Karnataka Bhagya
ಕರ್ನಾಟಕ

ಗುರುಮಠಕಲ್ ತಾಲೂಕಿನ ಅಜಲಾಪುರ ಗ್ರಾಮದಲ್ಲಿ ಲಿಂ. ದ್ವಾರಕಮ್ಮ ಪಾಂಡುರಂಗ ತಾತನವರ ೭ನೇ ವರ್ಷದ ಪುಣ್ಯಸ್ಮರಣೆ ಹಾಗೂ ಬಲಭೀಮಸೇನ ರಥೋತ್ಸವಕ್ಕೆ ನೇರಡಗಂ ಶ್ರೀ ಚಾಲನೆ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ನಮಗಿರುವ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ದೇವರ ಆರಾಧನೆ ಮಾಡಬೇಕು. ಶ್ರದ್ಧೆ, ನಂಬಿಕೆ ಮತ್ತು ಭಕ್ತಿಯಿಂದ ಬೇಡಿಕೊಂಡಲ್ಲಿ ದೇವರು ಖಂಡಿತವಾಗಿಯೂ ನಮಗೆ ಒಳಿತು ಮಾಡುತ್ತಾನೆ ಎಂಬ ಅಚಲ ನಂಬಿಕೆ ಪ್ರತಿಯೊಬ್ಬರಲ್ಲಿ ಇರಲಿ ಎಂದು ನೇರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಕರೆ ನೀಡಿದರು.

ಗುರುಮಠಕಲ್ ತಾಲೂಕಿನ ಅಜಲಾಪುರ ಗ್ರಾಮದಲ್ಲಿ ಗುರುವಾರ ನಡೆದ ಲಿಂಗೈಕ್ಯ ದ್ವಾರಕಮ್ಮ ಪಾಂಡುರಂಗ ತಾತನವರ ೭ನೇ ವರ್ಷದ ಪುಣ್ಯಸ್ಮರಣೆ ಹಾಗೂ ಬಲಭೀಮಸೇನ ರಥೋತ್ಸವ ಕಾರ್ಯಕ್ರಮದ ನಂತರ ಜರುಗಿದ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಇತರ ಎಲ್ಲಾ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾಗಿದ್ದು ಇದಕ್ಕಾಗಿ ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ಸಾಗಬೇಕು. ಸದ್ಗುರುವಿನ ಆರಾಧನೆಯಿಂದ ಜೀವನ ಪಾವನವಾಗಲಿದೆ ಎಂದು ಆಶೀರ್ವಚನ ನೀಡಿದರು.

ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡವರು ಸಮಾಜದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ, ತಾನು ತನ್ನ ಕುಟುಂಬ ಎಂದು ಸ್ವಾರ್ಥ ಜೀವನ ನಡೆಸಿದವರ ಹೆಸರು ಸಮಾಜದಲ್ಲಿ ಬೇಗನೆ ಅಳಿಸಿ ಹೋಗುತ್ತದೆ. ನಾವು ಎಷ್ಟು ದಿನ ಜೀವಂತವಾಗಿ ಇದ್ದೇವೆ ಎನ್ನುವುದಕ್ಕಿಂತ ಜೀವನದಲ್ಲಿ ಎಷ್ಟು ಪುಣ್ಯದ ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ. ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚುವುದು ಪಾಪದ ಕೆಲಸ. ದೀಪ ಹಚ್ಚುವುದು ಪುಣ್ಯದ ಕೆಲಸವಾಗಿದೆ. ಕರ್ಮ ಯಾರನ್ನು ಶಿಕ್ಷಿಸದೆ ಬಿಡುವುದಿಲ್ಲ ಹೀಗಾಗಿ ಸತ್ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗೋಣ ಎಂದರು.

ಶಂಕರಪ್ಪ ತಾತನವರ ನೇತೃತ್ವದಲ್ಲಿ ಜರುಗುತ್ತಿರುವ ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಭಕ್ತರು ಸೇರುತ್ತಿರುವುದು ಅತ್ಯಂತ ಖುಷಿಯ ವಿಚಾರ ಭಕ್ತರ ಭಕ್ತಿಯೇ ಗುರುವಿನ ಶಕ್ತಿಯಾಗಿದ್ದು, ಭಗವಂತ ನಿಮ್ಮೆಲ್ಲರ ಕಷ್ಟಗಳನ್ನು ಇತ್ಯರ್ಥ ಮಾಡುವ ಶಕ್ತಿ ಅವರಿಗೆ ನೀಡಲಿ ಎಂದು ಆಶಿಸಿದರು.

ಈ ವೇಳೆ ಜಾತ್ರಾ ಮಹೋತ್ಸವದ ರೂವಾರಿ ಶಂಕರಪ್ಪ ತಾತ, ಎ ರಾಘವೇಂದ್ರರಾವ್ ಕುಲಕರ್ಣಿ, ಮಹೇಶ ಮುತ್ಯಾಜಿ ಬೇನಕನಹಳ್ಳಿ, ಲಿಂಗಪ್ಪ ತಾತ ಗುರ್ಲಪಲ್ಲಿ, ಬುಸ್ಸಣ್ಣ ತಾತ ಬೈರಂಪಲ್ಲಿ, ದೇವಪ್ಪಗೌಡ ಗುತ್ತೇದಾರ ರಾಚನಹಳ್ಳಿ, ಸೈದಪ್ಪ ಗುತ್ತೇದಾರ, ಕಿಷ್ಟಪ್ಪ ಪೂಜಾರಿ, ಹಬೀಬ್ ಸಾಬ್, ಬನ್ನಯ್ಯ ಮುತ್ಯಾ ಜೋಳದಡಗಿ, ದಿನೇಶ ಸ್ವಾಮಿ ನಾರಾಯಣಪೇಟ, ಶಿವರಾಮಪ್ಪ ತಾತ ಕುಣ್ಸಿ, ನರಸಪ್ಪ ತಾತ ಬಳಿಚಕ್ರ, ಸುದರ್ಶನ್ ಜೈಗ್ರಾಮ, ಮಹೇಂದ್ರ ಅನಪೂರ, ಚಂದ್ರಕಾAತ ಕಟ್ಟಿಮನಿ, ಅಂಜಪ್ಪ ಮೌಲಾಲಿ ಆರಾಧಕರು, ಚಂದ್ರಶೇಖರ್ ಶಟ್ಟಿ, ನಾಗರೆಡ್ಡಿ, ಬಾಲಾಜಿ, ಶಿವುಕುಮಾರ ಆವಂಟಿ ಸೇರಿದಂತೆ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಇಮ್ರಾನ್ ಅಜಲಾಪುರ ಅವರು ಸ್ವಾಗತಿಸಿ, ನಿರೂಪಿಸಿದರು.

Related posts

ರಗಡ್ ಅವತಾರದಲ್ಲಿ ಅಭಿಷೇಕ್ ಅಂಬರೀಶ್

Nikita Agrawal

ಕ್ರೇಜಿ ಸ್ಟಾರ್ ಮಗನ ‘ಪ್ರೀ-ರಿಲೀಸ್’ ಇವೆಂಟ್

Nikita Agrawal

ಸಲ್ಮಾನ್ ಖಾನ್ ಹೊಸ ಚಿತ್ರಕ್ಕೆ ರವಿ ಬಸ್ರುರ್ ಸಂಗೀತ.

Nikita Agrawal

Leave a Comment

Share via
Copy link
Powered by Social Snap