Karnataka Bhagya

ಕ್ರೀಡೆ

ವಿಚ್ಚೇದನ ಪಡೆದ ಕೆಲವೇ ತಿಂಗಳಲ್ಲಿ ಸಮಂತಾ ಜೀವನದಲ್ಲಾಯ್ತು ಮಹತ್ವದ ಬದಲಾವಣೆ ..

ನಟಿ ಸಮಂತಾ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಮೇಲೆ ಸಖತ್ ಸುದ್ದಿಯಲ್ಲಿದ್ದಾರೆ …ಸಿನಿಮಾ ಹಾಗೂ ವೈಯಕ್ತಿಕ ಎರಡೂ ವಿಚಾರದಿಂದಲೇ ಸುದ್ದಿಯಲ್ಲಿರುವ ಸಮಂತಾ ದುಬೆ ನಂತರ ತಮ್ಮ ಪ್ರೊಫೆಶನ್ ಲೈಫ್ ನಲ್ಲಿ ಮಹತ್ವದ ಬದಲಾವಣೆಗಳಾಗಿವೆ … ಮದುವೆ ಆದ ನಂತರ ಸಮಂತಾ ಕೈನಲ್ಲಿ ಸಿನಿಮಾಗಳೇ ಇಲ್ಲ ಎಂದು ಮಾತನಾಡುತ್ತಿದ್ದವರಿಗೆ ವಿಚ್ಛೇದನ ನಂತರ ಸಾಕಷ್ಟು ಆಫರ್ ಗಳನ್ನು ಪಡೆದುಕೊಂಡು ತಿರುಗೇಟು ಕೊಟ್ಟಿದ್ದಾರೆ ನಟಿ ಸಮಂತಾ …ಹೌದು ಸಮಂತಾ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದು ಅದರ ಜತೆಗೆ ಜಾಹೀರಾತುಗಳನ್ನು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ .. ಮತ್ತೊಂದು ವಿಚಾರವೇನೆಂದರೆ ಸಮಂತಾ ಸದ್ಯ ಟಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ …ಹೌದು ಟಾಲಿವುಡ್ ಅಂಗಳದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಲೇಡಿ ಸೂಪರ್*ನಯನತಾರಾ ಅವರ ದ ನಂತರ ಸಮಂತಾ ಅವರಿಗೆ ಅತಿ ಹೆಚ್ಚು ಸಂಭಾವನೆ ಸಿಗುತ್ತಿದೆ ಎಂದು ಈಗ ಸಮಂತಾ ಸಿನಿಮಾ ಒಂದಕ್ಕೆ 3ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ .. ಇನ್ನು ಸಮಂತಾ ತಮ್ಮ ಸ್ನೇಹಿತೆಯರೊಂದಿಗೆ ಶಿಲ್ಪ ರೆಡ್ಡಿ ಅವರೊಂದಿಗೆ ಸಸ್ಟೈನ್ ಕಾರ್ಡ್ ಎಂಬ ಸಂಸ್ಥೆಯನ್ನು ಆರಂಭ ಮಾಡಿ ಅದಕ್ಕೆ ಹೂಡಿಕೆಯನ್ನು ಕೂಡ ಮಾಡಿದ್ದಾರೆ ಈ ಮೂಲಕ ಉದ್ಯಮಿಯಾಗಿ ಕೂಡ ಗುರುತಿಸಿಕೊಳ್ಳಲಿದ್ದಾರೆ ಸಮಂತಾ

ವಿಚ್ಚೇದನ ಪಡೆದ ಕೆಲವೇ ತಿಂಗಳಲ್ಲಿ ಸಮಂತಾ ಜೀವನದಲ್ಲಾಯ್ತು ಮಹತ್ವದ ಬದಲಾವಣೆ .. Read More »

‘ಎದ್ದೇಳು ಮಂಜುನಾಥ 2’

2009ರಲ್ಲಿ ಬಿಡುಗಡೆಯಾಗಿ ಜನಮನಗೆಲ್ಲಲು ದೊಡ್ಡಮಟ್ಟದಲ್ಲೇ ಯಶಸ್ವಿಯಾಗಿದ್ದ ಚಿತ್ರ ‘ಎದ್ದೇಳು ಮಂಜುನಾಥ’. ಸೋಂಬೇರಿ ಮಂಜ ಹಾಗೇ ಅವನ ಪರಿಶ್ರಮಿ ಧರ್ಮಪತ್ನಿ ಗೌರಿಯ ಕಥೆ ಹೇಳಿದ ಈ ಚಿತ್ರ ನಾಯಕರಾದ ಜಗ್ಗೇಶ್ ಅವರಿಗೂ ನಿರ್ದೇಶಕರಾದ ಗುರುಪ್ರಸಾದ್ ಅವರಿಗೂ ಚಿತ್ರರಂಗದಲ್ಲಿ ಹೊಸತೊಂದು ಬ್ರೇಕ್ ಕೊಟ್ಟಿತ್ತು. ಈಗ ‘ಎದ್ದೇಳು ಮಂಜುನಾಥ’ನ ಸೃಷ್ಟಿಕರ್ತ ಮತ್ತೊಮ್ಮೆ ಮಂಜನನ್ನ ಏಳಿಸಲು ಹೊರಟಿದ್ದಾರೆ. ಆದರೆ ಈ ಬಾರಿ ಜಗ್ಗೇಶ್ ಇಲ್ಲದೆ!!! ಹೌದು,’ಎದ್ದೇಳು ಮಂಜುನಾಥ 2′ ಬರುತ್ತಿದೆ. ಗುರುಪ್ರಸಾದ್ ಅವರೇ ಈ ಸಿನಿಮಾದ ಸೃಷ್ಟಿಕರ್ತರಾದರು ಮೊದಲ ಸಿನಿಮಾಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲವಂತೆ. ಎಲ್ಲಿಯವರೆಗೆಂದರೆ, ‘ಎದ್ದೇಳು ಮಂಜುನಾಥ’ ಸಿನಿಮಾದ ಯಶಸ್ಸಿನಲ್ಲಿ ತಮ್ಮದೂ ಒಂದು ಪಾಲು ಇಟ್ಟುಕೊಂಡಿದ್ದ ಜಗ್ಗೇಶ್ ‘ಎದ್ದೇಳು ಮಂಜುನಾಥ 2’ನಲ್ಲಿ ಎಲ್ಲೂ ಕಾಣಸಿಗುವುದಿಲ್ಲವಂತೆ. ಕಥೆ ಕೂಡ ಮೊದಲ ಸಿನಿಮಾಗೆ ಅಸಂಭದ್ದವಂತೆ. ಹಳೆಯ ಹೆಸರನ್ನೇ ಇಟ್ಟುಕೊಂಡು ಹೊಸ ಕಥೆಯೊಂದನ್ನು ಹೇಳಹೊರಟಿದ್ದಾರೆ ನಿರ್ದೇಶಕ ಗುರುಪ್ರಸಾದ್. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ನಾಯಕನಟನ ಪಾತ್ರಕ್ಕೆ ಸ್ವತಃ ನಿರ್ದೇಶಕ ಗುರುಪ್ರಸಾದ್ ಅವರೇ ಬಣ್ಣ ಹಚ್ಚಿರುವುದು. ಆ ಮೂಲಕ ನಿರ್ದೇಶನದಲ್ಲಿ ತಮ್ಮದೇ ವಿಶೇಷ ಕೈಚಳಕವನ್ನು ಕನ್ನಡಿಗರಿಗೆ ತೋರಿಸಿರೋ ಗುರುಪ್ರಸಾದ್, ನಾಯಕನಟನಾಗಿ ಮೊದಲ ಬಾರಿ ತೆರೆಮೇಲೆ ಬರಲಿದ್ದಾರೆ. ಇವರಿಗೆ ಜೊತೆಯಾಗಿ ತಮಿಳು ಕಿರುತೆರೆಯಲ್ಲಿ ಹೆಸರುವಾಸಿಯಾಗಿರುವ ಕನ್ನಡ ನಟಿ, ರಚಿತಾ ಮಹಾಲಕ್ಷ್ಮಿ ನಾಯಕಿಯ ಪಾತ್ರದಲ್ಲಿರಲಿದ್ದಾರೆ. ಈಗಾಗಲೇ ಚಿತ್ರೀಕರಣವನ್ನ ಮುಗಿಸಿಕೊಂಡಿರುವ ಚಿತ್ರತಂಡ ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡೋ ಸಾಧ್ಯತೆಯಿದೆ. ಅಲ್ಲದೇ ಜಗ್ಗೇಶ್ ಅವರು ಆರ್ಭಟಿಸಿದಂತ ಮಂಜನ ರೀತಿಯ ಪಾತ್ರವನ್ನ ಈ ಬಾರಿಯು ನೋಡಬಹುದಾ? ಹೌದಾದರೆ ಅದನ್ನ ಗುರುಪ್ರಸಾದ್ ಹೇಗೆ ನೆರವೇರಿಸುತ್ತಾರೆ? ಎನ್ನುವ ಹಲವಾರು ಕುತೂಹಲಗಳು ಕೂಡ ಹುಟ್ಟುತ್ತಿವೆ.

‘ಎದ್ದೇಳು ಮಂಜುನಾಥ 2’ Read More »

ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಸಿಂಪಲ್ ಸುಂದರಿ

ಚಂದನವನದ ಸಿಂಪಲ್ ತಾರೆ ಶ್ವೇತಾ ಶ್ರೀವಾತ್ಸವ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ಶ್ವೇತಾ ಈಗ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿಕ್ಕಿಯ ಮೂಗುತಿ ಎಂಬ ಹೊಸ ಸಿನಿಮಾದಲ್ಲಿ ಶ್ವೇತಾ ನಟಿಸುತ್ತಿದ್ದಾರೆ. ಇದೊಂದು ಕಾದಂಬರಿ ಆಧಾರಿತ ಸಿನಿಮಾ ಆಗಿದ್ದು ಗ್ರಾಮೀಣ ಸೊಗಡನ್ನು ಹೊಂದಿದೆ. “ಈ ಸಿನಿಮಾ ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾವಾಗಿದೆ. ಏಕೆಂದರೆ ಇದು ಸಮಾಜದಲ್ಲಿ ಇನ್ನು ಪ್ರಚಲಿತದಲ್ಲಿ ಇರುವ ಸಮಸ್ಯೆಗಳ ಕುರಿತಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ಹೆಣ್ಣು ಶಿಶು ಹತ್ಯೆ ಹಾಗೂ ಬಾಲ್ಯ ವಿವಾಹವನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ದೇವಿಕಾ ಜನಿತ್ರಿ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ಸ್ವತಃ ಅವರೇ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಸಿನಿಮಾ ಗ್ರಾಮೀಣ ಹಿನ್ನೆಲೆಯನ್ನು ಹೊಂದಿದ್ದು ಯಾವುದೇ ಅಸಹ್ಯಕರವಾಗಿರುವುದಿಲ್ಲ. ಅದ್ದೂರಿಯಾಗಿ ನಿರ್ಮಿಸಲಾಗುವುದು” ಎಂದಿದ್ದಾರೆ. ಚಿತ್ರದ ಕಥೆಯನ್ನು ಬಿಟ್ಟು ಚಿತ್ರತಂಡ ಅವರ ಮೇಲೆ ಇಟ್ಟಿರುವ ನಂಬಿಕೆಗೆ ಮನಸೋತಿದ್ದಾರೆ. “ಚಿತ್ರ ತಂಡ ನನ್ನನ್ನೇ ಚಿತ್ರಕ್ಕೆ ಆಯ್ಕೆ ಮಾಡಿತ್ತು. ನನಗೆ ಡೇಟ್ ಸಮಸ್ಯೆಗಳು ಇದ್ದವು. ಬೇರೆಯವರನ್ನು ಹಾಕಿಕೊಳ್ಳಲು ಹೇಳಿದ್ದೆ. ಆದರೆ ಅವರು ನಿರಾಕರಿಸಿದರು. ನಾನೇ ಅವರ ಆದ್ಯತೆ ಎಂದು ಗೊತ್ತಾಯಿತು. ನಾನು ಅದರ ಭಾಗವಾಗದಿದ್ದರೆ ಅವರು ಚಿತ್ರ ಮಾಡದಿರಬಹುದು. ಅವರ ನಂಬಿಕೆ ನನ್ನ ಮನತಟ್ಟಿತು. ನಾನು ತಕ್ಷಣವೇ ಈ ಸಿನಿಮಾಕ್ಕೆ ಒಪ್ಪಿಗೆ ನೀಡಿದೆ” ಎಂದಿದ್ದಾರೆ. ಶ್ವೇತಾ ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದು ಅವುಗಳಲ್ಲಿ ನಾಯಕಿ ಪಾತ್ರಗಳು ಪ್ರಾಧಾನ್ಯತೆ ಹೊಂದಿವೆ. “ನಮ್ಮಲ್ಲಿ ಕೆಲವೇ ಕೆಲವು ಮಹಿಳಾ ಆಧಾರಿತ ವಿಷಯಗಳಿವೆ. ಇದು ನಮಗೆ ಹೆಚ್ಚು ಅಗತ್ಯವಿದೆ. ಮುಖ್ಯ ವಾಹಿನಿಯ ಸಿನಿಮಾಗಳಲ್ಲಿ ಇವು ನೈತಿಕ ಕಥೆಗಳಾಗಬೇಕು. ಮಹಿಳಾ ಆಧಾರಿತ ಸಬ್ಜೆಕ್ಟ್ ಕೇವಲ ಕಲಾತ್ಮಕ ಸಿನಿಮಾ ಎಂಬ ವ್ಯತ್ಯಾಸ ಹೋಗಬೇಕಿದೆ. ಇಲ್ಲಿ ಜನರು ಯಾವುದೇ ಲಿಂಗವನ್ನು ಕೇಂದ್ರಿಕರಿಸದೆಯೇ ನಾಯಕನನ್ನು ನೋಡಬೇಕು.ಯಾವುದೇ ಪಕ್ಷಪಾತವಿಲ್ಲದೆ ಕಥೆ ಹಾಗೂ ಪಾತ್ರದ ಮೇಲೆ ಕೇಂದ್ರೀಕರಿಸುವ ಸಮಯವನ್ನು ನಾನು ಬಯಸುತ್ತೇನೆ. ಸಮಾಜವು ಇದನ್ನು ಒಪ್ಪಿಕೊಂಡಾಗ ಇದು ಸಂಭವಿಸುತ್ತದೆ. ಎಲ್ಲಾ ಸ್ತ್ರೀ ಕಲಾವಿದರು ಇದನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.” ಎಂದಿದ್ದಾರೆ. “ಈ ಆಲೋಚನೆಯ ನಿರ್ಮಾಪಕ ಹಾಗೂ ಬರಹಗಾರರು ಅಗತ್ಯವಿದೆ. ತಾಯಂದಿರಾದ ಹೆಚ್ಚಿನ ಕಲಾವಿದರು ಈಗ ಸೆಟ್ ನಲ್ಲಿ ಕಂಫರ್ಟೇಬಲ್ ಆಗಿರುವುದು ಖುಷಿಯ ಸಂಗತಿ. ಇದು ಎಲ್ಲ ಭಾಷೆಯ ಇಂಡಸ್ಟ್ರಿಯಲ್ಲಿ ಕಂಡು ಬರುತ್ತಿದೆ. ಕನ್ನಡದಲ್ಲಿ ಮೊದಲು ನಟಿಯರು ಮಕ್ಕಳಾದ ಮೇಲೆ ಪ್ರಮುಖ ಪಾತ್ರದಲ್ಲಿ ನಟಿಸುವುದು ಕಾಣುತ್ತಿರಲಿಲ್ಲ. ಈಗ ನಾವು ಈ ಬದಲಾವಣೆಯನ್ನು ಸ್ವೀಕರಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ.” ಎಂದಿದ್ದಾರೆ ಶ್ವೇತಾ.

ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಸಿಂಪಲ್ ಸುಂದರಿ Read More »

ರಣಧೀರ ಪಾತ್ರ ಸಿಕ್ಕಿರುವುದು ನನ್ನ ಪುಣ್ಯ – ರಾಮ್ ಪವನ್ ಶೇಟ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಭಾಷೆಯ ಸೊಬಗಿನ ಗಿಣಿರಾಮ ಧಾರಾವಾಹಿಯು ಯಶಸ್ವಿ 400 ಸಂಚಿಕೆಗಳನ್ನು ಪೂರೈಸಿದೆ. ಗಿಣಿರಾಮ ಧಾರಾವಾಹಿಯಲ್ಲಿ ಖಳನಾಯಕ, ಆಯಿ ಸಾಹೇಬ್ ನ ಮಗ ರಣಧೀರ ಆಗಿ ನಟಿಸುತ್ತಿರುವ ರಾಮ್ ಪವನ್ ಶೇಟ್ ಈ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ಗಿಣಿರಾಮ ಧಾರಾವಾಹಿಯು 400 ಸಂಚಿಕೆ ಪೂರೈಸಿದೆ. ಇದಕ್ಕೆ ಕನ್ನಡ ಜನತೆಯೇ ಮುಖ್ಯ ಕಾರಣ. ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಅದು ಕಡಿಮೆಯೇ. ಯಾಕೆಂದರೆ ಎಲ್ಲರೂ ಅಷ್ಟು ಪ್ರೀತಿಯಿಂದ ಗಿಣಿರಾಮ ಧಾರಾವಾಹಿ ನೋಡ್ತಾ ಇದ್ದಾರೆ. ಎಲ್ಲರ ಮನೆಮನೆಯಲ್ಲಿ ಗಿಣಿರಾಮ ಇದೆ. ಹೇಗೆ ಗಿಣಿಯನ್ನು ಸಾಕುತ್ತಾರೋ, ಹಾಗೇ ಪ್ರತಿಮನೆಯಲ್ಲಿ ಗಿಣಿರಾಮ ನ ನೋಡ್ತಾರೆ” ಎಂದು ಹೇಳುತ್ತಾರೆ ರಾಮ್ ಪವನ್ ಶೇಟ್. ಇದರ ಜೊತೆಗೆ “ನಿರ್ದೇಶಕ ಪ್ರೀತಂ ಶೆಟ್ಟಿ, ನಿರ್ಮಾಪಕ ಭಾಸ್ಕರ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸಂಗಮೇಶ್, ಕ್ಯಾಮೆರಾಮೆನ್ ಪವನ್ ಜೊತೆಗೆ ಗಿಣಿರಾಮ ಧಾರಾವಾಹಿಯ ಎಲ್ಲಾ ಕಲಾವಿದರುಗಳು ಈ ಸಂಭ್ರಮದ ಹಿಂದೆ ಇದ್ದಾರೆ. ಅವರೆಲ್ಲರ ಶ್ರಮದಿಂದ ನಾವು ಮುನ್ನಡೆಯಲು ಸಾಧ್ಯ” ಎನ್ನುತ್ತಾರೆ ರಣಧೀರ ಪಾತ್ರಧಾರಿ. ಪಾತ್ರದ ಬಗ್ಗೆ ಮಾತನಾಡಿರುವ ರಾಮ್ ಪವನ್ ಶೇಟ್ ” ಇಲ್ಲಿಯ ತನಕ ನಾನು ಮಾಡಿರುವ ಪಾತ್ರಗಳಲ್ಲಿ ರಣಧೀರ ಪಾತ್ರ ಕೊಂಚ ಸ್ಪೆಷಲ್. ಯಾಕೆಂದರೆ ಈ ಪಾತ್ರದಲ್ಲಿ ಧೈರ್ಯ ಜಾಸ್ತಿ. ರಣಧೀರ ಪಾತ್ರ ಅಂದಾಗಲೇ ನನಗೆ ಒಂದು ಹೆಮ್ಮೆ ಬರುತ್ತೆ. ನಟಿಸಲೂ ಅಷ್ಟೇ. ಒಟ್ಟಿನಲ್ಲಿ ಈ ಪಾತ್ರ ಸಿಕ್ಕಿರುವುದು ನನ್ನ ಪುಣ್ಯ ಅಂಥನೂ ಹೇಳ್ಬಹುದು. ಜೊತೆಗೆ ಈ ಪಾತ್ರ ನನಗಂತೂ ತುಂಬಾ ಜನಪ್ರಿಯತೆ ತಂದುಕೊಟ್ಟಿದೆ. ಖುಷಿಯಾಗ್ತಿದೆ ರಣಧೀರ ಪಾತ್ರ ಮಾಡೋದಕ್ಕೆ”ಎನ್ನುತ್ತಾರೆ. ಪ್ರೀತಿಯಿಂದ ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ರಾಮ್ ಪವನ್ ಶೇಟ್ ನಂತರ ಮನೆದೇವ್ರು ಧಾರಾವಾಹಿಯಲ್ಲಿ ಖಳನಾಯಕನಾಗಿ ಮೋಡಿ ಮಾಡಿದರು. ತದ ನಂತರ ಬ್ರಹ್ಮಗಂಟು ಧಾರಾವಾಹಿಯಲ್ಲಿಯೂ ಖಳನಾಯಕನಾಗಿ ಅಬ್ಬರಿಸಿದ ರಾಮ್ ಪವನ್ ಸದ್ಯ ಕಿರುತೆರೆಯಲ್ಲಿ ರಣಧೀರನಾಗಿ ಮಿಂಚುತ್ತಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ರಾಮ್ ಪವನ್ ಶೇಟ್ ನಟಿಸಿದ್ದರೂ, ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ.

ರಣಧೀರ ಪಾತ್ರ ಸಿಕ್ಕಿರುವುದು ನನ್ನ ಪುಣ್ಯ – ರಾಮ್ ಪವನ್ ಶೇಟ್ Read More »

ಪರಭಾಷೆಯ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಚೈತ್ರಾ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಯನಾತಾರ ಧಾರಾವಾಹಿಯ ನಯನಾ ಆಗಿ ಕನ್ನಡ ಕಿರುತೆರೆಗೆ ಕಾಲಿಟ್ಟು ವೀಕ್ಷಕರನ್ನು ರಂಜಿಸುತ್ತಿರುವ ಈಕೆಯ ಹೆಸರು ಚೈತ್ರಾ ಸಕ್ಕರಿ. ನಯನಾ ಆಗಿ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಚೈತ್ರಾ ಅವರಿಗೆ ಕನ್ನಡ ಕಿರುತೆರೆ ಹೊಸತು ಹೊರತು ಕಿರುತೆರೆಯಲ್ಲ! ಯಾಕೆಂದರೆ ಚೈತ್ರಾ ಅವರ ನಟನಾ ಪಯಣ ಶುರುವಾಗಿದ್ದು ತಮಿಳಿನಿಂದ‌ ತಮಿಳ್ ಸೆಲ್ವಿ ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಪಾದದ ಮಾಡಿದ ಚೈತ್ರಾ ಅವರ ಕಿರುತೆರೆ ಪಯಣ ಶುರುವಾಗಿದ್ದು ರಿಯಾಲಿಟಿ ಶೋವಿನಿಂದ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ಕುಣಿಯೋಣು ಬಾರಾ ದ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚೈತ್ರಾ ಮುಂದೆ ತೆಲುಗು ಕಿರುತೆರೆಯ ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ ಕಮಾಲ್ ಮಾಡಿದರು‌. ತದ ನಂತರ ನಟನೆಯತ್ತ ಮನಸ್ಸು ವಾಲಿದ ಕಾರಣ ತಮಿಳು ಧಾರಾವಾಹಿಯಲ್ಲಿ ನಟಿಸಲು ಅಸ್ತು ಎಂದರು. “ಡ್ಯಾನ್ಸ್ ನಲ್ಲಿ ಅಭಿನಯಕ್ಕೆ ಒತ್ತು ಜಾಸ್ತಿ. ಅಭಿನಯ ಇಲ್ಲ ಎಂದಾದರೆ ಡ್ಯಾನ್ಸ್ ಮಾಡಲು ಅಸಾಧ್ಯ. ಡ್ಯಾನ್ಸ್ ಮಾಡುತ್ತಲೇ ನನಗೆ ನಟನೆಯತ್ತ ಆಸಕ್ತಿ ಮೂಡಿತು. ನಟಿಯಾಗುವ ಆಸೆ ಉಂಟಾಯಿತು” ಎಂದು ಹೇಳುವ ಚೈತ್ರಾ ಕನ್ನಡ ಕಿರುತೆರೆಗೆ ಕಾಲಿಡಲು ಸೋಶಿಯಲ್ ಮೀಡಿಯಾ ಕಾರಣವೂ ಹೌದು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದ ಚೈತ್ರಾ ಸಕ್ಕರಿ ಹೆಚ್ಚಾಗಿ ಟಿಕ್ ಟಾಕ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಆ ಟಿಕ್ ಟಾಕ್ ವಿಡಿಯೋ ನೋಡಿದ ನಯನಾತಾರಾ ಧಾರಾವಾಹಿ ನಿರ್ದೇಶಕ ತಿಲಕ್ ಅವರು ಚೈತ್ರಾ ಗೆ ನಟಿಸುವ ಅವಕಾಶ ನೀಡಿದರು. ಒಲ್ಲೆ ಎನ್ನದ ಆಕೆ ನಯನಾ ಆಗಿ ಬದಲಾದರು. ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಚೈತ್ರಾ ಅವರು ಇದೀಗ ಮಗದೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದೇನೆಂದರೆ ಶೀಘ್ರದಲ್ಲಿ ಅವರು ತೆಲುಗು ಕಿರುತೆರೆಗೂ ಕಾಲಿಡಲಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ದೇವತಲಾರ ದೇವಿಚಂಡಿ ಯಲ್ಲಿ ನಾಯಕಿಯಾಗಿ ಚೈತ್ರಾ ನಟಿಸಲಿದ್ದಾರೆ‌. ಆ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿರುವ ಚೈತ್ರಾ ಅವರಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್ ‌

ಪರಭಾಷೆಯ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಚೈತ್ರಾ Read More »

ಸಿನಿಮಾದಲ್ಲಿ ಮಾತ್ರವಲ್ಲ ಪ್ರಮೋಷನ್ ನಲ್ಲೂ ಕೂಡ ಇಂಪ್ರೆಸ್ ಮಾಡ್ತಿದ್ದಾರೆ ಕರಾವಳಿ ಬೆಡಗಿ

ಮಂಗಳೂರಿನ ಬೆಡಗಿ ಕಾಲಿವುಡ್ ಹಾಗೂ ಟಾಲಿವುಡ್ ನ ಸ್ಟಾರ್ ನಟಿ ಪೂಜಾ ಹೆಗ್ಡೆ …ಬಿಗ್ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡು ಪ್ರೇಕ್ಷಕರ ಎದೆಗೆ ಕನ್ನ ಹಾಕಿರುವ ನಟಿ ಪೂಜಾ ಹೆಗ್ಡೆ ಸದ್ಯ ಸಿನಿಮಾಗಳಲ್ಲಿ ಮಾತ್ರವಲ್ಲ ಸಿನಿಮಾದ ಪ್ರಮೋಷನ್ ನಲ್ಲೂ ಕೂಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ … ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಈಗಾಗಲೇ ಪ್ರವಾಸದ ಪೂಜಾ ಹೆಗ್ಡೆ ಬ್ಯುಸಿಯಾಗಿದ್ದಾರೆ ಈ ಸಂದರ್ಭದಲ್ಲಿ ಪೂಜಾ ಹೆಗ್ಡೆ ಧರಿಸುತ್ತಿರುವ ಔಟ್ ಫಿಟ್ ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ 10 ದಿನಗಳಿಂದ, ಸಿನಿಮಾದ ಪ್ರಚಾರ ಮಾಡುತ್ತಿರೋ ಪೂಜಾ‌ ಚಿಕ್, ಗ್ಲಾಮ್, ಕಾಮ್ಫಿ ಹಾಗೂ ಕ್ಯಾಶುಯಲ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ… ಹಸಿರು ಬಣ್ಣದ ಕ್ರಾಪ್ಡ್ ಬ್ಲೌಸ್ ಹಾಗೂ ಅದಕ್ಕೆ ಒಪ್ಪುವ ಸ್ಕರ್ಟ್ ಧರಿಸಿ ಪೋಸ್ ನೀಡಿದ್ದ ಪೂಜಾ‌ಹೆಗ್ಡೆ ರೆಡ್ ಹಾಗೂ ವೈಟ್ ಹೈ‌ನೆಕ್ ಡ್ರಸ್ ಹಾಕಿ ಎಲ್ಲರ ಗಮನ ಸೆಳೆದಿದ್ರು ಮಂಗಳೂರು ಬೆಡಗಿ ಮಾಡ್ರನ್ ಲುಕ್ ನಲ್ಲಿ ಸೂಪರ್ ಆಗಿ ಕಾಣ್ತಾರೆ ರಾಧೆ ಶ್ಯಾಮ್ ಬೆಡಗಿ

ಸಿನಿಮಾದಲ್ಲಿ ಮಾತ್ರವಲ್ಲ ಪ್ರಮೋಷನ್ ನಲ್ಲೂ ಕೂಡ ಇಂಪ್ರೆಸ್ ಮಾಡ್ತಿದ್ದಾರೆ ಕರಾವಳಿ ಬೆಡಗಿ Read More »

ಮತ್ತೆ ‘RRR’ ಪ್ರಮೋಷನ್ ಕಹಳೆ ಮೊಳಗಿಸಿದ ರಾಜಮೌಳಿ….

ಚಿತ್ರಬ್ರಹ್ಮ ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆರ್ ಆರ್ ಆರ್’ ಸಿನಿಮಾಗಾಗಿ ಚಿತ್ರರಸಿಕರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟರಲ್ಲಾಗಲೇ ತ್ರಿಬಲ್ ಆರ್ ಸಿನಿಮಾ ಬೆಳ್ಳಿಪರದೆಯ ಮೇಲೆ ರಾರಾಜಿಸಬೇಕಿತ್ತು. ಆದ್ರೆ ಕೊರೋನಾ ಕಾರಣದಿಂದ ರಿಲೀಸ್ ದಿನಾಂಕ ಪೋಸ್ಟ್ ಪೋನ್ ಮಾಡಲಾಗಿತ್ತು. ಹೀಗಾಗಿ ಎರಡು ಮುಹೂರ್ತ ಅನೌನ್ಸ್ ಮಾಡಿದ್ದ ರಾಜಮೌಳಿ ಆ ಎರಡು ದಿನಗಳನ್ನು ಬಿಟ್ಟು ಮಾರ್ಚ್ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಾಗಿ ಅನೌನ್ಸ್ ಮಾಡಿತ್ತು. ಹೊಸ ದಿನಾಂಕ ಘೋಷಣೆ ಬಳಿ ಮೌಳಿ ಟೀಂ ಪ್ರಮೋಷನ್ ಬಗ್ಗೆ ಯಾವುದೇ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಈಗ ಮತ್ತೆ ಪ್ರಮೋಷನ್ ಕಹಳೆ ಮೊಳಗಿಸಲು ಆರ್ ಆರ್ ಆರ್ ಟೀಂ ಸಜ್ಜಾಗಿದೆ. ಮಾರ್ಚ್ 14ಕ್ಕೆ ಎತ್ತುವ ಜಂಡಾ ಸಾಂಗ್ ರಿಲೀಸ್ ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ದೋಸ್ತಿ, ಹಳ್ಳಿನಾಟು ಹಾಡುಗಳು ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸಿದ್ದವು. ಇದೀಗ ತ್ರಿಬಲ್ ಆರ್ ಅಂಗಳದಿಂದ ಮತ್ತೊಂದು ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 14ನೇ ತಾರೀಖಿನಂದು ಎತ್ತುವ ಜಂಡಾ ಹಾಡು ರಿಲೀಸ್ ಮಾಡುವ ಮೂಲಕ ಆರ್ ಆರ್ ಆರ್ ಸಿನಿಮಾದ ಪ್ರಚಾರಕ್ಕೆ ಮತ್ತೆ ರಾಜಮೌಳಿ ಕಹಳೆ ಮೊಳಗಿಸಲಿದ್ದಾರೆ. ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ‘ಆರ್‌ಆರ್‌ಆರ್‌’ ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಮಾರ್ಚ್ 25ರಂದು 2022ರಂದು ವಿಶ್ವದಾದ್ಯಂತ ‘ಆರ್‌ಆರ್‌ಆರ್‌’ ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದ ಪ್ರತಿಷ್ಠಿತ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್ ಆರ್ ಆರ್ ಆರ್ ಸಿನಿಮಾವನ್ನು ಕರ್ನಾಟಕಲ್ಲಿ ಹಂಚಿಕೆ ಮಾಡಲಿದೆ.

ಮತ್ತೆ ‘RRR’ ಪ್ರಮೋಷನ್ ಕಹಳೆ ಮೊಳಗಿಸಿದ ರಾಜಮೌಳಿ…. Read More »

ತೆರೆದುಕೊಳ್ಳಲು ಸಿದ್ದವಾಗುತ್ತಿದೆ ‘ಕಾಟನ್ ಪೇಟೆ ಗೇಟ್’

ಕನ್ನಡ ಚಿತ್ರರಂಗಕ್ಕೆ ಭರ್ಜರಿ, ಬಹಾದ್ದೂರ್, ದನಕಾಯೋನು ಮುಂತಾದ ಸೂಪರ್ ಹಿಟ್ ಚಿತ್ರಗಳನ್ನ ನೀಡಿರೋ ಆರ್. ಶ್ರೀನಿವಾಸ್ ಅವರ “ಆರ್ ಎಸ್ ಪ್ರೊಡಕ್ಷನ್ಸ್” ಸಂಸ್ಥೆಯ ಇಪ್ಪತ್ತನೇ ಚಿತ್ರ ‘ಕಾಟನ್ ಪೇಟೆ ಗೇಟ್’. ಕನ್ನಡ ಹಾಗು ತೆಲುಗು ಎರಡೂ ಭಾಷೆಗಳಲ್ಲಿ ಒಮ್ಮೆಲೆ ಚಿತ್ರೀಕರಣವಾಗುತ್ತಿರೋ ಈ ಚಿತ್ರಕ್ಕೆ ತೆಲುಗಿನಲ್ಲಿ “ಸೀತಣ್ಣ ಪೇಟ ಗೇಟ್” ಎಂದು ಹೆಸರಿಟ್ಟಿದ್ದಾರೆ. ಬಹುಪಾಲು ಚಿತ್ರೀಕರಣ ಮುಗಿಸಿಕೊಂಡ ಈ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕ್ರೈಂ ಥ್ರಿಲರ್ ಕಥೆಯ ಸಸ್ಪೆನ್ಸ್ ಚಿತ್ರ ಇದಾಗಿದ್ದು, ವೈ ರಾಜಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯೋಗಿ ರೆಡ್ಡಿ ಹಾಗು ಚಿಡತಾಲ ನವೀನ್ ಛಾಯಾಗ್ರಾಹಣ ಇರುವ ಈ ಚಿತ್ರದಲ್ಲಿ ಸದ್ಯ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. ಗಾಳಿ ಸುದ್ದಿಗಳನ್ನು ನಂಬುವುದಾದರೆ, ಚಿತ್ರತಂಡ ಏಪ್ರಿಲ್ 14ರಂದು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಮಾಡಲಿದೆಯಂತೆ. ಬಯ್ಯಪು ರವಿ ಪೆನ್ನಲಿ ಮೂಡಿಬಂದ ಸಂಭಾಷಣೆ ಜೊತೆಗೆ ಶಿವ ಸರ್ವಣಿ ಸಂಕಲನ ಇರಲಿದೆಯಂತೆ. ಸಿನಿಮಾದಲ್ಲಿರುವ ನಾಲ್ಕು ಹಾಡುಗಳಿಗೆ ಎನ್ ಎಸ್ ಪ್ರಸು ಸಂಗೀತ ತುಂಬಿದ್ದಾರೆ. ಇನ್ನು ಮುಖ್ಯಭೂಮಿಕೆಗಳಲ್ಲಿ ಯಶ್ವನ್, ವೇಣುಗೋಪಾಲ್, ಅನುಷಾ ಜೈನ, ಸುರಭಿ ತಿವಾರಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರದ ಹಾಡೋದಕ್ಕೆ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿಯಿದೆ.

ತೆರೆದುಕೊಳ್ಳಲು ಸಿದ್ದವಾಗುತ್ತಿದೆ ‘ಕಾಟನ್ ಪೇಟೆ ಗೇಟ್’ Read More »

ಅವನು ಬಂದೇ ಬರ್ತಾನೆ ಎಂದ ರಿಯಲ್ ಸ್ಟಾರ್

ಚಂದನವನದಲ್ಲಿ ವಿಭಿನ್ನ ನಟ, ನಿರ್ದೇಶಕ,… ಕಥೆಗಳ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಡುವ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಸನದ ಹೊಸ ಚಿತ್ರ ಮೊದಲ ಪೋಸ್ಟರ್ ರಿಲೀಸ್ ಆಗಿದೆ… ಉಪ್ಪಿ ಸಿನಿಮಾದ ಟೈಟಲ್ ಈ ಬಾರಿಯೂ ಸಿಂಬಲ್ ಆಗಿದ್ದು ಪ್ರೇಕ್ಷಕರು ಯು ಐ ಎಂದು ಟೈಟಲ್ ಅನ್ನು ಓದಿಕೊಳ್ತಿದ್ದಾರೆ..ಪೋಸ್ಟರ್ ನಲ್ಲಿ ಉಪ್ಪಿ ಕುದುರೆ .ಮೇಲೆ‌ ಕೂತಿದ್ದು ಹಿ‌ಂದೆ ಉಪಗ್ರಹದ ಚಿತ್ತಾರ ಕೂಡ ಇದೆ ..ಇನ್ನು ಪೋಸ್ಟರ್ ನಲ್ಲಿ ಇವನು ಯಾವಾಗ ಬರ್ತಾನೆ ಗೊತ್ತಿಲ್ಲ ಆದ್ರೆ ಬಂದೆ ಬರ್ತಾನೆ ಅನ್ನೋ ಕ್ಯಾಪ್ಷನ್ ಇದೆ ಕ್ಯಾಪ್ಷನ್ ಆರು ಭಾಷೆಯಲ್ಲಿರೋಕಾರಣ ಸಿನಿಮಾ ಆರು ಭಾಷೆಯಲ್ಲಿ ಸಿದ್ದವಾಗೋದು ಗ್ಯಾರೆಂಟಿ ಇನ್ನು ಚಿತ್ರವನ್ನ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದು ಉಪ್ಪಿ ಡೈರೆಕ್ಷನ್ ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ …ಸದ್ಯ ಪೋಸ್ಟರ್ ನಷ್ಟೇ ಬಿಡುಗಡೆ ಮಾಡಿರೋ ತಂಡ ಆದಷ್ಟು ಬೇಗ ಸಿನಿಮಾದ ಮಿಕ್ಕ ಅಪ್ಡೇಟ್ ನೀಡಲಿದ್ದಾರೆ..

ಅವನು ಬಂದೇ ಬರ್ತಾನೆ ಎಂದ ರಿಯಲ್ ಸ್ಟಾರ್ Read More »

ಹುಟ್ಟುಹಬ್ಬದಾಚರಣೆಗೆ ಬ್ರೇಕ್ ಹಾಕಿದ ನವರಸ ನಾಯಕ

ಒಬ್ಬ ಸೆಲೆಬ್ರಿಟಿ ಅಥವಾ ಸಿನಿಮಾ ಸ್ಟಾರ್ ನ ಹುಟ್ಟಿದ ದಿನ ಅಂದರೆ ಅದೆಷ್ಟು ಸಂಭ್ರಮ, ಸಡಗರ. ದೂರದೂರುಗಳಿಂದ ಅಭಿಮಾನದ ಮಹಾಸಾಗರವನ್ನೇ ಹೊತ್ತುಬರುವ ಅಸಂಖ್ಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನುಮದಿನವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ನಟ-ನಟಿಯರು ಕೂಡ ಹಾಗೇ, ತಮ್ಮ ಅಭಿಮಾನಿಗಳ ಜೊತೆ ಸಡಗರದಿಂದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಾರೆ. ಆದರೆ ಈಗ ಕನ್ನಡದ ಬಹುಪಾಲು ನಟರು ತಮ್ಮ ಜನುಮದಾಚರಣೆಗೆ ಕಡಿವಾಣ ಹಾಕಿಕೊಂಡಿದ್ದಾರೆ. ಎಲ್ಲರದ್ದೂ ಒಂದೇ ಕಾರಣ. ಕರುನಾಡ ಯುವರತ್ನ ಅಪ್ಪು ನಮ್ಮನ್ನ ಅಗಲಿದ್ದು. ಸದ್ಯ ಈ ಸಾಲಿಗೆ ನವರಸ ನಾಯಕ ಜಗ್ಗೇಶ್ ಸೇರಿದ್ದಾರೆ. ವಿಶೇಷವೆಂದರೆ ಜಗ್ಗೇಶ್ ಅವರು ಹಾಗು ಪುನೀತ್ ರಾಜಕುಮಾರ್ ಅವರು ಇಬ್ಬರೂ ಹುಟ್ಟಿದ್ದು ಒಂದೇ ದಿನ, ಮಾರ್ಚ್ 17. ಪ್ರತಿವರ್ಷ ಬೇರೆ ಬೇರೆ ದಿಕ್ಕುಗಳಿಂದ ಅಭಿಮಾನಿಗಳು ಬಂದು ಇವರಿಬ್ಬರ ಜನ್ಮದಿನಕ್ಕೆ ಶುಭಕೋರುತ್ತಿದ್ದರು. ಆಚರಿಸುವಾಗ ಪುನೀತ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಜೈಕಾರ, ಶುಭಾಶಯಗಳನ್ನ ಹೇಳಿ ಅವರನ್ನ ನೆನೆದೇ ಅಪ್ಪು ಹುಟ್ಟುಹಬ್ಬದ ಆಚರಣೆ ಮಾಡುತ್ತಿದ್ದರು. ಜಗ್ಗೇಶ್ ಅಭಿಮಾನಿಗಳು ಸಹ ಪುನೀತ್ ಗೆ ಜನುಮದಿನದ ಶುಭಕೋರಿಯೆ ಮುಂದುವರೆಯುತ್ತಿದ್ದದ್ದು. ಆದರೆ ಈಗ ಅದ್ಯಾವ್ದು ನಡೆಯುವುದಿಲ್ಲ. ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ನಲ್ಲೂ ಇದನ್ನೇ ಹೇಳಿಕೊಂಡಿದ್ದಾರೆ. “ಈ ಬಾರಿ ನನ್ನ 59ನೇ ಜನ್ಮದಿನವನ್ನ ಆಚರಿಸಿಕೊಳ್ಳುವುದಿಲ್ಲ. ಆಚರಿಸೋ ಮನಸ್ಸೂ ಇಲ್ಲ. ಕಾರಣ ಇಷ್ಟು ವರ್ಷ ತಪ್ಪದೆ ಬರುತ್ತಿದ್ದ ಪುನೀತನ ಕರೆ,’ಅಣ್ಣ happy birthday’ ಎಂದು. ಮುಂದೆಂದೂ ಬರದಂತಾಯಿತು. ಪುನೀತನ ಜೊತೆಗೆ ಕೊನೆಯ ಚಿತ್ರ” ಎಂದು ಬರೆದುಕೊಂಡು, ಅಪ್ಪುವಿನ ಜೊತೆಗಿನ ತಮ್ಮ ಕೊನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 17ರಂದು ಕರ್ನಾಟಕದಾದ್ಯಂತ ಜಾತ್ರೆಯ ಸಂಭ್ರಮದಲ್ಲಿ ಅಪ್ಪುವನ್ನ ಅಭಿಮಾನಿಗಳು ನೆನೆಯೋ ಸಾಧ್ಯತೆಗಳಿವೆ. ಅಲ್ಲದೇ ಇದೇ ದಿನ ಅಪ್ಪುವಿನ ಕೊನೆಯ ಚಿತ್ರ ‘ಜೇಮ್ಸ್’ ಕೂಡ ಬಿಡುಗಡೆಗೊಳ್ಳಲಿದೆ.

ಹುಟ್ಟುಹಬ್ಬದಾಚರಣೆಗೆ ಬ್ರೇಕ್ ಹಾಕಿದ ನವರಸ ನಾಯಕ Read More »

Scroll to Top