‘ರೆಬೆಲ್ ಸ್ಟಾರ್’ ಅಂಬರೀಷ್ ಪುತ್ರ ಅಭಿಷೇಕ್ ಮತ್ತು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೋಡಿಯ ವಿವಾಹವು ತುಂಬಾ ಅದ್ಧೂರಿಯಾಗಿ ನಡೆಯಿತು.ಅಭಿಷೇಕ್ ಮತ್ತು ಅವಿವಾ ಮದುವೆಯ ಸಂಭ್ರಮದಲ್ಲಿ ಎರಡು ಕುಟುಂಬಗಳ ಆಪ್ತರು, ಬಂಧು ಮಿತ್ರರು ಭಾಗಿಯಾಗಿದ್ದರು. ಅಭಿಷೇಕ್ ಮತ್ತು ಅವಿವಾ ಅವರು ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ನವ ಜೋಡಿಗೆ ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ,ಪತ್ನಿ ಪ್ರಗತಿ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಪತ್ನಿ ಸುಪ್ರೀತಾ ಶೆಟ್ಟಿ ಹರಸಿ ಹಾರೈಸಿದರು. ಇದರ ನಡುವೆಯೆ ಕಾಂತಾರ 1 ಯಾವಾಗ ಎಂದು ಅಭಿಷೇಕ್ ಕೇಳಿದ್ದಕ್ಕೆ ನಿನ್ನ ಮದುವೆ ಆಯ್ತಲಾ ಇನ್ಮೇನು ಕಾಂತಾರ ಮೊದಲ ಭಾಗ ಬರುತ್ತೆ ಅಂತಾ ಕಾಲೆಳೆದ್ರು.