ನಮ್ಮ ನೀರು ನಮ್ಮ ಹಕ್ಕು ಶರಣು ಗದ್ದುಗೆ ಆಕ್ರೋಶ
ಕರ್ನಾಟಕ ಭಾಗ್ಯ ಸುದ್ದಿ
ಯಾದಗಿರಿ : ಕಾವೇರಿ ಹೋರಾಟದ ಕಿಚ್ಚು ಗಿರಿನಾಡು ಯಾದಗಿರಿಯಲ್ಲೂ ಕೂಡ ಹಬ್ಬಿದೆ. ಸೆ.೨೯ರಂದು ವಿವಿಧ ಕನ್ನಡ ಪರ ಸಂಘಟನೆಗಳು ನೀಡಿದ ಕಾವೇರಿ ಬಂದ್‌ಗೆ ಯಾದಗಿರಿ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ನಗರದ ಸುಭಾಶ್ಚಂದ್ರ ವೃತ್ತದಲ್ಲಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದುಗೌಡ ತಂಗಡಗಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾವೇರಿ ಯಾವತ್ತಿದ್ದರೂ ನಮ್ಮ ರಾಜ್ಯದ ಸ್ವತ್ತು. ನಮ್ಮ ನೀರು ನಮ್ಮ ಹಕ್ಕು ಎಂದು ಆಕ್ರೋಶವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ ೨೯ ರಂದು ಕರ್ನಾಟಕ ಬಂದಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳ ಒಕ್ಕೂಟದ ಹೋರಾಟಕ್ಕೆ ಕರವೇ(ಪ್ರವೀಣ ಶೆಟ್ಟಿ) ವತಿಯಿಂದ ಕರವೇ ಉತ್ತರ ಕರ್ನಾಟಕ ಆದ್ಯಂತ ಎಲ್ಲಾ ೧೩ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಿAದ ಸಂಪೂರ್ಣವಾಗಿ ಕರವೇ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ ಸಹಿಸುವುದಿಲ್ಲ.ಕೃಷ್ಣ, ಭೀಮೆ,ತುಂಗಾ,ಯಾವ ನದಿಗಳು ಇರಲಿ ರಕ್ಷಣೆ ನಮ್ಮದಾಗಿದೆ. ಕಾವೇರಿ ನೀರಿನ ಸಮಸ್ಯೆಗೆ ಸಂಬAಧಿಸಿದAತೆ ಪ್ರತಿ ಬಾರಿಯೂ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು,ಈ ಸಂಬAಧ ಸೆಪ್ಟೆಂಬರ ೨೯ ರ ಕರ್ನಾಟಕ ಬಂದಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾಳೆ ಎಲ್ಲಾ ೧೩ ಜಿಲ್ಲೆಗಳಲ್ಲಿ ಬಂದ್ ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿ ಕಾರ್ಯಕರ್ತರು ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಪ್ರವಿಣಶೆಟ್ಟಿ ಬಣದ ನೂರಾರು ಕಾರ್ಯಕರ್ತರಿದ್ದರು.