Karnataka Bhagya

ವಾಣಿಜ್ಯ

ಅಂಬಿ ಕಾಯಕ ಪ್ರಶಸ್ತಿ ನೀಡಿದ ಚಾಲೆಂಜಿಂಗ್ ಸ್ಟಾರ್

ಅಂಬಿ ಅಭಿಮಾನಿಗಳನ್ನ ಅಗಲಿ ಮೂರು ವರ್ಷ ಕಳೆದಿದೆ..ರೆಬೆಲ್ ಸ್ಟಾರ್ ಜೀವಂತ ಇಲ್ಲ ಆದ್ರೆ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿದ್ದಾರೆ…ಡಾ. ಅಂಬರೀಷ್ ಅವರ ನೆನಪನ್ನು ಸದಾ ಜೀವಂತವಿಟ್ಟು, ಅದನ್ನು ಪೋಷಿಸಿ ಬೆಳಸುತ್ತಿರುವವರು ಅವರ ಅಭಿಮಾನಿಗಳು. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ‘ಅಂಬಿ ಕಾಯಕ ಪ್ರಶಸ್ತಿ’ಯನ್ನು ಸ್ಥಾಪಿಸಿ ನಾನಾ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು… ಅಭಿಮಾನಿಗಳ ಅಭಿಮಾನಕ್ಕೆ ತಲೆಬಾಗಿದ ದರ್ಶನ್. ಅಭಿಶೇಕ್ ಹಾಗೂ ಸುಮಲತಾ ಹಿರಿಯ ನಟರಾದ ದೊಡ್ಡಣ್ಣ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಡಾ. ಅಂಬರೀಷ್ ಅಭಿಮಾನಿ ಸಂಘದ ಮುಖಂಡರು, ಅಭಿಮಾನಿಗಳು ಮತ್ತು ಬೆಂಬಲಿಗರು ಕಾರ್ಯಕ್ರಮದಲ್ಲಿ‌ ಭಾಗಿ ಆಗಿ ಪ್ರಶಸ್ತಿ ಪ್ರಧಾನ ಮಾಡಿದ್ರು….

ಅಂಬಿ ಕಾಯಕ ಪ್ರಶಸ್ತಿ ನೀಡಿದ ಚಾಲೆಂಜಿಂಗ್ ಸ್ಟಾರ್ Read More »

“ರೇಮೊ” ಟೀಸರ್ ಅಭಿಮಾನಿಗಳ ಮುಂದೆ..

ಗೂಗ್ಲಿ ಖ್ಯಾತಿಯ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರೋಗ್ ಸಿನಿಮಾ ಖ್ಯಾತಿಯ ಇಶಾನ್ ನಾಯಕ ನಟರಾಗಿ ಹಾಗೂ ಆಶಿಕಾ ರಂಗನಾಥ್ ನಾಯಕನಟಿಯಾಗಿ ಅಭಿನಯಿಸಿರುವ, ಬಹುಭಾಷಾ ನಟ ಶರತ್ ಕುಮಾರ್, ಅಚ್ಯುತ್ ಕುಮಾರ್, ರಾಜೇಶ್ ಅವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾ ರೇಮೊ ಟೀಸರ್ ಅನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಈ ಚಿತ್ರದ ನಿರ್ಮಾಪಕರು ವಜ್ರಕಾಯ ಸಿನಿಮಾ ಖ್ಯಾತಿಯ ನಿರ್ಮಾಪಕರಾದ ಸಿ. ಆರ್ ಮನೋಹರ್ ರವರು.ಇವರ ನಿರ್ಮಾಣದಲ್ಲಿ ಕನ್ನಡ, ತೆಲುಗು ಭಾಷೆಯಲ್ಲಿ ಹಲವು ಸಿನಿಮಾಗಳು ಬಂದಿವೆ. ಇನ್ನು ರೇಮೊ ಚಿತ್ರಕ್ಕೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರೇಮೊ ಚಿತ್ರ ಒಂದು ರೊಮ್ಯಾಂಟಿಕ್ ಆಕ್ಷನ್ ಮನೋನಂಜನೆ ನೀಡುವ ಚಿತ್ರವಾಗಿದೆ. ಇಂದು ಟೀಸರ್ ಬಿಡುಗಡೆಯಾಗಿದೆ ಹಾಗೂ ಚಿತ್ರವನ್ನು ಡಿಸೆಂಬರ್ 26, 2021 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. All the best for “RAYMO”Team.

“ರೇಮೊ” ಟೀಸರ್ ಅಭಿಮಾನಿಗಳ ಮುಂದೆ.. Read More »

ಸೆಟ್ಟೇರಿದ ಶಿವಾಜಿ ಸುರತ್ಕಲ್ 2 ಸಿನಿಮಾ

ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು…ಡಿಟೆಕ್ಟಿವ್‌ ಪಾತ್ರದಲ್ಲಿ ರಮೇಶ್ ಅರವಿಂದ್ ಎಲ್ಲರ ಗಮನ ಸೆಳೆದಿದ್ದರು.. ಆಕಾಶ್ ಶ್ರೀವತ್ಸ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರು..ಶಿವಾಜಿ ಸೂರತ್ಕಲ್ ಸಕ್ಸಸ್ ಆದ ಹಿನ್ನಲೆಯಲ್ಲಿ ಈಗ ಅದೇ ತಂಡ ಶಿವಾಜಿ ಸೂರತ್ಕಲ್ ಪಾರ್ಟ್ ೨ ಸಿನಿಮಾ ಮಾಡಲು ಮುಂದಾಗಿದೆ… ಶಿವಾಜಿ ಸೂರತ್ಕಲ್ ಪಾರ್ಟ್ ೨ ಚಿತ್ರದಲ್ಲಿ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ರಾಧಿಕಾ ಚೇತನ್ ಕೂಡ ಅಭಿನಯಿಸುತ್ತಿದ್ದಾರೆ …ಇನ್ಮು ಚಿತ್ರತಂಡಕ್ಕೆ ಹೊಸ ಸೇರ್ಪಡೆ ಅಂದ್ರೆ ಮೇಘನಾ ಗಾಂವ್ಕರ್ …ಹೌದು ಮೇಘನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…ಇನ್ನು ಚಿತ್ರದ ಮಹೂರ್ತ ಇಂದು ಜರುಗಿದ್ದು ಸಿನಿಮಾಗೆ ಅನೂಪ್ ಗೌಡ ಬಂಡವಾಳ ಹಾಕುತಿದ್ದಾರೆ….

ಸೆಟ್ಟೇರಿದ ಶಿವಾಜಿ ಸುರತ್ಕಲ್ 2 ಸಿನಿಮಾ Read More »

ಮದುವೆಗೂ ದುನಿಯಾ ವಿಜಿಗೂ ಬಿಡದ‌ ನಂಟು..ಮತ್ತೆ ಮದುವೆ ವಿಚಾರದಲ್ಲಿ ಸದ್ದು ಮಾಡಿದ ವಿಜಯ್

ನಟ ದುನಿಯಾ ವಿಜಯ್ ಗೂ ಮದುವೆ ಗೂ ಬಿಡಿಸಲಾರದ ನಂಟು ಕಳೆದ ಕೆಲವು ವರ್ಷಗಳಿಂದ ಮದುವೆ ವಿಚಾರವಾಗಿ ಆಗಾಗ್ಗೆ ಸುದ್ದಿಯಾಗುತ್ತಿದ್ದ ದುನಿಯಾ ವಿಜಯ್ ಮತ್ತೆ ಈಗ ಮದುವೆ ವಿಚಾರದಲ್ಲಿ ಸದ್ದು ಮಾಡುತ್ತಿದ್ದಾರೆ … ಆದರೆ ದುನಿಯಾ ವಿಜಯ್ ಈಗ ಸುದ್ದಿಯಾಗಿರೋದು ತಮ್ಮ ಮದುವೆ ವಿಚಾರದಲ್ಲಿ ಅಲ್ಲ… ತಮ್ಮ ಅಭಿಮಾನಿಯೊಬ್ಬರು ದುನಿಯಾ ವಿಜಯ್ ಬರದೆ ನಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ .. ದಾವಣಗೆರೆಯ ರಾಮನಗರದ ಯುವತಿ ಅನೂಷಾಳ ಮದುವೆ ಪ್ರಕಾಶ್ ಎಂಬಾತನ ಜತೆ ನಿಶ್ಚಯವಾಗಿದೆ… ನವೆಂಬರ್ 29ರಂದು ದಾವಣಗೆರೆಯಲ್ಲಿ ಇವರ ಮದುವೆ ನಡೆಯುತ್ತಿದೆ ..ಈಗಾಗಲೇ ಆಮಂತ್ರಣ ಪತ್ರಿಕೆ ಹಂಚಲಾಗಿದೆ..ಆದರೆ ಮದುಮಗಳು ದುನಿಯಾ ವಿಜಯ್ ಬರೆದೆ ನಾನು ಯಾವುದೇ ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ… ಅದಷ್ಟೇ ಅಲ್ಲದೆ ತಮ್ಮ ಆಹ್ವಾನಪತ್ರಿಕೆಯಲ್ಲಿ ದುನಿಯಾ ವಿಜಯ್ ಜೊತೆಗಿನ ಫೋಟೋವನ್ನು ಕೂಡ ಪ್ರಿಂಟ್ ಮಾಡಿ ಮಾಡಿಸಿಕೊಂಡಿದ್ದಾಳೆ … ಕೇವಲ ಮದುಮಗಳು ಮಾತ್ರವಲ್ಲದೆ ಅನುಷಾ ಮನೆಮಂದಿ ಎಲ್ಲರೂ ದುನಿಯಾ ವಿಜಯ್ ಅವರ ಅಭಿಮಾನಿಗಳಾಗಿದ್ದಾರೆ….ಅನುಷಾ ತಂದೆ ಶಿವಾನಂದ್ ಕಳೆದ 5ವರ್ಷದ ಹಿಂದೆ ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದಾರೆ… ಅವರೇ ಬಂದು ಉದ್ಘಾಟಿಸಬೇಕು…. ಅಲ್ಲಿಯವರೆಗೂ ಮನೆಯಲ್ಲಿ ವಾಸ ಮಾಡಲ್ಲ ಎಂದು ಸಂಕಲ್ಪ ಮಾಡಿದರು.. ಈ ವಿಚಾರ ತಿಳಿದಂತೆ ದುನಿಯಾ ವಿಜಯ್ ಅವರು ದಾವಣಗೆರೆಗೆ ಆಗಮಿಸಿ ಅಭಿಮಾನಿಯ ಆಸೆ ಈಡೇರಿಸಿದ್ದರು … ತಂದೆಯ ಆಸೆಯನ್ನು ಈಡೇರಿಸಿದ ದುನಿಯಾ ವಿಜಯ್ ಈಗ ಮಗಳ ಅಭಿಮಾನಕ್ಕೆ ಬೆಲೆ ಕೊಟ್ಟು ಮದುವೆಗೆ ಆಗಮಿಸುತ್ತಾರ ಎನ್ನುವುದು ಕುತೂಹಲ ಹುಟ್ಟುಹಾಕಿದೆ….

ಮದುವೆಗೂ ದುನಿಯಾ ವಿಜಿಗೂ ಬಿಡದ‌ ನಂಟು..ಮತ್ತೆ ಮದುವೆ ವಿಚಾರದಲ್ಲಿ ಸದ್ದು ಮಾಡಿದ ವಿಜಯ್ Read More »

ಪುನೀತ್ ಫೋಟೋ ಹಿಡಿದು ಶಭರಿ ಮಲೆ‌ ಯಾತ್ರೆ ಮಾಡಿದ ಅಭಿಮಾ‌ನಿ..

ಅಪ್ಪು ಅಕಾಲಿಕ ಮರಣ ಇಡೀ ರಾಜ್ಯದ ಜನರನ್ನೇ ದುಖಃದ ಮಡಿಲೊಗೆ ತಳ್ಳಿದೆ..ಪುನೀತ್ ಇನ್ನಿಲ್ಲ ಅನ್ನೋದನ್ನ ಮರೆಯಲಾರದೆ ಅಭಿಮಾನಿಗಳು ಅಪ್ಪು ನಮ್ಮಲ್ಲಿಯೇ ಇದ್ದಾರೆ ಅನ್ನೋದನ್ನ ಭಿನ್ನ ವಿಭಿನ್ನ ರೀತಿಯಲಿ ತೋರಿಸಿಕೊಡುತ್ತಿದ್ದಾರೆ… ಇತ್ತೀಚಿಗಷ್ಟೇ ಅಭಿಮಾನಿಯೊಬ್ಬರು ಅಪ್ಪು ಫೋಟೋ ಹಿಡಿದುಕೊಂಡು ಶಬರಿ ಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ…ಅಪ್ಪು ಫೋಟೋ ಜೊತೆಅಯ್ಯಪ್ಪನ 18 ಮೆಟ್ಟಿಲು ಹತ್ತಿ ಎಲ್ಲರ ಗಮನ ಸೆಳೆದಿದ್ದಾರೆ… ಪುನೀತ್‌ ಕೂಡ ಪ್ರತಿ ವರ್ಷ ಅಯ್ಯಪ್ಪನ ದರ್ಶನಕ್ಕೆ‌ ತೆರಳುತ್ತಿದ್ರು..ಸಣ್ಣ ವಯಸ್ಸಿನಿಂದಲೂ ಮಾಲೆ ಹಾಕಿ ಅಣ್ಣ ಶಿವರಾಜ್ ಕುಮಾರ್ ಜೊತೆ ಶಬರಿಮಲೆಗೆ ತೆರಳುತ್ತಿದ್ರು..ರಾಜ್ ಕುಮಾರ್ ಜೊತೆಗೂ ಅಪ್ಪು ಶಬರಿ ಮಲೆ ಯಾತ್ರೆ ಮಾಡಿದ್ರು.ಈಗ ಅಭಿಮಾನಿಗಳು ಪುನೀತ್ ರ ಫೋಟೋ ಹಿಡಿದುಕೊಂಡು ಶಬರಿ ಮಲೆಗೆ ಹೋಗುತ್ತಿದ್ದಾರೆ….

ಪುನೀತ್ ಫೋಟೋ ಹಿಡಿದು ಶಭರಿ ಮಲೆ‌ ಯಾತ್ರೆ ಮಾಡಿದ ಅಭಿಮಾ‌ನಿ.. Read More »

ನವಂಬರ್ 26ರಿಂದ ಚಿತ್ರಮಂದಿರಕ್ಕೆ ‘ಸಖತ್’ ಆಗಿ ಲಗ್ಗೆ ಇಡಲಿದ್ದಾರೆ ಗೋಲ್ದನ್ ಗಣಿ.!

ಮತ್ತೇ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲೆಂದೇ ನಿರ್ದೇಶಕ ಸುನಿ ಹಾಗೂ ಗೊಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ ನಲ್ಲಿ ಚಮಕ್ ಸಿನಿಮಾ ಮಾಡಿ ಬೇಶ್ ಎನಿಸಿಕೊಂಡಿದ್ದ ಈ ಜೋಡಿ ಈಗ ಸಖತ್ ಕಮಾಲ್ ಮಾಡಿ ಕನ್ನಡಿಗರ ಮನಸನ್ನು ಮತ್ತೆ ಗೆಲ್ಲಲಿದ್ಯಾ ಕಾದು ನೋಡಬೇಕಿದೆ. ಈ ಸಿನಿಮಾದ ‘ಶುರುವಾಗಿದೆ‘ ಎಂಬ ಹಾಡು ೨೨ ನವೆಂಬರ್ ೨೦೨೧ ರಂದು ಬಿಡುಗಡೆಯಾಗಿತ್ತು. ಸಖತ್ ಒಂದು ರೊಮ್ಯಾಂಟಕ್ ಕಾಮಿಡಿ ಸಿನಿಮಾವಾಗಿದ್ದು ಇದೇ ನವೆಂಬರ್ ೨೬ ರಂದು ತೆರೆಮೇಲೆ ಬರಲಿದೆ. ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಗಣೇಶ್ ರವರ ಈ ಸಿನಿಮಾ ಕೂಡ ಅಭಿಮಾನಿಗಳಿಗೆ ನಗುವಿನ ಕಚಗುಳಿ ಇಡಲು ಸಜ್ಜಾಗಿದೆ. ಸಿನಿಮಾ ತಂಡಕ್ಕೆ ಮತ್ತೊಮ್ಮೆ ಭರ್ಜರಿ ಯಶಸ್ಸು ಸಿಗಲಿ ಎಂದು ಹಾರೈಸುವ.

ನವಂಬರ್ 26ರಿಂದ ಚಿತ್ರಮಂದಿರಕ್ಕೆ ‘ಸಖತ್’ ಆಗಿ ಲಗ್ಗೆ ಇಡಲಿದ್ದಾರೆ ಗೋಲ್ದನ್ ಗಣಿ.! Read More »

ರೆಬಲ್ ಸ್ಟಾರ್ ಅಂಬರೀಶ್ ಪುಣ್ಯಸ್ಮರಣೆ : ಸುಮಲತಾರ ಭಾವುಕ ನುಡಿಗಳು..

ಕಲಿಯುಗ ಕರ್ಣ ಎಂದೇ ಚಿರಪರಿಚಿತರಾಗಿರುವ ಮಂಡ್ಯದ ಗಂಡು ಅಂಬರೀಶ್ ಅವರು ನಮ್ಮನ್ನಗಲಿ ನವೆಂಬರ್ 24 ಕ್ಕೆ 3 ವರ್ಷ. ಅವರ ಪುಣ್ಯಸ್ಮರಣೆಗಾಗಿ ಸುಮಲತಾ ಅವರು ಅಂಬಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ಅಂಬಿ ಅವರು ಜೊತೆಗೆ ಇಲ್ಲದಿದ್ದರು ಅವರ ಆದರ್ಶಗಳಿಂದ ಅವರು ಸದಾ ಜೀವಂತ. ಅವರ ಅಭಿಮಾನಿಗಳ ಹಾಗೂ ನಮ್ಮ ಮನಸ್ಸಿನಲ್ಲಿ ಅವರು ಸದಾ ಚಿರಂಜೀವಿ. ಅಪ್ಪುವಿನ ಅಕಾಲಿಕ ಮರಣದಿಂದ ಕನ್ನಡ ಜನತೆಗೆ ತುಂಬಾ ನೋವಾಗಿದೆ. ಹಾಗೆ ನಮಗೂ ಕೂಡ ಆ ಶಾಕ್ ಇಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇನ್ನು ಅವರಿಗೆ ಕರ್ನಾಟಕ ರತ್ನ ಸಿಕ್ಕಿದೆ ಎಂದ ಮೇಲೆ ಅದು ಅಂಬಿಯವರಿಗೆ ಸಿಕ್ಕಂತೆಯೇ ಎಂದು ಅಂಬಿ ಅಭಿಮಾನಿಗಳ ಪ್ರಶಸ್ತಿ ಬಗೆಗಿನ ಅಸಮಾಧಾನಕ್ಕೆ ಉತ್ತರ ಕೊಟ್ಟರು. ಅಂಬಿ ಎಂದೂ ಇದು ಬೇಕು ಎಂಬ ಅಪೇಕ್ಷೆ ಇಟ್ಟುಕೊಂಡು ಬದುಕಿದವರಲ್ಲ ಅವರ ಆ ಸ್ವಾಭಿಮಾನದ ಬದುಕೇ ನಮಗೆಲ್ಲಾ ಮಾದರಿಯಾಗಿ ನಾವು ಅದನ್ನ ಪಾಲಿಸಬೇಕು ಅದೇ ಅಂಬಿಯವರಿಗೆ ನೀವು ಕೊಡುವ ಪ್ರಶಸ್ತಿ ಎಂದು ಅಂಬಿ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಅಂಬಿ ಅಮರ.

ರೆಬಲ್ ಸ್ಟಾರ್ ಅಂಬರೀಶ್ ಪುಣ್ಯಸ್ಮರಣೆ : ಸುಮಲತಾರ ಭಾವುಕ ನುಡಿಗಳು.. Read More »

ಅಂದು ಎಡಕಲ್ಲುಗುಡ್ಡ! ಇಂದು ಜಮಾಲಿಗುಡ್ಡ! ಡಾಲಿ-ಅದಿತಿ..

ಅದಿತಿ ಪ್ರಭುದೇವ ಜೊತೆಯಲ್ಲಿ ಡಾಲಿ ಧನಂಜಯ್ “once upon a time in ಜಮಾಲಿಗುಡ್ಡ“. ಈಗಾಗಲೇ ಡಾಲಿ ಧನಂಜಯ್ ಅವರು ಅಭಿನಯಿಸಿರುವ ರತ್ನನ್ ಪ್ರಪಂಚ ಸಿನಿಮಾ ಒಟಿಟಿ ಯಲ್ಲಿ ರಿಲೀಸ್ ಆಗಿ ಯಶಸ್ಸನ್ನು ಕಂಡು ಡಾಲಿಯವರ ಪ್ರತಿಭೆ ಹಾಗೂ ಕೀರ್ತಿ ಎತ್ತರದಲ್ಲಿರುವಾಗಲೇ ಅವರು ಮತ್ತೊಂದು ಸಿನಿಮಾದ ಬಗ್ಗೆ ಸಮಾಚಾರವನ್ನು ಹಂಚಿಕೊಂಡಿದ್ದಾರೆ. ಹೌದು ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ಖ್ಯಾತಿಯ ಕುಶಲ್ ಗೌಡ ನಿರ್ದೇಶಿಸಿರುವ ಡಾಲಿ ದನಂಜಯ್ ಹಾಗೂ ಅದಿತಿ ಪ್ರಭುದೇವ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರ ‘once upon a time in ಜಮಾಲಿಗುಡ್ಡ‘ದ title poster ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಆಗ ಎಡಕಲ್ಲುಗುಡ್ಡದ ಮೇಲೆ..ಈಗ ಜಮಾಲಿ ಗುಡ್ಡದ ಮೇಲೆ ! ಡಾಲಿಯವರ ಚಿತ್ರಗಳೆಂದರೆ ನೋಡಲೇಬೇಕು ಎಂಬ ಕುತೂಹಲವನ್ನು ಹುಟ್ಟುಹಾಕಿರುವ ಯಶಸ್ವೀ ನಟನಿಗೆ ಹಾಗೂ ಈ ಹೊಸ ಚಿತ್ರಕ್ಕೆ ಚಿತ್ರತಂಡಕ್ಕೆ All the very Best!

ಅಂದು ಎಡಕಲ್ಲುಗುಡ್ಡ! ಇಂದು ಜಮಾಲಿಗುಡ್ಡ! ಡಾಲಿ-ಅದಿತಿ.. Read More »

“ರತ್ನನ್ ಪ್ರಪಂಚ” ದಲ್ಲಿ ಸುತ್ತಿದ ಮೇಲೆ ಸಂಬಂಧಗಳ ಬೆಲೆ ಗೊತ್ತಾಗಲೇಬೇಕಲ್ಲವೇ..!

ಸಂಬಂಧಗಳ, ಭಾವನೆಗಳ ಪ್ರಾಮುಖ್ಯತೆಯನ್ನು ಸಾರುವ ಚಿತ್ರ ರತ್ನನ್ ಪ್ರಪಂಚ ಒಟಿಟಿ ಯಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿರುವ ಚಿತ್ರ. ನಾವು ಬದುಕಿನಲ್ಲಿ ಕೆಲವೊಮ್ಮೆ ಆಧುನಿಕತೆಗೆ ತಲೆಬಾಗಿ ನಮ್ಮ ಮನೆಯವರ ಸಂಬಂಧಗಳ ಕುರಿತು ಅಸಡ್ಡೆ ಭಾವವನ್ನು ಹೊಂದರುತ್ತೇವೆ. ತಂದೆ ತಾಯಂದಿರು ಆಧುನಿಕತೆ ತಿಳಿದಿಲ್ಲ ಎಂಬ ಕಾರಣಕ್ಕೆ ಅವರ identity ಯನ್ನೇ ಹೇಳಿಕೊಳ್ಳಲು ಹಿಂಜರಿಯುವ ಮಟ್ಟಕ್ಕೆ ಹೋಗುವುದುಂಟು. ನಂತರ ಕಾಲವೇ ಸಂಬಂಧಗಳ ಆಳವನ್ನು ಅರಿವು ಮಾಡಿಕೊಟ್ಟ ನಂತರ ಅದರ ಬೆಲೆ ತಿಳಿದು ಬದುಕುವ ನಿದರ್ಶನಗಳಿವೆ. ಉಮಾಶ್ರೀ, ಶೃತಿ, ಡಾಲಿ ಧನಂಜಯ್ ಹೀಗೆ ಅಧ್ಬುತ ತಾರಾಬಳಗದೊಂದಿಗೆ ಯುವ ಪೀಳಿಗೆಗೆ ತಂದೆ,ತಾಯಿ, ಒಡಹುಟ್ಟಿದವರು ಪ್ರೀತಿ ಸ್ನೇಹಗಳ ನಿಜವಾದ ಆಳವನ್ನು ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದೆ.

“ರತ್ನನ್ ಪ್ರಪಂಚ” ದಲ್ಲಿ ಸುತ್ತಿದ ಮೇಲೆ ಸಂಬಂಧಗಳ ಬೆಲೆ ಗೊತ್ತಾಗಲೇಬೇಕಲ್ಲವೇ..! Read More »

ಮೋದಿಯವರ ಆಫರ್ ತಿರಸ್ಕರಿಸಿದ್ದ ರಾಜ್ ಕುವರ.!

ಯುವರತ್ನ ಕನ್ನಡದ ಕಣ್ಮಣಿ ಎಂತಲೇ ಹೇಳಬಹುದಾದ ಕನ್ನಡಿಗರ ನೆಚ್ಚಿನ ಅಪ್ಪು ನಮ್ಮನಗಲಿ ಕೆಲವು ದಿನಗಳು ಕಳೆದಿವೆ. ಅವರ ಅಗಲಿಕೆಯ ನಂತರ ಅವರ ಹಲವಾರು ಒಳ್ಳೆಯ ಕೆಲಸಗಳ ಬಗ್ಗೆ ಒಂದೊಂದಾಗಿ ತಿಳಿಯುತ್ತಿದೆ. ಇತ್ತೀಚೆಗೆ ಅವರ ಬಗ್ಗೆ ನಮಗೆ ತಿಳಿದಿರದ ಇನ್ನೊಂದು ವಿಷಯವನ್ನು ಅಪ್ಪುರವರ ಮಾಜಿ ಮ್ಯಾನೇಜರ್ ಒಬ್ಬರು ಹಂಚಿಕೊಂಡಿದ್ದಾರೆ. ಅದೇನೆಂದರೆ, ಅಪ್ಪುರನ್ನು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಸೇರುವಂತೆ ಕೇಳಿದ್ದರು. ಆದರೆ ಪುನೀತ್ ರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲದಿರುವುದರಿಂದ ಅವರು ಅದನ್ನು ತಿರಸ್ಕರಿಸಿದ್ದರು ಎಂದು ಹೇಳಿದ್ದಾರೆ. ಆ ನಂತರ ಅವರು ಮೋದಿಯವರನ್ನೇ ಬೇಟಿ ಮಾಡಿದ್ದರು ಆದರೆ ಅದು ರಾಜಕೀಯ ಕಾರಣಗಳಿಂದಲ್ಲ ಬದಲಾಗಿ ವರನಟ ಡಾ ರಾಜ್ ಕುಮಾರ್ ರವರ ಬಗೆಗಿನ ಪುಸ್ತಕವನ್ನು ಮೋದಿಯವರಿಗೆ ನೀಡಲು ಅವರು ಪ್ರಧಾನಿಯವರನ್ನು ಬೇಟಿ ಮಾಡಿದ್ದರು ಎಂದು ಹೇಳಿದ್ದಾರೆ. ಒಟ್ಟಾರೆ ಯಾವುದೇ ಅತಿಯಾಸೆ ಇಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ತನ್ನದೇ ರೀತಿಯಲ್ಲಿ ಜನಸೇವೆ ಮಾಡಿ ಜನಸೇವೆಗೆ ಅಧಿಕಾರವೇ ಬೇಕೆಂದೇನಿಲ್ಲ ಎನ್ನುವುದನ್ನು ನಿರೂಪಿಸಿ ಹೋಗಿದ್ದಾರೆ. ನಮ್ಮ ಅಪ್ಪು ಮರೆಯಲಾಗದ ಮಾಣಿಕ್ಯ.. ಅಪ್ಪು ಅಮರ ಅವರ ಜೀವನ ಮಾರ್ಗ ಮನುಕುಲಕ್ಕೆ ದಾರಿದೀಪ.

ಮೋದಿಯವರ ಆಫರ್ ತಿರಸ್ಕರಿಸಿದ್ದ ರಾಜ್ ಕುವರ.! Read More »

Scroll to Top