ದೊಡ್ಡ ಬಜೆಟ್- ದೊಡ್ಡ ಸ್ಟಾರ್ ಗಳ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಖತ್ ಸದ್ದು ಮಾಡುತ್ತಿವೆ. ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ರಿಷಬ್ ಶೆಟ್ಟಿ ಸಂಸ್ಥೆಯ ‘ಶಿವಮ್ಮ’ ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ.
ಜೈ ಶಂಕರ್ ಆರ್ಯರ್ ನಿರ್ದೇಶನದ ಚೊಚ್ಚಲ ಚಿತ್ರ.
ಈವರೆಗೂ ಶಿವಮ್ಮ ಗೆದ್ದ ಪ್ರಶಸ್ತಿಗಳ ಪಟ್ಟಿ ದೊಡ್ಡದಿದೆ. ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ,ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್, ನಾಂಟೆಸ್, ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗ್ರಾಂಡ್ ಪ್ರಿಕ್ಸ್ ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ, ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ ಇಂಡಿಯನ್ ಪಿಲ್ಮ್ ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ ಅಂತರ್ರಾಷ್ಟ್ರೀಯ ಚಿತ್ರೋತ್ಸವ ಮುಂತಾದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ರಿಷಬ್ ಶೆಟ್ಟಿ:
ಇಂಥದ್ದೊಂದು ಸಿನಿಮಾ ತಮ್ಮದೇ ಬ್ಯಾನರ್ ನಲ್ಲಿ ಬಂದಿದ್ದು, ಸಹಜವಾಗಿಯೇ ಅವರಿಗೆ ಸಂಭ್ರಮ ತಂದಿದೆ. ಈ ಸಿನಿಮಾ ಇನ್ನೂ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಲಿ ಎಂದು ನಿರ್ದೇಶಕರಿಗೆ ರಿಷಬ್ ಹಾರೈಸಿದ್ದಾರೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್