Karnataka Bhagya
Blogಅಂಕಣ

ಕರ್ನಾಟಕದ ನಟಿಗೆ ಕಿರುಕುಳ, ಕೋಟಿ ಕೋಟಿ ಹಣ ನೀಡುವೆ ಎಂದ ಸ್ಟಾರ್ ನಟನ ಮಗ ಯಾರು…!

ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ಇತ್ತೀಚೆಗೆ ಮಾಮೂಲಾಗಿರುವ ವಿಷಯ. ಕೆಲವರು ಮಾತ್ರ ಈ ಹಿಂಸೆಯಿಂದ‌ ಹಿಂದೆ ಸರಿದದ್ದು ಉಂಟು ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಉಂಟು.ಅಂತಹ ಸಾಲಿಗೆ ಈಗ ಕನ್ನಡದ ಮೋಸ್ಟ್ ವಾಂಟೆಡ್ ನಟಿ ಕೂಡ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡದ ನಟಿ ಕೃತಿ ಶೆಟ್ಟಿ ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಬಂದು ಚಿಕ್ಕ ವಯಸ್ಸಿಗೆ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡರು. ಈಕೆ ಮಾತ್ರ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ ಕಥೆ, ಹೀರೋ , ಪ್ರೊಡಕ್ಷನ್‌ ಹೌಸ್‌ ಎಲ್ಲವನ್ನೂ ಅಳೆದು ಲೆಕ್ಕಾಚಾರ ಮಾಡಿ ನಂತರವಷ್ಟೇ ಸಿನಿಮಾಗೆ ಒಪ್ಪಿಗೆ ಸೂಚಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕೃತಿ ಶೆಟ್ಟಿಗೆ ಸ್ಟಾರ್‌ ನಟನ ಮಗನೊಬ್ಬ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸ್ಟಾರ್‌ ನಟರೊಬ್ಬರ ಮಗನೊಬ್ಬ ಕೃತಿ ಶೆಟ್ಟಿ ಹಿಂದೆ ಬಿದ್ದಿದ್ದು ಆಕೆಗೆ ಫೋನ್‌ ಮಾಡಿ ಟಾರ್ಚರ್‌ ಕೊಡುತ್ತಿದ್ದಾರಂತೆ. ಅಷ್ಟೇ ಅಲ್ಲ ಇತ್ತೀಚೆಗೆ ಕೃತಿಗೆ ಕರೆ ಮಾಡಿ ಪಾರ್ಟಿಗೆ ಬರುವಂತೆ ಒತ್ತಾಯ ಮಾಡಿದ್ದಾರಂತೆ. ಇದಕ್ಕೆ ಕೃತಿ ಶೆಟ್ಟಿ ನಿರಾಕರಿಸಿದಾಗ ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ, ಪಾರ್ಟಿಗೆ ಬರಲೇಬೇಕು ಎಂದು ತಾಕೀತು ಮಾಡಿದ್ದು ನಾನು ಯಾವ ಪಾರ್ಟಿಗೂ ಬರುವುದಿಲ್ಲ ಎಂದು ಕೃತಿ ಫೋನ್‌ ಕಟ್‌ ಮಾಡಿದ್ದಾಗಿ ಸುದ್ದಿ ಹರಿದಾಡುತ್ತಿದೆ. ಆದರೆ ಇದರ ಬಗ್ಗೆ ಕೂಡಾ ಸರಿಯಾದ ಮಾಹಿತಿ ದೊರೆಯುತ್ತಿಲ್ಲ.

ನಾಯಕಿಯಾಗಿ ನಟಿಸಿದ ತೆಲುಗು ಸಿನಿಮಾ ‘ಉಪ್ಪೆನ’. ಈ ಸಿನಿಮಾ 2021 ರಲ್ಲಿ ತೆರೆ ಕಂಡಿತ್ತು. 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ 100 ಕೋಟಿ ರೂಪಾಯಿ ಲಾಭ ಮಾಡಿತ್ತು.ಸದ್ಯಕ್ಕೆ ಕೃತಿ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

ಹಿಜಬ್ ಧರಿಸಿದ ಜನಪ್ರಿಯ ನಟಿ ಶ್ರುತಿ… ಕಾರಣ ಏನು ಗೊತ್ತಾ?

Nikita Agrawal

ವಿಚ್ಛೇದನದ ನಂತ್ರ ನಾಗಾರ್ಜುನ ಸ್ಟುಡಿಯೋಗೆ ಸಮಂತಾ ಎಂಟ್ರಿ

Karnatakabhagya

ಅಬ್ಬರಿಸುತ್ತಿರುವ ಮದಗಜ..

Nikita Agrawal
Share via
Copy link
Powered by Social Snap