21 C
Bengaluru
February 21, 2026
Karnataka Bhagya
ಕ್ರೀಡೆ

ಕಲ್ಯಾಣ ಕರ್ನಾಟಕ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್


ಶಾಸಕ ಶರಣಗೌಡ ಕಂದಕೂರರಿಂದ ಚಾಲನೆ

ನಾಗನಗೌಡ ಕಂದಕೂರ್ ಫೌಂಡೇಶನ್ ದಿಂದ ಆಯೋಜನೆ

ಕಲ್ಯಾಣ ಕರ್ನಾಟಕ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಯಾದಗಿರಿ: ಕ್ರೀಡೆಗಳು ದೈಹಿಕವಾಗಿ ಗಟ್ಟಿಗೊಳ್ಳುವುದರ ಜತೆಗೆ ಮಾನಸಿಕವಾಗಿ ದೃಢತೆ ಮೂಡಿಸುತ್ತವೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ್ ಅವರ ದ್ವಿತೀಯ ಪುಣ್ಯಸ್ಮರಣೆಯ ಅಂಗವಾಗಿ, ನಾಗನಗೌಡ ಕಂದಕೂರ್ ಫೌಂಡೇಶನ್ ವತಿಯಿಂದ ಶನಿವಾರ ನಗರದ ಹೊಸಳ್ಳಿ ರಸ್ತೆಯ ಎನ್ಎಸಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಕರಾತ್ಮಕವಾಗಿ ಆಟಗಳು ಆಡಬೇಕು. ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೊಭಾವನೆ ಇರಬೇಕೇ ಹೊರತು ದ್ವೇಷ ಭಾವನೆ ಹೊಂದಿರಬಾರದೆಂದರು.
ಸೋಲು,ಗೆಲುವು ಸಮಾನವಾಗಿ ಸ್ವೀಕರಿಸಬೇಕು, ಸೋಲೆ ಗೆಲುವಿನ ಮೆಟ್ಟಿಲು ಎಂಬುವುದು ಪ್ರತಿ ಆಟಗಾರರು ಅರ್ಥ ಮಾಡಿಕೊಳ್ಳಬೇಕೆಂದರು.
ತಮ್ಮ ತಂದೆ ದಿ. ನಾಗನಗೌಡ ಕಂದಕೂರ ಅವರ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸುತ್ತಾ, ನಮ್ಮ ಅಪ್ಪಾಜಿಯವರು ಸದಾ ಜನಸೇವೆಯನ್ನೇ ಉಸಿರಾಗಿಸಿಕೊಂಡಿದ್ದರು.
ಅವರ ನೆನಪನ್ನು ಅರ್ಥಪೂರ್ಣವಾಗಿಸಲು ಈ ಫೌಂಡೇಶನ್ ಸ್ಥಾಪಿಸಲಾಗಿದೆ, ಕೊಪ್ಪಳದ ಶ್ರೀಗಳ ಪಾವನ ಸಾನಿಧ್ಯದಲ್ಲಿ ಈ ಫೌಂಡೇಶನ್ ಉದ್ಘಾಟನೆಯಾದಗಿನಿಂದ ಇಂದಿಗೂ ಹಸಿರಾಗಿದೆ. ಮೊದಲ ಪುಣ್ಯತಿಥಿಯಂದು ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸುವ ಮೂಲಕ ಅವರ ಜನಸೇವೆಯ ಪರಂಪರೆಯನ್ನು ಮುಂದುವರಿಸಲಾಗಿತ್ತು. ಈ ವರ್ಷ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗಿರಿಜಿಲ್ಲೆಯಲ್ಲಿ ಸುಸಜ್ಜಿತ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪಿಸಿರುವ ಎನ್ಎಸಿ ಅಕಾಡೆಮಿ ಕಾರ್ಯವನ್ನು ಶಾಸಕರು ಮುಕ್ತಕಂಠದಿಂದ ಶ್ಲಾಘಿಸಿದರು. ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಸರ್ಕಾರಿ ಅಧಿಕಾರಿಗಳ ಕ್ರೀಡಾಸಕ್ತಿಯನ್ನು ಕಂಡು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ತವ್ಯದ ಒತ್ತಡದ ನಡುವೆಯೂ ಕ್ರೀಡೆಗಳಲ್ಲಿ ಭಾಗವಹಿಸುವುದು ಮಾನಸಿಕ ಆರೋಗ್ಯ ಗಟ್ಟಿಗೊಳಿಸುತ್ತದೆ ಎಂದರು. ಯುವ ಜನತೆ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಬೇಕೆಂದು ಅವರು ಕರೆ ನೀಡಿದರು.
ಎನ್ಎಸಿ ಅಕಾಡೆಮಿಯಿಂದ ಇನ್ನು ವಿವಿಧ ಕ್ರೀಡಾಕೂಟಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದ ಅವರು, ಟೂರ್ನಮೆಂಟ್ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ನಾಗನಗೌಡ ಕಂದಕೂರ್ ಫೌಂಡೇಶನ್‌ನ ಪ್ರಮುಖ ಪದಾಧಿಕಾರಿಗಳು, ಎನ್ಎಸಿ ಅಕಾಡೆಮಿ ಸಂಘಟಕರು,ತರಬೇತುದಾರರು, ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಹಾಗೂ ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದರು.

ಬಾಕ್ಸ್
ಇಂದಿನ ಜೀವನದ ಜಂಜಾಟದ ನಡುವೆ ಯಾವುದೇ ಲಾಭದ ಅಪೇಕ್ಷೆ ಇಲ್ಲದೆ, ಕೇವಲ ಕ್ರೀಡಾ ಪ್ರೇಮದಿಂದ ಇಂತಹ ಅಕಾಡೆಮಿ ನಡೆಸುವುದು ಸಾಮಾನ್ಯವಲ್ಲ. ಇಂತಹ ನಿಸ್ವಾರ್ಥ ಸಂಸ್ಥೆಗಳಿಂದಾಗಿ ನಮ್ಮ ಜಿಲ್ಲೆಯ ಕ್ರೀಡಾ ಪ್ರತಿಭೆಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಒಳ್ಳೆಯ ಅವಕಾಶ ಸಿಗುತ್ತಿದೆ.
ಶರಣಗೌಡ ಕಂದಕೂರ
ಶಾಸಕರು.
—+++

Related posts

ವಿಲನ್ ಆಗಿ ಕಿರುತೆರೆಯತ್ತ ಮರಳಿದ ಅಮೃತಾ ರಾಮಮೂರ್ತಿ

Nikita Agrawal

ಬರೋಬ್ಬರಿ 7 ವರ್ಷಗಳ ನಂತರ ನಿರ್ದೇಶನಕ್ಕಿಳಿಯಲಿರೋ ಉಪ್ಪಿ!!

Nikita Agrawal

ಈ ಸಿನಿಮಾ ನನ್ನ ಕೆರಿಯರ್ ನ ಮುಖ್ಯವಾದ ಸಿನಿಮಾ – ಲಿಖಿತ್ ಶೆಟ್ಟಿ

Nikita Agrawal

Leave a Comment

Share via
Copy link
Powered by Social Snap