July 30, 2026
Karnataka Bhagya
Blog

ವಿಷ್ಣುವರ್ಧನ್ ಸಮಾದಿ ರಕ್ಷಿಸಿ

ಕರ್ನಾಟಕ ಭಾಗ್ಯ

ಯಾದಗಿರಿ ; ಹಿರಿಯ ನಟ ದಿ|| ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಘಟನೆ ಕನ್ನಡದ ಅಸ್ಮಿತೆಗೆ ಮಾಡಿದ ಅವಮಾನ ಈ ಘಟನೆಯ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷಿಸಬೇಕು ಮತ್ತು ತಕ್ಷಣ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿಎನ್. ಭೀಮುನಾಯ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕನ್ನಡವನ್ನು ಕಟ್ಟಿ ಎತ್ತಿಹಿಡಿದ ಮೇರು ನಟ ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡುವ ಮೂಲಕ ಕನ್ನಡಿಗರು ಅಭಿಮಾನ ಶೂನ್ಯರು ಎಂಬ ಭಾವ ಬಿತ್ತಿದಂತಾಗಿದೆ. ಇದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿದೆ.
ಕನ್ನಡ ನಾಡು ನುಡಿ ನೆಲ ಜಲ ಕಲೆ ಗಾಗಿ ಅಪ್ರತಿಮ ಕೊಡುಗೆ ನೀಡಿದ ವಿಷ್ಣುವರ್ಧನ್ ಅವರಿಗೆ ಅವಮಾನ ಆದರೂ ಸರ್ಕಾರ ತೆಪ್ಪಗಿರುವುದು ತರವಲ್ಲ.
ತಕ್ಷಣ ಕಾರ್ಯಪ್ರವೃತ್ತರಾಗಬೇಕು ತಪ್ಪಿತಸ್ಥರನ್ನು ತನಿಖೆ ನಡೆಸಿ ಪತ್ತೆ ಹಚ್ಚಿ ಶಿಕ್ಷಿಸಬೇಕು. ಇನ್ನಾದರೂ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡಕ್ಕಾಗಿ ಕೊಡುಗೆ ಕೊಟ್ಟವರಿಗೆ ಅವಮಾನ ಆದರೂ ಸುಮ್ಮನಿರುವುದು ಕನ್ನಡದವರ ಜಾಯಮಾನವಲ್ಲ ಇದಕ್ಕೆ ಸರಿಯಾದ ಪ್ರತಿಕಾರ ಕೈಗೊಂಡು ಹಿರಿಯ ನಟನ ಕೊಡುಗೆಗೆ ಪ್ರತಿಯಾಗಿ ಸಮ್ಮಾನ ನೀಡುವ ಕೆಲಸ ಮಾಡಬೇಕು ಸರ್ಕಾರ ಇಂತಹ ದಿವ್ಯ ನಿರ್ಲಕ್ಷö್ಯ ತೋರುತ್ತಿರುವುದು ತರವಲ್ಲ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ಯಮುನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ್, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಚಿಗಾನೂರು, ಶರಣಬಸಪ್ಪ ಯಲ್ಹೇರಿ, ಬಸವರಾಜ ಚೆನ್ನೂರು, ಕಾಶಿನಾಥ ನಾನೇಕ ಎಚ್ಚರಿಕೆ ನೀಡಿದ್ದಾರೆ.

Related posts

ಒಟಿಟಿಗೆ ಅಪ್ಪು ಅಪ್ಪಿದ ‘ಮ್ಯಾನ್ ಆಫ್ ದಿ ಮ್ಯಾಚ್’

Nikita Agrawal

ನಟಿ ಕಾವ್ಯಾ ಗೌಡ ಗೆ ಕೂಡಿ ಬಂತು ಕಂಕಣ ಭಾಗ್ಯ

Karnatakabhagya

“100” ಕ್ಕೆ 100 ಕೊಟ್ಟ ಸುಧಾಮೂರ್ತಿ..

Karnatakabhagya

Leave a Comment

Share via
Copy link
Powered by Social Snap