Karnataka Bhagya

ವಾಣಿಜ್ಯ

ವಿಚ್ಛೇದನದ ನಂತ್ರ ನಾಗಾರ್ಜುನ ಸ್ಟುಡಿಯೋಗೆ ಸಮಂತಾ ಎಂಟ್ರಿ

ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದುಕೊಂಡಿರುವುದು ಹಳೆಯ ವಿಚಾರ ಡಿವೋರ್ಸ್ ಗೂ ಮುನ್ನವೇ ನಾಗಚೈತನ್ಯ ಹಾಗೂ ಸಮಂತಾ ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡುತ್ತಿದ್ದರು ಸದ್ಯ ನಾಗಚೈತನ್ಯ ತನ್ನ ತಂದೆ ತಾಯಿಯ ಜೊತೆ ಮನೆಯಲ್ಲಿ ವಾಸವಾಗಿದ್ದಾರೆ … ಇಬ್ಬರು ಡಿವೋರ್ಸ್ ತೆಗೆದುಕೊಂಡ ನಂತರ ಸಮಂತಾ ಹಾಗೂ ನಾಗಚೈತನ್ಯ ಬಗ್ಗೆ ಬೇಸರ ವ್ಯಕ್ತಪಡಿಸಿದರು ನಾಗಾರ್ಜುನ್ .. ಡಿವೋರ್ಸ್ ಪಡೆದ ನಂತರ ಮೊದಲ ಬಾರಿಗೆ ನಟಿ ಸಮಂತಾ ನಾಗಾರ್ಜುನ ಅವರ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ….ದಿವಸ್ ಗೂ ಮುಂಚೆಯೇ ನಾಗರ್ಜುನ ಮನೆಯ ಸಮಾರಂಭದಲ್ಲಾಗಲಿ ಅಥವಾ ನಾಗಾರ್ಜುನ್ ಹುಟ್ಟುವ ಬದಲಾಗಲಿ ಕಾಣಿಸಿಕೊಳ್ಳದ ಸಮಂತಾ ಈಗ ಏಕಾ ಏಕಿ ನಾಗಾರ್ಜುನ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ … ಅಷ್ಟಕ್ಕೂ ಸಮಂತಾ ನಾಗಚೈತನ್ಯ ಅವರ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿರುವುದು ವೈಯಕ್ತಿಕ ವಿಚಾರಕ್ಕಾಗಿ ಅಲ್ಲ ಸಿನೆಮಾವೊಂದರ ಡಬ್ಬಿಂಗ್ ಗಾಗಿ ಸಮಂತಾ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದಾರೆ .. ಸದ್ಯ ಸಮಂತಾ ಡೌನ್‌ಟೌನ್ ಅಬ್ಬೆ ಖ್ಯಾತಿಯ BAFTA-ವಿಜೇತ ಚಲನಚಿತ್ರ ನಿರ್ಮಾಪಕ ಫಿಲಿಪ್ ಜಾನ್ ನಿರ್ದೇಶಿಸಲಿರುವ ಅರೇಂಜ್‌ಮೆಂಟ್ಸ್ ಆಫ್ ಲವ್‌ನಲ್ಲಿ ಅಭಿನಯ ಮಾಡುತ್ತಿದ್ದಾರೆ…ಈ ಮೂಲಕ‌ ಸ್ಯಾಮ್ ಅಂತರರಾಷ್ಟ್ರೀಯ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಲಿದ್ದಾರೆ….

ವಿಚ್ಛೇದನದ ನಂತ್ರ ನಾಗಾರ್ಜುನ ಸ್ಟುಡಿಯೋಗೆ ಸಮಂತಾ ಎಂಟ್ರಿ Read More »

ಪುನೀತ್ ನೆನಪಿನಲ್ಲಿ ‘ರೈಡ್ ಫಾರ್ ಅಪ್ಪು’ ಬೈಕ್ ಮರವಣಿಗೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಸಾಲಷ್ಟು ಕೆಲಸಗಳು ನಡೆಯುತ್ತಲೇ ಇವೆ‌‌‌…ಇಂದು ಟೀಮ್ ದ್ವಿಚಕ್ರ ಮತ್ತು ಇಂಚರ ಸ್ಟುಡಿಯೊ ವತಿಯಿಂದ ಅಪ್ಪು ಅಗಲಿದ ಒಂದು ತಿಂಗಳ ನೆನಪಿಗಾಗಿ ‘ರೈಡ್ ಫಾರ್ ಅಪ್ಪು’ ಬೈಕ್ ಮೆರವಣಿಗೆ ನಡೆಸಲಾಯ್ತು…. ಸ್ವಾತಂತ್ರ್ಯ ಉದ್ಯಾನದಿಂದ ಅಪ್ಪು ಸಮಾಧಿಯವರೆಗೆ ನಡೆದ ಮೆರವಣಿಗೆಯಲ್ಲಿ ಸುಮಾರು 200 ಬೈಕ್ ಸವಾರರು ಪಾಲ್ಗೊಂಡಿದ್ದರು. ಪುನೀತ್ ಅವರು ಹೆಲ್ಮೆಟ್ ಧರಿಸುವುದರ ಮಹತ್ವ ಮನಗಾಣಿಸುವ ಜಾಹೀರಾತಿನ ಮೂಲಕ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದ್ದನ್ನು ನೆನೆದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಹೆಲ್ಮೆಟ್ ಧರಿಸಿದ್ದರು. ಸಚಿವ ಅಶ್ವತ್ಥ ನಾರಾಯಣ ಕೂಡ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುನೀತ್ ಅವರ ಸಾಧನೆಯು ದಿನದಿನವೂ ಹೆಚ್ಚೆಚ್ಚು ಜನರನ್ನು ತಲುಪುತ್ತಿದೆ. ಇದು ನಮ್ಮ ವಿದ್ಯಾರ್ಥಿ ಸಮೂಹ ಸೇರಿದಂತೆ ಎಲ್ಲರಿಗೂ ಸ್ಫೂರ್ತಿಯಾಗಬೇಕು. ಪ್ರತಿಯೊಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಸ್ವಂತಿಕೆ ಹಾಗೂ ಸಮಾಜಪರ ಮನೋಭಾವದೊಂದಿಗೆ ಕೆಲಸ ಮಾಡಬೇಕು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೊತೆಗೆ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆಯಲ್ಲಿ ತೊಡಗಲು ಸದಾ ಪ್ರೇರಕ ಶಕ್ತಿಯಾಗಿ ಚಿರಾಯುವಾಗಿರುತ್ತಾರೆ ಎಂದು ಮಲ್ಲೇಶ್ವರ ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಪುನೀತ್ ನೆನಪಿನಲ್ಲಿ ‘ರೈಡ್ ಫಾರ್ ಅಪ್ಪು’ ಬೈಕ್ ಮರವಣಿಗೆ Read More »

ಸೆನ್ಸಾರ್ ಮಂಡಳಿಯಿಂದ ಮದಗಜ ಸಿನಿಮಾಗೆ ಅಸ್ತು

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ… ಈಗಾಗಲೇ ಹಾಡುಗಳು ಟೀಸರ್ ನಿಂದ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಮದಗಜ ಸಿನಿಮಾವನ್ನ ಮಹೇಶ್ ನಿರ್ದೇಶನ ಮಾಡಿದ್ದಾರೆ … ಇದೇ ಮೊದಲ ಬಾರಿಗೆ ಮದಗಜ ಸಿನಿಮಾದ ಮೂಲಕ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದು ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ …. ಡಿಸೆಂಬರ್‌ 3 ರಂದು ರಾಜ್ಯಾದ್ಯಂತ ಮದಗಜ ಸಿನಿಮಾ ಬಿಡುಗಡೆಯಾಗುತ್ತಿದ್ದು ಕನ್ನಡ ಹಾಗೂ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮದಗಜ ಪ್ರೇಕ್ಷಕರ ಮುಂದೆ ಬರಲಿದ್ದಾನೆ … ಸಿನಿಮಾ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ ಗಳಿಸಿದ್ದು ಚಿತ್ರಕ್ಕೆ ಯು ಎ ಸರ್ಟಿಫಿಕೇಟ್ ಕೊಡಲಾಗಿದೆ… ಯಾವುದೇ ಕಟ್ ಹಾಗೂ ಮ್ಯೂಟ್ ಇಲ್ಲದೆ ಸರ್ಟಿಫಿಕೇಟ್ ಸಿಕ್ಕಿದ್ದು ಟೀಸರ್ ಹಾಗೂ ಹಾಡುಗಳಿಂದ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ..1400 ಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ಮದಗಜ ಚಿತ್ರ ಪ್ರದರ್ಶನ ಕಾಣಲಿದೆ….

ಸೆನ್ಸಾರ್ ಮಂಡಳಿಯಿಂದ ಮದಗಜ ಸಿನಿಮಾಗೆ ಅಸ್ತು Read More »

ವಿಭಿನ್ನ ರೀತಿಯ ಪ್ರಚಾರದಿಂದ ಗಮನಸೆಳೆಯುತ್ತಿದೆ ಬಡವ ರಾಸ್ಕಲ್

ಡಾಲಿ ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ..ಡಾಲಿ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದು… ಧನಂಜಯ ಅಮೃತಾ, ನಾಗಭೂಷಣ್, ಪೂರ್ಣಚಂದ್ರ, ಇನ್ನೂ ಅನೇಕರು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ… ಡಿಸೆಂಬರ್ 24ರಂದು ಸಿನಿಮಾವನ್ನ ತೆರೆಗೆ ತರುವ ಪ್ರಯತ್ನದಲ್ಲಿರುವ ಡಾಲಿ ಧನಂಜಯ್… ತಮ್ಮ ಸಿನಿಮಾವನ್ನ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ …ಸದ್ಯ ಬಡವ ರಾಸ್ಕಲ್ ಚಿತ್ರತಂಡ ಮಾಡುತ್ತಿರುವ ಪ್ರಚಾರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ… ಟೈಟಲ್ ನಲ್ಲೇ ಬಡವ ಅಂತಿರೋ ಕಾರಣದಿಂದ ಬಡ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ಚಿತ್ರತಂಡ ತಮ್ಮ ಸಿನಿಮಾವನ್ನು ಪ್ರಚಾರ ಮಾಡುತ್ತಿದೆ… ಎಳನೀರು ಅಂಗಡಿ, ತರಕಾರಿ ಅಂಗಡಿಯಲ್ಲಿ ಸ್ಲೇಟನ್ನು ಬಳಸಿ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನ ಬರೆದು ಅಲ್ಲಿಯೇ ಪ್ರಚಾರ ಮಾಡುತ್ತಿದೆ … ಈ ಹಿಂದೆ ಈ ರೀತಿಯ ಪ್ರಚಾರ ಯಾರೂ ಕೂಡ ಮಾಡದಿರುವ ಕಾರಣ ಇದೊಂದು ವಿಭಿನ್ನ ಪ್ರಯತ್ನ ಎಂದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ ..ಇನ್ನೂ ಬಡವ ರಾಸ್ಕಲ್ ಸಿನಿಮಾವನ್ನ ಶಂಕರ್ ನಿರ್ದೇಶನ ಮಾಡಿದ್ದಾರೆ ..

ವಿಭಿನ್ನ ರೀತಿಯ ಪ್ರಚಾರದಿಂದ ಗಮನಸೆಳೆಯುತ್ತಿದೆ ಬಡವ ರಾಸ್ಕಲ್ Read More »

ರವಿಚಂದ್ರನ್ ಲುಕ್ ಬದಲಾಯಿಸಿದ ಕಿಚ್ಚ ಸುದೀಪ್ !

ದೃಶ್ಯ 2 ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ…ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ದೃಶ್ಯ2 ಟ್ರೈಲರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.. ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ …ದೃಶ್ಯ ಸಿನಿಮಾವನ್ನ ಮಲೆಯಾಳಂ ತೆಲುಗು ನಲ್ಲಿ ನೋಡಿಲ್ಲ ಮೊದಲು ನೋಡಿದ್ದು ಕನ್ನಡದಲ್ಲೇ..ಈಗ ದೃಶ್ಯ 2 ಬರ್ತಾ ಇದೆಸಿನಿಮಾದಲ್ಲಿ ಅದ್ಭುತ ಕಲಾವಿಧರು ಇರುವಾಗ ಸಿನಿಮಾ ಚನ್ನಾಗಿ ಮೂಡಿ ಬಂದಿದೆ ಅನ್ನೋದ್ರಲ್ಲಿ ಡೌಟೆ ಇಲ್ಲ..ನನ್ನ ಹೆಂಡತಿ ಮಲೆಯಾಳಿ, ಬಟ್ ನನಗೆ ಮಲೆಯಾಳಂ ಬರಲ್ಲಾ..ಅವರು ಮಲೆಯಾಳಂ ಸಿನಿಮಾಗಳನ್ನ ನೋಡುತ್ತಿರುತ್ತಾಳೆ. ಚೆನ್ನಾಗಿರೋದನ್ನ ಹೇಳುತ್ತಾಳೆ..ದೃಶ್ಯ ಒಂದು ದೃಶ್ಯ ಎರಡಾಯ್ತು,ಆದ್ರೆ ದೃಶ್ಯ ಮೂರು ಕನ್ನಡದಲ್ಲಿ ಆಗಲಿ….ದೃಶ್ಯ ಚಿತ್ರದ‌ ಬಗ್ಗೆ ಮಾಣಿಕ್ಯ ಸಿನಿಮಾ ಶೂಟಿಂಗ್ ನಲ್ಲಿ ಚರ್ಚೆ ಮಾಡಿದ್ವಿ ಎಂದ್ರು… ಇನ್ನು ಕಿಚ್ಚನ ಬಗ್ಗೆ ಮಾತನಾಡಿದ ರವಿಚಂದ್ರನ್ ..ನಾನು ಇಂದು ನನ್ನ ಅಪ್ಪನ ಪ್ರೀತಿನಾ , ಅಪ್ಪು ನಗುವನ್ನ ನೆನೆಸಿಕೊಂಡು ಮಾತು ಪ್ರಾರಂಭಿಸುತ್ತೇನೆ”..ಇಂದು ನನ್ನ ಮಗನಿಗಾಗಿ ರಿಸೀವ್ ಮಾಡುಲು ನಾನೇ ಹೋದೆ…ನನ್ನ ದೊಡ್ಡಮಗ ಅಂದ್ರೆ ಯಾವಾಗಲು ಲವ್ ನನಗೆ..ಸುದೀಪ್ ನನಗೆ ವಿಶೇಷ…ನನ್ನ ಲುಕ್ ಚೆಂಜ್ ಆಗಲು ಕಾರಣ ನನ್ನ ಮಗ ಮಾಡಿದ್ದ ಮಾಣಿಕ್ಯ ಎಂದ್ರು…. E4 Entertainment ಬ್ಯಾನರ್​ನಲ್ಲಿ ಸಿನಿಮಾ ಮೂಡಿಬಂದಿದೆ. ರವಿಚಂದ್ರನ್ ಸೇರಿದಂತೆ.ನವ್ಯ ನಾಯರ್, ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ನಟಿಸಿದ್ದಾರೆ.‌ಡಿಸೆಂಬರ್ ಅಂತ್ಯಕ್ಕೆ ಸಿನಿಮಾ ತೆರೆಗೆ ಬರಲಿದೆ…

ರವಿಚಂದ್ರನ್ ಲುಕ್ ಬದಲಾಯಿಸಿದ ಕಿಚ್ಚ ಸುದೀಪ್ ! Read More »

ವಿಕ್ಕಿ -ಕತ್ರಿನಾ‌ ಅದ್ದೂರಿ ವಿವಾಹಕ್ಕೆ ಭರ್ಜರಿ ತಯಾರಿ

ಬಾಲಿವುಡ್ ಬ್ಯೂಟಿ ಕತ್ರಿನಾ‌ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಭರ್ಜರಿ ತಯಾರಿ ನಡೆದಿದೆ…ರಾಜಸ್ಥಾನದ ಐಷಾರಾಮಿ ಹೋಟೆಲ್ ನಲ್ಲಿ ಮದುವೆ ನಡೆಯಲಿದ್ದು ವಿಕ್ಕಿ ಹಾಗೂ ಕ್ಯಾಟ್ ಕೋರ್ಟ್ ಮ್ಯಾರೆಜ್ ಆಗಲಿದ್ದಾರಂತೆ … ಕೋರ್ಟ್ ಮ್ಯಾರೇಜ್’ ಮತ್ತು ಮದುವೆ ನೋಂದಣಿಗೂ ವ್ಯತ್ಯಾಸವಿದೆ. ಕೋರ್ಟ್ ಮ್ಯಾರೇಜ್ ಎಂದರೆ ಸಂಪ್ರದಾಯ ಬದ್ಧವಾಗಿಯೇ ಮದುವೆ ನಡೆಯುತ್ತದೆ. ಮದುವೆಯಲ್ಲಿ ಅಧಿಕಾರಿಗಳು ಹಾಜರಿರುತ್ತಾರೆ. ಸಾಕ್ಷಿಗಳಿಂದ ಸಹಿ ಮಾಡಿಸಿಕೊಳ್ಳಲಾಗುತ್ತದೆ. ವಿಕ್ಕಿ ಮತ್ತು ಕತ್ರಿನಾ ಮದುವೆಗೆ ಬರುವ ಅಥಿತಿಗಳು ಮೊಬೈಲ್ ತರುವಂತಿಲ್ಲವಂತೆ ..ಕಾರಣ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಫೋಟೋಗಳು ಹರಿದಾಡುವುದು ವಿಕ್ಕಿ ಕೌಶಲ್ ಹಾಗೂ ಕತ್ರಿನಾಗೆ ಇಷ್ಟವಿಲ್ಲವಂತೆ… ಮದುವೆಯ ಸ್ಥಳದ ವಿಚಾರದಲ್ಲಿಯೂ ಈ ಜೋಡಿ ಗೌಪ್ಯತೆ ಕಾಪಾಡಿಕೊಂಡಿದ್ದು ಈಗಾಗಲೇ ಮುಂಬೈನಲ್ಲಿ ಐಷಾರಾಮಿ ಪ್ಲ್ಯಾಟ್ ಖರೀದಿ ಮಾಡಿದ್ದಾರಂತೆ ..ಇನ್ನು ಹಿಂದು ಹಾಗೂ ಮುಸ್ಲಿಂ ಎರಡು ಸಂಪ್ರದಾಯದಲ್ಲಿ ಮದುವೆ ನಡೆಯಲಿದೆ..ಈ ತಾರಾ ಜೋಡಿಯ ಮದುವೆ ಹೇಗಿರಲಿದೆ ಅನ್ನೂ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ…

ವಿಕ್ಕಿ -ಕತ್ರಿನಾ‌ ಅದ್ದೂರಿ ವಿವಾಹಕ್ಕೆ ಭರ್ಜರಿ ತಯಾರಿ Read More »

Cancel ಆಯ್ತು ರಕ್ಷಿತ್ ಶೆಟ್ರ #777ಚಾರ್ಲಿ ಮೂವಿ ರಿಲೀಸ್..

ರಕ್ಷಿತ್ ಶೆಟ್ಟಿ ಯವರ ಕನ್ನಡದ ಬಹು ನಿರೀಕ್ಷಿತ PAN India ಚಿತ್ರ 777ಚಾರ್ಲಿ. ರಕ್ಷಿತ್ ಶೆಟ್ಟಿ ನಾಯಕ ಹಾಗೂ ಸಂಗೀತ ಶೃಂಗೇರಿ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರವನ್ನು ಕಿರಣ್ ರಾಜ್ ಕೆ ನಿರ್ದೇಶನ ಮಾಡಿದ್ದಾರೆ. ನೋಬಿನ್ ಪೌಲ್ ಸಂಗೀತದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ಇದು ಒಂದು adventure comedy drama film ಆಗಿದೆ. ಇದೇ ಡಿಸೆಂಬರ್ 31ರಂದು ದೇಶದಾದ್ಯಂತ ಬಿಡುಗಡೆಯಾಗಬೇಕಿದ್ದ ಚಾರ್ಲಿ ರಿಲೀಸ್ date ಮುಂದೂಡಲಾಗಿದೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿದೆ. ಬಾಲಿವುಡ್ ಹಾಗೂ ತೆಲುಗಿನ ಪ್ರಖ್ಯಾತ production house ಗಳು theatrical rights ಪಡೆದುಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದೆನ್ನಲಾಗುತ್ತಿದೆ.

Cancel ಆಯ್ತು ರಕ್ಷಿತ್ ಶೆಟ್ರ #777ಚಾರ್ಲಿ ಮೂವಿ ರಿಲೀಸ್.. Read More »

“ದಿಲ್ ಪಸಂದ್” ಪಸ್ಟ್ ಲುಕ್ !!

ಲವ್Mocktail ಖ್ಯಾತಯ ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ, ನಿಶ್ವಿಕಾ ನಾಯ್ಡು ಹಾಗೂ ಜೊತೆ ಜೊತೆಯಲಿ ಖ್ಯಾತಿಯ ಮೇಘ ಶೆಟ್ಟಿ ಇಬ್ಬರೂ ನಾಯಕಿಯರಾಗಿ ಪ್ರಮುಖ ಪಾತ್ರದಲ್ಲಿ ನಟಿಸಿ.. ನಿರ್ದೇಶಕ ಶಿವತೇಜಸ್ ನಿರ್ದೇಶನ ಮಾಡಿರುವ,ರಶ್ಮಿ ಪಿಲ್ಮ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಪಕ ಸುಮಂತ್ ಕ್ರಾಂತಿ ನಿರ್ಮಾಣದಲ್ಲಿ ಹಾಗೂ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಚಿತ್ರ “ದಿಲ್ ಪಸಂದ್” ಒಂದು Romantic Entertainer ಸಿನಿಮಾ. ಈ ಚಿತ್ರ ಮುಂದಿನ ವರುಷ ಬಿಡುಗಡೆಯಾಗಲಿದೆ. ಇದೀಗ ಚಿತ್ರತಂಡ ಸಿನಿಮಾದ ಪಸ್ಟ ಲುಕ್ ಬಿಡುಗಡೆ ಮಾಡಿದ್ದು ಇದರಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ಅವರು bold look ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡ ಸಿನಿರಸಿಕರಲ್ಲಿ ಒಂದು ಮಟ್ಟಿಗಿನ ಕುತೂಹಲವನ್ನು ದಿಲ್ ಪಸಂದ್ ಚಿತ್ರದ ಬಗ್ಗೆ ಹುಟ್ಟುಹಾಕಿದೆ. ಚಿತ್ರ ಚೆನ್ನಾಗಿ ಮೂಡಿಬಂದು ಯಶಸ್ವಿಯಾಗಲಿ ಎಂಬುದು ಸಿನಿಪ್ರಿಯರ ಆಶಯ.

“ದಿಲ್ ಪಸಂದ್” ಪಸ್ಟ್ ಲುಕ್ !! Read More »

ಅಪ್ಪುಗೆ ಹಾಡಿನ ಮೂಲಕ ನಲ್ಮೆಯ ನಮನ ಸಲ್ಲಿಸಿದ ನಟಿ ಶೃತಿಯವರ ಮಗಳು ಗೌರಿಶೃತಿ..

ಯುವರತ್ನ ಕನ್ನಡದ ಏಕೈಕ ರಾಜಕುಮಾರನ್ನು ಕಳೆದುಕೊಂಡು ಕರುನಾಡು ಅಂದು ಇಂದು ಎಂದೆಂದಿಗೂ ಮರುಗುತ್ತಿರುತ್ತದೆ. ಎಷ್ಟೋ ಪ್ರಶ್ನೆಗಳನ್ನು ಆ ದೇವರಿಗೆ ಕೇಳಬೇಕು ಏಕೆ ನಗುವಿನ ಪರಮಾತ್ಮನನ್ನು ನಮ್ಮಿಂದ ಕಸಿದುಕೊಂಡೆ ಎಂದು ಆ ದೇವರನ್ನು ಶಪಿಸಬೇಕು ಎನ್ನಿಸದಿರದು. ಹಲವರು ಹಲಾವಾರು ರೀತಿ ಅಪ್ಪು ಗೆ ನಮನ ಸಲ್ಲಿಸಿದ್ದಾರೆ ಸಲ್ಲಿಸುತ್ತಲೇ ಇದ್ದಾರೆ. ಈ ಮಧ್ಯೆ ಕನ್ನಡದ ಹೆಸರಾಂತ ನಟಿ ಶೃತಿಯವರ ಮಗಳು ಕನ್ನಡದ ಸಾಯಿಪಲ್ಲವಿ ಎಂತಲೇ ಕರೆಸಿಕೊಳ್ಳುತ್ತಿರುವ ಗೌರಿ ಶೃತಿ ತಮ್ಮ ಪ್ರತಿಭೆಯಿಂದ ವೀರಕನ್ನಡಿಗನಿಗೆ ನಮನ ಸಲ್ಲಿಸಿದ್ದಾರೆ. ಗೌರಿ ತಮ್ಮ ಕಂಠಸಿರಿಯಲ್ಲಿ ಅಪ್ಪುವಿಗಾಗಿ ಯೋಗರಾಜ್ ಬಟ್ಟರು ಬರೆದಿರುವ ಲಿರಿಕ್ಸ್ ಗೆ ತಮ್ಮ ಸ್ವರದಿಂದ ರಾಗ ನೀಡಿ ಮನಮುಟ್ಟುವಂತೆ ಹಾಡಿದ್ದಾರೆ. ಎಲ್ಲವೂ ಅಪ್ಪುವಿಗಾಗಿ.. ನೀವೆಂದೂ ಕನ್ನಡಿಗರ ಮನಗಳಲ್ಲಿ ಅಮರ.. ನಿಮ್ಮ ನೆನೆಪು ಜೀವನ ಮಾರ್ಗ ಮಧುರ ಹಾಗೂ ಸ್ಪೂರ್ತಿದಾಯಕ..

ಅಪ್ಪುಗೆ ಹಾಡಿನ ಮೂಲಕ ನಲ್ಮೆಯ ನಮನ ಸಲ್ಲಿಸಿದ ನಟಿ ಶೃತಿಯವರ ಮಗಳು ಗೌರಿಶೃತಿ.. Read More »

ಕೆಜಿಎಫ್2 Vs ಲಾಲ್ ಸಿಂಗ್ ಚಡ್ಡಾ – ಯಶ್ ಹಾಗೂ ಪ್ರಶಾಂತ್ ನೀಲ್ ಗೆ ಕ್ಷಮೆ ಕೇಳಿದ ಅಮಿರ್ ಖಾನ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಕೆಜಿಎಪ್2” ಚಿತ್ರವನ್ನು 2022ರ ಏಪ್ರಿಲ್ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. KGF ಚಾಪ್ಟರ್ 2 ನಲ್ಲಿ ರವೀನಾ ಟಂಡನ್,ಸಂಜಯ್ ದತ್ ರಂತ ಸ್ಟಾರ್ ನಟರು ನಟಿಸಿರುವುದರಿಂದ KGF 2 ತೂಕ ಹಾಗೂ ನಿರೀಕ್ಷೆ ಆಕಾಶದೆತ್ತರದಲ್ಲಿದೆ. ಆದರೆ ಅದೇ ದಿನದಂದು ಬಾಲಿವುಡ್ ನಲ್ಲಿ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ. ಇದು ಅಮಿರ್ ಖಾನ್ ನಟಿಸಿ ನಿರ್ಮಾಣ ಮಾಡಿರುವ ಅವರ ಬಹು ಆಸೆಯ ಚಿತ್ರ. ಇದರಲ್ಲಿ ಅಮಿರ್ ಖಾನ್ ಸಿಖ್ಖ್ ಪಾತ್ರದಲ್ಲಿ ನಟಿಸಿದ್ದಾರೆ.ಬಹಳ ಹಿಂದೆಯೇ ರಿಲೀಸ್ ಆಗಬೇಕಿದ್ದ ಲಾಲ್ ಸಿಂಗ್ ಚಡ್ಡಾ ಕೋವಿಡ್ ಕಾರಣಗಳಿಂದ ವಿಳಂಬವಾಗಿ ರಿಲೀಸ್ ಆಗುತ್ತಿದೆ. ಏಪ್ರೀಲ್ 14 ಬೈಸಾಕಿ ದಿನ ಆದ್ದರಿಂದ ಅದು ಸಿಖ್ಖರ ಪವಿತ್ರವಾದ ಹಬ್ಬ ಅಂದೇ ಈ ಸಿನಿಮಾ ರಿಲೀಸ್ ಮಾಡಲು ರೆಡಿಯಾಗಿದ್ದಾರೆ.ಇದು ಇಂಗ್ಲಿಷ್ ನಲ್ಲಿ ತೆರೆಗೆ ಬಂದಿದ್ದ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್. ಈ ಮಧ್ಯೆ ಅಮಿರ್ ಖಾನ್ ರವರು KGF ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಗೆ ಕ್ಷಮೆ ಕೇಳಿದ್ದಾರೆ. ಹಲವು ಕಾರಣಗಳಿಂದ ನನ್ನ ಸಿನಿಮಾ ರಿಲೀಸ್ ಡೇಟ್ ನ್ನು ಮುಂದೆ ಹಾಕಲಾಗಿತ್ತು. ಬೇಗ ಸಿನಿಮಾ ಮಾಡಬೇಕು ಎನ್ನುವುದಕ್ಕಿಂತ ಸಿನಿಮಾ quality ಮುಖ್ಯ. ನಾನು ಅದರ ಕಡೆ ಗಮನ ನೀಡಿದ್ದೆ. ಈಗಲಾದರೂ ಲಾಲ್ ಸಿಂಗ್ ಚಡ್ಡಾ ಸಿನಮಾವನ್ನು ರಿಲೀಸ್ ಮಾಡಲೇಬೇಕು ಇನ್ನು ಮುಂದೂಡಲು ಸಾಧ್ಯವಿಲ್ಲ ಆದರೆ ಇದು KGF 2 ರಿಲೀಸ್ ಡೇಟ್ ಗೆ ಕ್ಲಾಶ್ ಆಗುತ್ತಿದೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಸ್ವತಃ ಅಮಿರ್ ಖಾನ್ ರಾಕಿಂಗ್ ಸ್ಟಾರ್ ಯಶ್ ಜೊತೆ ಮಾತನಾಡಿದ್ದಾರೆ. ಬಾಲಿವುಡ್ ಮಂದಿಯ ಬಹು ನಿರೀಕ್ಷಿತ ಚಿತ್ರವಾದ ” ಲಾಲ್ ಸಿಂಗ್ ಚಡ್ಡಾ” ಚಿತ್ರದ ರಿಲೀಸ್ ಇಂದ ಕನ್ನಡದ ರಾಕಿಂಗ್ ರಾಕಿಯ ಕೆಜಿಎಫ್ ರಿಲೀಸ್ ಗೆ ತಡೆಯಾಗಲಿದ್ದ್ಯಾ ಕಾದು ನೋಡಬೇಕಿದೆ.

ಕೆಜಿಎಫ್2 Vs ಲಾಲ್ ಸಿಂಗ್ ಚಡ್ಡಾ – ಯಶ್ ಹಾಗೂ ಪ್ರಶಾಂತ್ ನೀಲ್ ಗೆ ಕ್ಷಮೆ ಕೇಳಿದ ಅಮಿರ್ ಖಾನ್ Read More »

Scroll to Top