ಅಹಿಂದ ಸಂಘಟನೆ ಬಲಪಡಿಸಿ
ಕರ್ನಾಟಕ ಭಾಗ್ಯ ವಾರ್ತೆ
ಬೆಂಗಳೂರು : ಅಹಿಂದ ಬಂಧುಗಳು ಎಲ್ಲರೂ ಒಗ್ಗಟ್ಟಾದರೆ ವಿಧಾನಸಭಾ ಚುನಾವಣೆ ೨೦೨೮ಕ್ಕೆ ೧೧೩ ಅಹಿಂದ ಶಾಸಕರು ಮಾಡುವ ತಾಕತ್ತು ನಮ್ಮಲಿದ್ದು, ಇದು ನೂರಕ್ಕೆ ನೂರು ಸತ್ಯ ನಮ್ಮ ಆತ್ಮವಿಶ್ವಾಸ ಇದೆ ಎಂದು ಅಹಿಂದ ಕರ್ನಾಟಕ ರಾಜ್ಯ ಗೌರವ ಅಧ್ಯಕ್ಷರಾದ ಎಚ್ ಎಮ್ ರೇವಣ್ಣ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ ಗ್ರಾಮ ಮಟ್ಟದಲ್ಲಿ ಅಹಿಂದ ಸಂಘಟನೆ ಮಾಡಿ ಪ್ರತಿಯೊಂದು ಬೂತ್ ಅಧ್ಯಕ್ಷರನ್ನ ನೇಮಕ ಮಾಡಲು ತಾಲೂಕ ಅಧ್ಯಕ್ಷರಿಗೆ ಪೂರ್ಣ ಅಧಿಕಾರ ನೀಡಿರುತ್ತೇವೆ. ತಾವೆಲ್ಲರೂ ಪ್ರವಾಸ ಮಾಡಿ ಪ್ರತಿಯೊಂದು ಹಳ್ಳಿಗೆ ಭೇಟಿಕೊಟ್ಟು ಬೂತ್ ಅಧ್ಯಕ್ಷರನ್ನು ಅಹಿಂದ ಭೂತ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಂಘಟಿಸಿ ಜಿಲ್ಲಾ ಅಧ್ಯಕ್ಷರಿಗೆ ವರದಿ ನೀಡಬೇಕೆಂದು ಪದಾಧಿಕಾರಿಗಳಿಗೆ ನಿರ್ದೇಶನ ಮಾಡಿದ್ದಾರೆ.
ಮುಂಬರುವ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವ್ಯಕ್ತಿಗಳಿಗೆ ಪೂರ್ಣ ಬೆಂಬಲವಾಗಿ ನಿಂತು ಅವರನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಅಹಿಂದ ಸಂಘಟನೆಯು ಹೊಂದಿದ್ದು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸ್ಪರ್ಧೆ ಮಾಡುವ ಅಹಿಂದ ನಾಯಕರು ಬೇಗನೆ ನಮ್ಮ ಅಹಿಂದ ಜಿಲ್ಲಾಧ್ಯಕ್ಷರಿಗೆ ತಮ್ಮ ಹೆಸರುಗಳನ್ನು ನೋಂದಣಿ ಮಾಡಬೇಕು ಎಂದು ತಿಳಿಸಿದ್ದಾರೆ.