ಆಗಸ್ಟ್ 19ರಿಂದ ಸಗರನಾಡಿನ ಆರಾಧ್ಯದೈವ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆ ಆರಂಭ
ಕರ್ನಾಟಕ ಭಾಗ್ಯ ವಾರ್ತೆ ವಡಗೇರಾ : ತಾಲೂಕಿನ ಹೈಯಾಳ. ಬಿ. ಗ್ರಾಮದ ಸಗರನಾಡಿನ ಆರಾಧ್ಯದೈವ ಶ್ರೀ ಹೈಯಾಳಲಿಂಗೇಶ್ವರ ಜಾತ್ರಾ ಮಹೋತ್ಸವ ಆಗಸ್ಟ್ 19. ರಿಂದ 23. ರವರೆಗೆ ಅತ್ಯಂತ ವಿಜ್ರಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.ದಿ.19 ಸೋಮವಾರ ರಂದು ಬೆಳಿಗ್ಗೆ 10. ಗಂಟೆಗೆ ಹೈಯಾಳಲಿಂಗೇಶ್ವರ ಗದ್ದುಗೆಗೆ ಹೂ ಏರಿಸುವ ಕಾರ್ಯಕ್ರಮ ನೆರವೇರಲಿದೆ ಅಂದು ಸಾಯಂಕಾಲ 6. ಗಂಟೆಗೆ ಹೈಯ್ಯಾಳಲಿಂಗೇಶ್ವರರ ಪಲ್ಲಕ್ಕಿಯು ಗ್ರಾಮದ ಸಮೀಪವಿರುವ ಕೃಷ್ಣಾ ನದಿಗೆ ಗಂಗಾಸ್ನಾನಕ್ಕೆ ತೆರಳುವುದು ಗಂಗಾಸ್ನಾನ ಮುಗಿದ ನಂತರ ಇಡೀ ರಾತ್ರಿ ಡೊಳ್ಳಿನ ಪದ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಲಿವೆ ದಿ : 20 ರಂದು ಮಂಗಳವಾರ ಬೆಳಿಗ್ಗೆ 6:0 ಗಂಟೆಗೆ ಗ್ರಾಮದ ಸಮೀಪದಲ್ಲಿರುವ ಆಳಮೇಲ ಹತ್ತಿರ ಬಂದು ಪೂಜಾರಿಗಳಿಂದ ದೇವರ ಹೇಳಿಕೆ ಜರಗುತ್ತದೆ ತದನಂತರ ಡೊಳ್ಳು ಬಾಜಾ ಭಜಂತ್ರಿಗಳೊಂದಿಗೆ ಪಲ್ಲಕ್ಕಿ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತಲುಪಿ ದೇವಸ್ಥಾನದಲ್ಲಿ ಪಲ್ಲಕ್ಕಿಯು ಮೂರು ಸುತ್ತು ತಿರುಗಿ 11.ಕ್ಕೆ ದೇವರುಗಳನ್ನು ಗದ್ದುಗೆಗೆ ಮೇಲೆ ಕೂರಿಸಲಾಗುವುದು ಆ ನಂತರ 21 ದಿನಗಳ ಕಾಲ ದೇವರಿಗೆ ಒಂದೊತ್ತು ಇರುವ ಭಕ್ತರು ಅಂದು ಕೊನೆಗೊಳಿಸಿ ಹೋಳಿಗೆ ಕರ್ಜಕಾಯಿ ಇನ್ನಿತರ ಸಿಹಿ ಕ್ಯಾದ್ಯಗಳನ್ನು ತಯಾರಿಸಿ ಬುಟ್ಟಿಯಲ್ಲಿ ತಂದು ನೈವಿದ್ಯ ಸಮರ್ಪಿಸುವರು ಅಂದಿನ ದಿನ ಭಕ್ತಾದಿಗಳು ಜವಳ ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವರು ಈ ಜಾತ್ರೆಯು ಐದು ದಿನಗಳ ಕಾಲ ಅತ್ಯಂತ ವಿಜ್ರಂಭಣೆಯಿಂದ ಜರಗುತ್ತದೆ ಈ ಜಾತ್ರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಹೈಯ್ಯಾಳಲಿಂಗೇಶ್ವರ ಕೃಪೆಗೆ ಪಾತ್ರರಾಗುತ್ತಾರೆ ಪರಸ್ಥಳದಿಂದ ಬಂದಂತ ಭಕ್ತರಿಗೆ ಎಲ್ಲಾ ರೀತಿಯ ಸಕಲ ಸೌಲಭ್ಯಗಳನ್ನು ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೈಯ್ಯಾಳಲಿಂಗೇಶ್ವರ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ