Karnataka Bhagya
Blogಅಂಕಣ

ನಟ ರಿಷಬ್ ಶೆಟ್ಟಿಗೆ ಒಲಿದ ವಿಶ್ವ ಶ್ರೇಷ್ಠ ಪ್ರಶಸ್ತಿ, ವೇದಿಕೆ ಮೇಲೆ ಪಂಚೆಯಲ್ಲಿ‌‌ ಮಿಂಚಿದ ಶೆಟ್ರು..!

ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ನಟ, ನಿರ್ದೇಶಕ, ನಿರ್ಮಾಪಕನಾಗಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ.ವಿಶೇಷ ಎಂದರೆ ಈಗ ರಿಷಬ್​​ಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರೆತಿದೆ. ಅಮೆರಿಕದ ವಾಷಿಂಗ್ಟನ್​ನ ಸಿಯಾಟಲ್​ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಈಗ ಅದ್ದೂರಿ ಕಾರ್ಯಕ್ರಮದಲ್ಲಿ ಈ ಅವಾರ್ಡ್ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆನೆಟರ್ ಡಾ. ದೆರೀಕ್ ಟ್ರಸ್ಫರ್ಡ್ ಹಾಜರಿ ಹಾಕಿದ್ದರು.

ರಿಷಬ್ ಶೆಟ್ಟಿ
‘ನನಗೆ ಅನೇಕ ಕಾರ್ಯಕ್ರಮಕ್ಕೆ ಬರೋಕೆ ಆಹ್ವಾನ ಇತ್ತು. ಆದರೆ, ಯಾವುದಕ್ಕೂ ಬರೋಕೆ ಆಗಿರಲಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ನಾನು ಆಗಮಿಸಿದೆ. ನನಗೆ ನಿಜಕ್ಕೂ ಖುಷಿ ಆಗುತ್ತಿದೆ. ಕನ್ನಡಿಗರ ನೋಡಲು ಸಾಕಷ್ಟು ಸಂತೋಷ ಆಗುತ್ತಿದೆ. ಕನ್ನಡಿಗರಿಂದಾಗಿ ನಾನು ಇಲ್ಲಿದ್ದೇನೆ’
‘ಕಾಂತಾರ’ ಚಿತ್ರವನ್ನು ವಿಶ್ವದ ಅನೇಕರು ನೋಡಿದ್ದಾರೆ. ಆ ಸಾಲಿನಲ್ಲಿ ಟ್ರಸ್ಫರ್ಡ್ ಕೂಡ ಇದ್ದಾರೆ! ಈ ಚಿತ್ರವನ್ನು ಯೂನಿವರ್ಸಲ್ ಸಿನಿಮಾ ಎಂದು ಅವರು ಕರೆದಿದ್ದಾರೆ. ಅಮೆರಿಕ ಹಾಗೂ ವಾಷಿಂಗ್ಟನ್​ಗೆ ಕನ್ನಡಿಗರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ಟ್ರಸ್ಫರ್ಡ್ ಮೆಚ್ಚುಗೆ ಸೂಚಿಸಿದ್ದಾರೆ.

ನಗರದ ಪ್ಯಾರಾಮೌಂಟ್ ಥಿಯೇಟರ್​ಗೆ 95 ವರ್ಷಗಳ ಇತಿಹಾಸ ಇದೆ‌. ಬರಾಕ್ ಒಬಾಮ ಸೇರಿ ಹಲವು ಗಣ್ಯರು ಈ ವೇದಿಕೆ ಮೇಲೆ ನಿಂತು ಭಾಷಣ ಮಾಡಿದ್ದರು. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ‌ ಅನ್ನೋದು ವಿಶೇಷ. ಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

ಈ‌ವರ್ಷದ ಹುಟ್ಟುಹಬ್ಬ ದರ್ಶನ್ ಗೆ ಸಖತ್ ಸ್ಪೆಷಲ್ ಕಾರಣ ಇಲ್ಲಿದೆ

Nikita Agrawal

ಪ್ರಿಯಾಂಕ ಚೋಪ್ರ ಮನೆಗೆ ಬಂತು ಮುದ್ದಾದ ಹೆಣ್ಣು ಮಗು.. ಆದರೆ ಪಿಗ್ಗಿ ತಾಯಿಯಲ್ಲ

Nikita Agrawal

ಹೀಗಿದೆ ನೋಡಿ ಕಿರುತೆರೆ ರಾಧೆಯ ನಟನಾ ಜರ್ನಿ

Nikita Agrawal
Share via
Copy link
Powered by Social Snap