ಕೆ.ಎಚ್. ಮುನಿಯಪ್ಪ ಕಡೆಗಣನೆ : ಮೇತ್ರಿ ಆಕ್ರೋಶ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಏಳು ಸಲ ಸಂಸದರಾಗಿ ಎರಡು ಸಲ ಮಂತ್ರಿಯಾಗಿ, ರಾಜ್ಯದ ಮಂತ್ರಿಯಾಗಿ ರಾಜಕೀಯ ಅನುಭವ ಹೊಂದಿರುವ ಹಿರಿಯ ರಾಜಕಾರಣಿ ಕೆಎಚ್ ಮುನಿಯಪ್ಪ ಅವರ ಕಡೆಗಣನೆ ಮಾಡಿದರೆ ಮಾದಿಗ ಸಮಾಜದಿಂದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಮಾದಗ ದಂಡೋರ (ಎಂಆರ್ ಪಿಎಸ್) ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ ಮೇತ್ರಿ ಮಲ್ಹಾರ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನಿರಂತರವಾಗಿ ಮಾದಿಗರಿಗೆ ಮೋಸ ಮಾಡ್ತಾ ಬರುತ್ತಿದ್ದು ಇದು ಮುಂದುವರೆಸಿದರೆ ಸರಿಯಾದ ಪಾಠ ಕಲಿಸಲಾಗುವುದು, ಕೆ.ಎಚ್. ಮುನಿಯಪ್ಪ ಅವರನ್ನು ಪಕ್ಷ ಕಡೆಗಣಿಸುದ್ದೇ ಯಾದಲ್ಲಿ ಮುಂಬರುವ ದಿನಗಳಲ್ಲಿ ಮಾದಿಗ ಸಮುದಾಯದವರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಲಿದ್ದೇವೆ ಮತ್ತು ಮಾದಿಗರಿಗೆ ನಿಗಮ ಮಂಡಲ ಸ್ಥಾನ ಕೂಡ ನೀಡಿಲ್ಲ ಕಾಂಗ್ರೆಸ್ ಘೋರ ಅನ್ಯಾಯ ಮಾಡುತ್ತಿದ್ದಾರೆ ಒಂದು ವೇಳೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಈ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ
ಎಂದು ಮೇತ್ರಿ ಮಲ್ಹಾರ ಆಕ್ರೋಶವ್ಯಕ್ತಪಡಿಸಿದ್ದಾರೆ.