ಧರ್ಮ ಸಂಘಟನೆಗೆ ಯುವ ಪೀಳಿಗೆ ಮುಂದಾಗಬೇಕಿದೆ : ಡಾ. ಭೀಮಾಶಂಕರ ಮುತ್ತಗಿ
ಕರ್ನಾಟಕ ಭಾಗ್ಯ ವಾರ್ತೆ
ಗುರುಮಠಕಲ್ : ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರ ಹಾಗೂ ಧರ್ಮಚಾರಣೆಕ್ಕೆ ವಿಶೇಷ ಪ್ರಾಮುಖ್ಯತೆ ಇದೆ, ಸಂತಸದ ಬದುಕಿಗೆ ಸಂಪತ್ತೊಂದೆ ಮುಖ್ಯವಲ್ಲ ಯುವಪೀಳಿಗೆಗೆ ಆಧ್ಯತ್ಮದ ಅರಿವು ಕೊಡುವಲ್ಲಿ ಪೋಷಕರ ಪಾತ್ರವಹಿಸಬೇಕು ಎಂದು ಶ್ರೀ ವೀರಸೋಮೇಶ್ವರ ಕೊಡ್ಲಿಮಠದ ಅಧ್ಯಕ್ಷ ಡಾ. ಭೀಮಾಶಂಕರ ಮುತ್ತಗಿ ಹೇಳಿದರು.
ಪಟ್ಟಣದ ಶ್ರೀ ಕೊಡ್ಲಿಮಠದಲ್ಲಿ ಬೆಳಿಗ್ಗೆ 8 ಘಂಟೆಯಿಂದ ಶ್ರೀ ರೇಣುಕಾಚಾರ್ಯ ಜಯಂತಿ ಪ್ರಯುಕ್ತ ರುದ್ರಾಭಿಷೇಕ, ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಮಠದಲ್ಲಿ ಹಿಂದೆ ತ್ರಿಕಾಲ ಪೂಜೆ ಜರುಗುತ್ತಿದ್ದವು, ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಪೂಜೆಯನ್ನು ವೀರಶೈವ ಧರ್ಮ ಸಂಸ್ಥಾಪಕ ಶ್ರೀ ರೇಣುಕಾಚಾರ್ಯರ ಜಯಂತಿಯಂದು ಮತ್ತೆ ಘಂಟಾನಾದ, ಮಂತ್ರಾಗೋಷಗಳಿಂದ ಝೆಂಕರಿಸುತ್ತಿರುವುದು ಮನಸ್ಸಿಗೆ ಹಿತ ತಂದಿದೆ, ಇತಿಹಾಸವುಳ್ಳ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಸಮಾಜ ಇಂದು ಶ್ರಮವಹಿಸಿಬೇಕಾಗಿದೆ ಎಂದು ಅವರು ಹೇಳಿದರು.
ಆನಂದ ಬೂದಿ ಮಾತನಾಡಿ, 2024 ತುಂಬಾ ವಿಶೇಷ ವರ್ಷವಾಗಿದ್ದು ಧಾರ್ಮಿಕ ಕ್ಷೇತ್ರದಲ್ಲಿ ವಿಸ್ಮಯಗಳೇ ನಡೆಯುತ್ತಿವೆ,ಅಯೋಧ್ಯೇಯಲ್ಲಿ ಶ್ರೀ ರಾಮಲಲ್ಲನ ವಿರಾಜಮಾನ, ಕೊಡ್ಲಿಮಠದಲ್ಲಿ ರುದ್ರಪಾರಾಯಣ ನೋಡುತ್ತಿರುವುದೇ ನಮ್ಮ ಸೌಭಾಗ್ಯ. ಧರ್ಮ ಜಾಗೃತಿಯಗಲು ಇಂದಿನ ಯುವ ಪೀಳಿಗೆ ಸಂಘಟನೆಗೊಳ್ಳಬೇಕಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ವೀರಶೈವ ಸಮಾಜದ ಬಾಂಧವರು ಉಪಸ್ಥಿತರಿದ್ದರು.
