Karnataka Bhagya

ವಾಣಿಜ್ಯ

21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ವಿಶ್ವಸುಂದರಿ ಪಟ್ಟ ದೊರೆತಿದೆ. ಲಾರಾ ದತ್ತ, ಸುಶ್ಮಿತಾ ಸೇನ್ ನಂತರ ಪಂಜಾಬ್ ಮೂಲದ ಹರ್ನಾಜ್ ಕೌರ್ ಸಂಧು ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಇಸ್ರೇಲ್ ನ ಐಲಾಟ್ ನಲ್ಲಿ ನಡೆದಿದೆ ಮಿಸ್ ಯೂನಿವರ್ಸ್ ಸ್ಪರ್ಧೆ 2021. ಕಳೆದ ಬಾರಿಯ ವಿಜೇತೆ ಮೆಕ್ಸಿಕೋ ದೇಶದ ಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಸಂಧು ಅವರಿಗೆ ಕಿರೀಟ ತೊಡಿಸಿದರು. 1994 ರಲ್ಲಿ ಸುಷ್ಮಿತಾ ಸೇನ್ ಹಾಗೂ 2000 ರಲ್ಲಿ ಬಾಲಿವುಟ್ ನಟಿ ಲಾರಾದತ್ತಾ ವಿಶ್ವ ಸುಂದರಿ ಪಟ್ಟ ತಮ್ಮದಾಗಿಸಿಕೊಂಡಿದ್ದರು. ಇದೀಗ ಭಾರತ ಮತ್ತೆ ವಿಶ್ವ ಸುಂದರಿ ಪಟ್ಟ ತನ್ನದಾಗಿಸಿಕೊಂಡಿದೆ. ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರಿಗೆ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್ ಪಟ್ಟ ದೊರೆತಿದೆ. ಎಲ್ಲಾ ಮೂರು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಇಂದಿನ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ನಿಭಾಯಿಸುವುದು ಎಂಬುದು ನಿಮ್ಮ ಅಭಿಪ್ರಾಯ ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಭಾರತದ ಸಂಧು ಅವರು ಹೀಗೆ ಹೇಳಿದ್ದಾರೆ. ಒತ್ತಡಕ್ಕೆ ಇಂದಿನ ದಿನಗಳಲ್ಲಿ ಮೂಲ ಕಾರಣ ತಮ್ಮ ಬಗ್ಗೆ ತಮಗೆ ನಂಬಿಕೆ ಇಲ್ಲದಿರುವುದು. ನಮ್ಮ ಬಗ್ಗೆ ನಾವು ಯೋಚಿಸಬೇಕು. ನಮ್ಮ ನಾಯಕರು ನಾವೇ. ನಮಗೆ ನಾವೇ ಧ್ವನಿಯಾಗಬೇಕು. ನಾನು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದಲೇ ಇಂದು ನಾನು ಇಲ್ಲಿ ನಿಂತಿರುವುದು ಎಂದು ಉತ್ತರಿಸಿದ್ದಾರೆ. ಸಂಧು ಅವರು ಮೂಲತಃ ಪಂಜಾಬಿನ ಚಂಢಿಗಡದವರು. ತಮ್ಮ ವಿದ್ಯಾಭ್ಯಾಸ ಎಲ್ಲವನ್ನೂ ಅಲ್ಲಿಯೇ ಮುಗಿಸಿದ್ದಾರೆ. ಪ್ರಸ್ತುತ ಅವರು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಇವರು ಮಾಡಲ್ ಹಾಗೂ ಇವರಿಗೆ ಈಜು ಮತ್ತು ಪ್ರವಾಸ ಬಲು ಇಷ್ಟ. 2017 ರಿಂದ ಇವರ ಮಾಡೆಲಿಂಗ್ ಪಯಣ ಶುರುವಾಗಿದೆ. ಹರ್ನಾಜ್ ಕೌರ್ ಸಂಧು ಪ್ರಸ್ತುತ 70ನೇ ವಿಶ್ವಸುಂದರಿ (ಮಿಸ್ ಯೂನಿವರ್ಸ್) ಪಟ್ಟ ಪಡೆದು ಭಾರಕ್ಕೆ ಹೆಮ್ಮೆ ಎನಿಸಿದ್ದಾರೆ.

21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್ Read More »

ಪುಷ್ಪ ಸಿನಿಮಾಗೆ ಖಡಕ್ ವಾರ್ನಿಂಗ್ ಕೊಟ್ಟ ಆಂಧ್ರ ಸರ್ಕಾರ

ಪುಷ್ಪಾ ಚಿತ್ರವು ಪೋಸ್ಟ್ ಪ್ರೊಡಕ್ಷನ್‌ ಮುಗಿಸಿ ತೆರೆಗೆ ಬರಲು ಸಿದ್ದವಾಗಿದೆ. ಡಿಸೆಂಬರ್ 17 ರಂದು ಸಿನಿಮಾ ರಿಲೀಸ್ ಆಗಲಿದ್ದು..ಈಗಾಗಲೇ ಚಿತ್ರದ ಟ್ರೇಲರ್‌ ಭಾರಿ ಸದ್ದು ಮಾಡಿದ್ದು, ಹಾಡಿಗಳು ಟ್ರೆಂಡ್ ಸೆಟ್ ಮಾಡುತ್ತಿವೆ…ಸಿನಿಮಾ‌ ಬಗ್ಗೆ ಭಾರಿ ನಿರೀಕ್ಷೆಗಳಿದ್ದು ಅಭಿಮಾನಿಗಳು ಪುಷ್ಪರಾಜ್ ಕಥೆಯನ್ನ ಕಣ್ತುಂಬಿಕೊಳ್ಳಲು ಕಾದಿದ್ದಾರೆ…ಸಿನಿಮಾತಂಡ ಕೂಡ ಚಿತ್ರ ಬಿಡುಗಡೆಯ ಸಂಭ್ರಮದಲ್ಲಿದೆ ಎಲ್ಲವೂ ಸೂಪರ್ ಆಗಿರೋ ಸಂಧರ್ಭದಲ್ಲಿ ಪುಷ್ಪ ಸಿನಿಮಾದ ನಿರ್ಮಾಪಕರಿಗೆ ಸಮಸ್ಯೆಯೊಂದು ಎದುರಾಗಿದೆ…ಅದು ಆಂಧ್ರಪ್ರದೇಶದಲ್ಲಿ ಟಿಕೆಟ್ ದರ. ಇತ್ತೀಚಿಗೆ ಆಂಧ್ರ ಪ್ರದೇಶದ ಹೊಸ ಕಾನೂನಿನ ಅಡಿಯಲ್ಲಿ ಸಿನಿಮಾ ಹಾಲ್‌ಗಳು ಚಲನಚಿತ್ರ ಟಿಕೆಟ್ ಗಳನ್ನು ಇನ್ಮುಂದೆ ಮಾರಾಟ ಮಾಡುವಂತಿಲ್ಲ. ರಾಜ್ಯ ಸರ್ಕಾರ ಮಾತ್ರ ಇದನ್ನು ಮಾಡಬಹುದು. ಹೌದು, ರಾಜ್ಯ ಸರ್ಕಾರ ನಡೆಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಸಿನಿಮಾ ಹಾಲ್‌ಗಳು ತಮ್ಮ ಚಲನಚಿತ್ರ ಟಿಕೆಟ್‌ಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಆಂಧ್ರ ಪ್ರದೇಶ ವಿಧಾನಸಭೆ ಅಂಗೀಕರಿಸಿದೆ. ಈಗ ಈ ಬೆಳವಣಿಗೆ ಚಿತ್ರ ನಿರ್ಮಾಪಕರಿಗೆ ತಲೆ‌ನೋವಾಗಿದೆ… ಟಿಕೆಟ್ ದರಗಳು ಕಡಿಮೆ ಮಾಡುವುದರಿಂದ ಬಿ, ಸಿ ಮತ್ತು ಡಿ ಸೆಂಟರ್‌ಗಳಲ್ಲಿ ಎಸಿ ಥಿಯೇಟರ್‌ಗಳನ್ನು ನಡೆಸುವುದು ಸಾಧ್ಯವಿಲ್ಲ ಎಂದು ಅನೇಕ ವ್ಯಾಪಾರ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.. ನಿರ್ಮಾಪಕರು,ವಿತರಕರ ನಿಯೋಗವು ಸಚಿವ ಪೆರ್ಣಿ ನಾಣಿ ಅವರನ್ನು ಭೇಟಿ ಮಾಡಿತು ಆದರೆ ಆ ಸಭೆಯಿಂದ ಏನೂ ಉಪಯೋಗವಾಗಲಿಲ್ಲ…ಹಿಂದಿನ ಸರ್ಕಾರದ ಅವಧಿಯಲ್ಲಿ, ವಿತರಕರು ನ್ಯಾಯಾಲಯಕ್ಕೆ ಹೋಗಿ ಒಂದು ಅಥವಾ ಎರಡು ವಾರಗಳವರೆಗೆ ಟಿಕೆಟ್ ಹೆಚ್ಚಳಕ್ಕೆ ಅನುಮತಿ ಪಡೆಯುತ್ತಿದ್ದರು… ಈ‌ ಭಾರಿಯೂ ಅದೇ ರೀತಿ‌ AP ಸರ್ಕಾರವು GO ಅನ್ನು ಪರಿಷ್ಕರಿಸುತ್ತದೆಯೇ ಎಂದು ಪುಷ್ಪ ತಂಡ ಪ್ಲಾನ್ ಮಾಡಿತ್ತು …, ಟಿಕೆಟ್ ಹೆಚ್ಚಳಕ್ಕೆ ಅನುಮತಿ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿತು. ಆದ್ರೆ‌ ಇದ್ಯಾವುದು ಉಪಯೋಗಕ್ಕೆ ಬಂದಿಲ್ಲ… ಮೂಲಗಳ ಪ್ರಕಾರ ಇದೇ ವಿಚಾರವಾಗಿ ಮತ್ತೆ ಕೋರ್ಟ್ ಮೆಟ್ಟಿಲು ಹತ್ತಿದರೆ ಸರ್ಕಾರವು ಚಿತ್ರಮಂದಿರಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ ಎಂದು ಎಪಿ ಸರ್ಕಾರ ಪುಷ್ಪ ಸಿನಿಮಾತಂಡಕ್ಕೆ ಎಚ್ಚರಿಸಿದ್ಯಂತೆ…ಆಂಧ್ರದ ಹಲವು ಥಿಯೇಟರ್‌ಗಳಿಗೆ ಸರಿಯಾದ ಪರವಾನಗಿ ಇಲ್ಲ ಎಂಬುದು ಬಹಿರಂಗ ಸತ್ಯ. ಸರ್ಕಾರವೀ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಲ್ಲಿ ರಾಜ್ಯದಲ್ಲಿ ಸಿನಿಮಾಗಳ ವ್ಯವಹಾರಕ್ಕೆ ಕಷ್ಟವಾಗಲಿದೆ… ಸದ್ಯ ಅನಿವಾರ್ಯವಾಗಿ ಯಾವುದೇ ಬೇರೆ ದಾರಿ ಇಲ್ಲದೆ.. ನಿರ್ಮಾಪಕರುಗಳು ಸರ್ಕಾರದ ಆದೇಶಗಳನ್ನು ಪಾಲಿಸಲೇಬೇಕಾಗಿದೆ…ಪುಷ್ಪ ಮಾತ್ರವಲ್ಲದೆ RRR, ರಾಧೆ ಶ್ಯಾಮ್ ಮತ್ತು ಇತರ ದೊಡ್ಡ ಚಿತ್ರಗಳು ಬಿಡುಗಡೆಗೆ ಅಣಿಯಾಗಿರುವುದರಿಂದ, ತೆಲುಗು ಚಿತ್ರರಂಗದ ನಿರ್ಮಾಪಕರು ಈ ಸಮಸ್ಯೆಯನ್ನು ನಿಭಾಯಿಸಲು ಮತ್ಯಾವ ಮಾಸ್ಟರ್ ಪ್ಲಾನ್ ಮಾಡ್ತಾರೆ ಕಾದು ನೋಡಬೇಕು…

ಪುಷ್ಪ ಸಿನಿಮಾಗೆ ಖಡಕ್ ವಾರ್ನಿಂಗ್ ಕೊಟ್ಟ ಆಂಧ್ರ ಸರ್ಕಾರ Read More »

ಕರಾವಳಿಯ ಪುಣ್ಯಕ್ಷೇತ್ರಗಳಿಗೆ ಕಿಚ್ಚ ಸುದೀಪ್ ಭೇಟಿ

ನಟ‌ ಕಿಚ್ಚ ಸುದೀಪ್ ಸದಾ ಸಿನಿಮಾಗಳಲ್ಲಿ‌‌ ಬ್ಯುಸಿ ಇರೋ ಕಲಾವಿದ…ಸ್ಯಾಂಡಲ್ ವುಡ್ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಸ್ಟ್ರಿಯ ಸಿನಿಮಾಗಳಲ್ಲಿಯೂ ಬ್ಯೂಸಿ ಆಗಿರೋ ಕಿಚ್ಚ ಏಕಾಏಕಿ ಪುಣ್ಯಕ್ಷೇತ್ರಗಳ ದರ್ಶನದಲ್ಲಿ ಬ್ಯುಸಿ ಆಗಿದ್ದಾರೆ… ಸದ್ಯ ಕರಾವಳಿ ಪ್ರವಾಸದಲ್ಲಿರುವ ನಟ ಕಿಚ್ಚ ಸುದೀಪ್ ಶ್ರೀಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ‌ ಕಿಚ್ಚ ಜೊತೆಗೆ ಪತ್ನಿ ಪ್ರಿಯಾ ಕೂಡ ದೇವರ ದರ್ಶನ ಪಡೆದಿದ್ದಾರೆ… ನಂತರ ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಿಚ್ಚ ಸುದೀಪ್ ಕುಟುಂಬ ಸಮೇತರಾಗಿ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.. ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠೆ ಸೇವೆ ಸಲ್ಲಿಸಿದ್ದಾರೆ.. ನಂತರ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಕರಾವಳಿಯ ಪುಣ್ಯಕ್ಷೇತ್ರಗಳಿಗೆ ಕಿಚ್ಚ ಸುದೀಪ್ ಭೇಟಿ Read More »

ನಾನು ತಲೆ ತಗ್ಗಿಸುವಂತೆ ಮಾಡಬೇಡ” ಜ್ಯೂ ಎನ್ ಟಿ ಆರ್ ಗೆ ತಾಯಿಯ ಸಲಹೆ

ಜ್ಯೂ ಎನ್ ಟಿ ಆರ್ ಅಭಿನಯದ ಆರ್ ಆರ್ ಆಎ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ…ಚಿತ್ರದ ಟ್ರೇಲರ್ ಟೀಸರ್ ಈಗಾಗಲೇ ಧೂಳೆಬ್ಬಿಸುತ್ತಿದ್ದು ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.. ಇನ್ನು ಸಿನಿಮಾ ಕನ್ನಡದಲ್ಲಿಯೂ ರಿಲೀಸ್ ಆಗಲಿದ್ದು ..ಟಾಲಿವುಡ್ ಸ್ಟಾರ್ ಗಳು ತಾವೇ ಖುದ್ದು ತಮ್ಮ‌ಪಾತ್ರಕ್ಕೆ ಕನ್ನಡದಲ್ಲಿ ಡಬ್ ಮಾಡಿದ್ದಾರೆ…ಜ್ಯೂ ಎನ್ ಟಿ ಆರ್ ಕೂಡ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದು ಈ ಹಿಂದೆಯೇ ತಾರಕ್ ಅಪ್ಪುಗಾಗಿ ಕನ್ನಡ ಹಾಡೊಂದನ್ನ ಹಾಡಿದ್ರು…ಕರ್ನಾಟಕಕ್ಕೂ ಎನ್ ಟಿ ಆರ್ ಗೂ ಅವಿನಾಭಾವ ಸಂಬಂಧವಿದ್ದು ಎನ್ ಟಿ ಆರ್ ತಾಯಿ ಕುಂದಾಪುರದವ್ರು…ಹಾಗಾಗಿ ಜ್ಯೂ ಎನ್ ಟಿ ಆರ್ ತಾಯಿ ಕನ್ನಡವನ್ನ ಚೆನ್ನಾಗಿಯೇ ಮಾತನಾಡುತ್ತಾರೆ… ಆರ್ ಆರ್ ಆರ್ ಟ್ರೇಲರ್ ಗೆ ಕನ್ನಡದಲ್ಲಿ ಡಬ್ ಮಾಡಿರೋ ಜ್ಯೂ‌ಎನ್ ಟಿ ಆರ್ ಗೆ ಅವ್ರ ತಾಯಿ ಒಂದು ಕಿವಿ ಮಾತು ಹೇಳಿದ್ರಂತೆ..ಡಬ್ಬಿಂಗ್ ಮಾಡು ಖುಷಿ ಆದ್ರೆ ಜಾಗ್ರತೆಯಿಂದ ಇರು..ಅಲ್ಲಿ ನಮ್ಮವರು ಇದ್ದಾರೆ ನೀನು ತಪ್ಪು ಮಾಡಿದ್ರೆ ಗೊತ್ತಾಗುತ್ತದೆ.. ನಾನು ತಲೆ ತಗ್ಗಿಸುವಂತ ಕೆಲಸ ಮಾತ್ರ ಮಾಡಬೇಡ ಎಂದಿದ್ರೆ…ಅದೇ ಕಾರಣದಿಂದ ತಾರಕ್ ಸಾಕಷ್ಟು ಭಾರಿ ರಿಹರ್ಸಲ್ ಮಾಡಿ ಡಬ್ಬಿಂಗ್ ಮಾಡಿದ್ದಾರೆ….

ನಾನು ತಲೆ ತಗ್ಗಿಸುವಂತೆ ಮಾಡಬೇಡ” ಜ್ಯೂ ಎನ್ ಟಿ ಆರ್ ಗೆ ತಾಯಿಯ ಸಲಹೆ Read More »

ಪುಷ್ಪ ತಂಡಕ್ಕೆ ಸ್ಟೈಲಿಷ್ ಸ್ಟಾರ್ ನಿಂದ ಸಿಕ್ತು ಭರ್ಜರಿ ಗಿಫ್ಟ್

ಬಹು ನೀರಿಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʻಪುಷ್ಪʼ ಭಾರಿ ನಿರೀಕ್ಷೆಯೊಂದಿಗೆ ಮುಂದಿನ ವಾರ (ಡಿ.17) ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಇದರಿಂದ ಖುಷಿಯಾಗಿರೋ ಚಿತ್ರದ ನಾಯಕ ನಟ ಸ್ಟೈಲಿಷ್ ಸ್ಟಾರ್‌ ಅಲ್ಲು ಅರ್ಜುನ್‌ ಚಿತ್ರದ ಕೋರ್‌ ಟೀಂನಲ್ಲಿದ್ದ 40 ಜನರಿಗೆ ಭರ್ಜರಿ ಬಹುಮಾನ ಕೊಟ್ಟಿದ್ದಾರೆ… ಹೌದು ಅಲ್ಲು ಅರ್ಜುನ್ ಚಿತ್ರತಂಡದ ಜೊತೆ ಕೆಲಸ ಮಾಡಿ ಖುಷಿಯಾಗಿರೋ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ತಲಾ ಒಂದು ತೊಲೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಇದೇ ವೇಳೆ ಚಿತ್ರದ ಪ್ರೊಡಕ್ಷನ್‌ ತಂಡದಲ್ಲಿ ಕೆಲಸ ಮಾಡಿದವರಿಗೆ ಒಟ್ಟು 10 ಲಕ್ಷ ರೂಪಾಯಿಗಳನ್ನು ನೀಡಿ ಚಿತ್ರದ ಶೂಟಿಂಗ್‌ಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಾಹದ್ ಫಾಸಿಲ್, ಸುನೀಲ್‌, ಅನಸೂಯ, ಜಗಪತಿ ಬಾಬು, ಪ್ರಕಾಶ್‌ ರಾಜ್‌ ಸೇರಿದಂತೆ ಭಾರಿ ತಾರಾಗಣವಿದೆ. ಐಟಂ ಸಾಂಗ್‌ನಲ್ಲಿ ಸಮಂತಾ ಅಭಿನಯಿಸಿದ್ದು ಇದು ಚಿತ್ರದ ಸ್ಪೆಷಲ್‌ ಅಟ್ರ್ಯಾಕ್ಷನ್‌ ಆಗಿದೆ. ಪುಷ್ಪ’ ಡಿಸೆಂಬರ್ 17 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರಲಿದೆ… ಪುಷ್ಪ ತಂಡ ಹಗಲು ರಾತ್ರಿ ಎನ್ನದೆ ಕಾಡು ಮೇಡು ಅಲೆದು ಶೂಟಿಂಗ್ ಕೆಲಸ ಮಾಡಿದೆ ..ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂದು ಅಲ್ಲು ಅರ್ಜುನ್ ಸಿನಿಮಾ ಬಿಡುಗಡೆಗೂ ಈ ಬಂಪರ್ ಬಹುಮಾನ ನೀಡಿದ್ದಾರೆ…

ಪುಷ್ಪ ತಂಡಕ್ಕೆ ಸ್ಟೈಲಿಷ್ ಸ್ಟಾರ್ ನಿಂದ ಸಿಕ್ತು ಭರ್ಜರಿ ಗಿಫ್ಟ್ Read More »

ಸೋಷಿಯಲ್ ‌ಮಿಡಿಯಾದಲ್ಲಿ ಹಲ್ ಚಲ್ ಎಬ್ಬಿಸ್ತಿದ್ದಾಳೆ ಮಾಸ್ಟರ್ ಆನಂದ್ ಪುತ್ರಿ

ಕಲರ್ಸ್ ಕನ್ನಡ ನಡೆಸುತ್ತಿರೋ ಹೊಸ ರಿಯಾಲಿಟಿ ಶೋ ನಮ್ ಅಮ್ಮ ಸೂಪರ್ ಸ್ಟಾರ್ …ಈ ಕಾರ್ಯಲ್ರಮದಲ್ಲಿ ಮಕ್ಕಳು ತಮ್ಮ ತಾಯೊಯ ಜೊತೆ ಸ್ಪರ್ಧಿಗಳಾಗಿ ಭಾಗವಹಿಸ್ತಾ ಇದ್ದಾರೆ…ಈಗಾಗಲೇ ಎರಡು ವಾರದಿಂದಲೇ ಆರಂಭವಾಗಿರೋ ಈ ಶೋ‌ನಲ್ಲಿ ನಟ.‌ ನಿರೂಪಕ ಮಾಸ್ಟರ್ ಆನಂದ್ ಪತ್ನಿ ಹಾಗೂ ಮಗಳು ಕೂಡ ಸ್ಫರ್ಧಿಗಳಾಗಿದ್ದಾರೆ…ಕಾರ್ಯಕ್ರಮದ ಎಂಟ್ರಿಯಲ್ಲೇ ಎಲ್ಲರನ್ನ ಇಂಪ್ರೆಸ್ ಮಾಡಿರೋ ಆನಂದ್ ಪುತ್ರಿ ವಂಶಿಕಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾಳೆ… ಸಖತ್ ಆಕ್ಟಿವ್ ಇರೋ ವನಂಶಿಕಾ ಅಪ್ಪನಂತೆಯೇ ಪಟ ಪಟ ಅಂತ ಮಾತನಾಡ್ತಾಳೆ ..ನೋಡೋಕು ಮುದ್ದು ಮುದ್ದಾಗಿರೋ ಈ ಪೋರಿ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಎಲ್ಲರನ್ನ ನಿಬ್ಬೆರಗು ಮಾಡ್ತಿದ್ದಾಳೆ .. ಕಳೆದ ಇಪ್ಪತ್ತು ದಿನಗಳ‌ ಹಿಂದೆಯಷ್ಟೇ ಆನಂದ್ ಮಗಳ ಇನ್‌ಸ್ಟಾಗ್ರಾಂ ಅಕೌಂಟ್ ಕ್ರಿಕೆಟ್ ಆಗಿದೆ .ಇಪ್ಪತ್ತೇ ದಿನದಲ್ಲಿ ವನಂಶಿಕಾಗೆ 94 _ಸಾವಿರಕ್ಕೂ ಹೆಚ್ಚು ಫಾಲೋ ವರ್ಸ್ ಹುಟ್ಟುಕೊಂಡಿದ್ದಾರೆ..ಇದೆಲ್ಲವೂ ಆಕೆಯ ಟ್ಯಾಲೆಂಟ್‌ ಗೆ ಸಿಕ್ಕಿರೋ ಉಡುಗೊರೆಯಾಗಿದೆ…ಸದ್ಯ ಸೋಷಿಯಲ್ ‌ಮಿಡಿಯಾದ ಸ್ಟಾರ್ ಕಿಡ್ಸ್ ಗಳಲ್ಲಿ ವನಂಶಿಕಾ‌ ಟಾಪ್ ಲೀಸ್ಟ್ ನಲ್ಲಿದ್ದಾಳೆ …

ಸೋಷಿಯಲ್ ‌ಮಿಡಿಯಾದಲ್ಲಿ ಹಲ್ ಚಲ್ ಎಬ್ಬಿಸ್ತಿದ್ದಾಳೆ ಮಾಸ್ಟರ್ ಆನಂದ್ ಪುತ್ರಿ Read More »

ಸರಿಗಮಪ ವೇದಿಕೆಯಲ್ಲಿ ಚಿರಂಜೀವಿ -ಕ್ರೇಜಿಸ್ಟಾರ್ ಸ್ನೇಹವನ್ನು ಮೆಲುಕು ಹಾಕಿದ ಸ್ಪರ್ಧಿಗಳು

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ದಲ್ಲಿ ಈ ವಾರ ರವಿ ಹಂಸ ವೈಭವ ಎಂಬ ಶೀರ್ಷಿಕೆಯಡಿಯಲ್ಲಿ ಸ್ಪರ್ಧಿಗಳು ಹಾಡುಗಳನ್ನು ಹಾಡುತ್ತಿದ್ದಾರೆ….ರವಿಚಂದ್ರನ್ ವಿಶೇಷ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ರವಿಮಾಮ ಹಾಗೂ ಹಂಸಲೇಖ ಕಾಂಬಿನೇಷನ್ ಹಾಡುಗಳು ನೋಡುಗರನ್ನ ರಂಜಿಸಲಿವೆ… ಚನ್ನಪ್ಪ ಹಾಗೂ ಕೀರ್ತನ್ ಹೊಳ್ಳ ಸಿಪಾಯಿ ಸಿನಿಮಾದ ಸ್ನೇಹಕ್ಕೆ ಸ್ನೇಹ ಹಾಡನ್ನ ಹಾಡಿದ್ದು ಇದೇ ಸಂದರ್ಭದಲ್ಲಿ ರವಿಚಂದ್ರನ್ ತಮ್ಮ‌ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಮಧ್ಯೆ ಇರೋ ಸ್ನೇಹವನ್ನ ಮೆಲುಕು ಹಾಕಿದ್ರು… ಸಿಪಾಯಿ ಸಿನಿಮಾದ ಪಾತ್ರಕ್ಕಾಗಿ ಚಿರಂಜೀವಿ ಅವ್ರನ್ನ ಎಲಿಕಾಪ್ಟರ್ ಮೂಲಕ ಕರೆಸಿದ್ರಂತೆ ಕ್ರೇಜಿಸ್ಟಾರ್ ಅಷ್ಟೇ ಅಲ್ಲ ಮತ್ತೆ ವಾಪಸ್ ಕೂಡ ಎಲೆಕಾಪ್ಟರ್ ಬುಕ್ ಮಾಡಿ ಕಳುಹಿಸಿಕೊಟ್ಟಿದ್ರಂತೆ…ಇನ್ನು ಚಿತ್ರದಲ್ಲಿ ಅಭಿನಯ ಮಾಡಲು ಒಂದೇ ಒಂದು ಫೋನ್ ಕಾಲ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ರಂತೆ ಮೆಗಾಸ್ಟಾರ್ …

ಸರಿಗಮಪ ವೇದಿಕೆಯಲ್ಲಿ ಚಿರಂಜೀವಿ -ಕ್ರೇಜಿಸ್ಟಾರ್ ಸ್ನೇಹವನ್ನು ಮೆಲುಕು ಹಾಕಿದ ಸ್ಪರ್ಧಿಗಳು Read More »

ಯಶ್ ಡೈರೆಕ್ಷನ್ ಕ್ಯಾಪ್ ತೊಡ್ತಿದ್ದಾರಾ?? ಈ ಬಗ್ಗೆ ರಾಕಿಬಾಯ್ ಮನದಾಳದ ಮಾತೇನು ಗೊತ್ತಾ..?!

ರಾಕಿಂಗ್ ಸ್ಟಾರ್ ಯಶ್ ಅಂದರೆ ನೆನಪಾಗುವುದೇ ಅವರ ನೈಸರ್ಗಿಕ ನಟನೆ ಅವರ ಸ್ನೇಹಪರತೆ ಸಿನಿಮಾ ನಟನೆ ಬಗೆಗಿನ ಅವರ ಒಲವು. ಅದಕ್ಕೆ ನಿದರ್ಶನವೆಂಬಂತೆ KGF chapter 1 ಸಿನಿಮಾದಲ್ಲಿ ಇಡೀ ದೇಶಕ್ಕೆ ಯಶ್ ಯಾರೆಂದು ತಿಳಿಯುವಂತಾಗಿದೆ. ಇಡೀ ದೇಶ KGF chapter 2 ಗೆ ಕಾತುರದಿಂದ ಕಾಯುತ್ತಿರುವುದು ಅತಿಶಯೋಕ್ತಿಯಲ್ಲ. ಇತ್ತೀಚೆಗಿನ ಒಂದು ಸಂದರ್ಶನದಲ್ಲಿ ಯಶ್ ಅವರು ಡೈರೆಕ್ಷನ್ ಮಾಡುತ್ತಾರಾ ಎಂಬ ಪ್ರಶ್ನೆಗೆ ಯಶ್ ಅವರ ಉತ್ತರ ಏನಾಗಿತ್ತು ಗೊತ್ತಾ?? ಯಶ್ ಅವರು ನಾನು ಮೂಲತಃ ರಂಗಭೂಮಿ ಹಿನ್ನೆಲೆ ಇಂದ ಬಂದವನು ನಾನು ನಟನೆಯಿಂದ ಅಭಿಮಾನಿಗಳಿಗೆ ಖುಷಿ ಕೊಡಬೇಕು. ಅದರಲ್ಲೇ ನನಗೆ ಖುಷಿ ಇದೆ. ಡೈರೆಕ್ಷನ್ ಈಸ್ ನಾಟ್ ಮೈ ಕಪ್ ಆಫ್ ಟೀ ಎಂದು ಹೇಳಿದ್ದಾರೆ. ಡೈರೆಕ್ಷನ್ ಮಾಡುವಷ್ಟು ಪ್ರತಿಭಾವಂತ ನಾನಲ್ಲ ಎನ್ನುತ್ತಾ ಡೈರೆಕ್ಷನ್ ಬಗ್ಗೆ ಸಧ್ಯಕ್ಕೆ ಒಲವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಯಶ್ ಡೈರೆಕ್ಷನ್ ಕ್ಯಾಪ್ ತೊಡ್ತಿದ್ದಾರಾ?? ಈ ಬಗ್ಗೆ ರಾಕಿಬಾಯ್ ಮನದಾಳದ ಮಾತೇನು ಗೊತ್ತಾ..?! Read More »

ಪುನೀತ್ ಸರ್ ಇಲ್ಲದ ಕರ್ನಾಟಕ ನನಗೆ ಶೂನ್ಯ ಅನ್ನಿಸುತ್ತೆ ಎಂದ ಜ್ಯೂ ಎನ್ ಟಿ ಆರ್

ಬೆಂಗಳೂರಿನಲ್ಲಿ ಆರ್ ಆರ್ ಆರ್ ಸಿನಿಮಾ‌ ಸುದ್ದಿಗೋಷ್ಠಿ ನಡೆದಿದೆ..ಕಾರ್ಯಕ್ರಮದಲ್ಲಿ ನಟಿ ಅಲಿಯಾ ಭಟ್, ಜ್ಯೂ. ಎನ್ ಟಿ ಆರ್, ರಾಮ್ ಚರಣ್ ತೇಜಾ, ಹಾಗೂ ರಾಜಮೌಳಿ ಭಾಗಿಯಾಗಿದ್ರು…ಸಿನಿಮಾ‌ ಬಗ್ಗೆ ಮಾತಾಡೋ‌‌ಮುಂಚೆ ಚಿತ್ರತಂಡ ‌ಪುನೀತ್ ರಾಜ್ ಕುಮಾರ್ ನೆನೆದು ಒಂದು ನಿಮಿಷ ಮೌನಾಚರಣೆ ಮಾಡಿ ಸುದ್ದಿಗೋಷ್ಠಿ ಆರಂಭ‌ ಮಾಡಿದ್ರು… ಇನ್ನು‌ಅಪ್ಪು‌ಜೊತೆ‌ ಉತ್ತಮ‌ ಸ್ನೇಹ‌ ಸಂಬಂದ ಹೊಂದಿರೋ‌ ಜ್ಯೂ ಎನ್ ಟಿ ಆರ್ ಪುನೀತ್ ಸರ್ ಇಲ್ಲದ ಕರ್ನಾಟಕ ನನಗೆ ಶೂನ್ಯ ಅನ್ನಿಸುತ್ತೆ ಎಂದ್ರು‌..ಅವರ ಬ್ಲೆಸ್ಸಿಂಗ್ ನನ್ನ ಮೇಲೆ ಇರಬೇಕು ಅಂತ ಪ್ರಾರ್ಥನೆ ಮಾಡುತ್ತೇನೆ‌ ಎನ್ನುತ್ತಲೇ ಅವರಿಗಾಗಿ ಹಾಡಿದ್ದ ಹಾಡನ್ನು ಮತ್ತೆ ಹಾಡಿದ್ರು… ಈ ಹಾಡು ನಾನು ಯಾವಾಗ್ಲು ಹಾಡುತೇನೆ.. ಇದು ನಾನು ಮೊದಲು ಮತ್ತು ಕೊನೆಯದಾಗಿ ಹಾಡೋ ಹಾಡು ಎಂದು ಗೆಳೆಯ ಗೆಳೆಯಾ ಸಾಂಗ್ ಹಾಡುವ ಮೂಲಕ ಪುನೀತ್‌ರನ್ನ ನೆನಪು‌ ಮಾಡಿಕೊಂಡ್ರು ಜ್ಯೂ. ಎನ್ ಟಿಆರ್..

ಪುನೀತ್ ಸರ್ ಇಲ್ಲದ ಕರ್ನಾಟಕ ನನಗೆ ಶೂನ್ಯ ಅನ್ನಿಸುತ್ತೆ ಎಂದ ಜ್ಯೂ ಎನ್ ಟಿ ಆರ್ Read More »

ಆರ್ ಆರ್ ಆರ್ ಚಿತ್ರದಲ್ಲಿ ಸುದೀಪ್ ಯಾಕಿಲ್ಲ ಅನ್ನೋ ಪ್ರಶ್ನೆಗೆ ರಾಜಮೌಳಿ ಉತ್ತರ ….

ಭಾರತೀಯ‌ ಸಿನಿಮಾರಂಗದ ದಿ ಬೆಸ್ಟ್ ನಿರ್ದೇಶಕರ ಸಾಲಿನಲ್ಲಿ ನಿಲ್ಲೋ ನಿರ್ದೇಶಕ ರಾಜಮೌಳಿ…ಸೋಲಿಲ್ಲದ ಸರದಾರನಾಗಿ ಮಿಂಚುತ್ತಿರುವ ರಾಜಮೌಳಿ ನಿರ್ದೇಶನದ ಪ್ರತಿ ಸಿನಿಮಾನೂ ಭಾರತಿಯ ಸಿನಿಮಾ ಇತಿಹಾಸದಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತಾ ಬರುತ್ತಿದೆ… ಇಂತಹ‌ ನಿರ್ದೇಶಕ‌ನ ಸಿನಿಮಾದಲ್ಲಿ ಕಿಚ್ಚನಿಗೆ ಪ್ರತಿ ಬಾರಿಯೂ ವಿಶೇಷ ಪಾತ್ರ ಕಟ್ಟಿಟ್ಟ ಬುತ್ತಿ…ಈ‌ಹಿಂದೆ ರಾಜಮೌಳಿ ನಿರ್ದೇಶನದ ಈಗ. ಬಾಹುಬಲಿ ಸಿನಿಮಾದಲ್ಲಿ ಕಿಚ್ವ ಅಭಿನಯ ಮಾಡಿದ್ರು..ರಾಜಮೌಳಿಯ ಉತ್ತಮ ಸ್ನೇಹಿತರಾಗಿರೋ ಕಿಚ್ಚನಿಗಾಗಿ ವಿಶೇಷ ಪಾತ್ರವನ್ನ ಜಕ್ಕಣ್ಣ ಫಿಕ್ಸ್ ಮಾಡ್ತಿದ್ರು …ಆದ್ರೆ ಆರ್ ಆರ್ ಆರ್ ನಲ್ಲಿ ಕಿಚ್ವನ ಅಭಿನಯ ಯಾಕಿಲ್ಲ ಅನ್ನೋ ಪ್ರಶ್ನೆಗೆ ರಾಜಮೌಳಿ ಉತ್ತರಿಸಿದ್ದಾರೆ… ನಾನು ಪಾತ್ರ ಯಾರನ್ನ ಡಿಮ್ಯಾಂಡ್ ಮಾಡುತ್ತೋ ಅವರನ್ನ ಸಿನಿಮಾದಲ್ಲಿ ಆಯ್ಕೆ ಮಾಡಿಕೊಳ್ತಿನಿ..ಕಿಚ್ಚ ನನಗೆ ತುಂಬಾ ಆತ್ಮೀಯರು..ಬಾಹುಬಲಿ ಚಿತ್ರದಲ್ಲಿ ಆ ಪಾತ್ರಕ್ಕೆ ಅವರೇ ಬೇಕಾಗಿತ್ತು ಹಾಗಾಗಿ ಆಯ್ಕೆ ಮಾಡಿಕೊಂಡ್ವಿ ಎಂದಿದ್ದಾರೆ…ಸುದೀಪ್ ರೊಂದಿಗೆ ಎಂದಿಗೂ ವ್ಯಬಹಾರ ನಡೆಯೋದಿಲ್ಲ ಸ್ನೇಹ ಮಾತ್ರ ಅನ್ನೋದನ್ನು ಹೇಳಿದ್ದಾರೆ ರಾಜಮೌಳಿ ಈ ಮೂಲಕ ಕಿಚ್ಚ ಎಂಟ್ರಿ ಯಾಕಿಲ್ಲ ಅನ್ನೋದಕ್ಕೆ ಅಭಿಮಾನಿಗಳಿಗೆ ಉತ್ತರ ಸಿಕ್ಕಿದೆ..

ಆರ್ ಆರ್ ಆರ್ ಚಿತ್ರದಲ್ಲಿ ಸುದೀಪ್ ಯಾಕಿಲ್ಲ ಅನ್ನೋ ಪ್ರಶ್ನೆಗೆ ರಾಜಮೌಳಿ ಉತ್ತರ …. Read More »

Scroll to Top