15.9 C
Bengaluru
February 11, 2026
Karnataka Bhagya
ಕರ್ನಾಟಕBlog

ಎಣ್ಣಿ ಕುಡ್ಯಂಗ ಆಗ್ಯಾದ್ರಿ ಸಾಬ್ರೆ

ಗುರುಮಠಕಲ್ ಮತಕ್ಷೇತ್ರದ ಕೌಳೂರು, ಮಲ್ಹಾರ, ಸಾವೂರು, ಆನೂರ ಕೆ, ಆನೂರು ಬಿ ಗ್ರಾಮಗಳ ಬೆಳೆಹಾನಿ ವೀಕ್ಷೀಸಿದ ಶಾಸಕ ಶರಣಗೌಡ ಕಂದಕೂರ, ರೈತರ ಬೆಳೆ ಹಾನಿ ವಸ್ತು ಸ್ಥಿತಿ ಅರಿಯಲು ಬೈಕ್ ಹತ್ತಿದ್ರು, ಟ್ರಾಕ್ಟರ್ ಹತ್ತಿದ್ರು ರೈತರ ಹೊಲಗಳಿಗೆ ನೇರವಾಗಿ ವಾಸ್ತವಾಂಶ ಪರಿಶೀಲಿಸಿದ್ರು.


ಯಾದಗಿರಿ : ನಮ್ ಹೊಲದಾಗ ನೀರ್ ನಿಂತ್ ಸರ್ವನಾಶ ಆಗ್ಯಾದ್ರಿ, ಎಲ್ಲಾ ಬೆಳಿ ಹಾಳಾಗಿ ಎಣ್ಣಿ ಕುಡ್ಯಂಗ ಆಗ್ಯಾದ್ರಿ ಸಾಬ್ರೆ ಎಂದು ಮಲ್ಹಾರ ಗ್ರಾಮದ ರೈತ ಮಹಾದೇವಪ್ಪ ತಮ್ಮ ಅಳಲನ್ನು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಎದುರು ರೈತರು ಕಣ್ಣೀರಾಕಿದ ಪ್ರಸಂಗ ಜರುಗಿತು.
ಸೋಮವಾರ ಅತಿವೃಷ್ಠಿಯಿಂದ ಬೆಳೆಹಾನಿ ವೀಕ್ಷಿಸಲು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ರವರು ರೈತರ ಜಮೀನುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಜೀವನದ ಕಹಿ ಅನುಭವಗಳನ್ನು ಹಂಚಿಕೊAಡ ರೈತರು, ೭೦ ಸಾವಿರ ರೂಪಾಯಿ ಸಾಲ ಮಾಡಿವಿರಿ ಯಪ್ಪಾ ಈಗ ಆ ಸಾಲ ಹೆಂಗ್ ತೀರಸ್ಬೇಕು ಎಂದು ಗೊತ್ತಾಗುತ್ತಿಲ್ಲವೆಂದು ಕಣ್ಣೀರಾಕಿದರು.
ಸ್ಥಳದಲ್ಲಿದ್ದ ತಹಸೀಲ್ದಾರ ಸುರೇಶ ಅಂಕಲಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಾತೇಂದ್ರನಾಥ ಸೂಗೂರು ರವರಿಗೆ ರೈತರ ಪರಿಸ್ಥಿತಿಯ ನಿಜಾಂಶ ತಿಳಿಯಲು ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿ ಮತಕ್ಷೇತ್ರದ ಯಾವುದೇ ಗ್ರಾಮಗಳ ರೈತರ ಜಮೀನಿನಲ್ಲಿ ಹಾಳಾದ ಬೆಳೆ ಹಾನಿಯಿಂದ ರೈತರ ಸಮೀಕ್ಷೆಯಿಂದ ಕೈಬಿಡಬೇಡಿ ಎಂದು ಸೂಚಿಸಿದರು.
ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇರದ ಕಾರಣ ರೈತರು ತೊಂದರೆ ಎದುರಿಸುತ್ತಿದ್ದಾರೆ ಎಂದ ಶಾಸಕ ಶರಣಗೌಡ ಕಂದಕೂರ ಅಸಮಾಧಾನ ವ್ಯಕ್ತಪಡಿಸಿ, ನಿಮ್ಮೂರಿಗೆ ಕೃಷಿ ಇಲಾಖೆ ಅಧಿಕಾರಿಗಳು ಬಂದಿದ್ದಾರೆಯೇ ಎಂದು ರೈತರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೈತರು ನಮ್ಮ ಜಮೀನಿನಲ್ಲಿನ ಬೆಳೆ ಫೋಟೊ ತೆಗೆದು ಅಧಿಕಾರಿಗಳಿಗೆ ಕೊಟ್ಟಿದ್ದೇವೆ ಎಂದರು.
ಕೃಷಿ ಇಲಾಖೆ ಎಒ ಸುರೇಶ ಹಾಗೂ ತಹಸೀಲ್ದಾರ ಸುರೇಶ ಅಂಕಲಗಿಗೆ, ಗುರುಮಠಕಲ್ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ರವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಬೆಳೆ ಸಮೀಕ್ಷೆ ಗಂಭೀರವಾಗಿ ನಡೆಯುತ್ತಿದೆ ಎಂದಿದ್ದಾರೆ. ಇದೇ ನಾ ನಿಮ್ಮ ಗಂಭೀರತೆ ಎಂದು ಕಿಡಿ ಕಾರಿದರು.
ನಾವ್ ಬಂದಿವಿ ಹೋದಿವಿ ಎಂದಾಗಬಾರದು ರೈತರು ಯಾವುದೇ ಕಾರಣಕ್ಕೂ ಸುಳ್ಳು ಹೇಳಲ್ಲ, ಅಧಿಕಾರಿಗಳು ನೈಜವಾಗಿ ವರದಿ ತಯಾರಿಸಿ, ಬೆಳೆಹಾನಿಯಿಂದಾದ ನಷ್ಟವನ್ನು ಪರಿಶೀಲಸಿ ಪ್ರತಿಯೊಬ್ಬ ರೈತರನ್ನು ಸಮೀಕ್ಷೆಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರ ಒಂದು ಲಕ್ಷ ಪರಿಹಾರ ಕೊಡುವ ವಿಶ್ವಾಸ ನನಗಿಲ್ಲ. ಆದರೆ ಅಧಿಕಾರಿಗಳು ಫಿಲ್ಡಿಗಿಳಿದು ಕೆಲಸ ಮಾಡಿ. ಕಾಟಾಚಾರದ ಬೆಳೆ ಸಮೀಕ್ಷೆ ನಡೆಸಬೇಡಿ. ನಿಮ್ಮ ಕೆಳಹಂತದ ಸಿಬ್ಬಂದಿಗಳಿಗೆ ಬೆಳೆವಿಮೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ತಿಳಿಸಿ ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಂದಕೂರ ಅವರು, ಎನ್ ಡಿಆರ್ ಎಫ್ ನಿಯಮಾನುಸಾರ ಸರ್ಕಾರ ಎರಡು ಹೆಕ್ಟೇಗೆ ೮೫೦೦ ರೂ.ಮಾತ್ರ ನೀಡುತ್ತದೆ. ಇದು ಜಮೀನಿನಲ್ಲಿ ಬೆಳೆದ ಕಳೆ ತೆಗೆಯಲಿ ಸಾಲುವುದಿಲ್ಲ. ರೈತರು ಈಗಾಗಲೇ ತೊಂದರೆಯಲ್ಲಿದ್ದಾರೆ. ತೊಗರಿ, ಹೆಸರು ಮತ್ತು ಹೆಸರು ಹಾಳಾಗಿವೆ ಎಂದರು.
ಬೆಳೆ ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ವರದಿ ಬಂದ ತಕ್ಷಣ ನನ್ನ ಕ್ಷೇತ್ರದಲ್ಲಿ ಆದ ಹಾನಿ ಕುರಿತು ಸಿಎಂ, ಡಿಸಿಎಂ, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಹೆಚ್ಚಿನ ಪರಿಹಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮಲ್ಲಣಗೌಡ ಕೌಳೂರು, ಅಜಯರಡ್ಡಿ ಎಲ್ಹೇರಿ, ಶರಣಗೌಡ ಕಾರಡ್ಡಿ, ರವಿಗೌಡ ಕಾರಡ್ಡಿ ಮಲ್ಹಾರ, ವೆಂಕಟರಡ್ಡಿ ಕೌಳೂರು, ಲಕ್ಷö್ಮಣ ನಾಯಕ ಕೂಡ್ಲೂರು, ಸಿದ್ದಣಗೌಡ, ಸಿದ್ದರಾಮರಡ್ಡಿಗೌಡ ಲಿಂಗೇರಿ, ಸಂಗಮೇಶ ಲಿಂಗೇರಿ, ಸೋಮರಡ್ಡಿ, ಮೈಪಾಲರಡ್ಡಿ ಸಾವೂರ, ಬಂಧುಗೌಡ, ರುದ್ರಪ್ಪಗೌಡ ಆನೂರ ಕೆ, ಆಶಪ್ಪ ಆನೂರ ಬಿ, ಬಸರಡ್ಡಿಗೌಡ ಹೆಗ್ಗಣಗೇರಾ, ಚಂದ್ರುಗೌಡ, ರಾಚೋಟಿ ಹೆಗ್ಗಣಗೇರಾ ಇದ್ದರು.

ಬಾಕ್ಸ್
ಬರಿಗಾಲಲ್ಲಿ ಬೆಳೆ ಹಾನಿ ವೀಕ್ಷಣೆ
ಗುರುಮಠಕಲ್ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಬೆಳೆಹಾನಿ ವೀಕ್ಷಿಸಲು ನವರಾತ್ರಿ ಪ್ರಯುಕ್ತ ದೇವರ ಕೃಪೆಗಾಗಿ, ರೈತರ, ತನ್ನ ಮತಕ್ಷೇತ್ರದ ಸರ್ವ ಜನರ ಒಳಿತಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ, ನವರಾತ್ರಿಯಲ್ಲಿ ತಾಯಿ ದೇವಿಯ ಕೃಪೆಯಾಗಲಿ ಎಂದು ಬರಿಗಾಲಲ್ಲಿ ಒಂಬತ್ತು ದಿನಗಳವರೆಗೆ ನಿರಂತರವಾಗಿ ದೇವಿಯ ಸ್ಮರಣೆ ಮಾಡಲಾಗುತ್ತದೆ. ನನ್ನ ಮತಕ್ಷೇತ್ರದ ಜನರ ಒಳಿತಿಗಾಗಿ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದು, ಇಂದು ಬೆಳೆಹಾನಿ ವೀಕ್ಷಿಸಲು ಬಂದಿದ್ದು, ರೈತರ ಒಳಿತಿಗಾಗಿ ನಾನು ಯಾವಾಗಲು ದೇವಸ್ಮರಣೆ ಮಾಡುತ್ತೇನೆ.

ಬಾಕ್ಸ್
ಟ್ರ‍್ಯಾಕ್ಟರ್ ಹತ್ತಿ ರೈತರ ಜಮೀನಿಗೆ ತೆರಳಿ ಬೆಳೆ ವೀಕ್ಷಣೆ
ಗುರಮಠಕಲ್ ತಾಲೂಕಿನ ಆನೂರ ( ಕೆ) ಗ್ರಾಮದ ಹೊರ ವಲಯದಲ್ಲಿನ ಭೀಮಾ ನದಿ ಉಕ್ಕಿ ಹರಿದ ಕಾರಣ ನದಿ ಪಾತ್ರದಲ್ಲಿನ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು, ಕೃಷಿ ಪಂಪ್ ಸೆಟ್ ಗಳು ನೀರು ಪಾಲಾಗಿದ್ದು ಗದ್ದೆಗೆ ತೆರಳಲು ರಸ್ತೆ ಹಾಳಾದ ಕಾರಣ ಶಾಸಕ ಕಂದಕೂರ ರೈತರ ಟ್ರ‍್ಯಾಕ್ಟರ್ ಏರಿ ಬೆಳೆ ವೀಕ್ಷಣೆ ಮಾಡುವ ಮೂಲಕ ಗಮನ ಸೆಳೆದರು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇದೊಂದು ಹೊಸ ರೀತಿಯ ಅನುಭವವಾಯಿತು. ಕೃಷಿ ಇಲಾಖೆ ಜಂಟಿ ನಿರ್ದೇಶಕರ ಆದಿಯಾವಿ ಎಲ್ಲ ಅಧಿಕಾರಿಗಳು ಸಹ ಶಾಸಕರಿಗೆ ಸಾಥ್ ನೀಡಿದರು.

ಕೋಟ್
ರಾಜ್ಯ ಸರ್ಕಾರದ ಚರ್ಮ ದಪ್ಪವಾಗಿದೆ. ಎಷ್ಟೇ ತಿವಿದರೂ ಎಚ್ಚರವಾಗೋಲ್ಲ. ಹೆಚ್ಚಿನ ಬೆಳೆ ಪರಿಹಾರ ಸಂಬAಧ ಸಮಯ ಬಂದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳು ಅತ್ಯಂತ ಕಟ್ಟುನಿಟ್ಟಾಗಿ ಬೆಳೆಹಾನಿ ಸಮೀಕ್ಸೆ ನಡೆಯುತ್ತಿದೆ ಎಂದು ಎಸಿ ರೂಮ್‌ನಲ್ಲಿ ಕುಳಿತು ಹೇಳುತ್ತಿದ್ದಾರೆ. ಈ ಗ್ರಾಮಗಳು ಕೇವಲ ಸ್ಯಾಂಪಲ್ ತಹಸೀಲ್ದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಎದುರೇ ರೈತರು ತಮ್ಮ ಪರಿಸ್ಥಿತಿಯನ್ನು ಅಧಿಕಾರಿಗಳ ಕಾರ್ಯವೈಖರಿಯನ್ನು ತೆರೆದಿಟ್ಟಿದ್ದಾರೆ. ಕೇವಲ ಬೆರಳೆಣಿಯಷ್ಟು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಇನ್ನೂ ಕೆಲವರು ರೈತರಿಗೆ ತಾವೇ ಪೊಟೋ ತಂದು ಕೊಡುವಂತೆ ಸೂಚಿಸಿದ್ದು ನೋಡಿದರೆ ಗೊತ್ತಾಗುತ್ತದೆ ಸಮೀಕ್ಷೆ ಹೇಗೆ ನಡೆಯುತ್ತಿದೆ ಎಂಬುದು.

ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್

Related posts

ಮಳಿ ಬಂದ್ ಎಲ್ಲಾ ಬೆಳಿ ಮಕ್ಕೊಂಡ್ ಬಿಟ್ಟಾವ್ರಿ

Mahesh Kalal

ಕೊಟ್ಟ ಮಾತಿನಂತೆ ನಡೆದುಕೊಂಡ ಪುಷ್ಪ ಸ್ಟಾರ್ ಅಲ್ಲು ಅರ್ಜುನ್

Nikita Agrawal

ಬಾಯ್ ಫ್ರೆಂಡ್ ತೆಗೆದ ಫೋಟೋ ಶೇರ್ ಮಾಡಿದ ಆಲಿಯಾ !

Nikita Agrawal

Leave a Comment

Share via
Copy link
Powered by Social Snap