Karnataka Bhagya
ರಾಜಕೀಯ

ಅಯ್ಯಣ್ಣ ಜೇರಬಂಡಿ ಹಾಲಗೇರಾ ಶಹಾಪೂರ ಎಪಿಎಂಸಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ : ಶಹಾಪೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಅಯ್ಯಣ್ಣ ಜೇರಬಂಡಿ ಹಾಲಗೇರಾ ಉಪಾಧ್ಯಕ್ಷರಾಗಿ ಬಸವರಾಜ ಹೈಯ್ಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಿಗೆ ಒಲಿದ ಅದೃಷ್ಟ

ಶಹಾಪೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಅಯ್ಯಣ್ಣ ಜೇರಬಂಡಿ ಹಾಲಗೇರಾ ಉಪಾಧ್ಯಕ್ಷರಾಗಿ ಬಸವರಾಜ ಹೈಯ್ಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

13 ಜನ ಸದಸ್ಯ ಬಲದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆದ ಚುನಾವಣೆಯಲ್ಲಿ ಉಪ ತಹಸೀಲ್ದಾರ ಚುನಾವಣಾಧಿಕಾರಿ ಸೇತು ಮಾಧವ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

13 ಜನ ಎಪಿಎಂಸಿ ಸದಸ್ಯರಲ್ಲಿ 11 ಜನ ಕಾಂಗ್ರೆಸ್ ಸದಸ್ಯರಿದ್ದರೆ 2 ಬಿಜೆಪಿ ಸದಸ್ಯರಿದ್ದರು. ಬುಧವಾರ ಬೆಳಗ್ಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಅಯ್ಯಣ್ಣ ಜೇರಬಂಡಿ ಹಾಗೂ ಉಪಾಧ್ಯಕ್ಷ ಹುದ್ದೆಗೆ ಬಸವರಾಜ ಹೈಯ್ಯಾಳ ನಾಮಪತ್ರ ಸಲ್ಲಿಸಿ, ಯಾವುದೇ ಪೈಪೋಟಿ ಇರದಿರುವುದರಿಂದ ಇರ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷಕ್ಕಾಗಿ ದುಡಿದರೆ ಅವಕಾಶಗಳು ಸಾಕಷ್ಟು ಸಿಗಲಿವೆ ಎನ್ನುವುದಕ್ಕೆ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಅಯ್ಯಣ್ಣ ಜೇರಬಂಡಿ ಸಾಕ್ಷಿಯಾಗಿದ್ದಾರೆ.

ಅತ್ಯಂತ ಸರಳ, ಸಜ್ಜನರಾಗಿರುವ ಅಯ್ಯಣ್ಣ ಜೇರಬಂಡಿ ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ಬಾಳಿ ಬದುಕಿದವರು. ಇವರು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪೂರ, ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಕಾಂಗ್ರೆಸ್ ಮುಖಂಡರಾದ ಬಸ್ಸುಗೌಡ ಬಿಳ್ಹಾರ ಸೇರಿದಂತೆ ಹಲವು ಪ್ರಮುಖ ನಾಯಕರಲ್ಲಿ ಮೆಚ್ಚಿನ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ.

ಅಯ್ಯಣ್ಣ ಜೇರಬಂಡಿಯವರು ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಹಣಮಂತ್ರಾಯ ಬಸವಲಿಂಗಮ್ಮ ದಂಪತಿ ಮಡಿಲಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹಾಲಗೇರಾ ಮತ್ತು ಪ್ರೌಢ ಶಿಕ್ಷಣವನ್ನು ವಡಗೇರಾ ಪಟ್ಟಣದಲ್ಲಿ ಮುಗಿಸಿ, ಯಾದಗಿರಿಯಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ಅತ್ಯಂತ ಕಡುಬಡತನದಲ್ಲಿ ಇವರ ತಂದೆ ಇವರ ಓದನ್ನು ಮೊಟಕುಗೊಳಿಸಿದ್ದರಿಂದ ಹಲವು ಸ್ತರಗಳಲ್ಲಿ ಕಾರ್ಮಿಕನಾಗಿ, ರೈತನಾಗಿ ದುಡಿದು ಬೆಳೆದು ಹಾಲಗೇರಾ ಗ್ರಾಮದ ರಾಜಕೀಯ ಮುಖಂಡರ ಒಡನಾಟದೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿ ಸಾಮಾನ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರಿಂದ ಕಾಂಗ್ರೆಸ್ ನಾಯಕರು ಇವರಿಗೆ ಎಪಿಎಂಸಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ.

ಅವರ ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆ ಇಂದು ಅವರ ಕೈ ಹಿಡಿದಿದ್ದು, ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದರೂ ಶಹಾಪೂರ ಎಪಿಎಂಸಿ ಅಧ್ಯಕ್ಷ ಹುದ್ದೆ ಅವರಿಗೆ ಒಲಿದು ಬಂದಿದೆ.

ಯಾದಗಿರಿ ಕಾಂಗ್ರೆಸ್ ಮುಖಂಡರಾದ ಬಸ್ಸುಗೌಡ ಬಿಳ್ಹಾರ, ಯಾದಗಿರಿ ಶಾಸಕರ ಪುತ್ರರಾದ ಸನ್ನಿಗೌಡ ತುನ್ನೂರ, ಕಾಂಗ್ರೆಸ್ ಮುಖಂಡರಾದ ಮರೆಪ್ಪ ಬಿಳ್ಹಾರ, ಅಮರೇಶ ಜಾಕಾ, ಹಾಲಗೇರಾ ವಿಎಸ್ಎಸ್ಎನ್ ಅಧ್ಯಕ್ಷರಾದ ವಿಜಯಗೌಡ ಕೆಳಮನಿ, ಶಹಾಪೂರ ಟಿಎಪಿಎಂಸಿ ಕಾರ್ಯದರ್ಶಿ ಶಿವರಾಜ ಕುಂಬಾರ, ಹಾಲಗೇರಾ ಗ್ರಾಪಂ ಸದಸ್ಯರಾದ ಭೀಮರಾಯ ನಾಟೇಕಾರ, ಮಲ್ಲಣ್ಣಗೌಡ ಮಾಲಿ ಪಾಟೀಲ, ಭೀಮಣ್ಣ ನಾಯ್ಕೋಡಿ ರೈತಸಂಘದ ತಾಲೂಕು ಉಪಾಧ್ಯಕ್ಷರು, ಹೊನ್ನಪ್ಪ ಯಡ್ಡಳ್ಳಿ, ಸಿದ್ದಪ್ಪ ನಾಟೇಕಾರ, ತಾಯಪ್ಪ ಮಲ್ಲಾ, ಹಣಮಂತ ಪೂಜಾರಿ, ಕಳಸಪ್ಪ ಕಲ್ಮನಿ, ಸತ್ಯಾನಾರಾಯಣ ದೊರೆ, ಶರಣು ಕಲಾಲ ಸೇರಿದಂತೆ ಇತರರಿದ್ದರು.

ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ : ಶಹಾಪೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಅಯ್ಯಣ್ಣ ಜೇರಬಂಡಿ ಹಾಲಗೇರಾ ಉಪಾಧ್ಯಕ್ಷರಾಗಿ ಬಸವರಾಜ ಹೈಯ್ಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Related posts

ಭತ್ತದ ಪೈರಿನಲ್ಲಿ ಮೂಡಿ‌ಬಂದ ಪುನೀತ್ ರಾಜ್ ಕುಮಾರ್

Nikita Agrawal

ತೆಲುಗು ಸಿನಿರಂಗ ಹೊಸತು ಎಂದ ಸುಪ್ರೀತಾ ಸತ್ಯನಾರಾಯಣ… ಯಾಕೆ ಗೊತ್ತಾ?

Nikita Agrawal

ಎರಡನೇ ವಾರಕ್ಕೆ ಹಾದಿ ತಪ್ಪಿದ ಗೋಲ್ಡನ್ ಗ್ಯಾಂಗ್

Nikita Agrawal

Leave a Comment

Share via
Copy link
Powered by Social Snap