Karnataka Bhagya

ಕ್ರೀಡೆ

‘ಕರ್ನಾಟಕ ರತ್ನ’ ಅಪ್ಪುಗೆ ಸಹಕಾರ ರತ್ನ

ಕನ್ನಡ ನಾಡಿಗೆ ಅಸಂಖ್ಯಾತ ಸೇವೆಗಳನ್ನು ಸಲ್ಲಿಸಿದವರು ಅಪ್ಪು. ಲೆಕ್ಕಕ್ಕೆ ಸಿಕ್ಕಿದವೇ ಲೆಕ್ಕಮಾಡಲಾಗದಷ್ಟು, ಇನ್ನು ಅರಿಯದವು ಎಷ್ಟಿವೆಯೋ!! ಕರ್ನಾಟಕ ಸರ್ಕಾರದ ಹಲವಾರು ಯೋಜನೆಗಳಿಗೆ ಅಪ್ಪು ರಾಯಲ್ ರಾಯಭಾರಿಯಾಗಿದ್ದವರು. ಇದರಲ್ಲಿ ‘ಕೆ ಎಂ ಎಫ್’ ಸಂಸ್ಥೆ ಕೂಡ ಒಂದು. ‘ಕರ್ನಾಟಕ ಹಾಲು ಉತ್ಪಾದಕರ ಮಂಡಳಿ’ (ಕೆ ಎಂ ಎಫ್) ಸಂಘಕ್ಕೆ ಅಪ್ಪು ಉಚಿತವಾಗಿ ರಾಯಭಾರಿಯಾಗಿದ್ದರು. ಸಂಘದ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅಪ್ಪು ತಮ್ಮ ಕೈಲಾದಷ್ಟು ಸಹಕಾರ ಕೂಡ ತೋರಿದ್ದರು. ಇದೇ ಕಾರಣಗಳಿಂದಾಗಿ ಕೆ ಎಂ ಎಫ್ ಸಂಘವು ಅಪ್ಪುಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ಮುಂದಾಗಿದೆ. ಸುದ್ದಿಗೋಷ್ಠಿಯೊಂದನ್ನು ನಡೆಸಿ ಈ ನಿರ್ಧಾರವನ್ನ ಬಹಿರಂಗಪಡಿಸಿದ ಸಹಕಾರ ಸಚಿವ ಸೋಮಶೇಖರ್, “ಪುನೀತ್ ರಾಜ್‌ಕುಮಾರ್ ಅವರು ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು. ಅಂತೆಯೇ ಕೆಎಂಎಫ್‌ಗೂ ರಾಯಭಾರಿಯಾಗಿ ಉಚಿತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೇ ಕಾರಣದಿಂದ ಪುನೀತ್ ರಾಜಕುಮಾರ್ ಅವರಿಗೆ ‘ಸಹಕಾರ ರತ್ನ’ ನೀಡುವುದಾಗಿ ನಿರ್ಧರಿಸಲಾಗಿದೆ. ಸಹಕಾರ ಮಹಾಮಂಡಳಿಯ ಅಧ್ಯಕ್ಷರಾದ ಜಿ ಟಿ ದೇವೇಗೌಡರು ಹಾಗು ಇತರ ಪ್ರಮುಖರ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾನು, ಜಿ ಟಿ ದೇವೇಗೌಡರು ಹಾಗು ಸಂಘದ ಗಣ್ಯರು ಅಪ್ಪು ನಿವಾಸಕ್ಕೆ ತೆರಳಿ ‘ಸಹಕಾರ ರತ್ನ’ ಪ್ರಶಸ್ತಿಯನ್ನ ನೀಡಲಿದ್ದೇವೆ.” ಎಂದಿದ್ದಾರೆ. ಮೂಲಗಳ ಪ್ರಕಾರ ಮಾರ್ಚ್ 20ರಂದು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಈ ಪುರಸ್ಕಾರವನ್ನ ಅಪ್ಪು ಮಡಿಲು ಸೇರಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಪ್ಪುಗೆ ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ನೀಡುವುದಾಗಿ ಸರ್ಕಾರದ ನಿರ್ಧಾರವಾಗಿದ್ದು, ಸದ್ಯದಲ್ಲೇ ನೀಡಲಿದ್ದಾರಂತೆ. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟಾರೇಟ್ ಘೋಷಿಸಿದ್ದು, ಇದೇ ಮಾರ್ಚ್ 22ರಂದು ನೀಡಲಿದ್ದಾರೆ. ಇನ್ನು ಈ ವರ್ಷದ ಬಸವಶ್ರೀ ಪ್ರಶಸ್ತಿ ಕೂಡ ಅಪ್ಪುವನ್ನ ಸೇರಿದೆ. ಬದುಕಿದ್ದಾಗ ಪ್ರಶಸ್ತಿಗಳಿಂದ ಬಲುದೂರವೇ ಇದ್ದ ಅಪ್ಪುವನ್ನ ಈಗ ಪ್ರಶಸ್ತಿ ಪುರಸ್ಕಾರಗಳು ಹುಡುಕಿ-ಹುಡುಕಿ ಬರುತ್ತಿವೆ.

‘ಕರ್ನಾಟಕ ರತ್ನ’ ಅಪ್ಪುಗೆ ಸಹಕಾರ ರತ್ನ Read More »

‘ಕೆ ಜಿ ಎಫ್’ ನಿಂದ ಬರಲಿದೆ ತೂಫಾನ್!!

ಕೆ ಜಿ ಎಫ್: ಚಾಪ್ಟರ್ 2, ಪ್ರಪಂಚದಾದ್ಯಂತ ಅತಿನಿರೀಕ್ಷಿತ ಚಿತ್ರ. ಮೊದಲ ಅಧ್ಯಾಯದಲ್ಲಿ ಶುರುಮಾಡಿ ಎರಡನೇ ಅಧ್ಯಾಯದಲ್ಲಿ ಹೇಳ ಹೊರಟಿರೋ ಕಥೆಯನ್ನ ಕೇಳಲು ಭಾಷೆಯ ಬಂಧನಗಳಿಲ್ಲದೆ ಎಲ್ಲ ಸಿನಿರಸಿಕರು ಕಾಯುತ್ತಿದ್ದಾರೆ. ಇನ್ನೇನು ಸಿನಿಮಾದ ಬಿಡುಗಡೆಗೆ ದಿನಗಳು ಸನಿಹವಾಗುತ್ತಿದ್ದಂತೆ, ಸಿನಿಮಾದ ಮೇಲಿನ ಆಕಾಂಕ್ಷೆಗಳು ಮುಗಿಲಿಗೆ ಸನಿಹವಾಗುತ್ತಿವೆ. ಸದ್ಯ ‘ಕೆ ಜಿ ಎಫ್’ ಗರಡಿಯಿಂದ ಹೊರಬಿದ್ದಿರೋ ಹೊಸ ಸುದ್ದಿ ಅಭಿಮಾನಿಗಳಲ್ಲಿ ಸಂತಸವನ್ನ ಹೆಚ್ಚಿಸುತ್ತಿದೆ. ಚಿತ್ರತಂಡ ಈಗಾಗಲೇ ತನ್ನ ಟ್ರೈಲರ್ ಬಿಡುಗಡೆಗೆ ಮುಹೂರ್ತ ಇಟ್ಟಿತ್ತು. ಮಾರ್ಚ್ 27ರ ಸಂಜೆ 6:40ಕ್ಕೆ ಸರಿಯಾಗಿ ‘ಹೊಂಬಾಳೆ ಫಿಲಂಸ್’ ಯೂಟ್ಯೂಬ್ ಚಾನೆಲ್ನಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ. ಆ ಕ್ಷಣಕ್ಕೋಸ್ಕರ ಕಾಯದೆ ಇರೋ ಅಭಿಮಾನಿಯೇ ಇಲ್ಲವೆಂದು ಹೇಳಿದರೆ ತಪ್ಪಾಗಲಾಗದು. ಈಗ ‘ಕೆ ಜಿ ಎಫ್: ಚಾಪ್ಟರ್ 2’ ತನ್ನ ಮೊದಲ ಹಾಡೋಂದನ್ನು ಜನರೆದುರಿಗಿಡಲು ನಿರ್ಧರಿಸಿದೆ.ಇದೇ ಮಾರ್ಚ್ 21ರ ಸೋಮವಾರ ಬೆಳಿಗ್ಗೆ 11:04ಕ್ಕೆ ಸರಿಯಾಗಿ ‘ತೂಫಾನ್’ ಎಂಬ ಹಾಡು ದೂಳೆಬ್ಬಿಸಲು ಸಿದ್ಧವಾಗಿದೆ. ಈ ಸುದ್ದಿಯನ್ನ ಪೋಸ್ಟರ್ ಒಂದರ ಮೂಲಕ ‘ಹೊಂಬಾಳೆ ಫಿಲಂಸ್’ ತನ್ನ ಸಾಮಾಜಿಕ ಖಾತೆಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳ ಆಸೆಗಳನ್ನ ಇನ್ನಷ್ಟು ಹೆಚ್ಚಿಸಿದೆ. ಇದಷ್ಟೇ ಅಲ್ಲದೇ ಈ ಕನ್ನಡದ ಚಿನ್ನದ ಗಣಿಯಿಂದ ಇನ್ನಷ್ಟು ಅತ್ಯುತ್ತಮ ವಿಷಯಗಳು ಹೊರಬಿದ್ದಿದೆ. ಮಲಯಾಳಂ ಭಾಷೆಯಲ್ಲಿ ಸಿನಿಮಾದ ಅಭಿಮಾನಿಗಳಿಗೋಸ್ಕರದ ಬುಕಿಂಗ್ ಗಳು ಈಗಾಗಲೇ ಆರಂಭವಾಗಿದೆ. ಅಲ್ಲದೇ, ಏಪ್ರಿಲ್ 14ರಂದು ಬೆಳ್ಳಿತೆರೆ ಕಾಣಲಿರೋ ಚಿತ್ರಕ್ಕೆ ಹೊರದೇಶಗಳಲ್ಲಿ ಪ್ರೀಮಿಯರ್ ಶೋನ ಮುಹೂರ್ತ ಕೂಡ ಇಟ್ಟಾಗಿದೆ. ಉತ್ತರ ಅಮೇರಿಕಾದಲ್ಲಿ ಏಪ್ರಿಲ್ 13ರಂದು ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಈ ಭಾಗದಲ್ಲಿ ‘ಸ ರಿ ಗ ಮ ಸಿನಿಮಾಸ್’ ಸಂಸ್ಥೆ ದಕ್ಷಿಣದ ಭಾಷೆಗಳಲ್ಲಿ ಸಿನಿಮಾವನ್ನ ಹೊರತರಲಿದ್ದರೆ, ‘Cinestan AA’ ಸಂಸ್ಥೆ ಹಿಂದಿ ವಿತರಣೆಯ ಜವಾಬ್ದಾರಿ ತೆಗೆದುಕೊಂಡಿದೆ. ಏಪ್ರಿಲ್ 14ಕ್ಕೆ ಅಭಿಮಾನಿಗಳಲ್ಲಿ ಈಗಿನಿಂದಲೇ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಉತ್ಸಾಹ ಕಾತುರತೆಯಿಂದ ರಾಕಿ ಭಾಯ್ ಅನ್ನು ಸ್ವಾಗತಿಸಲು ಕಾಯುತ್ತಿದ್ದಾರೆ.

‘ಕೆ ಜಿ ಎಫ್’ ನಿಂದ ಬರಲಿದೆ ತೂಫಾನ್!! Read More »

‘ಜೇಮ್ಸ್’ ಕಿರೀಟಕ್ಕೆ ಇದೀಗ ಇನ್ನೊಂದು ಗರಿ.

ಬಿಡುಗಡೆಗೂ ಮುನ್ನವೇ ದಾಖಲೆಗಳ ಸರಮಾಲೆಯನ್ನ ಪಡೆದಂತ ಸಂಭ್ರಮದಲ್ಲಿ ಬೆಳ್ಳಿತೆರೆ ಮೇಲೆ ಬಂದ ಚಿತ್ರ ‘ಜೇಮ್ಸ್’. ಅಪ್ಪು ಅಗಲಿಕೆಯಿಂದ ಕುಸಿದುಹೋಗಿದ್ದ ಪ್ರತಿಯೊಬ್ಬ ಅಭಿಮಾನಿಯನ್ನು ಹುರಿದುಂಬಿಸಲು ಬಂದಂತಿತ್ತು ‘ಜೇಮ್ಸ್’. ಬಿಡುಗಡೆಗೂ ಮುನ್ನದ ಟಿಕೆಟ್ ಬುಕಿಂಗ್ ನಿಂದ ಹಿಡಿದು ಬಿಡುಗಡೆಯ ನಂತರ ಹರಿದುಬಂದ ಜನಸಾಗರದವರೆಗೆ ಈ ಚಿತ್ರದ ಪ್ರತಿಯೊಂದು ಅಂಶ ಕೂಡ ಒಂದೊಂದು ದಾಖಲೆಗೆ ಸಾಕ್ಷಿಯಾಯ್ತು. ‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿ ನಾಯಕನಟನಾಗಿ ಕಣ್ತುಂಬಿಕೊಳ್ಳಲು ಕರ್ನಾಟಕದೆಲ್ಲೆಡೆ ಅವರು-ಇವರೆನ್ನದೆ ಎಲ್ಲರು ಸೇರುಟ್ಟಿದ್ದಾರೆ. ಈ ಯಶಸ್ಸಿನ ಕಿರೀಟಕ್ಕೆ ಇದೀಗ ಹೊಸತೊಂದು ಗರಿ ಸೇರುತ್ತಿದೆ. ಒಂದು ಸಿನಿಮಾಗೆ ಬೆಳ್ಳಿತೆರೆ ಮೇಲಿನ ಓಟ ಎಷ್ಟು ಮುಖ್ಯವೋ ಕಿರುತೆರೆಗಳಲ್ಲಿನ ಆಟವು ಕೂಡ ಅಷ್ಟೇ ಮುಖ್ಯ. ಸದ್ಯ ‘ಜೇಮ್ಸ್’ ಚಿತ್ರದ ಸ್ಯಾಟೆಲೈಟ್ ಹಕ್ಕುಗಳು ಮಾರಾಟವಾಗಿದ್ದು, ಬಜಾರಿನಲ್ಲಿನ ಬೇಡಿಕೆಯಿಂದ ‘ಜೇಮ್ಸ್’ ಮುಗಿಲಿನೆತ್ತರಕ್ಕೆ ಏರುತ್ತಿದೆ. ಮೂಲಗಳ ಪ್ರಕಾರ ಚಿತ್ರದ ಸ್ಯಾಟೆಲೈಟ್ಹಕ್ಕನ್ನು ಸ್ಟಾರ್ ಸುವರ್ಣ ವಾಹಿನಿಯವರು ಬರೋಬ್ಬರಿ 13.80 ಕೋಟಿಗೆ ಖರೀದಿಸಿದ್ದಾರೆ. ಇದು ಈವರೆಗಿನ ಅತ್ಯಧಿಕವಾದ ‘ಕೆ ಜಿ ಎಫ್:ಚಾಪ್ಟರ್ 1’ನ 6ಕೋಟಿಗಿಂತ ದುಪ್ಪಟ್ಟರಷ್ಟಾಗಿದೆ. ಇನ್ನು ಒಟಿಟಿಗಾಗಿ ‘ಸೋನಿ ಡಿಜಿಟಲ್’ ಸಂಸ್ಥೆ 40ಕೋಟಿ ಹಣವನ್ನ ಸುರಿದಿದೆ ಎನ್ನಲಾಗಿದೆ. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ‘ಜೇಮ್ಸ್’ ಅಬ್ಬರಿಸುತಿದ್ದು, ಅಲ್ಲಿನ ಸ್ಯಾಟೆಲೈಟ್ ರೈಟ್ಸ್ ಗಳು ಕೂಡ ಯಾವುದಕ್ಕೂ ಕಡಿಮೆ ಇಲ್ಲ. ತೆಲುಗಿನ ‘ಮಾ ಟಿವಿ’ 5.70 ಕೋಟಿ ಕೊಟ್ಟರೆ, ತಮಿಳಿನಲ್ಲಿ ‘ಸನ್ ನೆಟ್ವರ್ಸೋನಿಗೆ 5.17 ಕೋಟಿಯಂತೆ. ಇನ್ನು ಮಲಯಾಳಂನವರು 1.2 ಕೋಟಿಗೆ, ಭೋಜಪುರಿಯವರು 5.50 ಕೋಟಿ ಕೊಟ್ಟು ಖರೀದಿಸಿದ್ದಾರೆ. ಹಿಂದಿ ಭಾಷೆಯಲ್ಲಿ ‘ಸೋನಿ ನೆಟ್ವರ್ಕ್’ 2.70 ಕೋಟಿಗೆ ಕೊಂಡುಕೊಂಡಿದೆ. ‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ‘ಜೇಮ್ಸ್’ ಚಿತ್ರದ ಸೃಷ್ಟಿಕರ್ತರು. ಕಿಶೋರ್ ಪಾತಿಕೊಂಡ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ಹಾಗೆ ವಿ. ಹರಿಕೃಷ್ಣ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಅಪ್ಪು ಅವರ ಜೊತೆಗೆ ಶಿವಣ್ಣ, ರಾಘಣ್ಣ ಮಾತ್ರವಲ್ಲದೆ ಶರತ್ ಕುಮಾರ್, ಶ್ರೀಕಾಂತ್, ಅವಿನಾಶ್, ರಂಗಾಯಣ ರಘು ಮುಂತಾದ ದೊಡ್ಡ ಕಲಾವಿದರ ದಂಡೆ ಚಿತ್ರದಲ್ಲಿದೆ.

‘ಜೇಮ್ಸ್’ ಕಿರೀಟಕ್ಕೆ ಇದೀಗ ಇನ್ನೊಂದು ಗರಿ. Read More »

ಡಾಕ್ಟರ್ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಮುಗುಳುನಗೆ ಹುಡುಗಿ

ಕನ್ನಡ ಸಿನಿರಂಗದಲ್ಲಿ ನಟನಾ ಕಂಪು ಪಸರಿಸಿದ ಅನೇಕರು ಇಂದು ಪರಭಾಷೆಯಸಿನಿರಂಗದಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಕೂಡಾ ಅದಕ್ಕೆ ಹೊರತಾಗಿಲ್ಲ. ತಮಿಳು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ರಂಗನಾಥ್ ಇದೀಗ ನಟ ಅಥರ್ವ ಜೊತೆ ತಮಿಳು ಸಿನಿಮಾ ಮಾಡುತ್ತಿದ್ದಾರೆ. ತೆಲುಗು ಸ್ಕ್ರಿಪ್ಟ್ ಗಳನ್ನು ಕೇಳುತ್ತಿದ್ದಾರೆ. ಇದರ ಮಧ್ಯೆ ತಮ್ಮ ಹೃದಯಕ್ಕೆ ಹತ್ತಿರವಾಗಿರುವ ವಿಶೇಷ ಸಿನಿಮಾ 02ದಲ್ಲಿ ಆಶಿಕಾ ಅಭಿನಯಿಸುತ್ತಿದ್ದಾರೆ. “ಈ ಸಿನಿಮಾ ನನಗೆ ಎರಡು ರೀತಿಯಲ್ಲಿ ಹತ್ತಿರವಾಗಿದೆ. ನಾನು ದ್ವಿತ್ವ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಬೇಕಿತ್ತು. ಆದರೆ ನಾನು ಅವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಬರುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಮುಖ್ಯವಾಗಿ ಅಪ್ಪು ಸರ್ ಅವರು ನಾನೇ ಈ ಪಾತ್ರ ಮಾಡಬೇಕೆಂದು ಉತ್ಸುಕತೆ ತೋರಿದ್ದರು. ಈ ಸಿನಿಮಾದಲ್ಲಿ ನಟಿಸಲು ಕರೆ ಬಂದಾಗ ನನಗೆ ಇಲ್ಲ ಎನ್ನಲು ಕಾರಣ ಇರಲಿಲ್ಲ” ಎಂದಿದ್ದಾರೆ. O2 ಸಿನಿಮಾ ಮೆಡಿಕಲ್ ಥ್ರಿಲ್ಲರ್ ಆಗಿದ್ದು ಹೊಸಬರಾದ ಪ್ರಶಾಂತ್ ರಾಜ್ ಹಾಗೂ ರಾಘವ ನಾಯಕ್ ನಿರ್ದೇಶನ ಮಾಡುತ್ತಿದ್ದಾರೆ. ಆಶಿಕಾ ಹಾಗು ಪ್ರವೀಣ್ ತೇಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. “ಇದು ನನ್ನ ಮೊದಲ ಕಂಟೆಂಟ್ ಆಧಾರಿತ ಚಿತ್ರವಾಗಿದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ ನಂತರ ಇದು ನನಗೆ ವಿಭಿನ್ನವಾಗಿತ್ತು. ಆರಂಭದಲ್ಲಿ ಈ ಪ್ರಕಾರದ ಸಿನಿಮಾದಲ್ಲಿ ಹೇಗೆ ನಟಿಸುತ್ತೇನೆ ಎಂದು ಯೋಚಿಸಿದೆ. ನಂತರ ಚಲನಚಿತ್ರಕ್ಕೆ ಪ್ರವೇಶಿಸುವ ಅಂಶವನ್ನು ಅರಿತುಕೊಂಡೆ. ಸ್ಟಾರ್ ಆಗಿ ಮಾತ್ರ ಅಲ್ಲ. ಪರ್ಫಾಮರ್ ಆಗಿ ಪ್ರವೇಶಿಸುವುದನ್ನು ಅರಿತೆ. ಇವೆರಡರ ವಿವೇಚನಾಶೀಲ ಮಿಶ್ರಣವಿರಬೇಕು. ಈ ಸಿನಿಮಾದಲ್ಲಿ ನಾನು ಉದ್ದಟತನದ ನಾಯಕಿಯಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಉದ್ದೇಶವಿರುವ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಾಳೆ” ಎಂದಿದ್ದಾರೆ. ಪ್ರಸ್ತುತ ಸಿನಿಮಾದಲ್ಲಿ ಆಶಿಕಾ ಮೊದಲ ಬಾರಿಗೆ ಡಾಕ್ಟರ್ ಪಾತ್ರ ಮಾಡುತ್ತಿದ್ದಾರೆ. “ಕಥೆ ತುಂಬಾ ಉತ್ತಮ ಕಂಟೆಂಟ್ ಹೊಂದಿದೆ. ಅಪ್ಪು ಸರ್ ಅವರ ದೃಷ್ಟಿಕೋನದ ಭಾಗವಾಗಿರುವುದಕ್ಕೆ ಅದೃಷ್ಟ ಮಾಡಿದ್ದೇನೆ. ಅಪ್ಪು ಸರ್ ಅವರು ರೂಪಿಸಿರುವ ದಿಟ್ಟ ಹಾಗೂ ಆಸಕ್ತಿಕರ ಆಯ್ಕೆ ನಿಮಗೆ ಸಿನಿಮಾ ನೋಡಿದಾಗ ಕಾಣಬಹುದು” ಎಂದಿದ್ದಾರೆ.

ಡಾಕ್ಟರ್ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಮುಗುಳುನಗೆ ಹುಡುಗಿ Read More »

ಅಪ್ಪು ನೆನದು ಭಾವುಕರಾದ ಶೈನ್ ಶೆಟ್ಟಿ ಹೇಳಿದ್ದೇನು?

ಕರುನಾಡಿನ ಪ್ರೀತಿಯ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ರಿಲೀಸ್ ಆಗಿದ್ದು ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪುನೀತ್ ಅವರ ಕೊನೆ ಸಿನಿಮಾ ಇದಾಗಿದ್ದು, ಅಪ್ಪು ಇಲ್ಲದೇ ಬಿಡುಗಡೆ ಆಗಿರುವ ಈ ಚಿತ್ರ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಪುನೀತ್ ಅವರ ಸ್ನೇಹಿತನ ಪಾತ್ರ ನಿರ್ವಹಿಸಿರುವ ಶೈನ್ ಶೆಟ್ಟಿ ಅಪ್ಪು ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಶೈನ್ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದು ಅವರು ಈ ಸಿನಿಮಾವನ್ನು ತ್ರಿವೇಣಿ ಥಿಯೇಟರ್ ನಲ್ಲಿ ಅಭಿಮಾನಿಗಳ ಜೊತೆ ವೀಕ್ಷಿಸಿದರು‌. ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಶೈನ್“ನನ್ನನ್ನು ಕೈ ಹಿಡಿದು ದಾರಿ ತೋರಿಸಿದ ದೇವರು ಅಪ್ಪು. ಅವರು ಇಲ್ಲ ಅನ್ನುವುದೇ ತುಂಬಾ ಬೇಸರ ಆಗುತ್ತಿದೆ. ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ, ಸದಾ ಕಾಲ ನಮ್ಮ ಜೊತೆಯಲ್ಲಿ ಇದ್ದಾರೆ ಅನ್ನಿಸುತ್ತಿದೆ” ಎಂದು ಹೇಳುತ್ತಾರೆ ಶೈನ್ ಶೆಟ್ಟಿ. “ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಟಿಸಿರುವುದು, ಅವರೊಂದಿಗೆ ಕೆಲದ ಮಾಡಿರುವುದು ನನ್ನ ಪಾಲಿಗೆ ಸುವರ್ಣಾವಕಾಶ ಎಂದು ಹೇಳಿದರೆ ತಪ್ಪಾಗಲಾರದು. ನನಗೆ ಮಾತ್ರವಲ್ಲದೇ ಯಾರೇ ಹೊಸಬರಾಗಲೀ, ಅವರಿಗೆ ಅವಕಾಶ ಕೊಡುವುದುರಲ್ಲಿ ಅವರು ಯಾವತ್ತೂ ಮುಂದೆ. ಜೊತೆಗೆ ಸದಾ ಅವರು ಹೊಸಬರಿಗೆ ಸ್ಫೂರ್ತಿ ನೀಡುತ್ತಿದ್ದರು” ಎಂದು ಪುನೀತ್ ಅವರನ್ನು ನೆನಪಿಸಿಕೊಂಡಿದ್ದಾರೆ ಶೈನ್ ಶೆಟ್ಟಿ.

ಅಪ್ಪು ನೆನದು ಭಾವುಕರಾದ ಶೈನ್ ಶೆಟ್ಟಿ ಹೇಳಿದ್ದೇನು? Read More »

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಭಾವನಾ ಮೆನನ್

ಮಲೆಯಾಳಂ ನ ಜನಪ್ರಿಯ ನಟಿ ಭಾವನಾ ಮೆನನ್ ಕೆಲವು ವರ್ಷಗಳಿಂದ ಮಾಲಿವುಡ್ ನಿಂದ ದೂರವಿದ್ದರು. ಈಗ ಅವರು ಮತ್ತೆ ನಟನೆಯತ್ತ ಮರಳಿದ್ದು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಾನು ಅಭಿನಯಿಸಲಿರುವ ಚಿತ್ರದ ಪೋಸ್ಟರ್ ನ್ನು ಕೂಡಾ ಹಂಚಿಕೊಂಡಿದ್ದಾರೆ. ಪೋಸ್ಟರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. “ಎನ್ಟಿಕಕ್ಕಕ್ಕೋರು ಪ್ರೇಮಂರ್ಡನ್” ಎಂಬ ಸಿನಿಮಾದಲ್ಲಿ ಭಾವನಾ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ವಿಭಿನ್ನವಾಗಿದೆ. ಆದಿಲ್ ಅಶ್ರಫ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು ಸಿನಿಮಾದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಭಾವನಾ ಮೆನನ್ ಅವರ ಈ ಸಿನಿಮಾದ ಮೊದಲ ಪೋಸ್ಟರ್ ನ್ನು ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಬಿಡುಗಡೆ ಮಾಡಿರುವುದು ವಿಶೇಷ. ಜೊತೆಗೆ ಭಾವನಾ ಅವರಿಗೆ ಮಾಲಿವುಡ್ ಗೆ ವೆಲ್ಕಂ ಹೇಳಿದ್ದಾರೆ. ಮಮ್ಮುಟ್ಟಿ ಮಾತ್ರವಲ್ಲದೇ ಭಾವನಾ ಅವರ ಚಿತ್ರರಂಗದ ಸ್ನೇಹಿತರು, ಅಭಿಮಾನಿಗಳು, ಕುಟುಂಬ ಸದಸ್ಯರು ಭಾವನಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. 2017ರಲ್ಲಿ ಭಾವನಾ ಲೈಂಗಿಕ ದೌರ್ಜನ್ಯ ಎದುರಿಸಿದ್ದರು. ಹೀಗಾಗಿ ಮಲೆಯಾಳಂನಲ್ಲಿ ನಟಿಸಿರಲಿಲ್ಲ. ಸ್ನೇಹಿತರು, ಹಿತೈಷಿಗಳಿಂದ ಆಫರ್ಸ್ ಬಂದರೂ ನಟಿಸದೇ ಇರುವುದು ಅವರ ನಿರ್ಧಾರವಾಗಿತ್ತು ಎಂದು ಭಾವನಾ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಭಾವನಾ ಮೆನನ್ Read More »

ಶೀಘ್ರದಲ್ಲೇ ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ

ರಾಜ್ಯಾದ್ಯಂತ ಇಂದು(ಮಾರ್ಚ್ 17) ಹಬ್ಬವನ್ನೇ ಆಚರಿಸುತ್ತಿರೋ ಪ್ರತಿಯೊಬ್ಬ ಅಪ್ಪು ಅಭಿಮಾನಿಗೂ ಹೊಸತೊಂದು ಸಿಹಿವಿಚಾರ ಕಾಯುತ್ತಿದೆ. ‘ಜೇಮ್ಸ್’ ಚಿತ್ರಕ್ಕೆ ಎಲ್ಲೆಡೆ ಭರಪೂರ ಸ್ವಾಗತ ಸಿಗುತ್ತಿದೆ. ಅದ್ದೂರಿಯಾಗಿ ‘ಜೇಮ್ಸ್’ ಜೊತೆಗೆ ಅಪ್ಪುವಿನ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು, ಅಪ್ಪುವನ್ನ ಬೆಳ್ಳಿತೆರೆ ಮೇಲೆ ಕಂಡು ಸಂತುಷ್ಟರಾಗಿದ್ದಾರೆ. ಈಗ ಈ ಸಂತಸಕ್ಕೆ ಹೊಸತೊಂದು ಸೇರ್ಪಡೆಯನ್ನ ಮಾನ್ಯಮುಖ್ಯಮಂತ್ರಿಗಳು ಮಾಡಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆಯೇ, ಕರ್ನಾಟಕ ಸರ್ಕಾರ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕನ್ನಡ ನಾಡಿನ ಪ್ರಜೆಗೆ ಸರ್ಕಾರದಿಂದ ಸಿಗಬಹುದಾದಂತ ಅತ್ಯಂತ ಹಿರಿಮೆಯ ಗೌರವ ‘ಕರ್ನಾಟಕ ರತ್ನ’ವನ್ನು ನೀಡಿ ಸನ್ಮಾನಿಸಲು ನಿರ್ಧಾರ ಮಾಡಿತ್ತು. ಈಗ ಆ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದಾರೆ. ಅತಿ ಶೀಘ್ರದಲ್ಲೇ ಅಪ್ಪುವಿಗೆ ಸಕಲ ಮರ್ಯಾದೆಗಳಿಂದ ‘ಕರ್ನಾಟಕ ರತ್ನ’ ನೀಡಲಿದ್ದಾರಂತೆ. ಇನ್ನು ಖಾತ್ರಿಯಾಗದ ದಿನಾಂಕವನ್ನ ಇಡಲೆಂದೆ ಸಮಿತಿಯೊಂದನ್ನ ಸೃಷ್ಟಿಸಲಿದ್ದಾರಂತೆ. ರಾಜ್ ಕುಟುಂಬದ ಜೊತೆಗೆ ಮಾತನಾಡಿ ಚಿಂತನೆ ನಡೆಸಿ ಆ ಕುಟುಂಬದ ಗೌರವ ಇಮ್ಮಡಿಯಾಗುವಂತ ಕಾರ್ಯಕ್ರಮವೊಂದನ್ನ ಮಾಡಲಾಗುವುದು ಎಂದಿದ್ದಾರೆ. ಈಗಾಗಲೇ ಮೈಸೂರು ವಿಶ್ವವಿದ್ಯಾಲಯ ಅಪ್ಪುವಿನ ಸಿನಿಮಾ ಹಾಗು ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಮರಣೋತ್ತರ ‘ಡಾಕ್ಟರೇಟ್’ ಪದವಿ ನೀಡಿ ಗೌರವಿಸುವುದಾಗಿ ವಿವಿಯ ಕುಲಪತಿಗಳಾದ ಪ್ರೊ ಹೇಮಂತ್ ಕುಮಾರ್ ಅವರು ಹೇಳಿದ್ದು, ಇದೇ ಮಾರ್ಚ್ 22ರಂದು ನಡೆಯಲಿರುವ 102ನೇ ಘಟಿಕೋತ್ಸವದಲ್ಲಿ ಅಪ್ಪುವನ್ನ ‘ಡಾಕ್ಟರೇಟ್’ ಪದವಿಯಿಂದ ಗೌರವಿಸಲಾಗುವುದು.

ಶೀಘ್ರದಲ್ಲೇ ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ Read More »

ರಾಜ್ಯಾದ್ಯಂತ ಇಂದು ಅಪ್ಪು ಹಬ್ಬ, ‘ಜೇಮ್ಸ್’ ಜೊತೆಗೆ

ಕನ್ನಡದ ‘ಯುವರತ್ನ’, ‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರದ್ದು ಇಂದು 47ನೇ ವರ್ಷದ ಜನುಮದಿನೋತ್ಸವ. 1975ರಲ್ಲಿ ರಾಜ್ ದಂಪತಿಯ ಕುಡಿಯಾಗಿ ಹುಟ್ಟಿದ ಇವರು ಇಂದು ಕರುನಾಡ ಮನೆಯ ಮಗನಾಗಿ ಉಳಿದುಕೊಂಡಿದ್ದಾರೆ. ಉಸಿರು ಹೋದರು ಹೆಸರು ಹಸಿರಾಗಿರುವಂತ ಪವರ್ ಸ್ಟಾರ್ ನ ಜನ್ಮದಿನವನ್ನ ರಾಜ್ಯಾದ್ಯಂತ ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುಂಚೆಯೇ ಟಿಕೆಟ್ ಗಳು ಒಮ್ಮೆಲೆ ಮಾರಾಟವಾಗಿದ್ದವು, ನಡುರಾತ್ರಿಯಲ್ಲಿಟ್ಟಿದ್ದ ಶೋಗಳು ಕೂಡ ಹೌಸ್ ಫುಲ್ ಆಗುವುದರ ಜೊತೆಗೆ ಚಿತ್ರಮಂದಿರದ ಸುತ್ತಮುತ್ತ ಪಟಾಕಿಯ ಸದ್ದೇ ನಿನಾದವಾದಂತೆ ಕೇಳಿಬರುತ್ತಿತ್ತು. ಒಂದು ಕನ್ನಡ ಸಿನಿಮಾದ ಬಿಡುಗಡೆಗೆ ಇಷ್ಟೊಂದು ಸಡಗರವಾಗಿ ದಶಕಗಳೇ ಕಳೆದಿದ್ದವೇನೋ. ಪ್ರಪಂಚದಾದ್ಯಂತ ಅತೀ ಹೆಚ್ಚು ಶೋಗಳನ್ನು ಕಂಡಂತ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ, ಬೆಂಗಳೂರಿನಲ್ಲೇ 800ಕ್ಕೂ ಹೆಚ್ಚು ಶೋಗಳು, ಮೈಸೂರಿನಲ್ಲಿದ್ದ 86 ಶೋಗಳಲ್ಲಿ ಸಂಪೂರ್ಣ ಟಿಕೆಟ್ ಗಳ ಮಾರಾಟ, ಕರ್ನಾಟಕದಾದ್ಯಂತ ಒಂದು ಸಾವಿರಕ್ಕೂ ಹೆಚ್ಚಿನ ಶೋಗಳು. ಇಷ್ಟೆಲ್ಲಾ ಹೆಗ್ಗಳಿಕೆ ಇರುವುದು, ಪುನೀತ್ ರಾಜಕುಮಾರ್ ಅವರು ಕೊನೆಯ ಬಾರಿ ಸಂಪೂರ್ಣ ಮಟ್ಟದ ನಾಯಕನಾಗಿ ನಟಿಸಿರುವ ‘ಜೇಮ್ಸ್’ ಚಿತ್ರದ್ದು. ಅಪ್ಪು ಹುಟ್ಟಿದ ದಿನವೇ ಸಿನಿಮಾ ತೆರೆಕಂಡಿದ್ದು ಸದ್ಯ ಎಲ್ಲ ಪರದೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವಿಶೇಷ ಸಿನಿಮಾವನ್ನ ಅಪ್ಪು ಅಭಿಮಾನಿಗಳು ಇನ್ನಷ್ಟು ವಿಶೇಷವಾಗಿಸಿದ್ದಾರೆ. ಹಲವೆಡೆ ಚಿತ್ರಮಂದಿರಗಳಲ್ಲಿ 17ನೇ ನಂಬರ್ ನ ಕುರ್ಚಿಯನ್ನು ಖಾಲಿ ಬಿಡಲಾಗಿದೆ, ಅಂದರೆ ಅಪ್ಪುವಿಗಾಗಿ ಮೀಸಲಿಡಲಾಗಿದೆ. ಅಪ್ಪು ಜನುಮದಿನದ ಸಲುವಾಗಿ ಸಾವಿರಾರು ಅಭಿಮಾನಿಗಳು ನೇತ್ರಾದಾನ ಹಾಗು ರಕ್ತದಾನದಲ್ಲಿ ತೊಡಗಿಕೊಂಡಿದ್ದಾರೆ. ಹಲವೆಡೆ ಅನ್ನದಾನ ಕೂಡ ನಡೆಯುತ್ತಿದೆ. ಇನ್ನು ಬೆಂಗಳೂರಿನ ವೀರೇಶ ಚಿತ್ರಮಂದಿರದಲ್ಲಿ ಶಿವರಾಜಕುಮಾರ್ ಹಾಗು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಒಂದಾಗಿ ಸುಮಾರು 30 ಕಟ್-ಔಟ್ ಗಳನ್ನ ಏರಿಸಿದ್ದಾರೆ. ಬೆಂಗಳೂರಿನ ವೀರಭದ್ರೇಶ್ವರ ಥೀಯೇಟರ್ ನಲ್ಲಿ ಬೆಳಗಿನ ಜಾವ 6 ಗಂಟೆಗೆ ಸಿನಿಮಾ ನೋಡಲು ಬಂದವರಿಗೆ ಕಾಫಿ-ಬಿಸ್ಕತ್, 9ರ ಹೊತ್ತಿಗೆ ಬಂದವರಿಗೆ ಉಪಹಾರ, ಮಧ್ಯಾಹ್ನ ಬಿರಿಯಾನಿ ಹಾಗು ಸಂಜೆಗೆ ಗೋಬಿ ಮಂಚೂರಿ ಮುಂತಾದವುಗಳನ್ನ ಉಚಿತವಾಗಿ ಹಂಚಲಾಗಿದೆ. ಇಂದು ಬಿಡುಗಡೆಯಾದ ‘ಜೇಮ್ಸ್’ ಚಿತ್ರ ಇಂದು ಪಾನ್-ಇಂಡಿಯನ್ ಸಿನಿಮಾ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮಲಯಾಳಂ ಹಾಗು ಹಿಂದಿ ಭಾಷೆಯಲ್ಲೂ ಸಿನಿಮಾ ತೆರೆಕಾಣುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಜೊತೆಗೆ ಚರಣ್ ರಾಜ್ ಸಂಗೀತ, ಕಿಶೋರ್ ಪಾತಿಕೊಂಡ ಅವರ ನಿರ್ಮಾಣದಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾದರೆ, ಶ್ರೀಕಾಂತ್, ಸಾಧು ಕೋಕಿಲ, ಚಿಕ್ಕಣ್ಣ ಮುಂತಾದ ದೊಡ್ಡ ತಾರಾಗಣವೇ ತುಂಬಿದೆ. ವಿಶೇಷವೆಂದರೆ ಶಿವರಾಜಕುಮಾರ್ ಹಾಗು ರಾಘವೇಂದ್ರ ರಾಜಕುಮಾರ್ ಅವರು ಕೂಡ ಈ ಚಿತ್ರಕ್ಕಾಗಿ ಅಪ್ಪುವಿನೊಂದಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಅಪ್ಪುವಿನ ಪಾತ್ರಕ್ಕೆ ಸ್ವತಃ ಶಿವರಾಜಕುಮಾರ್ ದನಿಯಗಿದ್ದಾರೆ. ಅಭಿಮಾನಿಗಳ ಆರಾಧ್ಯದೈವ ಅಪ್ಪು ಸದ್ಯ ನಮ್ಮೊಂದಿಗಿಲ್ಲ. ಆದರೆ ಅವರ ಆಚಾರಗಳು-ಆದರ್ಶಗಳು ಸದಾ ಜೀವಂತ. ಆ ನಗು ಎಲ್ಲರ ಕಂಗಳಿಗೂ ಸದಾ ಚಿರಪರಿಚಿತ.

ರಾಜ್ಯಾದ್ಯಂತ ಇಂದು ಅಪ್ಪು ಹಬ್ಬ, ‘ಜೇಮ್ಸ್’ ಜೊತೆಗೆ Read More »

ಅಪ್ಪು ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ – ಪ್ರಿಯಾ ಆನಂದ್

ಜೇಮ್ಸ್ ತಂಡದ ಪ್ರತಿಯೊಬ್ಬರೂ ಹೇಳುವಂತೆ ನಟಿ ಪ್ರಿಯಾ ಆನಂದ್ ಕೂಡಾ ಅಪ್ಪು ಜೊತೆ ಕೆಲಸ ಮಾಡಿರುವುದು ವಿಶೇಷ ಎಂದಿದ್ದಾರೆ. ಪ್ರಿಯಾ ಆನಂದ್ ಪುನೀತ್ ಅವರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಾರೆ. ” ಅಪ್ಪು ಅವರೊಡನೆ ಕಳೆದ ಯಾವುದೇ ಸಮಯವಾದರೂ ವಿಶೇಷ. ಅವರನ್ನು ಭೇಟಿಯಾದ ಅಥವಾ ಅವರನ್ನು ದೂರದಿಂದ ನೋಡಿದ ಅಥವಾ ಅವರೊಂದಿಗೆ ಸಂವಹನ ನಡೆಸಿದ ಪ್ರತಿಯೊಬ್ಬರೂ ಕೂಡಾ ಅಪ್ಪು ಚಿಂತನಶೀಲ, ಪ್ರೀತಿ, ಆಹ್ಲಾದಕರ, ದಯೆ ಹಾಗೂ ಉದಾರತನ ಹೊಂದಿರುವವರು ಎಂದು ತಿಳಿದಿದ್ದಾರೆ”ಎನ್ನುತ್ತಾರೆ. “ಪುನೀತ್ ಅವರೊಂದಿಗೆ ನಾನು ನಟಿಸಿದ ರಾಜಕುಮಾರ ಸಿನಿಮಾ ಹಿಟ್ ಆಗಿತ್ತು. ಸಂತೋಷ್ ಆನಂದ್ ರಾಮ್ ಅವರ ಬಳಿ ರಾಜಕುಮಾರ ಸಿನಿಮಾದಲ್ಲಿ ಕೆಲಸ ಮಾಡುವಾಗ ಉತ್ತಮ ಸಿನಿಮಾ ಎಂದು ಹೇಳಿದ್ದೆ. ಜೇಮ್ಸ್ ಮಾಡುವಾಗಲೂ ಇದೇ ಭಾವನೆ ಇದೆ. ಅಪ್ಪು ಅಭಿಮಾನಿಗಳಿಗೆ ಇದು ದೊಡ್ಡ ಹಬ್ಬ. ಇದು ಅಭಿಮಾನಿಗಳು ಅವರನ್ನು ಪ್ರೀತಿಸುವ ರೀತಿಯನ್ನು ತೋರಿಸುತ್ತದೆ. ಇದರಲ್ಲಿ ಆಕ್ಷನ್ ಕಾಮಿಡಿ ಭಾವನೆಗಳು ಎಲ್ಲ ಇವೆ. ಸ್ವಾಮಿಗಾರು ಅವರ ಫೋಟೋಗ್ರಾಫಿ ಅದ್ಭುತವಾಗಿದೆ” ಎಂದಿದ್ದಾರೆ. ಜೇಮ್ಸ್ ಸಿನಿಮಾದ ಮೇಲೆ ಹಲವು ನಿರೀಕ್ಷೆಗಳಿವೆ. ” ಈ ಚಿತ್ರ ನಮ್ಮ ಪಾತ್ರವನ್ನು ಮೀರಿದೆ. ಕ್ಯಾಮೆರಾ ಆನ್ ಹಾಗೂ ಆಫ್ ಆಗಿದ್ದಾಗ ನಿಜವಾದ ನಾಯಕನನ್ನು ಆಚರಿಸುವ ದಾರಿಯಿದು. ಈ ಚಿತ್ರದಲ್ಲಿ ದೊಡ್ಡ ಹಾಗೂ ಸಣ್ಣ ಪಾತ್ರ ನಿರ್ವಹಿಸಿದ್ದಾರೆ ಎಂಬುದರ ಬಗ್ಗೆ ಯಾರೂ ಗಮನ ವಹಿಸುವುದಿಲ್ಲ. ಪ್ರತಿಯೊಬ್ಬರೂ ಈ ಸಿನಿಮಾದ ಭಾಗವಾಗಿರುವುದಕ್ಕೆ ಗೌರವ ಹೊಂದಿದ್ದಾರೆ. ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಾಗೂ ಅಪ್ಪು ಜೊತೆ ಸಮಯ ಕಳೆದಿರುವುದಕ್ಕೆ ಕೃತಜ್ಞರಾಗಿರುತ್ತೇವೆ. ನಾನು ಇದುವರೆಗೂ ಭೇಟಿ ಮಾಡಿದ ಉತ್ತಮ ವ್ಯಕ್ತಿ ಅಪ್ಪು. ನಾನು ಅಪ್ಪು ಬಳಿ ಹೇಳುತ್ತಿದ್ದೆ ಅವರಂತೆ ಯಾರೂ ಮನುಷ್ಯರು ಮಾಡಲಾರರು. ಅದೇ ಅವರನ್ನು ಅಷ್ಟೊಂದು ದೊಡ್ಡ ತಾರೆಯನ್ನಾಗಿ ಮಾಡಿದೆ. ನಿಜ ಅಲ್ವಾ? ದೊಡ್ಡ ತಾರೆಯರಿದ್ದಾರೆ. ಆದರೆ ಅವರಂತೆ ಯಾರೂ ಇಲ್ಲ” ಎಂದಿದ್ದಾರೆ. “ನಾನು ಯಾವಾಗಲೂ ನಾನು ಎಷ್ಟೊಂದು ಅದೃಷ್ಟಶಾಲಿ ಎಂದುಕೊಳ್ಳುತ್ತಿದ್ದೆ. ಸಾಮಾನ್ಯ, ಮಧ್ಯಮವರ್ಗದ ಹುಡುಗಿ ಇಲ್ಲಿ ಬಂದು ರಾಜಕುಮಾರದಲ್ಲಿ ಹಾಗೂ ಈಗ ಜೇಮ್ಸ್ ಸಿನಿಮಾದಲ್ಲಿ ಕೆಲಸ ಮಾಡಿದೆ. ಅಪ್ಪು ಅವರ ನಗುವನ್ನು ಮರೆಯಲು ಸಾಧ್ಯವಿಲ್ಲ. ಅದು ಪ್ರಾಮಾಣಿಕ ಹಾಗೂ ಹೃದಯದಿಂದ ಬಂದ ನಗು. ಅವರ ಅಗಲಿಕೆ ತುಂಬಾ ನಷ್ಟ. ಎಲ್ಲರೂ ಅಪ್ಪು ಅವರ ಸಿನಿಮಾವನ್ನು ನೋಡಲು ಇಷ್ಟಪಡುತ್ತಾರೆ ಎಂದು ಗೊತ್ತಿದೆ” ಎಂದಿದ್ದಾರೆ. “ನಾನು ಹಿಂದಿ,ತೆಲುಗು, ತಮಿಳಿನಲ್ಲಿ ನಟಿಸುತ್ತಿದ್ದೇನೆ. ನಾನು ಕನ್ನಡ ಸಿನಿಮಾದಲ್ಲಿ ನಟಿಸಲು ಕಾಯುವುದಿಲ್ಲ. ನನ್ನ ಫೇವರಿಟ್ ಇಂಡಸ್ಟ್ರಿ ” ಎಂದಿದ್ದಾರೆ ಪ್ರಿಯಾ ಆನಂದ್.

ಅಪ್ಪು ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ – ಪ್ರಿಯಾ ಆನಂದ್ Read More »

ಬಣ್ಣದ ಲೋಕದಲ್ಲಿ ಮುಂದಿನ ಹಂತಕ್ಕೆ ಭಡ್ತಿ ಪಡೆದ ಮೇಘಾ ಶೆಟ್ಟಿ..

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕಿ ಅನು ಸಿರಿಮನೆ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದ ಕರಾವಳಿ ಕುವರಿ ಮೇಘಾ ಶೆಟ್ಟಿ ತಮ್ಮ ಮುದ್ದಾದ ಅಭಿನಯದಿಂದ ಜನರ ಮನಗೆದ್ದ ಚೆಲುವೆ. ಕಿರುತೆರೆಯಲ್ಲಿ ಕಡಿಮೆ ಅವಧಿಯಲ್ಲಿ ಖ್ಯಾತಿ ಗಳಿಸಿರುವ ಮೇಘಾ ಈಗ ನಿರ್ಮಾಪಕಿಯಾಗುತ್ತಿದ್ದಾರೆ. ಇಷ್ಟು ದಿನ ನಟಿಯಾಗುಇ ಕರುನಾಡಿನಾದ್ಯಂತ ಮನೆ ಮಾತಾಗಿರುವ ಮೇಘಾ ಶೆಟ್ಟಿ ಇದೀಗ ನಿರ್ಮಾಪಕಿಯಾಗಿ ಭಡ್ತಿ ಪಡೆಯಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಕೆಂಡಸಂಪಿಗೆಯ ನಿರ್ಮಾಪಕಿಯಾಗಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ. ಈ ವಿಚಾರ ತಿಳಿದ ಅಭಿಮಾನಿಗಳು ಇದೇನು ಇಷ್ಟು ಬೇಗ ಧಾರಾವಾಹಿ ನಿರ್ಮಾಣ ಮಾಡುವಷ್ಟು ಬೆಳೆದು ನಿಂತಿದ್ದಾರೆ. ಅದೃಷ್ಟ ಎಂದರೆ ಹೀಗಿರಬೇಕು ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು‌. ದಿಲ್ ಪಸಂದ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆಗೆ ತೆರೆ ಹಂಚಿಕೊಳ್ಳಲಿರುವ ಮೇಘಾ ಶೆಟ್ಟಿ ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ. ಎಂ ಕೆ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ ಕಲ್ಲೂರಿ ನಿರ್ಮಾಣ ಮಾಡಿರುವ ನೋಡು ಶಿವ ಆಲ್ಬಂ ಸಾಂಗ್ ನಲ್ಲಿ ಈಕೆ ಹೆಜ್ಜೆ ಹಾಕಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ‌

ಬಣ್ಣದ ಲೋಕದಲ್ಲಿ ಮುಂದಿನ ಹಂತಕ್ಕೆ ಭಡ್ತಿ ಪಡೆದ ಮೇಘಾ ಶೆಟ್ಟಿ.. Read More »

Scroll to Top