Karnataka Bhagya

‘ಗಜಿನಿ’ ಬೆಡಗಿ ಬಾಳಲ್ಲಿ ಬಿರುಗಾಳಿ? ವಿಚ್ಛೇದನಕ್ಕೆ ಮುಂದಾದ್ರಾ ನಟಿ ಆಸಿನ್?

ದಶಕದ ಹಿಂದೆ ಕೇರಳ ಕುಟ್ಟಿ ಆಸಿನ್ ಬಹುಬೇಡಿಕೆಯ ನಟಿಯಾಗಿ ಮೆರೆದರು. ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಗಮನ ಸೆಳೆದಿದ್ದರು. ವೃತ್ತಿಜೀವನದ ಉತ್ತುಂಗದಲ್ಲಿ ಇದ್ದಾಗಲೇ ‘ಗಜಿನಿ’ ಬೆಡಗಿ ಮದುವೆಯಾಗಿ ಚಿತ್ರರಂಗದಿಂದ ದೂರಾಗಿದ್ದರು. ಉದ್ಯಮಿ ರಾಹುಲ್ ಶರ್ಮಾ ಎಂಬುವವರ ಕೈ ಹಿಡಿದ ಚೆಲುವೆಗೆ ಒಬ್ಬ ಮಗಳು ಇದ್ದಾಳೆ. ಇದೀಗ ದಂಪತಿ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ಬಿಪಿಎಲ್ ಮೊಬೈಲ್ ಜಾಹೀರಾತಿನಲ್ಲಿ ಮೊದಲ ಬಾರಿಗೆ ಆಸಿನ್ ಕಾಣಿಸಿಕೊಂಡಿದ್ದರು. ನಂತರ ನರೇಂದ್ರನ್ ಮಕಾನ್ ಜಯಕಾಂತನ್ ವಕಾ’ ಎನ್ನುವ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ತೆಲುಗಿನ ‘ಅಮ್ಮ ನಾನ್ನ ಓ ತಮಿಳು ಅಮ್ಮಾಯಿ’ ಸಿನಿಂಆ ದೊಡ್ಡ ಬ್ರೇಕ್ ಕೊಡ್ತು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸೂರ್ಯ ಜೊತೆ ನಟಿಸಿದ ‘ಗಜನಿ’ ಸಿನಿಮಾ ಆಕೆಗೆ ಬಾಲಿವುಡ್ ಬಾಗಿಲು ತೆರೆದಿತ್ತು. ನೋಡ ನೋಡುತ್ತಲೇ ಆಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್‌ ಕುಮಾರ್‌ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

2016ರಲ್ಲಿ ಉದ್ಯಮಿ ರಾಹುಲ್ ಶರ್ಮ ಜೊತೆ ಆಸಿನ್ ಹೊಸ ಬಾಳಿಗೆ ಕಾಲಿಟ್ಟರು. ನಂತರ ಚಿತ್ರರಂಗ ತೊರೆದು ಆಕೆ ತಮ್ಮ ಪತಿ ರಾಹುಲ್ ಜೊತೆ ಮೈಕ್ರೋ ಮ್ಯಾಕ್ಸ್ ಕಂಪನಿಯಲ್ಲೂ ಕೆಲಸ ಮಾಡಿದರು. ಇದೀಗ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರು ದೂರಾಗಲು ನಿರ್ಧರಿಸಿದ್ದಾರೆ ಎನ್ನುವ ವದಂತಿ ಹರಡಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.

ಸೋಷಿಯಲ್ ಮೀಡಿಯಾದಿಂದ ದೂರ:

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂದೆ ನಿಂತು ಆಸಿನ್ ಹಾಗೂ ರಾಹುಲ್ ಶರ್ಮ ಮದುವೆ ಮಾಡಿಸಿದ್ದರು ಎನ್ನಲಾಗಿತ್ತು. ಬಹಳ ದಿನಗಳ ಕಾಲ ದಂಪತಿ ಬಹಳ ಸಂತೋಷವಾಗಿ ಜೀವನ ಸಾಗಿಸಿದರು. ಫ್ಯಾಮಿಲಿ ವಕೇಷನ್ ಫೋಟೊಗಳು, ವಿಡಿಯೋಗಳು ವೈರಲ್ ಆಗುತ್ತಿತ್ತು. ಆದರೆ ನಂತರ ಆಕೆ ಸೋಶಿಯಲ್‌ ಮೀಡಿಯಾದಲ್ಲಿ ಸೈಲೆಂಟ್ ಆದರು. ಕಳೆದ ಕೆಲ ದಿನಗಳಿಂದ ಆಸಿನ್- ರಾಹುಲ್ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದೆ, ಶೀಘ್ರದಲ್ಲೇ ದಂಪತಿ ಡಿವೋರ್ಸ್ ತಗೋತ್ತಾರೆ ಅನ್ನೋ ಮಾತುಗಳು ಈಗ ಕೇಳಿಬರ್ತಿದೆ.

ಆಸಿನ್ ಗಟ್ಟಿ ನಿರ್ಧಾರ?

ಆಸಿನ್ ಪತಿ ರಾಹುಲ್ ಶರ್ಮಾ ಕೆಲ ದಿನಗಳಿಂದ ಬೇರೆ ಹುಡುಗಿಯ ಜೊತೆ ಅಫೇರ್ ಇಟ್ಟುಕೊಂಡಿದ್ದಾರಂತೆ, ಈ ವಿಷಯ ಗೊತ್ತಾಗಿ ಎಚ್ಚರಿಸಿದರೂ ಪ್ರಯೋಜನವಾಗಲಿಲ್ಲವಂತೆ. ಇದೇ ಕಾರಣಕ್ಕೆ ಆಸಿನ್ ಈಗ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಮಗಳು ಇದ್ದರೂ ಕೂಡ ಇಂತಾದೊಂದು ಗಟ್ಟಿ ನಿರ್ಧಾರಕ್ಕೆ ಕೇರಳ ಚೆಲುವೆ ಮನಸ್ಸು ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.

ಸ್ಪಷ್ಟನೆ ನೀಡುತ್ತಾರಾ ದಂಪತಿ? ಮಾಲಿವುಡ್ ನಟಿ ಆಸಿನ್ ಡಿವೋರ್ಸ್ ಎಲ್ಲಾ ಸುಳ್ಳು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಬೆಂಕಿ ಇಲ್ದೇ ಹೊಗೆಯಾಡುವುದಿಲ್ಲ ಎನ್ನುವಂತೆ ಮತ್ತೆ ಕೆಲವರು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ವರ್ಷಗಳಲ್ಲಿ ನಟಿ ಆಸಿನ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಕಳೆದ 8 ತಿಂಗಳಿನಿಂದ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ. ಕೊನೆಯದಾಗಿ ಮಗಳ 5ನೇ ವರ್ಷದ ಹುಟ್ಟುಹಬ್ಬ ಆಚರಣೆ ಫೋಟಿಗಳನ್ನು ಹಂಚಿಕೊಂಡಿದ್ದರು. ಹಾಗಾಗಿ ಡಿವೋರ್ಸ್ ಗಾಸಿಪ್ ಬಗ್ಗೆ ದಂಪತಿ ಸ್ಪಷ್ಟನೆ ಕೊಡ್ತಾರಾ? ಕಾದು ನೋಡಬೇಕಿದೆ.

ಸೂಪರ್ ಹಿಟ್ ಚಿತ್ರಗಳಲ್ಲಿ ಆಸಿನ್

15 ವರ್ಷಗಳ ಸಿನಿಕರಿಯರ್‌ನಲ್ಲಿ ನಟಿ ಆಸಿನ್ ಕೇವಲ 25 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್, ದಳಪತಿ ವಿಜಯ್, ನಾಗಾರ್ಜುನ, ವೆಂಕಟೇಶ್‌ರಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದರು. ತೆಲುಗಿನ ‘ಶಿವಮಣಿ’, ‘ಘರ್ಷಣ’, ‘ಲಕ್ಷ್ಮಿ ನರಸಿಂಹ’ ತಮಿಳಿನ ‘ಗಜಿನಿ’, ‘ಪೋಕಿರಿ’, ‘ವರಲಾರು’ ಹಿಂದಿಯ ‘ಗಜಿನಿ’, ರೆಡಿ, ‘ಹೌಸ್‌ಫುಲ್‌- 2’, ‘ಭೋಲ್ ಬಚ್ಚನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಲಯಾಳಿ ಚೆಲುವೆ ನಟಿಸಿ ಗೆದ್ದಿದ್ದರು.

Scroll to Top
Share via
Copy link
Powered by Social Snap