Karnataka Bhagya
ಕರ್ನಾಟಕ

ಬಡ, ಪ್ರತಿಭಾವಂತ ಮಕ್ಕಳು ಮೆಡಿಕಲ್ ಓದಬೇಕನ್ನುವುದು ನನ್ನಾಸೆ : ಸಚಿವ ಡಾ.ಶರಣಪ್ರಕಾಶ ಪಾಟೀಲ್

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ:

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವ ಉದ್ದೇಶ ಹೊಂದಿರುವ ರಾಜ್ಯ ಸರ್ಕಾರ, ಈ ನಿಟ್ಟಿನಲ್ಲಿ ಇಷ್ಟರಲ್ಲಿಯೇ
ರಾಮನಗರ, ಬಾಗಲಕೋಟೆ ಜಿಲ್ಲೆಗಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಭಾಂಗಣದಲ್ಲಿ ನಡೆದ ಶನಿವಾರ ಆಯೋಜಿಸಲಾಗಿದ್ದ ಐಎಎಂಎಂ-ಕೆಎಸ್ ನ 30ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನಿರ್ಮಿಸಬೇಕೆನ್ನುವುದು ನನ್ನ ಗುರಿಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 24 ಮೆಡಿಕಲ್ ಕಾಲೇಜು ಅಸ್ತಿತ್ವದಲ್ಲಿ ಇವೆ ಎಂದರು. ಬಡವರು, ಕೂಲಿ ಕಾರ್ಮಿಕರ ಮಕ್ಕಳು ಮೆಡಿಕಲ್ ವ್ಯಾಸಂಗ ಮಾಡಿ ಡಾಕ್ಟರ್ ಆಗಬೇಕೆಂದು ಕನಸು ನನ್ನದು, ನಾನು 2013 ರಲ್ಲಿ ಪ್ರಥಮವಾಗಿ ವೈದ್ಯಕೀಯ ಶಿಕ್ಷಣ ಆಗುವ ಅವಕಾಶ ದೊರಕಿತು. ಅಂದಿನಿಂದ ಇಂದಿನ ಅವಧಿಯಲ್ಲಿಯೂ ಸಹ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ಮಾಣ ಮಾಡುವಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡಿದ್ದೇನೆ ಎಂದರು.
ಗಿರಿಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಮೆಡಿಕಲ್ ಕಾಲೇಜು ನೂತನವಾಗಿ ಆರಂಭವಾಗಿದ್ದು, ಇಲ್ಲಿನ ನರ್ಸಿಂಗ್ ಕೋರ್ಸ್ ಸಹ ಶುರು ಮಾಡಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಕಲಬುರಗಿ ಹೆಲ್ತ್ ಹಬ್ ಮಾಡಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯನ್ನು ಸಹ ಬರುವ ದಿನಗಳಲ್ಲಿ ಮೆಡಿಕಲ್ ಹಬ್ ಮಾಡುವ ಉದ್ದೇಶವಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಗಳಿಗೆ ಜನರು ಬರುವಂತೆ ಎಲ್ಲಾ‌ ಮೂಲ ಸೌಲಭ್ಯಗಳನ್ನು ನೀಡುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡೀನ್ ಡಾ.ಸಂದೀಪ್ ವಿ.ಎಚ್., ಇಲ್ಲಿ ಮೆಡಿಕಲ್ ಕಾಲೇಜು ನೂತನವಾಗಿ ಆರಂಭವಾದರೂ ಸಹ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಪ್ರಯತ್ನದಿಂದ ನರ್ಸಿಂಗ್ ಕೋರ್ಸ್ ಆರಂಭವಾಗಿದೆ. ಸಂಸ್ಥೆ ಪ್ರಗತಿಗಾಗಿ ನಾವು ಕೊಟ್ಟ ಪ್ರಸ್ತಾವನೆಯನ್ನು ತಡ ಮಾಡದೆ ಅನುದಾನ ಬಿಡುಗಡೆ ಮಾಡುವಲ್ಲಿ ಹಾಗೂ ಇನ್ನಿತರ ಕಾರ್ಯ ಯೋಜನೆಗಳ ಬಗ್ಗೆ ಸದಾ ಪಾಸಿಟಿವ್ ಬೆಂಬಲ ಇದೆ ಎಂದು ಹೇಳಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ್ , ಡಾ.ಶ್ರೀದೇವಿ ಹೆಚ್, ಡಾ.ನವಾಜ್ ಉಮರ್, ಡಾ.ಸಿದ್ದೇಶ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಮ್ಮೇಳನಕ್ಕೆ ಆಗಮಿಸಿದ ವೈದ್ಯರು, ವಿದ್ಯಾರ್ಥಿಗಳು ಸೇರಿದಂತೆಯೇ ಇತರರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತ ವೈದ್ಯರಿಗೆ ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿದರು. ಸಮ್ಮೇಳನದ ಮಾಹಿತಿಯುಳ್ಳ ಪುಸ್ತಕ ಬಿಡುಗಡೆಗೊಳಿಸಿದರು.

Related posts

ಪರಮ್ ವಾಹ್ ಸ್ಟುಡಿಯೋಸ್ ಸೇರಲಿದ್ದಾರೆ ‘ನಮ್ಮನೆ ಯುವರಾಣಿ’.

Nikita Agrawal

ಹೊಸ ಚಿತ್ರಕ್ಕಾಗಿ ‘ಡಾಲಿ ಪಿಕ್ಚರ್ಸ್’ ಜೊತೆ ಕೈ ಜೋಡಿಸಿದ ‘ಕೆ ಆರ್ ಜಿ’.

Nikita Agrawal

ಚಾರಿತ್ರಿಕ ಸಿನೆಮಾಗಳು ಜನತೆಯ ಮನೋಧರ್ಮ ಬದಲಿಸಬಲ್ಲವು – ಡಾ.ಹೊನ್ಕಲ್

Mahesh Kalal

Leave a Comment

Share via
Copy link
Powered by Social Snap