ಕರ್ನಾಟಕ ಭಾಗ್ಯ ವಾರ್ತೆ
ಬೆಂಗಳೂರು : ರಾಜಕೀಯ ಪಕ್ಷಗಳಿಂದ ಎಂಪಿ ಟಿಕೆಟ್ ವಂಚಿತರಾದ ಶೋಷಿತ ಹಿಂದುಳಿದ ವರ್ಗಗಳ ಬಂಧುಗಳಿಗೆ ಅಹಿಂದ ಸಂಘಟನೆ ವತಿಯಿಂದ ಪ್ರತಿಯೊಂದು ಲೋಕಸಭಾ ಕ್ಷೇತ್ರದ ಕಣಕ್ಕೆ ಪಕ್ಷೇತರ ಅಹಿಂದ ಬೆಂಬಲ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಿನ್ ತಿಳಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹಿಂದುಳಿದ ಸಮುದಾಯಗಳ ಬಂಧುಗಳಿಗೆ ಲೋಕಸಭಾ ಚುನಾವಣೆಯಲ್ಲಿ ನಿರ್ಲಕ್ಷಿಸುವುದು ಖಂಡನೀಯ ವಿಷಯವಾಗಿದ್ದು, ಬಲಿಷ್ಠ ಸಮುದಾಯಗಳಿಗೆ ಹೆಚ್ಚು ಟಿಕೆಟು ಹಂಚಿಕೆ ಮಾಡಿದ್ದು, ಅಹಿಂದ ಬಂಧುಗಳನ್ನು ಕಡೆಗಣಿಸಿರುವುದರಿಂದ ನಮ್ಮ ಹಕ್ಕು ನಮಗೆ ಸಿಗ್ತಾ ಇಲ್ಲ , ನಾವೆಲ್ಲರೂ ತುಳಿತಕ್ಕೆ ಒಳಗಾಗಿದ್ದೆವೆ ನಮಗೆ ರಾಜಕೀಯ ಸ್ಥಾನಮಾನ ಸಿಕ್ತಾ ಇಲ್ಲ. ನಾವೆಲ್ಲರೂ ಒಗ್ಗಟ್ಟಾದರೆ ನಮಗೆ ಸಾಮಾಜಿಕ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಹಿಂದ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳಿಂದ ಟಿಕೆಟ್ ಸಿಕ್ಕಂತ ಲೋಕಸಭಾ ಕ್ಷೇತ್ರಗಳು ಹೊರತುಪಡಿಸಿ ಉಳಿದ ಎಲ್ಲಾ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಅಭ್ಯರ್ಥಿಗಳನ್ನು ಇಳಿಸುವ ಉದ್ದೇಶವಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ವಂಚಿತ ಅಭ್ಯರ್ಥಿಗಳು ಬೇಗನೆ ಸಂಪರ್ಕ ಮಾಡಬೇಕು 8087233720 ಎಂದು ಅವರು ಕೋರಿದ್ದಾರೆ.