
ನಟಿ,ಸಚಿವೆ ಆರೋಗ್ಯದ ಪರಿಸ್ಥಿತಿ ಸ್ಥಿರವಾಗಿದ್ದು ಕೆಲವು ದಿನಗಳ ಕಾಲ ರೆಸ್ಟ್‌ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಇನ್ನು ಅಭಿಮಾನಿ ಬಳಗ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಪೂಜೆ,ಪುರಸ್ಕಾರ ಮಾಡಿಸುತ್ತಿದ್ದಾರಂತೆ
2021ರಲ್ಲಿ ಕೂಡಾ 2 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ನಟಿ,ರಾಜಕಾರಣಿ ರೋಜಾ ಸೆಲ್ವಮಣಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ರೋಜಾ, ಈಗ ಸಿನಿಮಾಗಳಿಂದ ಸಂಪೂರ್ಣ ದೂರ ಉಳಿದಿದ್ದು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ, ತಾವು ಇಷ್ಟಪಟ್ಟಂತೆ ಸಚಿವೆ ಕೂಡಾ ಆಗಿದ್ದಾರೆ
.ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್