Karnataka Bhagya

ವಾಣಿಜ್ಯ

ಪುನೀತ್ ಬಹುದಿನದ ಕನಸು ಈಗ ನನಸಾಗುವ ಸಂದರ್ಭ

ಪುನೀತ್ ಕಂಡಿದ್ದ ಬಹುದಿನದ ಕನಸೊಂದು ನನಸಾಗುವ ಸಂದರ್ಭ ಬಂದಿದೆ …ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಮಾಡಿದ್ದರು..ಅದಕ್ಕಾಗಿ ಕಾಡು ಮೇಡು‌ಸುತ್ತಾಡಿದ್ರು… . ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದ್ದು‌ ಇದರ ಟೀಸರ್ ನವೆಂಬರ್ 1ರಂದು ತೆರೆಗೆ ಬರಬೇಕಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು…. ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಲಾಗಿತ್ತು. ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಪುನೀತ್ ಕಂಡಿದ್ದ ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿದ್ದರು. ಈ ಕಾರಣಕ್ಕೆ ಆ ಟೀಸರ್ ರಿಲೀಸ್ ಆಗಿಲ್ಲ. ಈಗ ಅದನ್ನು ರಿಲೀಸ್ ಮಾಡುವ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಚಿಂತನೆ ಮಾಡಿದ್ದಾರೆ. ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು. ಆ ಸಮಯ ಈಗ ಬಂದಿದೆ. ಈ ವಿಚಾರದ ಕುರಿತು ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಒಂದನ್ನು ಮಾಡಿದ್ದಾರೆ. ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ.

ಪುನೀತ್ ಬಹುದಿನದ ಕನಸು ಈಗ ನನಸಾಗುವ ಸಂದರ್ಭ Read More »

“100” ಕ್ಕೆ 100 ಕೊಟ್ಟ ಸುಧಾಮೂರ್ತಿ..

“100” ಗೆ ಇನ್ಫಿ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿಯವರಿಂದ ಪ್ರಶಂಸೆ.. ರಮೇಶ್ ಅರವಿಂದ್ ಅವರು ನಟಿಸಿ ನಿರ್ದೇಶಿಸಿರುವ ಚಿತ್ರ “100” ಈ ಚಿತ್ರ ಒಂದು ಸಾಮಾಜಿಕ ಸಂದೇಶವನ್ನು ಹೊಂದಿದೆ. ಕಳೆದ ವಾರ ನವೆಂಬರ್ 19ರಂದು ಬಿಡುಗಡೆಗೊಂಡು ಯಶಸ್ವಿಯಾಗಿದೆ. ಈ ಚಿತ್ರವನ್ನು ವೀಕ್ಷಿಸಿದ ಕನ್ನಡಿಗರು ಮತ್ತೊಮ್ಮೆ ರಮೇಶ್ ಅರವಿಂದ್ ಅವರ ನಿರ್ದೇಶನವನ್ನು ಕೊಂಡಾಡಿದ್ದಾರೆ. Cybercrime ಬಗ್ಗೆ ಕೂಡ ಈ ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇದೆ ಎಂದು 100 ಸಿನಿಮಾವನ್ನು ವೀಕ್ಷಿಸಿದ ಸುಧಾಮೂರ್ತಿಯವರು ಕೊಂಡಾಡಿದ್ದಾರೆ. ಈ ಚಿತ್ರದಲ್ಲಿ ಇಂದಿನ youths ಹೇಗೆ social media ಗೆ addict ಆಗಿ ಅಲ್ಲಿ ಅಪರಿಚಿತರಿಗೆ ಪರಿಚಯವಾಗಿ ಹೇಗೆ ಅದರಿಂದ ಅವರು ಮತ್ತು ಅವರ ಮನೆಯವರಿಗೆ ಅಪಾಯ ಬರುತ್ತದೆ ಇದರಿಂದ youths ಎಷ್ಟು ಎಚ್ಚರಿಕೆ ಇಂದ ಇರಬೇಕು ಎಂಬುದನ್ನು ನಾಜೂಕಾಗಿ ತೋರಿಸಿದ್ದಾರೆ. ಇನ್ನೂ ಇಂಥಹ ಸಾಮಾಜಿಕ ಕಳಕಳಿ ಇರುವ ಸಿನಿಮಾಗಳು ಬರಬೇಕು ಎಂಬುದು ಸಿನಿಪ್ರಿಯರ ಅಭಿಲಾಷೆಯಾಗಿದೆ.

“100” ಕ್ಕೆ 100 ಕೊಟ್ಟ ಸುಧಾಮೂರ್ತಿ.. Read More »

ಜಮಾಲಿ ಗುಡ್ಡದಲ್ಲಿ ಡಾಲಿ ಧನಂಜಯ್

ನಟ ಡಾಲಿ ಧನಂಜಯ್ ಅಭಿನಯದ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್ ಆಗಿದೆ…ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಅನ್ನೋ ಚಿತ್ರದಲ್ಲಿ ಧನಂಜಯ್ ನಾಯಕನಾಗಿ ನಟಿಸುತ್ತಿದ್ದಾರೆ … ಟೈಟಲ್ ನಿಂದಲೇ ಕುತೂಹಲ ಹುಟ್ಟುಹಾಕಿರುವ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರವನ್ನ ಕುಶಾಲ್ ನಿರ್ದೇಶನ ಮಾಡುತ್ತಿದ್ದಾರೆ ..ಕುಶಾಲ್ ಗೌಡ ಈ ಹಿಂದೆ ಕನ್ನಡಕ್ಕಾಗಿ ಒಂದನ್ನು ಒತ್ತಿ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿದ್ರು…ಇನ್ನು ಇದೇ ಮೊದಲ ಬಾರಿಗೆ ಡಾಲಿ ಧನಂಜಯ್ ಜೊತೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ … ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಭಾವನಾ ಅಭಿನಯ ಮಾಡುತ್ತಿದ್ದು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಇರಲಿದೆ ..ಇನ್ನು ಚಿತ್ರ ಕಡ್ಡಿಪುಡಿ,ಸಲಗ, ಟಗರು ಖ್ಯಾತಿಯ ಮಾಸ್ತಿ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ …ಶ್ರೀ ಹರಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ …ಈಗಾಗಲೇ ಎರಡು ತಿಂಗಳಿನಿಂದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರೋ ಸಿನಿಮಾತಂಡ ಇದೇ ಮೊದಲಬಾರಿಗೆ ಮಾಧ್ಯಮಗಳ ಮುಂದೆ ಬಂದು ಸಿನಿಮಾ ಟೈಟಲ್ ಹಾಗೂ ಪೋಸ್ಟರ್ ಲಾಂಚ್ ಮಾಡಿ ತಮ್ಮ ಎಕ್ಸ್ಪೀರಿಯೆನ್ಸ್ ಹಂಚಿಕೊಳ್ತು….

ಜಮಾಲಿ ಗುಡ್ಡದಲ್ಲಿ ಡಾಲಿ ಧನಂಜಯ್ Read More »

ಲಕ್ಷ್ಮಿ ಬಾರಮ್ಮ ಚಿನ್ನು ಮದುವೆಗೆ ಶುರುವಾಯ್ತು ಸಿದ್ಧತೆ

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಚಿನ್ನು ಪಾತ್ರದಲ್ಲಿ ಗಮನ ಸೆಳೆದಿದ್ದ ನಟಿ ರಶ್ಮಿ ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ .. ನಿಖಿಲ್ ಭಾರ್ಗವ್ ಎನ್ನುವವರ ಜೊತೆ ರಶ್ಮಿ ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇತ್ತೀಚೆಗಷ್ಟೇ ಇಬ್ಬರ ನಿಶ್ಚಿತಾರ್ಥ ಗುರುಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಡೆದಿದೆ .. ನಿಶ್ಚಿತಾರ್ಥಕ್ಕೂ ಮುನ್ನ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಇಬ್ಬರೂ ಅದ್ಧೂರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ..ಇಬ್ಬರ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ …

ಲಕ್ಷ್ಮಿ ಬಾರಮ್ಮ ಚಿನ್ನು ಮದುವೆಗೆ ಶುರುವಾಯ್ತು ಸಿದ್ಧತೆ Read More »

ಮಂಜುನಾಥನ ದರ್ಶನ ಪಡೆದ ಬಾಕ್ಸ್ ಆಫೀಸ್ ಸುಲ್ತಾನ

ನಟ ನಟ ದರ್ಶನ್ ಅವರಿಗೆ ಟ್ರಾವೆಲ್ ಅಂದ್ರೆ ತುಂಬಾ ಪ್ರೀತಿ ಚಿತ್ರೀಕರಣದಲ್ಲಿ ಬಿಡುವಿನ ವೇಳೆಯಲ್ಲಿ ದರ್ಶನ್ ಸಾಕಷ್ಟು ಇಂಟ್ರಸ್ಟಿಂಗ್ ಇರುವಂತಹ ಸ್ಥಳಗಳಿಗೆ ಟ್ರಾವಲ್ ಮಾಡುತ್ತಲೇ ಇರುತ್ತಾರೆ …ನಟ ಪ್ರಾಣಿಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ದರ್ಶನ್ ಹೆಚ್ಚಾಗಿ ಕಾಡುಗಳು ಹಾಗೂ ಮೃಗಾಲಯಗಳು ಇರುವಂಥ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ಕಾಮನ್ … ಕೇವಲ ಕಾಡು ಮೇಡುಗಳ ಅಷ್ಟೇ ಅಲ್ಲದೆ ದೇವಸ್ಥಾನಗಳಿಗೂ ದರ್ಶನ್ ತಪ್ಪದೆ ಭೇಟಿ ಕೊಡುತ್ತಾರೆ ಇತ್ತೀಚೆಗಷ್ಟೇ ತಮಿಳುನಾಡಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ದರ್ಶನ್ ಈಗ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ದರ್ಶನ ಪಡೆದಿದ್ದಾರೆ… ದರ್ಶನ್ ಧರ್ಮಸ್ಥಳಕ್ಕೆ ಬಂದಿದ್ದಾರೆ ಎನ್ನುವ ವಿಚಾರ ತಿಳಿದ ಕೂಡಲೇ ಸಾಕಷ್ಟು ಅಭಿಮಾನಿಗಳು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ …ಇನ್ನು ದರ್ಶನ್ ಕ್ರಾಂತಿ ಸಿನಿಮಾದಲ್ಲಿ ಬಿಸಿಯಾಗಿತ್ತು ಚಿತ್ರವನ್ನು ವಿ ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದು ಬಿ ಸುರೇಶ್ ಹಾಗೂ ಶೈಲಜಾ ನಾಗ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ ….

ಮಂಜುನಾಥನ ದರ್ಶನ ಪಡೆದ ಬಾಕ್ಸ್ ಆಫೀಸ್ ಸುಲ್ತಾನ Read More »

ಕಿರುತೆರೆ ಕಲಾವಿದರಿಂದ ಪುನೀತ್ ನೆನಪಿನಲ್ಲಿ ಅಪ್ಪು ಅಮರ ಕಾರ್ಯಕ್ರಮ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಾಕಷ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು …ಕನ್ನಡದ ಕೋಟ್ಯಾಧಿಪತಿ ಫ್ಯಾಮಿಲಿ ಪವರ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವುದರ ಜತೆಗೆ ತಮ್ಮದೇ ಬ್ಯಾನರ್ ಅಡಿಯಲ್ಲಿ ಧಾರಾವಾಹಿಗಳನ್ನು ನಿರ್ಮಿಸಿದ್ದರು … ಈಗಾಗಲೇ ಕಲಾವಿದರು ಹಾಗೂ ವಾಣಿಜ್ಯ ಮಂಡಳಿ ಕಡೆಯಿಂದ ಅಪ್ಪು ನುಡಿ ನಮನ ಎಂಬ ಕಾರ್ಯಕ್ರಮವನ್ನು ಮಾಡುವ ಮೂಲಕ ಪುನೀತ್ ಅವರಿಗೆ ಗೌರವ ಅರ್ಪಿಸಲಾಗಿದೆ …ಈಗ ಕಿರುತೆರೆ ಕಲಾವಿದರ ಅಸೋಸಿಯೇಷನ್ ಕಡೆಯಿಂದ ಪುನೀತ್ ಹೆಸರಲ್ಲಿ “ಅಪ್ಪು ಅಮರ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದಾರಡ ಈಗಾಗಲೇ ರಾಜ್ಕುಮಾರ್ ಮನೆಯವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು..ನ.28ರಂದು ಸಂಜೆ 4 ಗಂಟೆಗೆ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ವತಿಯಿಂದ ‘ಅಪ್ಪು ಅಮರ’ ಕಾರ್ಯಕ್ರಮ ಆಯೋಜಿಸಲಿದ್ದು, ಜಯನಗರದ ನ್ಯಾಷನಲ್‌ ಕಾಲೇಜಿನ ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಇದು ನಡೆಯಲಿದೆ.

ಕಿರುತೆರೆ ಕಲಾವಿದರಿಂದ ಪುನೀತ್ ನೆನಪಿನಲ್ಲಿ ಅಪ್ಪು ಅಮರ ಕಾರ್ಯಕ್ರಮ Read More »

ವಿಚ್ಛೇದನದ ವದಂತಿಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಉತ್ತರ

ನಟಿ ಪ್ರಿಯಾಂಕ ಚೋಪ್ರಾ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪತಿಯ ಹೆಸರನ್ನು ಕೈ ಬಿಟ್ಟಿದ್ದರು ಈ ವಿಚಾರ ತಿಳಿದ ಅಭಿಮಾನಿಗಳು ಇಬ್ಬರ ಮಧ್ಯೆ ಬಿರುಕು ಮೂಡಿದೆ ..ಇವರ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ವದಂತಿಗಳು ಹಬ್ಬಿದ್ದು … ಗಾಸಿಪ್ ಎಲ್ಲೆಡೆ ಹರಡುವ ಮುಂಚೆಯೇ ನಟಿ ಪ್ರಿಯಾಂಕಾ ಚೋಪ್ರಾ ಪರೋಕ್ಷವಾಗಿ ನಾವಿಬ್ಬರೂ ಚೆನ್ನಾಗಿದ್ದೇವೆ ಎನ್ನುವ ಸೂಚನೆ ಕೊಟ್ಟಿದ್ದಾರೆ … ಮದುವೆ ನಂತರ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೋನಾಸ್ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ ಮಂಗಳವಾರ ಇನ್ಸ್ಟಾಗ್ರಾಂನಲ್ಲಿ ನಿಕ್ ಜೋನಸ್ 1ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ …ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋ ಇದಾಗಿದ್ದು ಈ ವಿಡಿಯೋಗೆ ಪ್ರಿಯಾಂಕ ಕಮೆಂಟ್ ಮಾಡಿದ್ದಾರೆ ‘Damn! I just died in your arms’ ಎಂದು ಕಮೆಂಟ್ ಮಾಡುವ ಮೂಲಕ ಪತಿಯ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ವಿಚ್ಛೇದನದ ವದಂತಿಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಉತ್ತರ Read More »

ಪ್ಯಾಂಟ್ ಎಲ್ಲಮ್ಮ ಎಂದು ರಶ್ಮಿಕಾಗೆ ಅಭಿಮಾನಿಗಳ ಪ್ರಶ್ನೆ !

ನಟಿ ರಶ್ಮಿಕಾ ಸದ್ಯ ಟಾಪ್‌ ನಟಿಯರ ಸಾಲಿನಲ್ಲಿ ನಿಲ್ಲೋ ನಾಯಕಿ.. ಸ್ಯಾಂಡಲ್ ವುಡ್ ನಲ್ಲಿ ಕೆರಿಯರ್ ಸ್ಟಾರ್ಟ್ ಮಾಡಿ ಈಗ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಸಖತ್ ಫೇಮಸ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಮುಂಬೈ ಆಂಧ್ರ ಅಂತ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ .. ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಸಖತ್ ಬೋಲ್ಡ್ ಲುಕ್ ನಲ್ಲಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ ಸಿಂಗಲ್ ಪೀಸ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಅವರಿಗೆ ಅಭಿಮಾನಿಗಳು ಪ್ಯಾಂಟ್ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ … ಅಭಿಮಾನಿಗಳಿಗೆ ಪ್ರಶ್ನೆ ಕೇಳೋದಕ್ಕೆ ಕಾರಣ ಲಕ್ಷ್ಮಿಕಾಂತ ಧರಿಸಿದ್ದ ಔಟ್ ಫಿಟ್ ಹೌದು ರಶ್ಮಿಕಾ ಸಿಂಗಲ್ ಪೀಸ್ ಧರಿಸಿದ್ದು ಅದು ಸಖತ್ ಶಾಕ್ ಆಗಿದ್ದ ಕಾರಣ ಅಭಿಮಾನಿಗಳು ಈ ರೀತಿಯ ಪ್ರಶ್ನೆ ಕೇಳಿದ್ದಾರೆ ..ಸದ್ಯ ರಶ್ಮಿಕಾ ಈ ಬೋಲ್ಡ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ …

ಪ್ಯಾಂಟ್ ಎಲ್ಲಮ್ಮ ಎಂದು ರಶ್ಮಿಕಾಗೆ ಅಭಿಮಾನಿಗಳ ಪ್ರಶ್ನೆ ! Read More »

ಸಾಮಾಜಿಕ ಜಾಲತಾಣದಲ್ಲಿ ಗಂಡನ ಹೆಸರನ್ನು ಬಿಟ್ಟ ಪ್ರಿಯಾಂಕ ಚೋಪ್ರ-ಇದು ವಿಚ್ಛೇದನದ ಸೂಚನೆಯೇ?

ಗ್ಲೋಬಲ್ ಐಕಾನ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ. ಇದರೊಂದಿಗೆ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸ್ಟಾರ್ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿರುವ ಅನುಮಾನಗಳು ಸೃಷ್ಟಿ ಆಗಿದೆ… ಪ್ರಿಯಾಂಕ ಹಾಗೂ ನಿಕ್ ಜೋನಸ್ ಇಬ್ಬರು ಪ್ರೀತಿ ಮಾಡಿ ಮದುವೆ ಆಗಿದ್ದರು.ಮ ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇಂದು ಜೋನಾಸ್ ಹೆಸರನ್ನು ತೆಗೆದುಹಾಕಿರುವುದು ತೀವ್ರ ಕುತೂಹಲಕ್ಕೆಡೆ ಮಾಡಿದೆ. 2018 ಡಿಸೆಂಬರ್1 ರಂದು ವಿವಾಹವಾಗಿದ್ದರು ಪ್ರಿಯಾಂಕ ‌ಹಾಗೂ‌ ನಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು…ಮದುವೆ ನಂತರ ಟ ಗೆ ಪ್ರಿಯಾಂಕ ಶಿಫ್ಟ್ ಆಗಿದ್ದು ಅಲ್ಲಿಯೂ ಇಂಡಿಯನ್‌ ಸ್ಟೈಲ್ ನ‌‌ ಹೊಸ ರೆಸ್ಟೋರೆಂಟ್ ಆರಂಭ ಮಾಡಿದ್ರು…ಅದಷ್ಟೇ ಅಲ್ಲದೆ ಇತ್ತೀಚಿಗಷ್ಟೇ ಹೊಸ ಮನೆಗೆ ಸ್ಥಳಾಂತರಗೊಂಡಿದ್ದ ಪ್ರಿಯಾಂಕಾ ದೀಪಾವಳಿಯನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎನ್ನುವ ಸಂದೇಶ ಹಂಚಿಕೊಂಡಿದ್ದರು…ಇನ್ಮು ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಕೊಡ್ತಾರೆ ಅಂತ ಕಾದಿದ್ದ ಅಭಿಮಾನಿಗಳಿಗೆ ಈಗ ಪ್ರಿಯಾಂಕ ಸೋಷಿಯಲ್ ಮಿಡಿಯಾದಲ್ಲಿ ಗಂಡನ ಹೆಸರು ತೆಗೆದು‌ಹಾಕಿರೋದು ಶಾಕಿಂಗ್ ಆಗಿದೆ..

ಸಾಮಾಜಿಕ ಜಾಲತಾಣದಲ್ಲಿ ಗಂಡನ ಹೆಸರನ್ನು ಬಿಟ್ಟ ಪ್ರಿಯಾಂಕ ಚೋಪ್ರ-ಇದು ವಿಚ್ಛೇದನದ ಸೂಚನೆಯೇ? Read More »

ಸಿಲ್ವರ್ ಸ್ಕ್ರೀನ್ ಮೇಲೆ ನಿಖಿಲ್ ರೈಡಿಂಗ್ ಶುರು

ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಅಭಿನಯದ ರೈಡರ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಟೈಟಲ್ ಹಾಗೂ ಟೀಸರ್ ನಿಂದ ಸದ್ದು ಮಾಡಿರುವಂಥ ರೈಡರ್ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ …. ಇತ್ತೀಚಿಗಷ್ಟೇ ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದ ರೈಡರ್ ಚಿತ್ರತಂಡ ಸಿನಿಮಾದ ಎಲ್ಲಾ ಕೆಲಸಗಳನ್ನ ಕಂಪ್ಲೀಟ್ ಮಾಡಿ ಪ್ರಚಾರದ ಕೆಲಸವನ್ನ ಶುರು ಮಾಡಿಕೊಂಡಿದೆ … ಅದರಂತೆಯೇ ಸಿನಿಮಾವನ್ನ ಡಿಸೆಂಬರ್ 25 ರಂದು ಕ್ರಿಸ್ಮಸ್ ವಿಶೇಷವಾಗಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ..ಚಿತ್ರಕ್ಕೆ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳಿದ್ದು ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಸಿನಿಮಾವಾಗಿದೆ….ಇದೇ ಮೊದಲ ಬಾರಿಗೆ ನಿಖಿಲ್ ಜತೆ ಕಾಶ್ಮೀರ ಪರದೇಸಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಸದ್ಯ ಸಿನಿಮಾದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ನಿಖಿಲ್ ರೈಡರ್ಸ್ ಸಿನಿಮಾ ತೆರೆಮೇಲೆ ಮಿಂಚಲಿದೆ …

ಸಿಲ್ವರ್ ಸ್ಕ್ರೀನ್ ಮೇಲೆ ನಿಖಿಲ್ ರೈಡಿಂಗ್ ಶುರು Read More »

Scroll to Top