ಯಾದಗಿರಿ ನಗರದ ರೈಲ್ವೆ ನಿಲ್ದಾಣದಿಂದ ಕನ್ನಡದ ಕಟ್ಟಾಳುಗಳ ಅದ್ದೂರಿ ಮೆರವಣಿಗೆ
ಆಂಗ್ಲ ನಾಮಫಲಕ ಹಾಕಿದರೆ ಹುಷಾರ್
ಯಾದಗಿರಿ : ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಸೇರಿದಂತೆ ಹಲವು ಪದಾಧಿಕಾರಿಗಳು ಕನ್ನಡ ಭಾಷೆ ಉಳಿವಿಗಾಗಿ ನಡೆಸಿದ ಹೋರಾಟದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿ ಶುಕ್ರವಾರ ನಗರಕ್ಕಾಗಮಿಸಿದ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮತ್ತೀತರ ಪದಾಧಿಕಾರಿಗಳ ಅದ್ದೂರಿ ಮೆರವಣಿಗೆ ಜರುಗಿತು.
ನಗರದ ರೈಲ್ವೆ ನಿಲ್ದಾಣದಿಂದ ತೆರೆದ ಜೀಪ್‌ನಲ್ಲಿ ಜಿಲ್ಲಾಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಕಾರ್ಯಕರ್ತರು ಬೈಕ್ ರ‍್ಯಾಲಿ ಮುಖಾಂತರ ರೈಲ್ವೆ ನಿಲ್ದಾಣ, ಶಾಸ್ತಿçÃವೃತ್ತ, ಸುಭಾಷ ಚಂದ್ರಬೋಸ್ ವೃತ್ತ, ಡಿಗ್ರಿ ಕಾಲೇಜ್ ಮಾರ್ಗವಾಗಿ ಜಿಲ್ಲಾ ಕರವೇ ಕಾರ್ಯಲಯದವರೆಗೆ ನಡೆಯಿತು.
ಆಂಗ್ಲ ನಾಮಫಲಕ ಹಾಕಿದರೆ ಹುಷಾರ್ : ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಎಚ್ಚತ್ತ ರಾಜ್ಯ ಸರ್ಕಾರ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯ ಕನ್ನಡದ ಭಾಗವಾಗಿ ೬೦:೪೦ ಅನುಪಾತದಡಿ ಆದೇಶ ಹೊರಡಿಸಿದ್ದು, ಅಂಗಡಿ ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಬರೆಸದ ಅಂಗಡಿ ಮಾಲೀಕರ ವಿರುದ್ದ ಕ್ರಮಕೈಗೊಳ್ಳಲಾಗುವುದು, ನಾವು ಯಾವುದಕ್ಕೂ ಹೆದರುವುದಿಲ್ಲ ಆಂಗ್ಲ ನಾಮಫಲಕ ಹಾಕಿದರೆ ಹುಷಾರ್ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಯಮನಯ್ಯ ಗುತ್ತೇದಾರ, ಚೌಡಯ್ಯ ಬಾವೂರ, ರವಿರಾಜ ಹೊನಗೇರಾ, ಅಂಬ್ರೇಶ ಹತ್ತಿಮನಿ, ಅಬ್ದುಲ್ ಚಿಗನೂರ್, ಸುರೇಶ ಬೆಳಗುಂದಿ, ಚನ್ನಬಸ್ಸು ಯರಗೋಳ, ಮಹೇಶ ಠಾಣಗುಂದಿ ಮತ್ತು ಇತರರಿದ್ದರು.