ಬಸವೇಶ್ವರ ಭಾವಚಿತ್ರ ವಿರೂಪ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ :
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರವನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದನ್ನು ಖಂಡಿಸಿ ಯಾದಗಿರಿ ಬಸವ ಉತ್ಸವ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಇಲ್ಲಿನ ಸುಭಾಷ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು, ಕಿಡಿಗೇಡಿಗಳನ್ನು ಕಲಬುರಗಿ ಜಿಲ್ಲಾಡಳಿತ ಕೂಡಲೇ ಬಂಧಿಸಬೇಕು, ಇನ್ನೊಮ್ಮೆ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತವು ಎಚ್ಚರವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಸೊನ್ನದ, ಸಿದ್ದುಗೌಡ ಕಾಮರೆಡ್ಡಿ, ಸಿದ್ದುಗೌಡ ತಂಗಡಗಿ, ಮಂಜುನಾಥ ಜಡಿ, ಜಗದೀಶ್ ನೂಲಿನವರ್, ಪಿಂಟು ಜಾಕ, ಸುನಿಲ್ ಕಡೇಚೂರ್, ಭರತ, ನಾಗಯ್ಯ ಸ್ವಾಮಿ, ಸುಭಾಷ ದೇವದುರ್ಗ , ಸೂಗೂರೇಶ ಚಾಮ, ಅಭಿ ಸ್ವಾಮಿ, ವಿನಯ, ಪ್ರಭು, ಸಿದ್ದು ರೆಡ್ಡಿ ತಂಗಡಿಗಿ ಸೇರಿದಂತೆ ಇತರರಿದ್ದರು.