Karnataka Bhagya
ಕರ್ನಾಟಕ

ಕಂದಕೂರ ನಿಷ್ಠೆಗೊಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಜೆಡಿಎಸ್ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಸುಭಾಷ ಕಟಕಟಿಯವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆದೇಶ ಹೊರಡಿಸಿದ್ದು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆದೇಶ ಪತ್ರವನ್ನು ನೀಡಿದರು.
ಆದೇಶ ಪತ್ರ ನೀಡಿದ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಸುಭಾಷ ಕಟಕಟಿಯವರು ಕಂದಕೂರ ಕುಟುಂಬದೊAದಿಗೆ ಹಲವು ದಶಕಗಳಿಂದಲೂ ಸಂಪರ್ಕದಿAದಿದ್ದು, ಪಕ್ಷನಿಷ್ಠೆಗೆ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ದೊರಕಿದೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ ಎರಡು ರಾಷ್ಟಿçÃಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮೇಲ್ವರ್ಗದ ವ್ಯಕ್ತಿಗಳಿಗೆ ತಮ್ಮ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿವೆ. ನಮ್ಮ ಪಕ್ಷದಿಂದ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಬೇಕು ಎನ್ನುವ ದೃಷ್ಠಿಯಿಂದ ಹಿಂದುಳಿದ ವರ್ಗದ ಕೋಲಿ ಸಮಾಜದ ಸುಭಾಷ ಕಟಕಟಿಯವರನ್ನು ಆಯ್ಕೆ ಮಾಡಲಾಗಿದೆ. ನಮ್ಮ ಪಕ್ಷ ಪ್ರತಿಯೊಂದು ಸಮಾಜಕ್ಕೆ ಆದ್ಯತೆ ನೀಡುತ್ತದೆ, ಹಿಂದುಳಿದ ವರ್ಗವನ್ನು ಮೇಲತ್ತಬೇಕು ಎನ್ನುವ ದೃಷ್ಠಿಕೋನ ನಮ್ಮ ನಾಯಕರದ್ದಾಗಿದೆ ಎಂದು ಹೇಳಿದರು.
ನೂತನ ಜಿಲ್ಲಾಧ್ಯಕ್ಷರು ಜಿಲ್ಲೆಯಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವುದರೊAದಿಗೆ, ಜಿಲ್ಲೆಯಾದ್ಯಂತ ಕನಿಷ್ಠ ೩ ಲಕ್ಷ ಸದಸ್ಯರನ್ನು ನೋಂದಾಯಿಸಬೇಕು, ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಅತಿಹೆಚ್ಚು ಮಾಡುವದರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.
ಮುಂಬರುವ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಪಕ್ಷವನ್ನು ಸದೃಢಗೊಳಿಸಿ ಅತಿಹೆಚ್ಚು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಈಗಿನಿಂದಲೇ ಪಕ್ಷ ಸಂಘಟೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಸುಭಾಷ ಕಟಕಟಿಯವರು ಅಪ್ಪಾಜಿ ಕಾಲದಿಂದಲೂ ಕೂಡ ನಮ್ಮೊಂದಿಗಿದ್ದು, ಅವರು ಪಕ್ಷ ನಿಷ್ಠೆಯೊಂದಿಗೆ ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ಪಕ್ಷ ಸಂಘಟನೆಯಲ್ಲಿ ಅವರ ಪಾತ್ರವು ಇದೆ, ಅದರ ಜೊತೆಗೆ ಕಳೆದ ಬಾರಿ ಯಾದಗಿರಿ ಜಿಲ್ಲಾ ಪಂಚಾಯತಿಗೆ ಜೆಡಿಎಸ್‌ನ ಏಕೈಕ ಸದಸ್ಯರಾಗಿ ಅವರ ಧರ್ಮಪತ್ನಿ ಆಯ್ಕೆಯಾಗಿದ್ದರು ಎಂದು ಹೇಳಿದರು.

===================

ಅಪ್ಪಾಜಿ ಆಶೀರ್ವಾದ ನನ್ನ ಮೇಲಿದೆ ಎನ್ನುವುದಕ್ಕೆ ಇದೇ ಸಾಕ್ಷಿ
ಯಾದಗಿರಿ :
ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರ ಅವರ ಆಶೀರ್ವಾದ ಸದಾ ನನ್ನ ಮೇಲಿದೆ ಎನ್ನುವುದಕ್ಕೆ ಈ ಹುದ್ದೆ ನನಗೊಲಿದಿರುವುದೇ ಸಾಕ್ಷಿಯಾಗಿದೆ ಎಂದು ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಸುಭಾಷ ಕಟಕಟಿ ಹೇಳಿದರು.
ಆದೇಶ ಪತ್ರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕಳೆದ ಹಲವು ದಶಕಗಳಿಂದ ನಾನು ಕಂದಕೂರ ಕುಟುಂಬದೊAದಿಗಿದ್ದೇನೆ. ನಾನು ಹಿಂದುಳಿದ ಕೋಲಿ ಸಮಾಜಕ್ಕೆ ಸೇರಿದವನಾಗಿದ್ದರೂ ನಾಗನಗೌಡ ಕಂದಕೂರ ಅಪ್ಪಾಜಿ ಮತ್ತು ಯುವ ನಾಯಕರಾದ ಶರಣಗೌಡ ಕಂದಕೂರ ಅವರು ನನ್ನನ್ನು ಎಂದಿಗೂ ಹಿಂದುಳಿದನು ಎಂದು ನೋಡಿಲ್ಲ, ತಮ್ಮ ಮನೆಯ ಮಗನಂತೆ ನನ್ನನ್ನು ಕಂಡಿದ್ದಾರೆ, ಅದರಂತೆ ಕಳೆದ ಬಾರಿ ನನ್ನ ಧರ್ಮಪತ್ನಿಗೆ ಜಿಲ್ಲಾ ಪಂಚಾಯತ್ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದರು, ಜಿಲ್ಲೆಯಲ್ಲಿ ಏಕೈಕ ಜೆಡಿಎಸ್ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೇ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಲು ಕೂಡ ಕಾರಣಿಕರ್ತರಾಗಿದ್ದರೂ, ಅವರ ಅಭಿಮಾನ ಮತ್ತು ಕಾಳಜಿಯ ಭಾಗವಾಗಿ ನಮ್ಮ ಹಿಂದು ವರ್ಗಕ್ಕೆ ಜಿಲ್ಲಾಧ್ಯಕ್ಷ ಪಟ್ಟ ದೊರಕಿದೆ ಎಂದು ಸಂತಸವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಇನ್ನೂ ಹೆಚ್ಚಿನ ಬಲಬಂದAತಾಗಿದ್ದು, ಪ್ರತಿಯೊಂದು ಹೋಬಳಿ, ಗ್ರಾಮ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆಯನ್ನು ಕಟ್ಟಿ, ಶಾಸಕ ಶರಣಗೌಡ ಕಂದಕೂರ ನನ್ನ ಮೇಲಿಟ್ಟಿರುವ ವಿಶ್ವಾಸದೊಂದಿಗೆ ಅತಿಹೆಚ್ಚು ಸದಸ್ಯರನ್ನು ಮಾಡಿ ಜಿಲ್ಲೆಯಲ್ಲಿ ಸದೃಢ ಪಕ್ಷವಾಗಿ ಹೊರಹೊಮ್ಮಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ರಾಷ್ಟಿçÃಯ ಪಕ್ಷಗಳಿಗೆ ಸೆಡ್ಡೊಡೆಯಲು ಜೆಡಿಎಸ್ ಅಹಿಂದಕ್ಕೆ ಮಣೆ
ಯಾದಗಿರಿ :
ಜಿಲ್ಲೆಯಲ್ಲಿ ರಾಷ್ಟಿçÃಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ಜೆಡಿಎಸ್ ಪೂರ್ವ ತಯಾರಿ ನಡೆಸಿದ್ದು, ತಾಪಂ ಮತ್ತು ಜಿಪಂ ಚುನಾವಣೆ ಪೂರ್ವ ಹಿಂದುಳಿದ ವರ್ಗದ ಮೇಲೆ ಕಣ್ಣಿಟ್ಟು ಜಿಲ್ಲಾಧ್ಯಕ್ಷ ಪಟ್ಟವನ್ನು ಅಹಿಂದ ವರ್ಗವಾದ ಕೋಲಿ ಸಮಾಜಕ್ಕೆ ನೀಡಿದೆ.
ಬಿಗು ಧೋರಣೆ, ಸೌಮ್ಯ ಸ್ವಭಾವ ಶಿಸ್ತಿನ ಕಾರ್ಯಕರ್ತರಾಗಿ ಪಕ್ಷದಲ್ಲಿನಿಷ್ಠೆಯಿಂದ ಕೆಲಸ ನಿರ್ವಹಿಸಿದ ಸುಭಾಷ ಕಟಕಟಿಯವರಿಗೆ ಅಧ್ಯಕ್ಷ ಪಟ್ಟ ದಕ್ಕಿರುವದು ಔಚಿತ್ಯಪೂರ್ಣವಾದದ್ದು. ಕಟಕಟಿಯವರು ಎಲ್ಲರ ಸಹಾಯ ಸಹಕಾರದೊಂದಿಗೆ ಹಿರಿಯರ ಸಲಹೆ,ಸೂಚನೆಗಳ ಮೇರೆಗೆ ಪಕ್ಷವನ್ನು ಸಂಘಟಿಸಿ, ಬಲಿಷ್ಠಗೊಳಿಸಿ ಕಾರ್ಯಕರ್ತರಿಗೆ ಸಮಾನವಾಗಿ ನೊಡಿಕೊಳ್ಳುವಂತೆ ಶಾಸಕರು ಸೂಚಿಸಿರುವುದು ಅವರಲ್ಲಿ ಕಾರ್ಯಕರ್ತರ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ.
ಜೆಡಿಎಸ್ ಜಿಲ್ಲಾ ನೂತನ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕಗೊಂಡಿರುವುದು ಅವರ ಅಭಿಮಾನಗಳಲ್ಲಿ ಹರುಷದ ಹೊನಲು ಹರಿದಿದೆ.

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ

Related posts

ತನ್ನ ನೆಚ್ಚಿನ ‘ಸೆಲೆಬ್ರಿಟಿ’ಗಳಿಗೆ ಧನ್ಯವಾದ ಹೇಳಿದ ‘ಡಿ ಬಾಸ್’

Nikita Agrawal

ಡಾ. ದೇವ್ ಪಾತ್ರಕ್ಕೆ ವಿದಾಯ ಹೇಳಿದ ವಿಜಯ್ ಕೃಷ್ಣ

Nikita Agrawal

ಶೋಷಿತ ಸಮುದಾಯದ 7 ದಶಕಗಳ ಕನಸು ನನಸು, ಗುರುಮಠಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿ ನಿರ್ಮಾಣಕ್ಕಾಗಿ ೨೦೧೮ರಲ್ಲಿ ಶಾಸಕ ದಿ.ನಾಗನಗೌಡ ಕಂದಕೂರ ಸಂಕಲ್ಪ, ತಂದೆ ಕನಸು ಈಡೇರಿಸಿದ ಪುತ್ರ ಹಾಲಿ ಶಾಸಕ ಶರಣಗೌಡ ಕಂದಕೂರ ಪ್ರತಿಷ್ಠಾಪನೆ ಅನಾವರಣ.

Karnataka Bhagya

Leave a Comment

Share via
Copy link
Powered by Social Snap