ಕರ್ನಾಟಕ ಭಾಗ್ಯ ವಾರ್ತೆ
ಗುರುಮಠಕಲ್ : ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ, ಕಾಲರಾ ಮಲೇರಿಯಾ ಹರಡುವ ಭೀತಿ ಎದುರಾಗಿದ್ದು ಗ್ರಾಮೀಣ ಆಡಳಿತ ಸಂಪೂರ್ಣ ನಿಷ್ಕಿçಯವಾಗಿದ್ದು ಕೂಡಲೇ ವಾರಕ್ಕೊಮ್ಮೆ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅದ್ಯಕ್ಷ ನಾಗೇಶ ಗದ್ದಿಗಿ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬರೆದ ಮನವಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಸಲ್ಲಿಸಿ ಮಾತನಾಡಿದ ಅವರು,
ಹಳ್ಳಿಗಳಲ್ಲಿ ಚರಂಡಿ ತುಂಬಿ ಹರಿಯುತ್ತಿದ್ದರೂ ವಾರಕ್ಕೊಮ್ಮೆ ಚರಂಡಿ ತ್ಯಾಜ ಸ್ವಚ್ಛಗೊಳಿಸುವ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ನಿಯಮ ಇದ್ದರು ಅಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಯಾವುದೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿಲ್ಲ ಬ್ಲೀಚಿಂಗ್ ಪೌಡರ್ ಹಾಕುವುದಿಲ್ಲ ಸೊಳ್ಳೆಗಳ ನಿಯಂತ್ರಣಕ್ಕೆ ವಾರಕ್ಕೊಮ್ಮೆ ಫಾಗಿಂಗ್ ಮಾಡುವುದಿಲ್ಲ ಚರಂಡಿ ಸ್ವಚ್ಚತೆ ಮಾಡಲು ಮುಂದಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಜಯ ಕರ್ನಾಟಕ ಗ್ರಾಮ ಶಾಖೆಯ ಅಧ್ಯಕ್ಷರು ಮತ್ತು ಸಂಘಟನೆಯವರು ಈ ಕುರಿತು ಕ್ರಮ ಕೈಗೊಳ್ಳಲು ಮನವಿ ಪತ್ರ ಸಲ್ಲಿಸಿದರೆ ಕಾಟಾಚಾರಕ್ಕೆ ಒಂದು ದಿನ ಸ್ವಚ್ಚತೆ ಮಾಡಿ ಸ್ವಚ್ಚಗೊಳಿಸಿದ್ದೇವೆ ಎಂದು ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.
ಮಳೆ ಬಂದರೆ ಸಾಕು ನೀರಿನ ಟ್ಯಾಂಕರ್ ಗಳಿಗೆ ಸರಬರಾಜು ಆಗುವ ಬೋರ್ವೆಲ್ ಇದ್ದ ಸ್ಥಳದಲ್ಲಿ ತಿಪ್ಪೆ ಗುಂಡಿಗಳ ತ್ಯಾಜ್ಯ, ಮಲ ವಿಸರ್ಜನೆ ಮಾಡಿದ ನೀರು ಬೋರ್ವೆಲ್ ಮತ್ತು ಸರಬರಾಜು ನಳದ ಪೈಪ್ ಲೈನ್ ಒಳಗೆ ಸೇರಿ ನೀರು ಮಾಲಿನವಾಗಿ ಅದೇ ನೀರು ಟ್ಯಾಂಕರ್ ಮುಖಾಂತರ ಗ್ರಾಮಗಳಲ್ಲಿ ಸರಬರಾಜು ಆಗುತ್ತದೆ ಇದರಿಂದ ಅನೇಕ ಕಡೆ ವಾಂತಿ ಭೇದಿ ಆಗಿ ಸಾವನ್ನಪ್ಪಿದರು ಸಹ ಗ್ರಾಪಂ ಆಡಳಿತಗಳು ಎಚ್ಚೆತ್ತುಕೊಂಡಿಲ್ಲ. ಕಲುಷಿತ ನೀರು ಬೋರ್ವೆಲ್ ಒಳಗೆ ಹೋಗದಂತೆ ಸೋರಿಕೆ ಆಗುತ್ತಿರುವ ಪೈಪ್ ಲೈನ್ ದುರಸ್ತಿ ಕಾರ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗೆ ನಿರ್ಲಕ್ಷö್ಯಕ್ಕೆ ಈ ಹಿಂದೆ ಅನಪುರ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿ ಸಾವನ್ನಪ್ಪಿದ ಘಟನೆ ನಡೆದಿದೆ ಅಲ್ಲದೆ ಚಿನ್ನಾಕಾರ, ಗಾಜರಕೋಟ್, ಚಿಂತನಹಳ್ಳಿ ಯದಲಾಪುರ್ ಗ್ರಾಮಗಳಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿ ವಾಂತಿ ಭೇಧಿಗೆ ಜನತೆ ಸಾವು ನೋವು ಅನುಭವಿಸಿದ್ದಾರೆ.
ತಕ್ಷಣ ಜಿಲ್ಲಾ ಗ್ರಾಮೀಣ ಆಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡು ಮುಂದಾಗುವ ಅನಾಹುತ ತಡೆಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ನಾಗೇಶ್ ಗದ್ದಿಗಿ,ತಾಲೂಕ ಕಾರ್ಯಾಧ್ಯಕ್ಷರಾದ ನರಸಿಂಹಲು ಗಂಗನೊಳ,ಎಸ್.ಪಿ ಮಹೇಶಗೌಡ, ಉದಯಕುಮಾರ ಕೊಂಕಲ್, ವೀರೇಶ್ ಪುಟಪಾಕ್, ಮಾಧವ ರೆಡ್ಡಿ ಚಂಡ್ರಿಕಿ, ವಿಜಯ್ ಕೊಂಕಲ್, ರವಿಕುಮಾರ್ ವಾರದ, ಆಯಾಝ್ ಅಲಿ, ಭೀಮು ಆರ್ಟಿಸ್ಟ್, ಗೌರೀಶ್,ಬನ್ನಪ್ಪ ಮಡುಗು,ಜಗಪ್ಪ ನಕ್ಕ, ಮಹಾದೇವ ಕಂಬಾರ ಸೇರಿದಂತೆ ಹಲವು ಮುಖಂಡರು ಸಂಘಟನೆಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.