32.8 C
Bengaluru
March 30, 2026
Karnataka Bhagya
Blogರಾಜಕೀಯ

“ವರದ”ನ ಲಿರಿಕಲ್ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ ರೋರಿಂಗ್ ಸ್ಟಾರ್

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ವರದ” ಚಿತ್ರದ “ಓಂ ಹರಿ ಹರಿ ಓಂ” ಎಂಬ ಹಾಡನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಸರಿಗಮಪ” ಖ್ಯಾತಿಯ ಅಶ್ವಿನ್ ಶರ್ಮ ಈ ಹಾಡನ್ನು ಹಾಡಿದ್ದಾರೆ.

ಉದಯಪ್ರಕಾಶ್ ನಿರ್ದೇಶನ ಮಾಡಿರೋ ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.. ಈ ಹಾಡನ್ನು ನೋಡಿದ ಮುರಳಿ ವಿನೋದ್ ಪ್ರಭಾಕರ್ ಅವರು ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ. ಒಟ್ಟಾರೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶ್ರೀಮುರಳಿ ಹಾರೈಸಿದ್ದಾರೆ.

ಜನವರಿ 28 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಕೊರೋನ ಕಾರಣದಿಂದ ಚಿತ್ರಮಂದಿರಗಳಲ್ಲಿ ಐವತ್ತರಷ್ಟು ಭರ್ತಿಗೆ ಮಾತ್ರ ಸರ್ಕಾರ ಒಪ್ಪಿಗೆ ನೀಡಿದೆ. ಹಾಗಾಗಿ ನೂರರಷ್ಟು ಭರ್ತಿಗೆ ಒಪ್ಪಿಗೆ ಸಿಕ್ಕ ಕೂಡಲೆ ನಮ್ಮ ಚಿತ್ರ ಬಿಡುಗಡೆಯಾಗಲಿದೆ..

“ರಾಬರ್ಟ್” ಚಿತ್ರದ ನಂತರ ವಿನೋದ್ ಪ್ರಭಾಕರ್ ನಟಿಸಿರುವ ಈ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ‌.ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್.

ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts

ಹರಹರ ಮಹಾದೇವ ನನ್ನ ಬದುಕಿನ ತಿರುವು – ವಿನಯ್ ಗೌಡ

Nikita Agrawal

83 ಸಿನಿಮಾ ಜೊತೆ ವಿಕ್ರಾಂತ್ ರೋಣನ ಆರ್ಭಟ !

Nikita Agrawal

ಕನ್ನಡ ಮಾತನಾಡೋದನ್ನ ಮರೆತ್ರಾ ರಶ್ಮಿಕಾ

Nikita Agrawal

Leave a Comment

Share via
Copy link
Powered by Social Snap