ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿ : ಶಾಸಕ ಚನ್ನಾರಡ್ಡಿ ಪಾಟೀಲ್
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ನಗರದ ವಾರ್ಡ ನಂ. ೧೮ರ ಡಾ.ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಐದು ಕೋಣೆಗಳ ಹಾಗೂ ಕಂಪೌAಡ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ಕೆಕೆಆರ್ ಡಿಬಿ ಅನುದಾನದಡಿ ೮೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಕಾಮಗಾರಿ ಗುಣಮಟ್ಟದಲ್ಲಿ ಮತ್ತು ನಿಗದಿತ ಸಮಯದಲ್ಲಿ ಮುಗಿಸಬೇಕೆಂದು ಹೇಳಿದರು. ಒಟ್ಟಾರೆ ೧.೧೦ ಕೋಟಿ ರೂ.ಖರ್ಚು ಮಾಡಲಾಗಿದೆ ಎಂದರು.
ಶಿಕ್ಷಣದಿAದಲೇ ಮಕ್ಕಳ ಸರ್ವಾಂಗಿಣ ಅಭಿವೃದ್ಧಿ ಸಾಧ್ಯ. ಕಾರಣ ಪಾಲಕರು ತಪ್ಪದೇ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಸೌಲಭ್ಯಗಳು ನೀಡಿದೆ, ಅದರ ಲಾಭ ಪಡೆದು ಜೀವನದಲ್ಲಿ ಯಶಸ್ಸಿ ಮೆಟ್ಟಿಲು ಮುಟ್ಟಬೇಕೆಂದರು. ಮಕ್ಕಳ ಸಂಖ್ಯೆ ಹೆಚ್ಚಳ ಮಾಡಿ ಎಂದರು.
ನಗರಸಭೆ ಸದಸ್ಯ ಹಣಮಂತ ನಾಯಕ ಮಾತನಾಡಿ, ನನ್ನ ವಾರ್ಡನಲ್ಲಿನ( ಮ್ಯಾಸಮ್ಮ ಗುಡಿ) ಶಾಲೆಗೆ ಕಳೆದ ೧೭ ವರ್ಷಗಳ ಸಮಸ್ಯೆ ಇತ್ತು. ಅದನ್ನು ಶಾಸಕರ ಗಮನಕ್ಕೆ ತಂದಾಗ ೫೪ ಲಕ್ಷ ರೂ. ಅನುದಾನ ನೀಡಿ ಹೊಸ ರೂಪ ನೀಡಿದ ಕೀರ್ತಿ ಸಲ್ಲುತ್ತದೆ. ಇಲ್ಲಿನ ಮಕ್ಕಳ ಬೇಡಿಕೆಯಂತೆಯೇ ಪ್ರೌಢ ಶಾಲೆ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಬಸಮ್ಮ ಕುರಕುಂಬಳಿ, ಎಸ್ ಡಿಎಂಸಿ ಅಧ್ಯಕ್ಷ ಅಂಬರೀಶ ಚಟ್ಟರಕಿ, ಮಲ್ಲಿಕಾರ್ಜುನ ಈಟೆ, ಲಕ್ಷ್ಮಾರಡ್ಡಿ, ಪ್ರಶಾಂತ, ಮಲ್ಲಯ್ಯ ಈಟೆ, ಭೀಮಣ್ಣಾಕಾಗೆ, ಶರಣು ನಾಟಿಕಾರ, ಪರಶುರಾಮ ಒಡೆಯರ, ಎಂಜಿನಿಯರ್ ನಾಗೇಶ , ಮುಖ್ಯ ಗುರುಗಳಾದ ವಿಜಯಲಕ್ಷ್ಮಿ, ಶಿವು ಕರದಳ್ಳಿ, ವೆಂಕಟರಡ್ಡಿ, ಮಹೇಶ ಕುರಕುಂಬಳ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆಯೇ ಇತರರಿದ್ದರು. ಬಿಆರ್ ಸಿ ವೆಂಕಟರಡ್ಡಿ ನಿರೂಪಿಸಿದರು.
ಬಾಕ್ಸ್
ಯಾದಗಿರಿ ನಗರದ ವಾರ್ಡ ನಂ. ೧೮ರ ಡಾ.ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಶಾಲೆ ಇದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕರು ಆದ್ಯತೆ ಮೆರೆಗೆ ಕೆಲಸ ಮಾಡಿದ್ದಾರೆ. ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ಇದೆ. ಹೆಚ್ಚಿನ ಮಕ್ಕಳು ಬರುವಂತೆಯೇ ಮಾಡಬೇಕು.
– ಬಿಆರ್‌ಸಿ ಮಲ್ಲಿಕಾರ್ಜುನ ಪೂಜಾರಿ,

