ಒಂದೇ ಮಾಡೆಲ್ ಕಾರು ಖರೀದಿ ಮಾಡಿದ ಯಶ್ -ದರ್ಶನ್
ಸಾಮಾನ್ಯವಾಗಿ ಸೆಲಬ್ರೆಟಿಗಳು ಅಂದ್ರೆ ಅವ್ರ ಬಳಿ ಐಷಾರಾಮಿ ಕಾರುಗಳಿರೋದು ಕಾಮನ್ …ಅದೇ ರೀತಿ ನಟ ದರ್ಶನ್ ಬಳಿ ಸಾಕಷ್ಟು ಕಾರ್ ಗಳಿವೆ …ದರ್ಶನ್ ಅವ್ರಿಗೆ ಕಾರ್ ಕ್ರೇಜ್ ಕೊಂಚ ಹೆಚ್ಚಾಗಿಯೇ ಇದೆ…ಇನ್ನು ಯಶ್ ಅವ್ರಿಗೆ ಕಾರ್ ಕ್ರೇಜ್ ಇಲ್ಲವಾದರೂ ಅಗತ್ಯಕ್ಕೆ ತಕ್ಕಂತೆ ಕಾರ್ ಗಳನ್ನ ಖರೀದಿ ಮಾಡಿದ್ದಾರೆ… ಜೋಡೆತ್ತುಗಳು ಎಂದೇ ಕರೆಸಿಕೊಳ್ಳುವ ದರ್ಶನ್ ಮತ್ತು ಯಶ್ ಕೋಟಿ ಮೌಲ್ಯದ ಕಾರು ಖರೀದಿಸಿದ್ದಾರೆ. ದರ್ಶನ್ ಅವರಿಗೆ ಕಾರುಗಳ ಕ್ರೇಜ್ ಹೆಚ್ಚು. ದಚ್ಚು ಕಾರುಗಳ ಕಲೆಕ್ಷನ್ ನಲ್ಲಿ ಹಲವು ಲಕ್ಸುರಿ ಕಾರುಗಳಿವೆ. ಅವರ ಬಳಿ ಎಲ್ಲಾ ರೀತಿಯ ಹೊಸ ಮಾಡೆಲ್ನ ಕಾರುಗಳನ್ನ ನೋಡಬಹುದು. ಅವರು ಈಗಾಗಲೇ ಜಾಗ್ವಾರ್, ಆಡಿಕ್ಯೂ-7, ರೇಂಜ್ ರೋವರ್, ಲ್ಯಾಂಬೋರ್ಗಿನಿ ಸೇರಿ ಹತ್ತು ಹಲವು ಕಾರುಗಳನ್ನು ಹೊಂದಿದ್ದಾರೆ. ಈಗ ದರ್ಶನ್ ಕಾರುಗಳ ಕಲೆಕ್ಷನ್ ಗೆ ವೈಟ್ ಕಲರ್ನ ಟೊಯೋಟಾ ವೆಲ್ಫೇರ್ ಕಾರ್ ಸೇರಿಕೊಂಡಿದೆ. ಅಬ್ಬಾ 90 ಲಕ್ಷ ಇರೋ ಕಾರಿನ ಆನ್ ರೋಡ್ ರೇಟ್ 1 ಕೋಟಿ 20 ಲಕ್ಷ…. ದರ್ಶನ್ ಹಾಗೂ ಯಶ್ ಟೊಯೋಟಾ ವೆಲ್ ಫೇರ್ ಕಾರು ಖರೀದಿಸಿದ್ದು..ದರ್ಶನ್ ತಮಗಾಗಿ ಕಾರ್ ಖರೀದಿ ಮಾಡಿದ್ರೆ.. ರಾಕಿಂಗ್ ಸ್ಟಾರ್ ಯಶ್ ಅವರು ಅವರ ತಾಯಿಗೆ ಈ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ…
ಒಂದೇ ಮಾಡೆಲ್ ಕಾರು ಖರೀದಿ ಮಾಡಿದ ಯಶ್ -ದರ್ಶನ್ Read More »