗಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ,’ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದ ಮೇಲೆ ಮುಗಿಲೆತ್ತರದ ನಿರೀಕ್ಷೆಗಳು ಸಿನಿರಸಿಕರಲ್ಲಿವೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಹಾಗು ಹಾಡುಗಳು ಎಲ್ಲರನ್ನೂ ‘ವಿಕ್ರಾಂತ್ ರೋಣ’ನ ಲೋಕಕ್ಕೆ ಹೋಗಲು ಸಿದ್ದಪಡಿಸಿವೆ. ಇದೀಗ ಚಿತ್ರತಂಡ ಒಂದೊಂದೇ ಹೊಸ ಅಪ್ಡೇಟ್ ಗಳನ್ನು ಬಿಡುತ್ತಿದೆ. ಇದೊಂದು ಪಾನ್-ಇಂಡಿಯನ್ ಸಿನಿಮಾ ಆದ್ದರಿಂದ ವಿವಿಧ ಭಾಷೆಗಳಲ್ಲಿನ ಚಿತ್ರದ ವಿತರಕರ ಪಟ್ಟಿ ಹೊರಬಿದ್ದಿದೆ. ಇದೇ ಜುಲೈ 28ಕ್ಕೆ ತೆರೆಕಾಣುತ್ತಿರುವ ‘ವಿಕ್ರಾಂತ್ ರೋಣ’ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗು ಇಂಗ್ಲೀಷ್ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್ ಅವರ ‘ಕಿಚ್ಚ ಕ್ರಿಯೇಷನ್ಸ್’ ಹಾಗು ಜಾಕ್ ಮಂಜು ಅವರ ‘ಶಾಲಿನಿ ಆರ್ಟ್ಸ್’ ಸೇರಿ ನಿರ್ಮಿಸುತ್ತಿರುವ ಈ ಸಿನಿಮಾ ಎಲ್ಲೆಡೆ 3ಡಿ ಯಲ್ಲಿಯೂ ತೆರೆಕಾಣುತ್ತಿದೆ. ಕರ್ನಾಟಕದಾದ್ಯಂತ ‘ಶಾಲಿನಿ ಆರ್ಟ್ಸ್’ ಹಾಗು ‘ಕಿಚ್ಚ ಕ್ರಿಯೇಷನ್ಸ್’ ಸೇರಿ ಸಿನಿಮಾ ವಿತರಣೆ ಮಾಡಲಿದ್ದಾರೆ. ಇನ್ನು ತಮಿಳಿನಲ್ಲಿ ‘ಜೀ ಸ್ಟುಡಿಯೋಸ್’, ತೆಲುಗಿನಲ್ಲಿ ‘ಕಾಸ್ಮೋಸ್ ಎಂಟರ್ಟೈನ್ಮೆಂಟ್’ ಹಾಗು ‘ಕೆ ಎಫ್ ಸಿ ಡಿಸ್ಟ್ರಿಬ್ಯೂಷನ್ಸ್’ ಒಂದಾಗಿ ಸಂಪೂರ್ಣ ಆಂಧ್ರ ಹಾಗು ತೆಲಂಗಾಣದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇನ್ನು ಮಲಯಾಳಂನಲ್ಲಿ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ‘ವೇಫೇರರ್ ಫಿಲಂಸ್’ ವಿತರಣೆ ಮಾಡಲಿದ್ದು, ಹಿಂದಿ ಭಾಷೆಯಲ್ಲಿ ‘ಸಲ್ಮಾನ್ ಖಾನ್ ಫಿಲಂಸ್’ ಹಾಗು ‘ಪಿವಿಆರ್ ಪಿಕ್ಚರ್ಸ್’ ಸೇರಿ ವಿತರಿಸುತ್ತಿದ್ದಾರೆ. ಜೊತೆಗೆ ಹೊರದೇಶಗಳಲ್ಲಿ ‘ಒನ್ ಟ್ವೆಂಟಿ ಏಯ್ಟ್ ಮೀಡಿಯಾ’ ಹಾಗು ‘ಫಾರ್ಸ್ ಫಿಲಂಸ್’ ಚಿತ್ರವನ್ನ ಬಿಡುಗಡೆ ಮಾಡುತ್ತಿದೆ. ಅನೂಪ್ ಭಂಡಾರಿ ಅವರ ಸೃಷ್ಟಿಯ ಈ ಫಾಂಟಮ್ ಲೋಕ ‘ವಿಕ್ರಾಂತ್ ರೋಣ’ನನ್ನು ಥೀಯೇಟರ್ ಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಾತೊರೆದು ಕಾಯುತ್ತಿದ್ದಾರೆ. ಸುದೀಪ್ ಅವರ ಜೊತೆಗೆ ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ ಫೆರ್ನಾಂಡಿಸ್ ಮುಂತಾದವರು ನಟಿಸುತ್ತಿರುವ ಈ ಚಿತ್ರ ಇದೇ ತಿಂಗಳ 28ಕ್ಕೆ ಬಿಡುಗಡೆಯಗುತ್ತಿದ್ದು, ಸದ್ಯ ಬಿಡುಗಡೆಯ ಪೂರ್ವತಯಾರಿಗಳು ಪ್ರಚಾರಗಳು ಭರದಿಂದ ಸಾಗುತ್ತಿದೆ

‘ವಿಕ್ರಾಂತ್ ರೋಣ’ನ ವಿವಿಧ ವಿತರಕರು. Read More »

ಅಭಿಮಾನಿಗಳ ಮುಂದೆ ‘ಕ್ರಿಟಿಕಲ್ ಕೀರ್ತನೆಗಳು’

ಚಂದನವನದಲ್ಲಿ ಹಲವು ವಿಭಿನ್ನ ರೀತಿಯ ಸಿನಿಮಾಗಳು ಬರುತ್ತಿವೆ. ಹೊಸ ತಲೆಮಾರಿನ ಸಿನಿಕರ್ಮಿಗಳು, ಹಾಗು ಸಿನಿಪ್ರೇಮಿಗಳು ಸೇರಿ ಹೊಸ ಹೊಸ ವಿಚಾರಗಳನ್ನು ಇಟ್ಟುಕೊಂಡ ಸಿನಿಮಾಗಳನ್ನು ಮಾಡುತ್ತಾ ನೋಡುತ್ತಾ ಹೊಸ ಪರಿಯನ್ನು ಆರಂಭಿಸಿದ್ದಾರೆ. ಇಂತಹದ್ದೇ ಒಂದು ಸಿನಿಮಾ ‘ಕ್ರಿಟಿಕಲ್ ಕೀರ್ತನೆಗಳು’. ಕುಮಾರ್ ಎಲ್ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದು ಇದೀಗ ಒಟಿಟಿ ಪರದೆ ಏರುತ್ತಿದೆ. ಮೇ 13ರಂದು ತೆರೆಕಂಡಿದ್ದಂತಹ ಈ ಚಿತ್ರದಲ್ಲಿ ತಬಲಾ ನಾಣಿ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಸುಚೆಂದ್ರ ಪ್ರಸಾದ್, ರಾಜೇಶ್ ನಟರಂಗ, ವಿಶ್ವ, ಅರುಣಾ ಬಾಲರಾಜ್, ಅಪೂರ್ವ ಭಾರದ್ವಜ್ ಮುಂತಾದವರು ನಟಿಸಿದ್ದಾರೆ. ಭಾರತದ ಪ್ರಖ್ಯಾತ ಕ್ರಿಕೆಟ್ ಪಂದ್ಯಾಟವಾದ ‘ಐಪಿಎಲ್’ ಮೇಲೆ ಸಾಮಾನ್ಯರು ಆಡುವ ಬೆಟ್ಟಿಂಗ್ ಹಾಗು ಅದರ ಪರಿಣಾಮಗಳ ಬಗೆಗಿನ ಕಥೆಯೇ ಈ ‘ಕ್ರಿಟಿಕಲ್ ಕೀರ್ತನೆಗಳು’. ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ನೋಡಲು ಸಿಗುತ್ತಿದೆ. ಈ ಹಿಂದೆ 2019ರಲ್ಲಿ ಬಿಡುಗಡೆಯಾಗಿದ್ದ ‘ಕೆಮಿಸ್ಟ್ರಿ ಒಫ್ ಕರಿಯಪ್ಪ’ ಚಿತ್ರ ನಿರ್ದೇಶಸಿದ್ದಂತಹ ಕುಮಾರ್ ಎಲ್ ಅವರೇ ಈ ಸಿನಿಮಾವನ್ನು ನಿರ್ದೇಶಿಸಿ ನಿರ್ಮಿಸಿದ್ದಾರೆ. ಒಂದಷ್ಟು ಉತ್ತಮ ಕ್ರಿಟಿಕಲ್ ರಿವೀವ್ ಪಡೆದ ‘ಕ್ರಿಟಿಕಲ್ ಕೀರ್ತನೆಗಳು’ ಸದ್ಯ ಅಮೆಜಾನ್ ಪ್ರೈಮ್ ನಲ್ಲಿ ಮನೆಮನೆಗಳಿಗೆ ಬಂದಿದೆ. ಚಿತ್ರವನ್ನ ಇನ್ನು ನೋಡಿರದ ಪ್ರೇಕ್ಷಕರು ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾಗಿದೆ.

ಅಭಿಮಾನಿಗಳ ಮುಂದೆ ‘ಕ್ರಿಟಿಕಲ್ ಕೀರ್ತನೆಗಳು’ Read More »

ಕೆಜಿಎಫ್ ಕಿರೀಟಕ್ಕೆ ಮತ್ತೊಂದು ಗರಿ.

‘ಕೆಜಿಎಫ್’, ಈ ಒಂದು ಹೆಸರು ಕನ್ನಡ ಸಿನಿ ಅಭುಮಾನಿಗಳ ಮನದಲ್ಲಿ ರೋಮಾಂಚನ ಮೂಡಿಸಬಲ್ಲದು. ಪ್ರಶಾಂತ್ ನೀಲ್ ಅವರ ನಿರ್ದೇಶನದ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮುಂಚೂಣಿಯಲ್ಲಿ ನಿಂತಿರುವ ಕನ್ನಡಿಗರ ಹೆಮ್ಮೆಯ ಚಿತ್ರ. ಚಿತ್ರಮಂದಿರಗಳಲ್ಲಿ ಸುಮಾರು 1250ಕೋಟಿ ಗಳಿಕೆ ಕಂಡ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಹಲವು ಧಾಖಲೆಗಳಿಗೆ ಸಾಕ್ಷಿಯಾಗಿತ್ತು. ಇದೀಗ ಈ ಸಾಲಿಗೆ ಮತ್ತೊಂದು ಹೊಸ ರೆಕಾರ್ಡ್ ಸೇರಿಕೊಂಡಿದೆ. ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ತೆರೆಕಂಡು, ಯಶಸ್ವಿ ಪ್ರದರ್ಶನ ಕಂಡು ಸದ್ಯ ಒಟಿಟಿ ಪರದೆ ಮೇಲೆ ಮನೆಮನೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗ ಇದರ ಗಳಿಕೆಗಳ ಅನವಾರಣ ಆಗುತ್ತಿದ್ದು, ಈ ಸಂಧರ್ಭ ಹೊಸ ಧಾಖಲೆಯೊಂದು ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಮುಡಿಗೇರಿದೆ. ‘ಬುಕ್ ಮೈ ಶೋ’ ಆಪ್ ನಲ್ಲಿ ಅತ್ಯಂತ ಹೆಚ್ಚು ಟಿಕೆಟ್ ಬುಕಿಂಗ್ ಕಂಡಂತಹ ಚಿತ್ರವಾಗಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹೊರಹೊಮ್ಮಿದೆ. ಒಟ್ಟು ಸುಮಾರು 17.1 ಮಿಲಿಯನ್ ಟಿಕೆಟ್ ಗಳನ್ನು ‘ಬುಕ್ ಮೈ ಶೋ’ ಆಪ್ ಮೂಲಕ ಪಡೆದ ಈ ಸಿನಿಮಾ ಇದೀಗ ಈ ಸಾಲಿನ ಪ್ರಥಮ ಸ್ಥಾನದಲ್ಲಿದೆ. ಈ ಹಿಂದೆ ರಾಜಮೌಳಿ ಅವರ ನಿರ್ದೇಶನದ ‘ಬಾಹುಬಲಿ 2’ ಸಿನಿಮಾ ಅಗ್ರಸ್ಥಾನದಲ್ಲಿತ್ತು. ಸದ್ಯ ‘ಕೆಜಿಎಫ್ ಚಾಪ್ಟರ್ 2’ ಬಾಹುಬಲಿಯನ್ನ ಹಿಂದೆ ಹಾಕಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಬಿಡುಗಡೆಗೂ ಮುನ್ನ ಭಾರತದಾದ್ಯಂತ ಅತ್ಯಂತ ನಿರೀಕ್ಷಿತ ಸಿನಿಮಾವಾಗಿತ್ತು. ತೆರೆಕಂಡಮೇಲೆ ಜನಸಾಗರವೇ ಹರಿದು ಬಂದು ಚಿತ್ರಮಂದಿರಗಳನ್ನು ತುಂಬಿತ್ತು. ಸದ್ಯ ‘ಕೆಜಿಎಫ್ ಚಾಪ್ಟರ್ 2’ನ ಥಿಯೇಟರ್ ಓಟ ಮುಗಿದಿದ್ದು, ಎಲ್ಲೆಡೆ ಕೆಜಿಎಫ್ ಚಾಪ್ಟರ್ 3’ ಸಿನಿಮಾದ ಸುದ್ದಿ ಓಡಾಡುತ್ತಿದೆ.

ಕೆಜಿಎಫ್ ಕಿರೀಟಕ್ಕೆ ಮತ್ತೊಂದು ಗರಿ. Read More »

ವಿಭಿನ್ನ ಚಿತ್ರದಲ್ಲಿ ಕೊಡಗಿನ ಬೆಡಗಿ

ಕನ್ನಡ ನಟಿ ನಿಧಿ ಸುಬ್ಬಯ್ಯ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಉಪೇಂದ್ರ ಅವರೊಂದಿಗೆ ನಟಿಸಲಿದ್ದಾರೆ. ಈ ಹಿಂದೆ ರಿಯಲ್ ಸ್ಟಾರ್ ಜೊತೆ ಚಿತ್ರ ಮಾಡಲು ಹೊರಟಿದ್ದರೂ ಎಂದಿಗೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ ಈಗ ಉಪೇಂದ್ರ ಅವರೊಂದಿಗೆ ನಟಿಸಲು ಅವಕಾಶ ಸಿಗುವುದರೊಂದಿಗೆ UI ಸಿನಿಮಾದಲ್ಲಿ ಪ್ರಮುಖ ಪಾತ್ರ ಸಿಕ್ಕಿರುವ ಖುಷಿಯಲ್ಲಿದ್ದಾರೆ ನಟಿ ನಿಧಿ ಸುಬ್ಬಯ್ಯ. ಮೀಡಿಯಾದೊಂದಿಗೆ ಮಾತನಾಡಿದ ಅವರು ‘ಈಗಾಗಲೇ ಚಿತ್ರದ ಒಂದೆರಡು ದಿನಗಳ ಶೂಟಿಂಗ್ ಮುಗಿಸಿದ್ದೇನೆ’ ಎಂದರು. ಸಿನಿಮಾದಲ್ಲಿ ನಟಿಸುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು “ನಾನು ಅಂತಿಮವಾಗಿ ನಾನು ನಿಜವಾಗಿಯೂ ನಟಿಸಲು ಬಯಸುವ ಚಲನಚಿತ್ರದಲ್ಲಿದ್ದೇನೆ. ನಾನು ಇಲ್ಲಿಯವರೆಗೆ ಕೇಳುತ್ತಿರುವ ಪಾತ್ರಗಳು ಮತ್ತು ಸ್ಕ್ರಿಪ್ಟ್‌ಗಳು ಬಿಲ್‌ಗೆ ಸರಿಹೊಂದುವಂತಿರಲಿಲ್ಲ. ತಂಡದಿಂದ ನನಗೆ ಕರೆ ಬಂದಾಗ ನಾನು ಗೋವಾದಲ್ಲಿದ್ದೆ. ಉಪ್ಪಿ ಸರ್ ಅವರನ್ನು ಭೇಟಿ ಮಾಡಲು ನಾನು ನನ್ನ ಪ್ರವಾಸವನ್ನು ಮೊಟಕುಗೊಳಿಸಿದ್ದೇನೆ. ಅವರು ನನ್ನನ್ನು ನಟಿಸಲು ಕರೆದಿರುವುದು ತುಂಬಾ ಖುಷಿ ಕೊಟ್ಟಿದೆ. ಅವರು ಕಥೆಯನ್ನು ನಿರೂಪಿಸಿದಾಗ ತಕ್ಷಣ ಒಪ್ಪಿಕೊಂಡೆ. ನಾನು ಅವರೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ”ಎಂದರು. ‘ಈ ಹಿಂದೆ ಉಪೇಂದ್ರ ಅವರೊಂದಿಗೆ ಒಂದೆರಡು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಬೇಕಿತ್ತು, ಆದರೆ ವಿವಿಧ ಕಾರಣಗಳಿಂದ ಅವು ವರ್ಕ್‌ಔಟ್ ಆಗಲಿಲ್ಲ’ ಎಂದು ಹೇಳುವ ನಿಧಿ “ಉಪ್ಪಿ ಸರ್ ಅವರ ನೆನಪಿನ ಶಕ್ತಿ ಅದ್ಭುತವಾಗಿದೆ. ಯಾಕೆಂದರೆ ನಾವು ಬೇರೆ ಬೇರೆ ಸಮಾರಂಭಗಳಲ್ಲಿ ಭೇಟಿಯಾದುದನ್ನು ನನಗೆ ನೆನಪಿಸಿದರು. ನಾನು ಆಶ್ಚರ್ಯಗೊಂಡೆ” ಎಂದರು. ಸೆಟ್‌ನಲ್ಲಿ ಸಮಯವನ್ನು ಆನಂದದಿಂದ ಕಳೆಯುತ್ತಿರುವ ನಿಧಿ “ಉಪ್ಪಿ ಸರ್ ಚಿತ್ರ ನಿರ್ಮಾಣದಲ್ಲಿ ಹೊಸ ಮಾರ್ಗವನ್ನು ಅನ್ವೇಷಿಸುವವರು. ಅವರು ಚಿತ್ರದ ವಿವರಗಳ ಬಗ್ಗೆ ನಿರ್ದಿಷ್ಟವಾಗಿ ಹೇಳಿದ್ದಾರೆ. ಅವರು ಎಲ್ಲರನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ ಮತ್ತು ತಾಳ್ಮೆಯಿಂದ ಎಲ್ಲವನ್ನೂ ವಿವರಿಸುತ್ತಾರೆ. ಈ ಚಿತ್ರದಲ್ಲಿ ಕೆಲಸ ಮಾಡುವ ಪ್ಲಸ್ ಪಾಯಿಂಟ್ ಎಂದರೆ ನಮ್ಮಲ್ಲಿ ಉತ್ತಮ ನಿರ್ಮಾಣ ಸಂಸ್ಥೆ ಇದೆ. ಅವರು ಕಲ್ಟ್ ಹಿಟ್‌ಗಳನ್ನು ನೀಡಿದ್ದಾರೆ” ಎಂದು ನಿಧಿ ವಿವರಿಸಿದರು. ಅಲ್ಲದೆ ತಮ್ಮ ಪಾತ್ರದ ವಿವರಗಳನ್ನು ಮುಚ್ಚಿಡಲು ಬಯಸುವ ನಿಧಿ ಸುಬ್ಬಯ್ಯ ಅವರ ಪಾತ್ರದ ಬಗ್ಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ವಿಭಿನ್ನ ಚಿತ್ರದಲ್ಲಿ ಕೊಡಗಿನ ಬೆಡಗಿ Read More »

Scroll to Top