Karnataka Bhagya

ವಾಣಿಜ್ಯ

ಬೆಂಗಳೂರಿನಲ್ಲಿ ಥ್ರಿಬ್ಬಲ್ ಆರ್ ತಂಡ -ಪ್ರೆಸ್ ಮೀಟ್ ಹೈಲೆಟ್ಸ್ ಇಲ್ಲಿದೆ

ಟಾಲಿವುಡ್ ಹಾಗೂ ಬಾಲಿವುಡ್ ಸೂಪರ್*ಗಳು ಅಭಿನಯ ಮಾಡಿ ರುವ ಆರ್ ಆರ್ ಆರ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದುಕೊಂಡಿದೆ ಸಿನಿಮಾ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿದಂತೆ ಕನ್ನಡದಲ್ಲೂ ಬಿಡುಗಡೆಯಾಗುತ್ತಿದ್ದು ಚಿತ್ರತಂಡ ಸಿನಿಮಾ ಪ್ರಚಾರಕ್ಕಾಗಿ ಇಂದು ಬೆಂಗಳೂರಿಗೆ ಬಂದಿತ್ತು … ನಟ ರಾಮ್ ಚರಣ್ , ಜೂನಿಯರ್ ಎನ್ ಟಿ ಆರ್ ಆಲಿಯಾ ಭಟ್ ಹಾಗೂ ರಾಜಮೌಳಿ ಮಾಧ್ಯಮಗಳ ಕೇಳಿದಂತಹ ಪ್ರಶ್ನೆಗಳಿಗೆ ಉತ್ತರಿಸಿದರು.ವಿಶೇಷ ಎಂದರೆ ರಾಜ್ ಚರಣ್ ಹಾಗೂ ಎನ್ ಟಿ ಆರ್ ಕನ್ನಡದ ಟ್ರೇಲರ್ ಗೆ ತಾವೇ ಡಬ್ ಮಾಡಿದ್ದಾರೆ… ಸಿನಿಮಾಗೂ ತಾವೇ ಡಬ್ ಮಾಡಲು ನಿರ್ಧರಿಸಿದ್ದು ಈಗಾಗಲೇ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ತಿದ್ದಾರೆ…ಸುದ್ದಿಗೋಷ್ಟಿಯುದ್ದಕ್ಕೂ ಬಹುತೇಕ‌ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ರು ರಾಮ್ ಚರಣ್, ಎನ್ ಟಿ ಆರ್ ಹಾಗೂ ರಾಜಮೌಳಿ… ಇನ್ನು ಸುದ್ದಿಗೋಷ್ಠಿ ಆರಂಭದಲ್ಲಿಯೇ ಪುನೀತ್ ಅವರನ್ನ‌ ನೆನದು ಚಿತ್ರತಂಡ ಒಂದು‌ ನಿಮಿಷ ಮೌನಾಚರಣೆ ಮಾಡಿದ್ರು…ಇನ್ನು ಬಾಹುಬಲಿ ‌ಸಿನಿಮಾ‌ ಮಾಡಿದಾಗ ಕನ್ನಡದಲ್ಲಿ ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಸಾಕಷ್ಟು ಅಭಿಮಾನಿಗಳು ರಾಜಮೌಳಿ ಅವ್ರನ್ನ ಪ್ರಶ್ನೆ ಮಾಡಿದ್ದರಂತೆ ಹಾಗಾಗಿ ಆರ್ ಆರ್ ಆರ್ ಸಿನಿಮಾವನ್ನ ಕನ್ನಡದಲ್ಲಿಯೂ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ…

ಬೆಂಗಳೂರಿನಲ್ಲಿ ಥ್ರಿಬ್ಬಲ್ ಆರ್ ತಂಡ -ಪ್ರೆಸ್ ಮೀಟ್ ಹೈಲೆಟ್ಸ್ ಇಲ್ಲಿದೆ Read More »

ಹೊಸ ಅವತಾರದಲ್ಲಿ ಬರ್ತಿದೆ ಕವಿರತ್ನ ಕಾಳಿದಾಸನ ಶಾಕುಂತಲಮ್

ಮಹಾಕಾವ್ಯಗಳನ್ನಾಧರಿಸಿ ಹಲವು ಸಿನಿಮಾಗಳು ಬಂದಿವೆ. ಅದರಲ್ಲೂ ಮಹಾಕವಿ ಕಾಳಿದಾಸರಿಂದ ರಚಿತವಾದ ಶಾಕುಂತಲಂ ಕಾವ್ಯದಿಂದ ಸ್ಪೂರ್ತಿ ಪಡೆದು ಬಹಳಷ್ಟು ಸಿನಿಮಾಗಳು ಬಂದಿವೆ. ಅದರಲ್ಲೂ ಕನ್ನಡಿಗರಿಗೆ ನೆನಪಾಗುವುದು ಕವಿರತ್ನ ಕಾಳಿದಾಸ ಸಿನಿಮಾ. ಮೂಲಃ ಕಾಳಿದಾಸ ಎಂದ ತಕ್ಷಣ ನೆನಪಾಗುವುದು ಡಾ.ರಾಜ್ ಕುಮಾರ್. ಅವರ ಅಭಿನಯ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಅಮೋಘ. ಅದನ್ನು ಯಾರು ತಾನೇ ಮರೆಯಲು ಸಾಧ್ಯ. ಇದೀಗ ಇದೇ ಕಥೆ ಸಂಸ್ಕೃತದಲ್ಲಿ ನಿರ್ಮಾಣವಾಗುತ್ತಿದೆ. ಸಂಸ್ಕೃತದಲ್ಲಿರುವ ಹಲವು ಕಾವ್ಯ ಪುರಾಣಗಳು ಬಹಳಷ್ಟು ಸಿನಿಮಾಗಳಿಗೆ ಸ್ಪೂರ್ತಿಯಾಗಿ ಸಿನಿಮಾಗಳಾಗಿವೆ. ಶಾಕುಂತಲಮ್ ಚಿತ್ರದಲ್ಲಿ ಶೇ. 90 ರಷ್ಟು ಡೈಲಾಗ್ ಗಳು ಸಂಸ್ಕೃತದಲ್ಲಿವೆ. ಉಳಿದ ಶೇ. 5 ರಷ್ಟು ಡೈಲಾಗ್ ಗಳು ಪ್ರಾಕೃತ ಭಾಷೆಯಲ್ಲಿದೆ. ಪಾಯಲ್ ವಿಜಯ್ ಶೆಟ್ಟಿ ಹಾಗೂ ಶುಭಂ ಜೈಬೀರ್ ಸಹರಾವತ್ ತಾರಾಗಣವಿದೆ. ಬಾದಾಮಿ. ಐಹೊಳೆ, ಪಟ್ಟದಕಲ್ಲು ಹೀಗೆ ಹೊಯ್ಸಳ ವಾಸ್ತುಶಿಲ್ಪವಿರುವ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಯಕ್ಷಗಾನ, ಭರತನಾಟ್ಯಂ, ಮೋಹಿಯಾಟ್ಟಂ ಸೇರಿದಂತೆ ಹಲವು ಕರಾವಳಿ ನೃತ್ಯಗಳು ಈ ಸಿನಿಮಾದಲ್ಲಿವೆ. ಇನ್ನೊಂದು ವಿಶೇಷವೆಂದರೆ ಸಿನಿಮಾದಲ್ಲಿ ಪಾತ್ರಗಳಿಗೆ ಖಾದಿ ಬಟ್ಟೆಯನ್ನು ಬಳಸಿದ್ದಾರೆ. ಏಕೆಂದರೆ ಭಾರತಕ್ಕೆ ಸ್ವತಂತ್ರ್ಯ ಬಂದು 75 ವರುಷಗಳಾಗಿರುವ ಪ್ರಯುಕ್ತ. ಹೀಗೆ ಹಲವು ವಿಶೇಷತೆಗಳೊಂದಿಗೆ ಬರುತ್ತಿದೆ “ಶಾಕುಂತಲಮ್” ಸಿನಿಮಾ. ದೇವನಾಗರಿ ಲಿಪಿ ಸಂಸ್ಕೃತದಲ್ಲಿ ಈ ಸಿನಿಮಾ ಬರಲಿದೆ.

ಹೊಸ ಅವತಾರದಲ್ಲಿ ಬರ್ತಿದೆ ಕವಿರತ್ನ ಕಾಳಿದಾಸನ ಶಾಕುಂತಲಮ್ Read More »

ರಾಕಿಂಗ್ ಸ್ಟಾರ್ ಜೊತೆ ಸೆಲ್ಫಿಗಾಗಿ ರಾಧಿಕಾ ಪರದಾಟ

ನಟಿ ರಾಧಿಕಾ ಪಂಡಿತ್ ಹಾಗೂ ಎಸ್ಟಿ ತಮ್ಮ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡಿದ್ದಾರೆ ..ಆನಿವರ್ಸವಿ ವಿಶೇಷವಾಗಿ ರಾಧಿಕಾ ಮತ್ತು ಯಶ್ ಇಬ್ಬರು ಔಟಿಂಗ್ ಹೋಗಿದ್ದು ಅದರ ಫೋಟೋಗಳನ್ನ ರಾಧಿಕಾ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ… ಈ ಫೋಟೋ ವಿಶೇಷ ಏನಂದ್ರೆ ರಾಧಿಕಾ ಯಶ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಎಷ್ಟು ಪರದಾಟ ಮಾಡಿದ್ದಾರೆ ಅನ್ನೋದು‌‌ ಗೊತ್ತಾಗುತ್ತಿದೆ.. ರಾಧಿಕಾ‌‌‌ ಪ್ರತಿ ಬಾರಿ ಸೆಲ್ಫಿ‌ ತೆಗೆದುಕೊಳ್ಳುವಾಗಲೂ ಯಶ್‌‌ ಒಂದಲ್ಲ ಒಂದು ರೀತಿಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.. ಸದ್ಯ‌ಈ ಫೋಟೋಗಳು ಸಣಕತ್ ಫನ್ನಿಯಾಗಿದ್ದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ…

ರಾಕಿಂಗ್ ಸ್ಟಾರ್ ಜೊತೆ ಸೆಲ್ಫಿಗಾಗಿ ರಾಧಿಕಾ ಪರದಾಟ Read More »

ಕತ್ರಿನಾ‌ ರಂತೆ ಮದುವೆ ಫೋಟೋ‌ವಿಡಿಯೋ ಮಾರಾಟ ಮಾಡಿದ ಹಣ ಮಾಡಿದ ಸ್ಟಾರ್ ಇವ್ರೇ ನೋಡಿ

ಸದ್ಯ ಎಲ್ಲೆಡೆ ಕತ್ರಿನಾ‌ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಯದ್ದೆ ಸುದ್ದಿ ..ಮದುವೆ ಆ ರೀತಿ ಇರುತ್ತಂತೆ ಈ ರೀತಿ ಇರುತ್ತಂತೆ..ಮದ್ವೆಗೆ ಬರುವವರಿಗೆ ಏಳು ಷರತ್ತು ಇರುತ್ತಂತೆ ಅಂತೆಲ್ಲಾ ಸುದ್ದಿಯಾಗ್ತಿದೆ..ಅದ್ರ ಜೊತೆಗೆ ಮದುವೆ ಫೋಟೋ – ವಿಡಿಯೋ 100ಕೋಟಿಗೆ ಸೇಲ್ ಮಾಡಿದ್ದಾರಂತೆ ಅನ್ನೋ ಸುದ್ದಿ ಕೂಡ ಜೋರಾಗಿದೆ…ಆದ್ರೆ ಕತ್ರಿನಾ ಮಾತ್ರವಲ್ಲ ಬಾಲಿವುಡ್ ನ‌ ಸಾಕಷ್ಟು ಸ್ಟಾರ್ ಗಳು ತಮ್ಮ ಮದುವೆ ಫೋಟೋ ವಿಡಿಯೋದಿಂದ ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ..ಹಾಗಾದ್ರೆ ಯಾರೆಲ್ಲಾ ಆ ಲೀಸ್ಟ್ ನಲ್ಲಿದ್ದಾರೆ .. ಕತ್ರಿನಾ-ವಿಕ್ಕಿ ಕೌಶಲ್ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ…ಇಲಗಲಿ ತನಕ‌‌ ಮದುವೆ ಸಂಭ್ರಮದ ವಿಡಿಯೋ ಆಗಲಿ ಫೋಟೊ ಆಗಲಿ ಲೀಕ್ ಆಗಿಲ್ಲ ..ಇಬ್ಬರ ಮದ್ವೆ ವಿಡಿಯೋ ಫೋಟೋವನ್ನ ಓಟಿಟಿಗೆ ಸೇಲ್ ಮಾಡಲು‌ ವಿಕ್ಕಿ ಮತ್ತು ಕತ್ರಿನಾ ನಿರ್ಧಾರ ಮಾಡಿದ್ದು ಅದಕ್ಕಾಗಿ 100ಕೋಟಿ ಪಡೆದಿದ್ದಾರಂತೆ… 2018 ರಲ್ಲಿ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 5 ದಿನ ಅದ್ದೂರಿಯಾಗಿ ಮದುವೆಯಾಗಿದ್ರು… ದಂಪತಿಗಳು ತಮ್ಮ ಮದುವೆಯ ಫೋಟೋಗಳ ಹಕ್ಕುಗಳನ್ನು ಅಂತರರಾಷ್ಟ್ರೀಯ ಮ್ಯಾಗಜೀನ್ ಗೆ 18 ಕೋಟಿಗೆ ಮಾರಾಟ ಮಾಡಿದ್ರು…ಇದು ಬಿ-ಟೌನ್‌ನ ಮೊದಲ ಭಾರಿ ಹಣಗಳಿಸಿದ ವಿವಾಹಗಳಲ್ಲಿ ಒಂದಾಗಿತ್ತು… ಅನುಷ್ಕಾ ಶರ್ಮಾ ಹಾಗೂ ವಿರಾಟ್ ಇಟಲಿಯ ಟಸ್ಕಾನಿಯಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ರು…, ದಂಪತಿಗಳು ತಮ್ಮ ಮದುವೆಯ ಫೋಟೋ ಗಳನ್ನ ಸುತ್ತಲಿನ ಪ್ರಚಾರವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಲು ನಿರ್ಧರಿಸಿದರು…. ವಧು ಮತ್ತು ವರನ ಬೆರಳೆಣಿಕೆಯಷ್ಟು ಚಿತ್ರಗಳನ್ನು ರಿವಿಲ್ ಮತ್ತಷ್ಟು ಫೋಟೋಗಳನ್ನ ಮ್ಯಾಗಜೀನ್‌ಗೆ ಮಾರಾಟ ಮಾಡಲಾಗಿತ್ತು ಅದರಿಂದ ಬಂದ‌ಹಣವನ್ನ ಚಾರಿಟಿಗೆ ದಾನ ಮಾಡಿದ್ರು ವಿರುಕ್ಷಾ ಜೋಡಿ… ನಟಿ ಪ್ರೀತಿ ಜಿಂಟಾ ಇವರೆಲ್ಲರನ್ನೂ ಮೀರಿ ಒಂದು ಹೆಜ್ಜೆ ಮುಂದು ಹೋಗಿ ತಮ್ಮ ಮದುವೆ ಫೋಟೋಗಳನ್ನ ಹರಾಜು ಮಾಡಿದ್ರು ಅದರಿಂದ ಬಂದ ಕೋಟಿ ಕೋಟಿ ಹಣವನ್ನ ಮಕ್ಕಳಿಗೆ ಶಿಕ್ಷಣ ಮತ್ತು ವೃದ್ಧಾಶ್ರಮ ಪುನರ್ವಸತಿಗಾಗಿ ಕೆಲಸ ಮಾಡುವ ಪ್ರತಿಷ್ಠಾನಕ್ಕೆ ನೀಡಿದ್ರು..

ಕತ್ರಿನಾ‌ ರಂತೆ ಮದುವೆ ಫೋಟೋ‌ವಿಡಿಯೋ ಮಾರಾಟ ಮಾಡಿದ ಹಣ ಮಾಡಿದ ಸ್ಟಾರ್ ಇವ್ರೇ ನೋಡಿ Read More »

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ-ಫೋಟೋ ಹಂಚಿಕೊಂಡ ಕ್ಯಾಟ್

ಬಾಲಿವುಡ್ ನಟಿ ಕತ್ರಿನಾ ಕೈಫ್‌ ಹಾಗೂ ನಟ ವಿಕ್ಕಿ ಕೌಶಲ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ… ಇಂದು ರಾಜಸ್ಥಾನದ ಐಷಾರಾಮಿ ರೆಸಾರ್ಟ್‌ ನಲ್ಲಿ ಇಬ್ನರ ವಿವಾಹ ನಡೆದಿದ್ದು ,ಹಿಂದೂ ಸಂಪ್ರದಾಯದಂತೆ ಇಬ್ಬರು ಸಪ್ತಪದಿ ತುಳಿದಿದ್ದಾರೆ .. ರಾಜಸ್ಥಾನದಲ್ಲಿ ಸಿಕ್ಸ್ ಸೆನ್ಸಸ್ ಹೆರಿಟೇಜ್ ಹೋಟೆಲ್‌ ಆಗಿ ಬದಲಾಗಿರುವ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರಾಯಲ್ ವೆಡ್ಡಿಂಗ್ ಜರುಗಿದೆ. ಮದುವೆಯ ಫೋಟೋಗಳು ಎಲ್ಲೂ ಲೀಕ್ ಆಗದಂತೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ತಂಡ ತೀವ್ರ ಎಚ್ಚರಿಕೆ ವಹಿಸಿದ್ದರು. ಸದ್ಯ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಮದುವೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕತ್ರಿನಾ ಶೇರ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಮದುವೆಗೆ ಮದುವಣಗಿತ್ತಿ ಕತ್ರಿನಾ ಕೈಫ್ ಕೆಂಪು ಬಣ್ಣದ ಸಬ್ಯಸಾಚಿ ಡಿಸೈನರ್ ಲೆಹಂಗಾ ತೊಟ್ಟು ರಾಣಿಯಂತೆ ಕಂಗೊಳಿಸುತ್ತಿದ್ದರು. ಇನ್ನೂ ವರ ವಿಕ್ಕಿ ಕೌಶಲ್ ಐವೆರಿ ಹಾಗೂ ಗೋಲ್ಡ್ ಬಣ್ಣದ ಶೇರ್ವಾನಿ ತೊಟ್ಟು ರಾಜನಂತೆ ಮಿಂಚಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ-ಫೋಟೋ ಹಂಚಿಕೊಂಡ ಕ್ಯಾಟ್ Read More »

ಮದುವೆಗೆ ಬರುವ ಅತಿಥಿಗಳಿಗೆ ಕತ್ರಿನಾ-ವಿಕ್ಕಿ ವೆಲ್ಕಮ್ ನೋಟ್

ಸ್ಟಾರ್ ಕಪಲ್ ವೆಡ್ಡಿಂಗ್ ಎಂದರೆ ಬಹಳಷ್ಟು ಸಂಭ್ರಮ ಸಡಗರ ಹೀಗೆ ಒಂದಿಲ್ಲೊಂದು ಸುದ್ಧಿ ಆಗುತ್ತಲೇ ಇರುತ್ತದೆ.ಇದೀಗ ಬಿಟೌನ್ ನ ಸ್ಟಾರ್ ಜೊಡಿ ಕತ್ರೀನಾ ಹಾಗೂ ವಿಕ್ಕಿ ಕೌಶಾಲ್ ಮದುವೆ ಬಹಳಷ್ಟು ಸದ್ದು ಮಾಡುತ್ತಿದೆ. ಇದೀಗ ಜೋಡಿ ತಮ್ಮ ಮದುವೆಯ ವೆಲ್ಕಮ್ ನೋಟ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮದುವೆಯ ಬಗೆಗೆ ಹಲವು ವಿಚಾರಗಳನ್ನು ಹೇಳಿದ್ದಾರೆ. ಮದುವೆಗೆ ಬರುವವರು ತಮ್ಮ ಮೊಬೈಲ್ ಫೋನ್ ಗಳನ್ನು ರೂಮ್ ನಲ್ಲೇ ಇಟ್ಟು ಬರಬೇಕು. ಯಾವುದೇ ಕಾರಣಕ್ಕೂ ಸಮಾರಂಭದ ಪೋಟೋಗಳಾಗಲಿ ವಿಡೀಯೋಗಾಗಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬಾರದು ಎಂಬಂತ ಶರತ್ತು ಗಳನ್ನು ವೆಲ್ಕಮ್ ನೋಟ್ ನೀಡಿದ್ದಾರೆ. ಒಟ್ಟಾರೆ ಕತ್ರಿನಾ -ವಿಕ್ಕಿ ಮದುವೆ ಬಹಳ ಗುಟ್ಟಾಗಿ ನಡೆಯುವಂತಿದೆ.

ಮದುವೆಗೆ ಬರುವ ಅತಿಥಿಗಳಿಗೆ ಕತ್ರಿನಾ-ವಿಕ್ಕಿ ವೆಲ್ಕಮ್ ನೋಟ್ Read More »

ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

ನೆಚ್ಚಿನ ನಟನನ್ನು ಕಳೆದುಕೊಂಡು ಕರುನಾಡು ಇನ್ನೂ ಕೊರಗುತ್ತಲೇ ಇದೆ. ಹಲವರ ಅಭಿಮಾನ ಹಲವಾರು ರೀತಿಯಲ್ಲಿ ಇರುತ್ತದೆ. ಅನೇಕ ಅಭಿಮಾನಿಗಳು ಅಪ್ಪು ಮೇಲಿನ ಅವರ ಅಭಿಮಾನವನ್ನು ವಿವಿದ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅವರ ಅಭಿಮಾನಿಯೊಬ್ಬರು ಅಪ್ಪು ಸಮಾಧಿ ದರ್ಶನ ಮಾಡಲು ಧಾರವಾಡದಿಂದ ಬೆಂಗಳೂರಿನವರೆಗೆ ಓಟದ ಮೂಲಕ ತಲುಪಲು ನಿರ್ಧರಿಸಿ ಕಳೆದ ತಿಂಗಳು ನವೆಂಬರ್ 29ರಂದು ತಮ್ಮ ಗ್ರಾಮದಿಂದ ಓಟ ಶುರುಮಾಡಿರುವ ಮಹಿಳೆ ಅಪ್ಪು ಅಪ್ಪಟ ಅಭಿಮಾನಿ. ಮೂರು ಮಕ್ಕಳ ತಾಯಿಯಾಗಿರುವ ಈಕೆ ಈಗಾಗಲೇ ಚಿತ್ರದುರ್ಗವನ್ನು ತಲುಪಿದ್ದಾರೆ. ವಿಷಯ ತಿಳಿದ ರಾಘವೇಂದ್ರ ರಾಜ್ ಕುಮಾರ್ ಅವರು ಮಹಿಳೆಯ ಆರೋಗ್ಯದ ಕಡೆ ಗಮನ ಕೊಡಲು ತಿಳಿಸಿದ್ದಾರೆ. ಅಪ್ಪು ವಿವಿಧ ರೀತಿಯಲ್ಲಿ ಇಂದೀಗೂ ಜೀವಂತವಾಗಿದ್ದಾರೆ.

ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ Read More »

ಸೆಟ್ಟೇರಲಿದೆ ಶಂಕರ್ ನಾಗ್ ಅಭಿನಯದ ಸಿನಿಮಾ

ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಸಿನಿಮಾವೊಂದು‌ ಸೆಟ್ಟೇರಲು ಸಿದ್ದವಾಗಿದೆ..ಹೌದು ಶಂಕರ್ ನಾಗ್ ಅಭಿನಯದ ಚಿತ್ರಕ್ಕೆ ಅಬ ಜಬ‌ತಬ ಎಂದು ಹೆಸರಿಡಲಾಗಿದೆ..‌ಶಂಕರ್ ನಾಗ್ ನಮ್ಮೆಲ್ಲರನ್ನ ಬಿಟ್ಟು ಅಗಲಿ ಸಾಕಷ್ಟು ವರ್ಷಗಳು ಕಳೆದಿವೆ ಅಂತದ್ರಲ್ಲಿ ಸಿನಿಮಾದಲ್ಲಿ ಅಭಿನಯಿಸೋದು ಹೇಗೆ ಅನ್ನೋ ಪ್ರಶ್ನೆ ಉತ್ತರ ಚಿತ್ರತಂಡ ಶೀಘ್ರದಲ್ಲೇ ಕೊಡಲಿದ್ಯಂತೆ… ಎರಡು ವರ್ಷದ ಹಿಂದೆ, ಕನ್ನಡ ಗೊತ್ತಿಲದವರಿಗೆ ಕನ್ನಡ ಕಲಿಸಲು ಹೋಗಿ, ಕನ್ನಡ್ ಗೊತ್ತಿಲ್ಲ ಅಂತ ಸಿನಿಮಾ‌ ಮಾಡಿದ ನಿರ್ದೇಶಕ ಮಯೂರ ರಾಘವೇಂದ್ರ ಈಗ ಅಬ ಜಬ‌ ತಬ ಅಂತಿದ್ದಾರೆ…. “ಅಬ ಜಬ ದಬ ಚಿತ್ರವನ್ನ ಎಸ್ ರಾಮ್ ಪ್ರೊಡ್ಯೂಕ್ಷನ್ಸ್” ಬ್ಯಾನರ್ ನಲ್ಲಿ ಅನಂತ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ..ಚಿತ್ರದ ಶೀರ್ಷಿಕೆಯನ್ನು ಮಂತ್ರಾಲಯದ ರಾಯರ ಸಾನಿಧ್ಯದಲ್ಲಿ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಸಿನಿಮಾ‌ ಸೆಟ್ಟೇರಲಿದೆ…

ಸೆಟ್ಟೇರಲಿದೆ ಶಂಕರ್ ನಾಗ್ ಅಭಿನಯದ ಸಿನಿಮಾ Read More »

ಪುಷ್ಪ‌ ಚಿತ್ರದ ಸಮಂತಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಖತ್ ಸದ್ದು ಮಾಡ್ತಿರೋ ಸಿನಿಮಾ ಪುಷ್ಪ …ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯ ಮಾಡುತ್ತಿರುವ ಪುಷ್ಪ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ… ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಖತ್ ಸೌಂಡ್ ಮಾಡಿರುವ ಪುಷ್ಪ ಚಿತ್ರದಲ್ಲಿ ಸಮಂತಾ ಸ್ಪೆಷಲ್ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ… ಈ ಹಿಂದೆ ಯಾವುದೇ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಳ್ಳದ ಸಮಂತಾ ಪುಷ್ಪ ಸಿನಿಮಾದಲ್ಲಿ ಸಖತ್ ಬೋಲ್ಡ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು ಆದ್ರೆ ಈಗ ಚಿತ್ರದಲ್ಲಿನ ಸಮಂತಾ ಲುಕ್ ರಿವಿಲ್ ಆಗಿದೆ ಸಮಂತಾ ಡ್ಯಾನ್ಸ್ ಮಾಡಿರೋ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪೋಸ್ಟರ್ ಮೂಲಕ ರಿವೀಲ್ ಮಾಡಿದೆ ಪೋಸ್ಟರ್ ನೋಡ್ತಿದ್ರೆ ಸಮಂತಾ ಐಟಂ ಸಾಂಗಿಗೆ ಹೆಜ್ಜೆ ಹಾಕಿರುವ ಕನ್ಫರ್ಮ್ ಆಗ್ತಿದೆ ಸಮಂತಾ ಸ್ಪೆಷಲ್ ಹಾಡಿನಲ್ಲಿ‌ ಹೆಜ್ಜೆ ಹಾಕಲು ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಸುದ್ದಿ ಹರಡಿದೆ….ಸದ್ಯ ರಿವಿಲ್ ಆಗಿರೋ ಲುಕ್ ನಲ್ಲಿ ಸಮಂತಾ ನೀಲಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಅವರ ಲುಕ್ ಮಾದಕವಾಗಿದೆ. ಈ ವಿಶೇಷ ಹಾಡನ್ನು ಡಿಸೆಂಬರ್ 10ರಂದು ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ಮಾತನ್ನು ಕೇಳಿ ಸ್ಯಾಮ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಫೋಟೋದಲ್ಲಿ ಇಷ್ಟು ಹಾಟ್ ಆಗಿ ಕಾಣಿಸಿಕೊಂಡಿರೋ ಸ್ಯಾಮ್ ಹಾಡಿನಲ್ಲಿ ಖಂಡಿತವಾಗಿಯೂ ಬೋಲ್ಡ್ ಬ್ಯೂಟಿಫುಲ್ ಆಗಿ ಇರ್ತಾರೆ ಅನ್ನೋ ಲೆಕ್ಕಾಚಾರ ಅಭಿಮಾನಿಗಳದ್ದು…

ಪುಷ್ಪ‌ ಚಿತ್ರದ ಸಮಂತಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ Read More »

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ

ನಟಿ ರಾಧಿಕಾ ಪಂಡಿತ್ ಹಾಗೂ ರಾಕಿಂಗ್*ಯಶ್ ತಮ್ಮ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಈ ಸಮಯದಲ್ಲಿ ಯಶ್ ಮತ್ತು ರಾಧಿಕಾ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ಯಶ್ ಮತ್ತು ರಾಧಿಕಾ ಇಬ್ಬರ ಪರಿಚಯವಾಗಿದ್ದು ನಂದಗೋಕುಲ ಎನ್ನುವ ಧಾರಾವಾಹಿ ಮೂಲಕ ಧಾರಾವಾಹಿಯಲ್ಲಿ ರಾಧಿಕಾ ಸಹೋದರನಾಗಿ ಯಶ್ ಅಭಿನಯ ಮಾಡಿದ್ದರು ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಯಶ್ ಮತ್ತು ರಾಧಿಕಾ ಇಬ್ಬರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ನಟನೆ ಮಾಡಿದ್ದರು ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದರು ಕೂಡ ಯಶ್ ತಮ್ಮ ಪ್ರೀತಿಯನ್ನ ಫೋನ್ ನ ಮೂಲಕ ರಾಧಿಕಾಗೆ ವ್ಯಕ್ತಪಡಿಸಿದ್ದರು ರಾಧಿಕಾರನ್ನ ವರಮಹಾಲಕ್ಷ್ಮಿ ಹಬ್ಬದಂದು ಮನೆಗೆ ಕರೆದುಕೊಂಡು ಹೋಗಿ ಮನೆಯವರಿಗೆ ಸೊಸೆ ಎಂದು ಪರಿಚಯ ಮಾಡಿಸಿದ್ರು ಯಶ್ ರಾಧಿಕಾ . ಯಶ್ ಮನೆಗೆ ಬಂದಾಗ ಅವ್ರ ತಾಯಿ ಮನೆಯ ಸೊಸೆಗೆ ಮಾತ್ರ ಕೊಡುವ ಗೊಂಬೆಯನ್ನೂ ಕೊಟ್ಟು ತಮ್ಮ ಸೊಸೆಯನ್ನಾಗಿ ಸ್ವಾಗತ ಮಾಡಿದ್ರಂತೆ… 2016ರ ಆಗಸ್ಟ್ ನಲ್ಲಿ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಪ್ರೀತಿಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು… ಯಶ್ ರಾಧಿಕಾ ನಂತರ ಅದೇ ವರ್ಷದಲ್ಲಿ ಡಿಸೆಂಬರ್ 99ರಂದು ಇಬ್ಬರೂ ಸಪ್ತಪದಿ ತುಳಿದರು.. ಯಶ್ ಪ್ರೀತಿಯಿಂದ ರಾಧಿಕಾ ಅವರನ್ನ ಬುರ್ಶಿ ಎಂದು ಕರೆಯುತ್ತಾರೆ ..ರಾಧಿಕಾ ಯಶ್‌ ಎಂದೇ ಕರೆಯುತ್ತಾರೆ.. ಯಶ್ ಮತ್ತು ರಾಧಿಕಾ ಇಬ್ಬರಿಗೂ ಸಮುದ್ರ ತೀರ ಎಂದರೆ ತುಂಬಾ ಇಷ್ಟ ..ಅದರಲ್ಲಿಯೂ ಗೋವಾ ಇಬ್ಬರ ಮೋಸ್ಟ್ ಫೆವರೇಟ್ ಪ್ಲೇಸ್

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ Read More »

Scroll to Top