ಮಹಾಸಭಾಕ್ಕೆ ಹಲವರ ನೇಮಕಸಂಘಟನೆ ಆನೆಬಲ : ಸುರೇಶ ಜಾಕಾ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ: ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಘಟಕದ ಪದಾಧಿಕಾರಿಗಳನ್ನು ಮತ್ತು ರಾಜ್ಯ ಯುವ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಿದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕ್ರಮವನ್ನು ಸ್ವಾಗತಿಸಿರುವ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ ಜಾಕಾ, ರಾಜ್ಯದ ಎಲ್ಲಡೇ ಸಂಪೂರ್ಣ ಸಂಘಟನೆ ಮಾಡಿ ಉಳಿದ ಪದಾಧಿಕಾರಿಗಳ ಆಯ್ಕೆ ಅನುಕೂಲ ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು,
ರಾಷ್ಟ್ರೀಯ ಘಟಕಕ್ಕೆ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಾಜದ ಅನೇಕರಿಗೆ ಅವಕಾಶ ನೀಡಿದ್ದು ಸಂಘಟನಗೆ ಬಲ ಬಂದಂತಾಗಿದೆ.
ಅದರಲ್ಲಿ ಸಚಿವರಾದ ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ, ಸಮಾಜದ ಹಿರಿಯರಾದ ಗುರಮ್ಮ ಸಿದ್ದಾರೆಡ್ಡಿ, ಸಿದ್ದಾಮಪ್ಪ ಉಪ್ಪಿನ ಅವರಿಗೆ ಸ್ಥಾನ ನೀಡಿದ್ದು ಮತ್ತು ರಾಜ್ಯ ಯುವ ಘಟಕಕ್ಕೆ ಅಬ್ಬಿಗೆರೆ ಮನೋಹರ ಅವರನ್ನು ನೇಮಕ ಮಾಡಿದ್ದು ಸಂತಸ ತಂದಿದೆ ಎಂದು ಯುವ ಘಟಕದ ಅಧ್ಯಕ್ಷ ಸುರೇಶ ಜಾಕಾ ಹೇಳಿದ್ದಾರೆ.

