Karnataka Bhagya

ಲೈಫ್ ಸ್ಟೈಲ್

ಹೆಸರು ಬದಲಾಯಿಸಿಕೊಂಡ ರಶ್ಮೀಕಾ ಹೊಸ ಹೆಸರೇನು ಗೊತ್ತಾ ?

ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಬಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳ ಬ್ಯುಸಿಯಾಗಿದ್ದಾರೆ ..ಇಷ್ಟು ದಿನಗಳ ಕಾಲ ರಶ್ಮಿಕಾ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಈ ನಟಿ ಈಗ ಹೆಸರು ಬದಲಾಯಿಸಿಕೊಂಡಿದ್ದ ಎನ್ನುವ ಅನುಮಾನಗಳು ಮೂಡುತ್ತಿವೆ… ಹೌದು ನಟಿ ರಶ್ಮಿಕಾ ಅಭಿನಯದ ಪುಷ್ಪ ಸಿನಿಮಾ ಓಟಿಟಿ ನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ…ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸಿನಿಮಾದ ಕೊನೆಯ ಭಾಗದಲ್ಲಿ ಬರುವ ಕಲಾವಿದರ ಹೆಸರಿನಲ್ಲಿ ರಶ್ಮಿಕಾ ಬದಲಾಗಿದೆ… ಈ ಹೆಸರನ್ನ ನೋಡಿದವರೆಲ್ಲರೂ ರಶ್ಮಿಕಾ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರ ಎಂದು ಆಶ್ಚರ್ಯ ಪಡುತ್ತಿದ್ದಾರೆ… ಅಷ್ಟಕ್ಕೂ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಹೆಸರು ರಶ್ಮಿಕಾ ಮಡೋನಾ ಎಂದು ಬದಲಾಗಿದೆ.. ಆದರೆ ರಶ್ಮಿಕಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿಲ್ಲ ಚಿತ್ರತಂಡ ಹೆಸರು ಕೊಡುವಾಗ ತಪ್ಪಾದ ರೀತಿಯಲ್ಲಿ ಕೊಟ್ಟಿರೋ ಕಾರಣ‌ ಈ ಎಡವಟ್ಟಿಗೆ ಕಾರಣವಾಗಿದೆ….

ಹೆಸರು ಬದಲಾಯಿಸಿಕೊಂಡ ರಶ್ಮೀಕಾ ಹೊಸ ಹೆಸರೇನು ಗೊತ್ತಾ ? Read More »

ಯಶ್ ಹುಟ್ಟುಹಬ್ಬಕ್ಕೆ ಬ್ಯೂಟಿಫುಲ್ ಗಿಫ್ಟ್ ಕೊಟ್ಟ ಐರಾ‌ ಮತ್ತು ಯಥರ್ವ್

ನ್ಯಾಷನಲ್ ಸ್ಟಾರ್ ಯಶ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.. ಸ್ಯಾಂಡಲ್ ವುಡ್ ಸ್ಟಾರ್ ಆಗಿದ್ದು ಈಗ ನ್ಯಾಷನಲ್ ಲೆವೆಲ್ ನಲ್ಲಿ ಗುರುತಿಸಿಕೊಂಡಿರುವ ಯಶ್ ಈ ವರ್ಷವೂ ಕೂಡ ಸಿಂಪಲ್ ಆಗಿ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ… ಕೋವಿಡ್ ಹೆಚ್ಚಾಗಿರುವ ಕಾರಣ ಕಳೆದ 2ವರ್ಷಗಳಿಂದ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ..ಈ ವರ್ಷ ಮಡದಿ ಹಾಗೂ ಮಕ್ಕಳ ಜೊತೆ ಯಶ್ ಬರ್ತಡೇ ಸೆಲೆಬ್ರಿಟ್ ಮಾಡಿದ್ದಾರೆ… ಅಪ್ಪನಿಗಾಗಿ ಐರಾ ಹಾಗೂ ಯಥರ್ವ್ ಬ್ಯೂಟಿಫುಲ್‌ ಆಗಿರೋ ಗಿಫ್ಟ್ ಕೂಡ ನೀಡಿದ್ದಾರೆ..ಐರಾ ಮತ್ತು ಯಥರ್ವ ಕೈ ನ ಬಣ್ಣದ ಪ್ರಿಂಟ್ ಯಶ್ ಗೆ ಉಡುಗೊರೆಯಾಗಿ ನೀಡಿದ್ದಾರೆ…ಪುಟ್ಟಮಕ್ಕಳ ಅಂದದ ಉಡುಗೊರೆ ಕಂಡು ರಾಕಿ ಬಾಯ್ ಸಖತ್ ಖುಷಿಯಾಗಿದ್ದಾರೆ…

ಯಶ್ ಹುಟ್ಟುಹಬ್ಬಕ್ಕೆ ಬ್ಯೂಟಿಫುಲ್ ಗಿಫ್ಟ್ ಕೊಟ್ಟ ಐರಾ‌ ಮತ್ತು ಯಥರ್ವ್ Read More »

ತೆರೆಮೇಲೆ ರಾಖಿ ಎಂಟ್ರಿ ಡೇಟ್ ಕನ್ಫರ್ಮ್ !

ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.. ಕೋವಿಡ್ ಸೊಂಕು ಹೆಚ್ಚಾಗಿರೋದರಿಂದ ಈ ವರ್ಷವೂ ಕೂಡಾ ರಾಕಿಂಗ್ ಸ್ಟಾರ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಮಾಡಿಕೊಳ್ಳುತ್ತಿಲ್ಲ… ಮನೆಯಲ್ಲೇ ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಯಶ್ ಅಭಿಮಾನಿಗಳು ಮನೆಯಿಂದಲೇ ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರುವಂತೆ ಮನವಿ ಮಾಡಿದ್ದರು…ಇನ್ನು ರಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಗೆ ಸಿದ್ಧವಾಗಿತ್ತು.. ಚಿತ್ರತಂಡ ಕೂಡ ಈಗಾಗಲೇ ಸಿನಿಮಾ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿದೆ… ಕೋವಿಡ್ ಸೋಂಕು ಹೆಚ್ಚಾದ ಕಾರಣ ಸಾಕಷ್ಟು ಸಿನಿಮಾಗಳು ಈಗಾಗಲೇ ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ ಅದರಂತೆಯೇ ಕೆಜಿಎಫ್ ಸಿನಿಮಾ ಕೂಡ ಬಿಡುಗಡೆ ದಿನಾಂಕ ಮುಂದೆ ಹೋಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳಿದ್ದರು…ಆದರೆ ಇಂದು ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಹೊಂಬಾಳೆ ಪ್ರೊಡಕ್ಷನ್ಸ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ‌ ಏಪ್ರಿಲ್ 14,ರಂದೆ ಬಿಡುಗಡೆ ಆಗಲಿದೆ ಎನ್ನುವ ಹಿಂಟ್ ಕೊಟ್ಟಿದ್ದಾರೆ..

ತೆರೆಮೇಲೆ ರಾಖಿ ಎಂಟ್ರಿ ಡೇಟ್ ಕನ್ಫರ್ಮ್ ! Read More »

ಅದಿತಿ ಪ್ರಭುದೇವ ಅವರ ಭಾವಿ ಪತಿ ಬಗ್ಗೆ ನಿಮಗೆಷ್ಟು ಗೊತ್ತು ?

ಸ್ಯಾಂಡಲ್ ವುಡ್ ನ ನಟಿ ಅದಿತಿ ಪ್ರಭುದೇವ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ… ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅದಿತಿ ಪ್ರಭುದೇವ ಈಗಾಗಲೆ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಪಕ್ಕದ ಮನೆ ಹುಡುಗಿ ಎನ್ನುವ ಫೀಲ್ ತರಿಸಿದ್ದಾರೆ ..ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರೋ ಅಧಿತಿಯ ಬಾವಿ ಪತಿಯ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ ಇಲ್ಲಿದೆ …. ಅದಿತಿ ಪ್ರಭುದೇವ ಹುಡುಗನ ಹೆಸರು ಯಶಸ್.. ಅದಿತಿ ಮದುವೆಯಾಗಲಿರೋ ಹುಡುಗನ ಹೆಸರು ಯಶಸ್..ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದ ಇವರಿಬ್ಬರು ಈಗ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ… ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ಅದಿತಿ ಸದ್ಯಕ್ಕಂತು ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳೊದಿಲ್ಲ ಅನ್ನೋ ಲೆಕ್ಕಾಚಾರ ಅಭಿಮಾನಿಗಳದಾಗಿತ್ತು .ಆದ್ರೆ ಹೊಸ ವರ್ಷದ ಹಿಂದಿನ ದಿನ ಅದಿತಿ ಹುಡುಗನ ಜೊತೆ ಫೋಟೋ ಶೇರ್ ಮಾಡೋ ಮೂಲಕ ನಿಶ್ಚಿತಾರ್ಥವಾದ ವಿಚಾರ ಬಹಿರಂಗ ಪಡೆಸಿದ್ದಾರೆ… ಕಾಫಿ ತೋಟದ ಮಾಲೀಕ ಯಶಸ್. ಅಧಿತಿಯನ್ನ ಕೈಹಿಡಿಯುತ್ತಿರೋ ಹುಡುಗ ಕಾಫಿ ತೋಟದ ಮಾಲೀಕನಾಗಿದ್ದಾರೆ..ಚಿಕ್ಕಮಗಳೂರಿನ ಹುಡುಗನಾಗಿದ್ದು ಕಾಫಿ ಬೆಳೆಗಾರನೂ ಹೌದು.. ಬಾವಿ ಪತಿ ಜೊತೆ ಹೊಸ ವರ್ಷ ಆಚರಣೆ ನಿಶ್ಚಿತಾರ್ಥ ಆಗಿದ್ದೆ ಆಗಿದ್ದು ಈಗ ಅಫಿಷಿಯಲ್ ಆಗಿ ಅದಿತಿ ಹಾಗೂ ಯಶಸ್ ಡೇಟಿಂಗ್ ಶುರು ಮಾಡಿದ್ದಾರೆ..ನ್ಯೂ ಇಯರ್ ಅನ್ನು ಅದಿತಿ ಬಾವಿ ಪತಿಯ ಮನೆಯಲ್ಲಿಯೇ ಕಳೆದಿದ್ದಾರೆ.. ಡೇಟಿಂಗ್ ಗಾಗಿ ಕಾಡನ್ನು ಆಯ್ಕೆ ಮಾಡಿಕೊಂಡ ಜೋಡಿ ಗಂಡನ ಮನೆಯನ್ನ ಒಂದು ಸುತ್ತು ಹಾಕಿದ ಅದಿತಿ ನಂತರ ಮನೆಯ ಹತ್ತಿರವೇ‌ ಇರೋ ಕಾಡಿನಲ್ಲಿ ಒಂದು ದಿನ ಕಳೆಯುವ ಮೂಲಕ ಡೇಟ್ ಮಾಡಿದ್ದಾರೆ..

ಅದಿತಿ ಪ್ರಭುದೇವ ಅವರ ಭಾವಿ ಪತಿ ಬಗ್ಗೆ ನಿಮಗೆಷ್ಟು ಗೊತ್ತು ? Read More »

ಬಾಯ್ ಫ್ರೆಂಡ್ ತೆಗೆದ ಫೋಟೋ ಶೇರ್ ಮಾಡಿದ ಆಲಿಯಾ !

ಬಾಲಿವುಡ್ ನಟಿ ಆಲಿಯಾ ಭಟ್ ಸದ್ಯ ಆರ್ ಆರ್ ಆರ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ… ಸದ್ಯ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿರುವ ಕಾರಣ ಆಲಿಯಾಗೆ ಕೊಂಚ ರಿಲೀಫ್ ಸಿಕ್ಕಿದ್ದು ಈಗ ಸಿಕ್ಕ ಸಮಯವನ್ನ ಪರ್ಸನಲ್ ಲೈಫ್ ಗಾಗಿ ಸ್ಪೆಂಡ್ ಮಾಡುತ್ತಿದ್ದಾರೆ…ಇನ್ಮು ಈ ವರ್ಷದ ನ್ಯೂ ಇಯರ್ ಅನ್ನ ಅರ್ಥಪೂರ್ಣವಾಗಿ ಕಳೆದಿದ್ದಾರೆ ಆಲಿಯಾ .. ಸಾಮಾನ್ಯವಾಗಿ ಸೆಲೆಬ್ರಿಟಿಗಳು ನ್ಯೂ ಇಯರ್ ಪಾರ್ಟಿ ಮಾಡುವ ಮೂಲಕ ಅಥವಾ ವಿದೇಶ ಪ್ರಯಾಣ ಮಾಡಿ ಅಲ್ಲಿ ಪಾರ್ಟಿ ಮಾಡಿ ಎಂಜಾಯ್ ಮಾಡುವ ಮೂಲಕ ಕಳೆಯುತ್ತಾರೆ …ಆದರೆ ಆಲಿಯಾ ಭಟ್ ಈ ಬಾರಿಯ ಹೊಸ ವರ್ಷವನ್ನು ಪ್ರಕೃತಿಯ ಮಡಿಲಲ್ಲಿ ಕಳೆದಿದ್ದಾರೆ…. ನ್ಯೂ ಇಯರ್ ಆದ ನಂತರ ತಮ್ಮ ಫೋಟೋಗಳನ್ನು ಶೇರ್ ಮಾಡಿರುವ ಆಲಿಯಾ ಭಟ್ ನನ್ನ ಬಾಯ್ ಫ್ರೆಂಡ್ ತೆಗೆದಿರುವ ಫೋಟೋಗಳಿವು ಎಂದು ಕ್ಯಾಪ್ಷನ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ…ಅಷ್ಟಕ್ಕೂ ಆಲಿಯಾ ತನ್ನ ಬಾಯ್ ಫ್ರೆಂಡ್ ಎಂದು ಹೇಳಿಕೊಂಡಿರುವುದು ರಣಬೀರ್ ಕಪೂರ್ ಅವರನ್ನ… ಹೌದು ಈ ಬಾರಿಯ ಹೊಸ ವರ್ಷವನ್ನು ಆಲಿಯಾ ಹಾಗೂ ರಣ್ಬೀರ್ ಕಪೂರ್ ಒಟ್ಟಿಗೆ ಸೆಲಬ್ರೇಟ್ ಮಾಡಿದ್ದಾರೆ …ಅಭಯಾರಣ್ಯದಲ್ಲಿ 1ದಿನ ಪೂರ್ತಿ ಕಳೆಯುವ ಮೂಲಕ ಹೊಸ ವರ್ಷದ ಆರಂಭ ಮಾಡಿದೆ ಈ ಬಿಟೌನ್ ನ ಜೋಡಿ ..

ಬಾಯ್ ಫ್ರೆಂಡ್ ತೆಗೆದ ಫೋಟೋ ಶೇರ್ ಮಾಡಿದ ಆಲಿಯಾ ! Read More »

ಬೆಳ್ಳಂ ಬೆಳ್ಳಿಗ್ಗೆ ರಶ್ಮಿಕಾರನ್ನ ತಬ್ಬಿ ಹಿಡಿದವರ್ಯಾರು ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ತಮಿಳು.ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ…ಹೊಸ ವರ್ಷವನ್ನ ಗೋವಾದಲ್ಲಿ ಫ್ರೆಂಡ್ಸ್ ಗಳ ಜೊತೆ ಕಳೆದು ಜಾಲಿ ಮೂಡ್ ನಲ್ಲಿಯೇ ರಶ್ಮಿಕಾ ಹೈದ್ರಾಬಾದ್ ಗೆ ವಾಪಾಸ್ ಆಗಿದ್ದಾರೆ… ಹೈದ್ರಾಬಾದ್ ಗೆ ವಾಪಾಸ್ ಆಗಿರೋ ರಶ್ಮಿಕಾ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ…ಹೌದು ರಶ್ಮಿಕಾರನ್ನ ಯಾರೋ‌ ತಬ್ಬಿಕೊಂಡಿರೋ ಫೋಟೋ ಇದಾಗಿದ್ದು…ಆದರೆ ನ್ಯಾಷನಲ್ ಕ್ರಶ್ ನ ಹಗ್ ಮಾಡಿರುವವರು ಯಾರು ಅನ್ನೋದು ಮಾತ್ರ ಸೀಕ್ರೆಟ್…

ಬೆಳ್ಳಂ ಬೆಳ್ಳಿಗ್ಗೆ ರಶ್ಮಿಕಾರನ್ನ ತಬ್ಬಿ ಹಿಡಿದವರ್ಯಾರು ? Read More »

ಹ್ಯಾಟ್ರಿಕ್ ಬಾರಿಸಲು ಸಿದ್ದನಾದ ಶೋಕ್ದಾರ್

ಸ್ಯಾಂಡಲ್‌ವುಡ್ ಶೋಕ್ದಾರ್ ಧನ್ವೀರ್ ಗೌಡ ಅಭಿನಯದ ಮೂರನೇ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ… ಬಜಾರ್‌ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಧ್ವನೀರ್,‌ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಗಳಿಸಿದ್ರು… ಸದ್ಯ ಬೈ ಟು ಲವ್ ಸಿನಿಮಾ‌ಕಂಪ್ಲೀಟ್ ಮಾಡಿರೋ ಧನ್ವೀರ್ ಈ ತಮ್ಮ ಮೂರನೇ ಚಿತ್ರಕ್ಕೆ ಸಜ್ಜಾಗಿದ್ದಾರೆ… ಕನ್ನಡ ಹಾಗೂ ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಧನ್ವೀರ್ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇದೊಂದು ಆಕ್ಷನ್ ಎಂಟರ್ ಟ್ರೈನರ್ ಕಥೆ ಹೊಂದಿರೋ ಸಿನಿಮಾ ಆಗಲಿದೆ… ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ಧನ್ವೀರ್ ಮೂರನೇ ಸಿನಿಮಾಗೆ ಬಂದವಾಳ ಹಾಕಲು ಸಜ್ಜಾಗಿದ್ದು ಸದ್ಯದಲ್ಲಿಯೇ ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ.

ಹ್ಯಾಟ್ರಿಕ್ ಬಾರಿಸಲು ಸಿದ್ದನಾದ ಶೋಕ್ದಾರ್ Read More »

ಟಾಲಿವುಡ್ ಸ್ಟಾರ್ ನಟನಿಗೂ ಕೋವಿಡ್ ಸೋಂಕು

ದೇಶದಾದ್ಯಂತ ಕೋವಿಡ್ ಮೂರನೇ ಅಲೆ ಆರಂಭವಾಗಿದೆ.‌.‌ಈಗಾಗಲೇ ಬಾಲಿವುಡ್ ಸ್ಟಾರ್ ನಟರನ್ನ ಬೆಂಬಿಡದೇ ಕಾಡುತ್ತಿರೋ ಕೋವಿಡ್ ಮಹಾಮಾರಿ ಸದ್ಯ ಟಾಲಿವುಡ್ ಅಂಗಳಕ್ಕೂ ಕಾಲಿಟ್ಟಿದೆ.. ಹೌದು ಟಾಲಿವುಡ್ ನ‌ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಕೋವಿಡ್ ಬಂದಿದೆ…ಈ ವಿಚಾರವನದನ ಸ್ವತಃ ಮಹೇಶ್ ಬಾಬು ಅವ್ರೇ ತಿಳಿಸಿದ್ದು ತಮ್ಮ ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ ಮಹೇಶ್ ಬಾಬು…ಇನ್ನು ತಮಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ ಎಂದು ಮಹೇಶ್ ಬಾಬು ಮನವಿ ಮಾಡಿಕೊಂಡಿದ್ದಾರೆ….

ಟಾಲಿವುಡ್ ಸ್ಟಾರ್ ನಟನಿಗೂ ಕೋವಿಡ್ ಸೋಂಕು Read More »

ಜೇಮ್ಸ್ ತಂಡ ಕೊಡಲಿದೆ ಅಪ್ಪು ಫ್ಯಾನ್ಸ್ ಗೆ ಬಿಗ್ ಸರ್ ಪ್ರೈಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ..ಜೇಮ್ಸ್ ಸಿನಿಮಾ ಬಗ್ಗೆ ಆರಂಭದಿಂದಲೂ ಸಾಕಷ್ಟು ಕುತೂಹಲಗಳು ಹುಟ್ಟುಕೊಂಡಿದ್ದು.. ಸದ್ಯ ಅಪ್ಪು ಅಭಿನಯದ ಕಡೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರದಿಂದ ಕಾದಿದ್ದಾರೆ…ಹಾಡುಗಳನ್ನು ಹೊರತುಪಡಿಸಿದಂತೆ ಮಿಕ್ಕೆಲ್ಲಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಸದ್ಯ ಸಿನಿಮಾತಂಡ ಗಣರಾಜ್ಯೋತ್ಸವ ದಿನದಂದು ಅಪ್ಪು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಲು ನಿರ್ಧಾರ ಮಾಡಿದೆ .. ಹೌದು ಗಣರಾಜ್ಯೋತ್ಸವ ದಿನದಂದು ಜೇಮ್ಸ್ ಚಿತ್ರದ ವಿಶೇಷವಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದು ಜನವರಿ ಇಪ್ಪತ್ತಾರರಂದು ಜೇಮ್ಸ್ ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಲಿದೆ …ಮಾರ್ಚ್ ಹದಿನೇಳು ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಆಗಿರುವ ಕಾರಣ ಅಂದೆ ಜೇಮ್ಸ್ ಸಿನಿಮಾವನ್ನ ಬಿಡುಗಡೆ ಮಾಡಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ….ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ…

ಜೇಮ್ಸ್ ತಂಡ ಕೊಡಲಿದೆ ಅಪ್ಪು ಫ್ಯಾನ್ಸ್ ಗೆ ಬಿಗ್ ಸರ್ ಪ್ರೈಸ್ Read More »

ಕತ್ರಿನಾ‌-ವಿಕ್ಕಿ ಕೌಶಲ್ ಹೊಸ‌ಮನೆಯ ಬಾಡಿಗೆ ಕೇಳಿ ಶಾಕ್ ಆದವರೇ ಹೆಚ್ಚು!

ಬಾಲಿವುಡ್ ನ ಬ್ಯೂಟಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಕಳೆದ ತಿಂಗಳಷ್ಟೇ ರಾಜಸ್ಥಾನದಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟರು…ಸದ್ಯ ಬಾಲಿವುಡ್ ಸ್ಟಾರ್ ದಂಪತಿ ಲೀಸ್ಟ್ ಸೇರಿರೋ ಇವರಿಬ್ನರು ಮದುವೆಯಾದ ವಾರದ ನಂತರ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದಾರೆ…ಈಗಾಗಲೇ ಮನೆಯ ಫೋಟೋಗಳನ್ನ ನಟಿ ಕತ್ರಿನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು…. ಮುಂಬೈನ ಜುಹುವಿನಲ್ಲಿ ಬಾಡಿಗೆ ಮನೆ ಪಡೆದಿರೋ ಈ ಜೋಡಿ ತಮ್ಮ ಮನೆಗಾಗಿ ಭಾರಿ ಮೊತ್ತದ ಬಾಡಿಗೆಯನ್ನ ಪಾವತಿಸಿದ್ದಾರಂತೆ…ಹೌದಯ ಅತಿ ಐಷಾರಾಮಿ ಕಟ್ಟಡವನ್ನು 5 ವರ್ಷಗಳ ಅವಧಿಗೆ ವಿಕ್ಕಿ ಬಾಡಿಗೆಗೆ ಪಡೆದಿದ್ದಾರೆ. ವಿಕ್ಕಿ ಕೌಶಲ್ ಮನೆಗಾಗಿ 1.75 ಕೋಟಿ ರೂ ಅಡ್ವಾನ್ಸ್ ನೀಡಿದ್ದು ತಿಂಗಳಿಗೆ 8 ಲಕ್ಷ.ಬಾಡಿಗೆ ಪಾವತಿ ಮಾಡುತ್ತಿದ್ದಾರಂತೆ… ಇನ್ನು ಇತ್ತೀಚೆಗೆ ಕತ್ರಿನಾ ಅದೇ ಮನೆಯಲ್ಲಿ ಡೆನಿಮ್ ಶಾರ್ಟ್ ಧರಿಸಿ ಮಂಗಳ ಸೂತ್ರ ಹಾಕಿಕೊಂಡು ಕ್ಯಾಮರಾ ಗೆ ಫೋಸ್ ಕೊಟ್ಟಿದ್ದ ಫೋಟೋವನ್ನ ಶೇರ್ ಮಾಡಿ ಹೋಂ ಸ್ವೀಟ್ ಹೋಂ ಎಂದು ಕ್ಯಾಪ್ಷನ್ ಕೊಟ್ಟಿದ್ದರು ಈ ಫೋಟೋ ಅವ್ರ ಅಭಿಮಾನಿಗಳ ಮನಸ್ಸು ಗೆದ್ದಿತ್ತು…

ಕತ್ರಿನಾ‌-ವಿಕ್ಕಿ ಕೌಶಲ್ ಹೊಸ‌ಮನೆಯ ಬಾಡಿಗೆ ಕೇಳಿ ಶಾಕ್ ಆದವರೇ ಹೆಚ್ಚು! Read More »

Scroll to Top