Karnataka Bhagya

ದೇಶ

ಮತ್ತೆ ಒಂದಾದ ನ್ಯಾಚುರಲ್ ಸ್ಟಾರ್ ಹಾಗೂ ಮಹಾನಟಿ

ಶ್ಯಾಮ್ ಸಿಂಗ ರಾಯ್ ಸಿನಿಮಾದ ಸಕ್ಸಸ್ ನಂತ್ರ ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಮಹಾನಟಿ ಒಟ್ಟಿಗೆ ಪ್ರೇಕ್ಷರ ಮುಂದೆ ಬರಲಿದ್ದಾರೆ….ನಾನಿ ಅಭಿನಯದ ದಸರಾ ಸಿನಿಮಾ ಸೆಟ್ಟೆರಿದ್ದು ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾನಿ ಅವ್ರಿಗೆ ಜೋಡಿ ಆಗಲಿದ್ದಾರೆ‌… ಹಳ್ಳಿ ಸೊಗಡಿನ ಕಥೆಯನ್ನ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದು ಶ್ರೀಕಾಂತ್ ಒಡೆಲಾ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ… ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು. ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಅಡಿಯಲ್ಲಿ ಸುಧಾಕರ್ ಚೆರುಕುರಿ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ನಾನಿ ಮತ್ತು ಕೀರ್ತಿ ಸುರೇಶ್ ಈ ಹಿಂದೆ ನೇನು ಲೋಕಲ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು, ಅದು ಬ್ಲಾಕ್ಬಸ್ಟರ್ ಸಕ್ಸಸ್ ಕಂಡಿತ್ತು…ಇದೀಗ ಈ ಯಶಸ್ವಿ ಜೋಡಿ ಎರಡನೇ ಬಾರಿ ಒಟ್ಟಿಗೆ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ…. ಫೆಬ್ರವರಿ 16 ರಂದು, ನಾನಿ ಮತ್ತು ಕೀರ್ತಿ ಸುರೇಶ್ ಅವರ ದಸರಾ ಚಿತ್ರದ ಪೂಜೆ ಸಮಾರಂಭ ನಡೆದಿದ್ದು ಮಾರ್ಚ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ಸುಕುಮಾರ್, ಕಿಶೋರ್ ತಿರುಮಲ, ವೇಣು ಉಡುಗುಲ ಮತ್ತು ಶರತ್ ಮಾಂಡವ ಇನ್ನು ಅನೇಕರು ನಾನಿ‌ ಹಾಗೂ ಕೀರ್ತಿಗೆ ವಿಷ್ ಮಾಡಿದ್ರು ಅವರನ್ನು . ನಿರ್ದೇಶಕ ಶ್ರೀಕಾಂತ್ ಅವರ ತಂದೆ ಚಂದ್ರಯ್ಯ ಕ್ಯಾಮರಾ ಸ್ವಿಚ್ ಆನ್ ಮಾಡಿದರೆ, ನಾನಿ ಮತ್ತು ಕೀರ್ತಿ ಸುರೇಶ್ ಮೊದಲ ಕ್ಲಾಪ್ ಮಾಡಿದರು.

ಮತ್ತೆ ಒಂದಾದ ನ್ಯಾಚುರಲ್ ಸ್ಟಾರ್ ಹಾಗೂ ಮಹಾನಟಿ Read More »

ಕಿರುತೆರೆಗೆ ಕಾಲಿಟ್ಟ ಲವ್ಲಿ ಕಪಲ್ಸ್… ಕಾರಣ ಇಲ್ಲಿದೆ ನೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯು ಇತ್ತೀಚೆಗಷ್ಟೇ ಯಶಸ್ವಿ 809 ಸಂಚಿಕೆ ಪೂರೈಸಿದೆ‌. ಇದೀಗ ಧಾರಾವಾಹಿಯಲ್ಲಿ ಹೊಸ ಕಥೆಯು ಆರಂಭವಾಗಿದ್ದು ಸದ್ಯ ಮದುವೆಯ ಸಂಚಿಕೆಗಳು ಪ್ರಸಾರವಾಗುತ್ತಿವೆ. ಇದರ ಜೊತೆಗೆ ಮದುವೆಯ ಸಂಚಿಕೆಗಾಗಿ ವಿಶೇಷ ಅತಿಥಿಗಳನ್ನು ಸ್ವಾಗತಿಸಲು ನಮ್ಮನೆ ಯುವರಾಣಿ ತಂಡ ಸಜ್ಜಾಗಿದೆ. ಅ ಅತಿಥಿಗಳು ಯಾರು ಎಂಬ ಕುತೂಹಲ ನಿಮಗಿದೆಯೇ? ಅವರು ಬೇರಾರೂ ಅಲ್ಲ, ಕನ್ನಡ ಸಿನಿರಂಗದ ಲವ್ಲಿ ಕಪಲ್ ಎಂದೇ ಜನಪ್ರಿಯತೆ ಪಡೆದಿರುವಹಿತಾ ಚಂದ್ರಶೇಖರ್ ಹಾಗೂ ಕಿರಣ್ ಶ್ರೀನಿವಾಸ್. ಮದುವೆಯ ವಿಶೇಷ ಸಂಚಿಕೆಯಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಡಲಿದ್ದಾರೆ ಲವ್ಲಿ ಕಪಲ್. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿರುವ ಈ ಜೋಡಿ ಡ್ಯಾನ್ಸ್ ಕೂಡಾ ಮಾಡಲಿದ್ದಾರೆ. ಇನ್ನು ರಾಜ್ ಗುರು ಕುಟುಂಬದ ಕುಡಿ ಪ್ರಣಾಮ್ ಹಾಗೂ ನವ್ಯಾ ಮದುವೆಯಲ್ಲಿ ರೋಚಕ ತಿರುವು ಕೂಡಾ ಇರಲಿದೆ. ಧಾರಾವಾಹಿ ತಂಡ ಕೂಡ ಬಿಡುವಿಲ್ಲದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಳದಿ ಶಾಸ್ತ್ರದಿಂದ ತೊಡಗಿ ಇತರ ಶಾಸ್ತ್ರಗಳ ಶೂಟಿಂಗ್ ಮಾಡುತ್ತಿದ್ದು ಭರಪೂರ ಮನರಂಜನೆಯೊಂದಿಗೆ ತಿರುವುಗಳು ಇರಲಿವೆ. ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ಮದುವೆ ಶೂಟಿಂಗ್ ನಡೆಯುತ್ತಿದ್ದು ಧಾರಾವಾಹಿ ಕಲಾವಿದರು ಹಾಗೂ ಸಿಬ್ಬಂದಿ ವರ್ಗ ಬೀಡುಬಿಟ್ಟಿದೆ.

ಕಿರುತೆರೆಗೆ ಕಾಲಿಟ್ಟ ಲವ್ಲಿ ಕಪಲ್ಸ್… ಕಾರಣ ಇಲ್ಲಿದೆ ನೋಡಿ Read More »

ಮದುವೆ ಬಗ್ಗೆ ತಮ್ಮ ನಿರ್ಧಾರ ತಿಳಿಸಿದ ರಶ್ಮಿಕಾ ಮಂದಣ್ಣ…

ಕರ್ನಾಟಕದ ಕ್ರಶ್ ಎಂದೇ ಜನಪ್ರಿಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡದ ಜೊತೆಗೆ ಪರಭಾಷೆಯ ಸಿನಿರಂಗದಲ್ಲಿ ಸಕತ್ ಬ್ಯುಸಿ. ಕಳೆದ ವರ್ಷ ರಿಲೀಸ್ ಆದ ಪುಷ್ಪ ಸಿನಿಮಾ ರಶ್ಮಿಕಾ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ನೀಡಿತು. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲಿಯೂ ಮೋಡಿ ಮಾಡುತ್ತಿರುವ ಕೊಡಗಿನ ಕುವರಿ ಅಮಿತಾಭ್ ಬಚ್ಚನ್ , ಸಿದ್ದಾರ್ಥ್ ಮಲ್ಲೋತ್ರಾ ಜೊತೆ ನಟಿಸುತ್ತಿದ್ದಾರೆ. ಇನ್ನು ನಟನೆಯ ಹೊರತಾಗಿ ರಶ್ಮಿಕಾ ಅವರು ಖಾಸಗಿ ಬದುಕಿನ ಬಗ್ಗೆಯೂ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ರಶ್ಮಿಕಾ ಮಂದಣ್ಣ ಮುಕ್ತವಾಗಿ ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಜೊತೆಗಿನ ಬ್ರೇಕಪ್ ನ ಬಳಿಕ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು ಥಳಕು ಹಾಕಿಕೊಂಡಿತ್ತು. ಇದೀಗ ಮದುವೆಯ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ “ಪ್ರೀತಿ ಎಂದರೆ ನನ್ನ ಪ್ರಕಾರ ಒಬ್ಬರಿಗೊಬ್ಬರು ಪರಸ್ಪರ ಗೌರವ ಕೊಡುವುದು. ಒಬ್ಬರ ಮೇಲೆ ಸುರಕ್ಷಿತ ಭಾವ ಮೂಡುವುದೇ ಪ್ರೀತಿ. ಮಾತ್ರವಲ್ಲ ಪ್ರೀತಿಯೆನ್ನುವುದು ಭಾವನೆಗಳಿಗೆ ಸಂಬಂಧ ಪಟ್ಟದ್ದು ಹೌದು. ಅದೇ ಕಾರಣದಿಂದ ಆ ಪ್ರೀತಿಯನ್ನು ವಿವರಿಸಲು ಅಸಾಧ್ಯ” ಎನ್ನುತ್ತಾರೆ. “ಇನ್ನು ಕೂಡಾ ನಾನು ಮದುವೆಯ ಬಗ್ಗೆ ಯಾವುದೇ ರೀತಿಯ ಯೋಚನೆ ಮಾಡಲಿಲ್ಲ. ಯಾಕೆಂದರೆ ಮದುವೆಯಾಗಲು ನಾನು ಇನ್ನು ತುಂಬಾ ಚಿಕ್ಕವಳು‌. ಸೋ ಮದುವೆಯ ಬಗ್ಗೆ ಇನ್ನು ಸ್ಪಷ್ಟವಾದ ನಿರ್ಧಾರ ಮಾಡಲಿಲ್ಲ” ಎಂದು ಹೇಳುತ್ತಾರೆ ಕರ್ನಾಟಕದ ಕ್ರಶ್.

ಮದುವೆ ಬಗ್ಗೆ ತಮ್ಮ ನಿರ್ಧಾರ ತಿಳಿಸಿದ ರಶ್ಮಿಕಾ ಮಂದಣ್ಣ… Read More »

ದರ್ಶನ್ ಸಿನಿಮಾದ ರೇಂಜೇ ಬೇರೆ…

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ… ಇತ್ತೀಚೆಗಷ್ಟೇ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು…ಬರ್ತಡೆ ದಿನ ದರ್ಶನ್ ಅವ್ರ ಸಾಕಷ್ಟು ಚಿತ್ರಗಳು ಅನೌನ್ಸ್ ಆಗಿದೆ…ಈಗಾಗಲೇ ಕ್ರಾಂತಿ , ತರುಣ್ ನಿರ್ದೇಶನದ ಸಿನಿಮಾ ಅದರೊಟ್ಟಿಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ … ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅಕ್ಕಪಕ್ಕದ ಇಂಡಸ್ಟ್ರಿಗೂ ಪರಿಚಿತರಾಗಿರುವ ದರ್ಶನ್ ಅವರ ಸಿನಿಮಾವನ್ನ ಚೆನ್ನೈನ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದೆ… ಚೆನೈನ ಖ್ಯಾತ ಅಭಿಷೇಕ್ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ರಮೇಶ್ ಪಿ ಪಿಳ್ಳೈ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ಫೆಬ್ರವರಿ 16 ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ ಬಿಡುಗಡೆ ಮಾಡಿ ನಿರ್ಮಾಪಕರು ಶುಭ ಕೋರಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಯನ್ನು‌ ಸದ್ಯದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.

ದರ್ಶನ್ ಸಿನಿಮಾದ ರೇಂಜೇ ಬೇರೆ… Read More »

ದರ್ಶನ್ 56ನೇ ಸಿನಿಮಾದ ಸ್ಪೆಷಾಲಿಟಿ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 56ನೇ ಸಿನಿಮಾ ಅನೌನ್ಸ್ ಆಗಿದೆ…ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು ಸಿನಿಮಾದ ಟೈಟಲ್ ಅನ್ನು ಬಿಟ್ಟುಕೊಟ್ಟಿಲ್ಲ ಸಿನಿಮಾತಂಡ… ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಪ್ರತಿಷ್ಠಿತ ರಾಕ್ ಲೈನ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ನಾಯಕರಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿದ್ದಾರೆ. ತರುಣ್ ಕಿಶೋರ್ ಸುಧೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. D56 ಎಂಬ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲಾಗಿದೆ…ಪೋಸ್ಟರ್ ನಲ್ಲಿ ಕ್ಯೂರಿಯಾಸಿಟಿ ಮೂಡಿಸೋ ಡೈಲಾಗ್ ರಿವಿಲ್ ಮಾಡಿದ್ದು ಸಿನಿಮಾ‌ಬಗ್ಗೆ ಈಗಲೇ ಕುತೂಹಲ ಮೂಡಿಸುವಂತಾಗಿದೆ…ಇನ್ನು ಶೀರ್ಷಿಕೆ ಸೇರಿದಂತೆ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ರಿವಿಲ್ ಮಾಡಲು ಸಿನಿಮಾತಂಡ ಸಿದ್ದತೆ ಮಾಡಿಕೊಂಡಿದೆ….

ದರ್ಶನ್ 56ನೇ ಸಿನಿಮಾದ ಸ್ಪೆಷಾಲಿಟಿ… Read More »

ಕೋವಿಡ್ ದಿನಗಳನ್ನು ನೆನಪಿಸಿಕೊಂಡ ರಾಧಿಕಾ ನಾರಾಯಣ್ ಹೇಳಿದ್ದೇನು ಗೊತ್ತಾ?

ರಾಧಿಕಾ ನಾರಾಯಣ್ ಸಿನಿ ಪ್ರಿಯರಿಗೆ ತೀರಾ ಪರಿಚಿತ ಹೌದು. ಇತ್ತೀಚೆಗಷ್ಟೇ ಕೋವಿಡ್ ಗೆ ತುತ್ತಾಗಿದ್ದ ರಾಧಿಕಾ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಕೊಂಚ ಗ್ಯಾಪ್ ನ ನಂತರ ಮತ್ತೆ ನಟನೆಯತ್ತ ಮುಖ ಮಾಡಿರುವ ರಾಧಿಕಾ ನಾರಾಯಣ್ ಚೇತರಿಸಿಕೊಂಡು ಸದ್ಯ ಶಿವಾಜಿ ಸುರತ್ಕಲ್ 2 ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. “ನಟನೆಯನ್ನು ನಾನು ತುಂಬಾನೇ ಪ್ರೀತಿಸುತ್ತೇನೆ. ಇದೀಗ ಮತ್ತೆ ನಾನು ಪ್ರೀತಿಸುತ್ತಿರುವ ಕೆಲಸದತ್ತ ಮರಳಿರುವುದು ನನಗೆ ಖುಷಿ ತಂದಿದೆ‌. ಡಿಸೆಂಬರ್ ನಲ್ಲಿ ಶಿವಾಜಿ ಸುರತ್ಕಲ್ ಸೀಕ್ವೆಲ್ ಗೆ ಕೊನೆಯ ಶಾಟ್ ನಲ್ಲಿ ಭಾಗವಹಿಸಿದ್ದೆ. ಇದೀಗ ಈ ವರ್ಷ ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದೇನೆ. ಒಂದಷ್ಟು ದಿನಗಳ ಗ್ಯಾಪ್ ನ ನಂತರ ಮತ್ತೆ ನಟಿಸುತ್ತಿರುವುದು ಸಂತಸ ತಂದಿದೆ” ಎಂದಿದ್ದಾರೆ ರಾಧಿಕಾ ನಾರಾಯಣ್. ಕೋವಿಡ್ ಸವಾಲನ್ನು ಎದುರಿಸಿದ ಬಗೆಯನ್ನು ಮಾತನಾಡಿರುವ ರಾಧಿಕಾ ” ಇದು ನನ್ನ ಕುಟುಂಬಕ್ಕೆ ಸವಾಲಿನ ಹಂತವಾಗಿತ್ತು. ತಂದೆಗೂ ಕೋವಿಡ್ ತಗುಲಿತ್ತು. ನಾವಿಬ್ಬರೂ ಬೇರೆ ಬೇರೆ ಕೋಣೆಗಳಲ್ಲಿ ಐಸೋಲೇಟ್ ಆದ್ವಿ. ತಾಯಿಗೆ ನೆಗೆಟಿವ್ ಬಂದಿತ್ತು. ನಮ್ಮಿಬ್ಬರನ್ನೂ ಅವರು ನೋಡಿಕೊಂಡರು. ನಾವು ಮನೆಯಲ್ಲಿ ಕಿಟ್ ತಂದು ಟೆಸ್ಟ್ ಮಾಡಿಸಿದೆವು. ಸ್ನೇಹಿತರು ಹಾಗೂ ಡಾಕ್ಟರ್ ನೈತಿಕ ಬೆಂಬಲವಾಗಿ ನಿಂತರು. ಇಂತಹ ಜನರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ” ಎಂದಿದ್ದಾರೆ. “ಈ ಸಂದರ್ಭದಲ್ಲಿ ಯೋಗ ನಾನು ಚೇತರಿಕೆ ಕಾಣಲು ಸಹಾಯಕವಾಯಿತು” ಎಂದು ಹೇಳಿರುವ ರಾಧಿಕಾ ನಾರಾಯಣ್ “ನಾನು ಪ್ರಾಣಾಯಾಮ ಹಾಗೂ ಧ್ಯಾನ ಮಾಡಲು ಪ್ರಾರಂಭಿಸಿದೆ. ಇದು ಬಲ ಹಾಗೂ ಏಕಾಗ್ರತೆ ಪಡೆಯಲು ಸಹಾಯ ಮಾಡಿದವು. ಮೊದಲು ನನಗೆ ದೇಹದ ಚಲನೆ ಮಾಡಲು ಕಷ್ಟವಾಗುತ್ತಿತ್ತು. ಆದರೆ ಈಗ ಸುಲಭವಾಗುತ್ತಿದೆ. ನನಗೆ ಧ್ಯಾನದ ಮಹತ್ವ ಅರಿವಾಯಿತು. ನಾನು ಈ ತಂತ್ರಗಳನ್ನು ನನ್ನ ಆಪ್ತ ಸ್ನೇಹಿತರಿಗೆ ಹೇಳುತ್ತಿದ್ದೇನೆ”ಎಂದಿದ್ದಾರೆ. ಶಿವಾಜಿ ಸುರತ್ಕಲ್ 2 ಮಾತ್ರವಲ್ಲದೇ ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಚಿತ್ರದಲ್ಲಿ ಡಿಸಿಪಿಯಾಗಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕೋವಿಡ್ ದಿನಗಳನ್ನು ನೆನಪಿಸಿಕೊಂಡ ರಾಧಿಕಾ ನಾರಾಯಣ್ ಹೇಳಿದ್ದೇನು ಗೊತ್ತಾ? Read More »

ಸೆಟ್ಟೇರಿತು ರಾಜವರ್ಧನ್ ಅಭಿನಯದ ಹೊಸ ಸಿನಿಮಾ

ಬಿಚ್ಚುಗತ್ತಿ ಸಿನಿಮಾ ಬಿಡುಗಡೆಯಾದ ನಂತರ ನಟ ರಾಜವರ್ಧನ್ ಯಾವುದೇ ಸಿನಿಮಾದ ಸುದ್ದಿಯಿಲ್ಲದೇ ಸೈಲಾಂಟ್ ಆಗಿದ್ರು… ಸತತ 2ವರ್ಷದ ನಂತರ ಮತ್ತೆ ರಾಜವರ್ಧನ್ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಟ್ಟಿದ್ದಾರೆ.. ಹೌದು ರಾಜವರ್ಧನ್ ಅಭಿನಯದ ಹೊಸ ಸಿನಿಮಾ ಸೆಟ್ಟೇರಲಿದೆ… ಚಿತ್ರಕ್ಕೆ ಹಿರಣ್ಯ ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದು ಚಿತ್ರಕ್ಕೆ ಪ್ರವೀಣ್ ಆಯುಕ್ತ ಆಕ್ಷನ್ ಕಟ್ ಹೇಳುತ್ತಿದ್ದಾರೆ… ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದು ,ವಿಘ್ನೇಶ್ವರ ಹಾಗೂ ವಿಜಯ್ ಕುಮಾರ್ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ… ಇನ್ನು ವಿಶೇಷ ಅಂದರೆ ಈ ಚಿತ್ರದ ಶೀರ್ಷಿಕೆ ಹಿರಣ್ಯ ಎಂಬುವುದು ನಟ ಧನಂಜಯ ಬಳಿ ಇತ್ತಂತೆ… ನಂತರ ರಾಜವರ್ಧನ್ ತಮ್ಮ ಕಥೆಗೆ ಈ ಶೀರ್ಷಿಕೆ ಸೂಕ್ತವಾಗುತ್ತದೆ ಎಂದು ತಿಳಿಸಿದ್ದಾರೆ ಆನಂತರ ಧನಂಜಯ ಗೆಳೆಯನಿಗಾಗಿ ಈ ಟೈಟಲ್ ಬಿಟ್ಟುಕೊಟ್ಟಿದ್ದಾರೆ… ಇಂದು ಮುಹೂರ್ತ ಮುಗಿಸಿರುವ ಸಿನಿಮಾತಂಡ ಇದೇ ತಿಂಗಳ 21ರಿಂದ ಚಿತ್ರೀಕರಣ ಆರಂಭ ಮಾಡಲಿದೆ…..

ಸೆಟ್ಟೇರಿತು ರಾಜವರ್ಧನ್ ಅಭಿನಯದ ಹೊಸ ಸಿನಿಮಾ Read More »

ಕ್ಯೂ ಸಿನಿಮಾಗೆ ಬಂದ್ರು ಅಮ್ಮವ್ರ ಗಂಡ ಚಿತ್ರದ ನಾಯಕಿ ಮಗಳು

ಮೈನೇ ಪ್ಯಾರ್ ಕಿಯಾ ಸಿನಿಮಾದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ಭಾಗ್ಯಶ್ರೀ… ಕನ್ನಡದಲ್ಲಿ ಅಮ್ಮಾವ್ರ ಗಂಡ ಚಿತ್ರದಲ್ಲಿ ನಟಿಸಿ ಕನ್ನಡ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದರು…ಈಗ ಆ ನಟಿಯ ಮಗಳು ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ… ಹೌದು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುದೀಂದ್ರ ಅಭಿನಯದ ಸಿನಿಮಾಗೆ ಭಾಗ್ಯಶ್ರೀ ಮಗಳು ನಾಯಕಿಯ ಆಯ್ಕೆ ಆಗಿದ್ದು …ಈ ಮೂಲಕ‌ ಆವಂತಿಕಾ ಅವರನ್ನು ನಾಗಶೇಖರ್ ತಮ್ಮ ಸಿನಿಮಾಗೆ ಕರೆತರುತ್ತಿದ್ದಾರೆ ..ಈಗಾಗಲೇ ಅವಂತಿಕಾ ಅವರು ಮಿಥ್ಯ ಎಂಬ ವೆಬ್ ಸೀರೀಸ್ ನಲ್ಲಿ ಅಭಿನಯ ಮಾಡಿದ್ದು ಸದ್ಯ ಈಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮೂಲಕ ತಮ್ಮ ಖಾತೆ ತೆರೆಯುತ್ತಿದ್ದಾರೆ… ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾರಂಗದಲ್ಲಿಯೂ ಅವಂತಿಕಾ ಅಭಿನಯ ಮಾಡೋದಕ್ಕೆ ಶುರು ಮಾಡಿದ್ದು… ಅದರ ಜೊತೆಗೆ ಕ್ಯೂ ಚಿತ್ರದಲ್ಲಿ ಕೂಡ ಆ್ಯಕ್ಟ್ ಮಾಡಲಿದ್ದಾರೆ… ಕ್ಯೂ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದ, ಪ್ರೇಮಿಗಳ ದಿನಾಚರಣೆಗಾಗಿ ಸಿನಿಮಾತಂಡ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿತ್ತು. ಸಿನಿಮಾಗೆ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದು ವಿಜಯ್ ಸಾವನೂರ್ ಮತ್ತು ನಾಗ್ ಶೇಖರ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ… ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಗಿದೆ ..ಕ್ಯೂ ಸಿನೆಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಆಗುತ್ತಿದೆ

ಕ್ಯೂ ಸಿನಿಮಾಗೆ ಬಂದ್ರು ಅಮ್ಮವ್ರ ಗಂಡ ಚಿತ್ರದ ನಾಯಕಿ ಮಗಳು Read More »

ದೀಪಿಕಾ ನಂತ್ರ ಆಲಿಯಾ ಮೇಲೆ ಬಿತ್ತು‌ ಕಂಗನಾ ಕಣ್ಣು

ಮೈಮಾಟ ಪ್ರದರ್ಶನ ಮತ್ತು ಅಶ್ಲೀಲತೆ ಎಂದಿಗೂ ಕೆಟ್ಟ ಸಿನಿಮಾಗಳನ್ನ ಬದುಕಿಸಲಾರದು ಎಂದು ಇತ್ತೀಚೆಗಷ್ಟೇ ಬಿಡುಗಡೆಯಾದ ಗೆಹ್ರಾಯಿಯಂ ಚಿತ್ರದ ಬಗ್ಗೆ ಕಂಗನಾ ರಣಾವತ್ ಗುಡುಗಿದ್ದರು …ಚಿತ್ರದಲ್ಲಿ ದೀಪಿಕಾ ಪಡುಕೋಣೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ರೀತಿಯ ಕಮೆಂಟ್ ಮಾಡಿದರೂ ಕಂಗನಾ… ಈಗ ಸದ್ಯ ಕಂಗನಾ ಕಣ್ಣು ಆಲಿಯಾ ಭಟ್ ಮೇಲೆ ಬಿದ್ದಿದೆ., ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ಗಂಗೂಬಾಯಿ ಕಾಥೇವಾಡಿ ಚಿತ್ರದ ಟ್ರೇಲರ್ ನೋಡಿದ ನಂತರ ಕಂಗನಾ ಸಿನಿಮಾ ಬಗ್ಗೆ ಕಮೆಂಟ್ ಮಾಡಿದ್ದಾರೆ… ಗಂಗೂಬಾಯಿ ಕಾಥೆವಾಡಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಯಶಸ್ಸು ಕಂಡಿದೆ.. ಅದಷ್ಟೇ ಅಲ್ಲದೆ ಟ್ರೇಲರ್ ವೈರಲ್ ಆಗಿದ್ದು‌ ಬಹಳಷ್ಟು ಜನರು ಆಲಿಯಾ ರನ್ನ ಅನುಕರಣೆ ಮಾಡಿ ಸೋಷಿಯಲ್ ಮೀಡಿಯಾ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿದ್ದಾರೆ… ಇತ್ತೀಚೆಗಷ್ಟೇ ಕಿಯಾರ ಖನ್ನಾ ಎಂಬ ಪುಟ್ಟ ಹುಡುಗಿಯೊಬ್ಬಳು ಆಲಿಯಾ ತರದ ಬಟ್ಟೆ ಧರಿಸಿ ಅದೇ ತರ ಮೇಕಪ್ ಮಾಡಿಕೊಂಡು ಬಾಯಿಲಿ ಕಡ್ಡಿ ಇಟ್ಟುಕೊಂಡು ಡೈಲಾಗ್ ಹೇಳುವ ವಿಡಿಯೋ ಭಾರೀ ವೈರಲ್ ಆಗಿತ್ತು…. ಇದನ್ನ ಕಂಡ ಕಂಗನಾ ಕೆಂಡಮಂಡಲವಾಗಿದ್ದಾರೆ… ಒಬ್ಬ ವೇಶ್ಯೆಯನ್ನು ಸಣ್ಣ ಹುಡುಗಿಯೊಬ್ಬಳು ಅನುಕರಣೆ ಮಾಡುವುದು ಎಷ್ಟು ಸರಿ… ಬಾಯಲ್ಲಿ ಬೀಡಿ ಇಟ್ಟುಕೊಂಡು ಕೆಟ್ಟ ಸಂಭಾಷಣೆ ಹೇಳುವುದು ಎಷ್ಟು ಸರಿ… ಆ ಚಿಕ್ಕ ವಯಸ್ಸಿಗೆ ಅವಳಿಗೆ ಇದೆಲ್ಲ ಬೇಕಿತ್ತಾ… ಅವಳು ಮಾತ್ರ ಇಂತಹ ಹಲವು ಮಕ್ಕಳು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ… ಮಕ್ಕಳು ಈ ರೀತಿ ವಿಡಿಯೋಗಳನ್ನು ಮಾಡುತ್ತಿರುವುದನ್ನ‌ ನೋಡಿ‌ ಸುಮ್ಮನಿರೋ ತಂದೆ ತಾಯಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು… ಗಂಗೂಬಾಯಿ ಸಿನಿಮಾದಲ್ಲಿ ಆಲಿಯಾ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ

ದೀಪಿಕಾ ನಂತ್ರ ಆಲಿಯಾ ಮೇಲೆ ಬಿತ್ತು‌ ಕಂಗನಾ ಕಣ್ಣು Read More »

ಅನುಪಮಾ ಗೌಡಗೆ ಸಿಕ್ತು ಸರ್ ಪ್ರೈಸ್ ಗಿಫ್ಟ್… ಗಿಫ್ಟ್ ಕೊಟ್ಟ ಸೃಜನ್ ಹೇಳಿದ್ದೇನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜನಮೆಚ್ಚುಗೆ ಗಳಿಸಿದ ಶೋ ಹೌದು. ಮಕ್ಕಳ ಮುಗ್ಧತೆ, ಕೀಟಲೆಗಳು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಿರಿಯ ನಟಿ ತಾರಾ ಅನುರಾಧಾ, ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ತೀರ್ಪುಗಾರರಾಗಿ ಇರುವ ಈ ಶೋವನ್ನು ಅನುಪಮಾ ಗೌಡ ನಿರೂಪಿಸುತ್ತಿದ್ದಾರೆ. ನವಿರಾದ ಮಾತಿನ ಜೊತೆಗೆ ಎಲ್ಲರನ್ನೂ ನಗಿಸುವ ಸೃಜನ್ ಲೋಕೇಶ್ ತಾರಾ, ಅನು ಪ್ರಭಾಕರ್ ಹಾಗೂ ಅನುಪಮಾ ಗೌಡ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇನ್ನು ಈ ಬಾರಿ ವಿಶೇಷ ಸಂಚಿಕೆ ಪ್ರಸಾರವಾಗಿದ್ದು ಸೃಜನ್ ಲೋಕೇಶ್ ಮೂವರಿಗೆ ಗಿಫ್ಟ್ ಕೊಟ್ಟಿದ್ದಾರೆ. ಈ ಬಾರಿ ತಾಯಂದಿರಿಗೆ ಮಕ್ಕಳು ಗಿಫ್ಟ್ ನೀಡುವ ಟಾಸ್ಕ್ ಕೊಡಲಾಗಿತ್ತು. ಈ ಟಾಸ್ಕ್ ನಿಂದ ಸ್ಫೂರ್ತಿ ಪಡೆದ ಸೃಜನ್ ಲೋಕೇಶ್ ಅವರು ಅನು ಪ್ರಭಾಕರ್ ಅವರಿಗೆ ಸರ, ತಾರಾ ಅವರಿಗೆ ಸೀರೆ ನೀಡಿದ್ದಾರೆ. ಇನ್ನು ನಿರೂಪಕಿ ಅನುಪಮಾ ಅವರಿಗೆ ವಿಶೇಷ ಗಿಫ್ಟ್ ಆಗಿ ಮೂಗುತಿ ನೀಡಿರುವ ಸೃಜನ್ ಲೋಕೇಶ್ ” ಜೀವನದಲ್ಲಿ ಅನುಪಮಾ ಅವರು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ನಾನು ಅನು ಅವರ ಸ್ಟ್ರಗಲ್ ನೋಡಿರುವೆ. ಸಣ್ಣ ವಯಸ್ಸಿನಲ್ಲಿಯೇ ಮನೆಯ ಜವಬ್ದಾರಿ ನೋಡಿಕೊಂಡಿರುವ ಅನುಪಮಾ ಗೌಡತಾಯಿ, ತಂಗಿಯನ್ನು ನೋಡಿಕೊಂಡಿದ್ದಾರೆ. ಇದು ಸಾಮಾನ್ಯವಾದ ಸಂಗತಿಯಲ್ಲ. ಅನುಪಮಾ ಬಗ್ಗೆ ಹೆಮ್ಮೆಯಾಗುತ್ತಿದೆ” ಎಂದು ಹೇಳಿದಾಗ ಅನುಪಮಾ ಭಾವುಕರಾಗಿ ಗಳಗಳನೇ ಅತ್ತರು. ಗಿಫ್ಟ್ ನೋಡಿ ಖುಷಿ ಪಟ್ಟರು.

ಅನುಪಮಾ ಗೌಡಗೆ ಸಿಕ್ತು ಸರ್ ಪ್ರೈಸ್ ಗಿಫ್ಟ್… ಗಿಫ್ಟ್ ಕೊಟ್ಟ ಸೃಜನ್ ಹೇಳಿದ್ದೇನು ಗೊತ್ತಾ? Read More »

Scroll to Top