Karnataka Bhagya
Blogಅಂಕಣ

ಮಲೇಷ್ಯಾಗೆ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಭೇಟಿ : ಯಾವಾಗ? ಕಾರಣ ಏನು?

‘KGF 2’ ಬಳಿಕ ರಾಕಿಂಗ್‌ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅಂದ್ಹಾಗೆ, ದಿಢೀರನೇ ಯಶ್ ಮಲೇಷ್ಯಾಗೆ ತೆರಳುತ್ತಿರೋದ್ಯಾಕೆ?

ಮಲೇಷ್ಯಾಗೆ ರಾಕಿಂಗ್ ಸ್ಟಾರ್ ಯಶ್

ಇನ್ನೆರಡು ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾದಲ್ಲಿರುವ ತಮ್ಮ ಅಭಿಮಾನಿಗಳನ್ನು ಮಾಡುತ್ತಿರೋ ಬಗ್ಗೆ ಸುಳಿವು ಸಿಕ್ಕಿದೆ. ಸಾಮಾನ್ಯವಾಗಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ತಮ್ಮ ಮನೆಗೆ ಬರುವ ಅಭಿಮಾನಿಗಳನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಯಶ್, ಕೆಲವೇ ತಿಂಗಳ ಹಿಂದಷ್ಟೇ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದರು.

ಈಗ ದಿಢೀರನೇ ಮಲೇಷ್ಯಾಗೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಪ್ರಯಾಣ ಬೆಳೆಸುತ್ತಿದ್ದಾರೆ. ಅಂದಹಾಗೆ, ಯಶ್ ಮಲೇಷ್ಯಾದಲ್ಲಿ ನಡೆಯಲಿರುವ ಒಂದು ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಈ ವೇಳೆ ಜುಲೈ 8ರಂದು ತಮ್ಮ ಅಭಿಮಾನಿಗಳನ್ನೂ ಭೇಟಿ ಮಾಡುತ್ತಿದ್ದಾರೆ ಎಂದು ಮಲೇಷ್ಯಾದ ವೆಬ್‌ಸೈಟ್ ಒಂದು ವರದಿ ಮಾಡಿದೆ.

ಮಲೇಷ್ಯಾದಲ್ಲಿ ಏನದು ಕಾರ್ಯಕ್ರಮ?

ಮಲೇಷ್ಯಾದಲ್ಲಿ ಮಲಿಕ್ ಸ್ಟ್ರೀಮ್ಸ್ ಕಾರ್ಪೊರೇಷನ್ ಒಡೆತನದ ಎರಡನೇ ಎಂಎಸ್ ಗೋಲ್ಡ್ ಬುಟಿಕ್ ಉದ್ಘಾಟನೆಗೆ ಯಶ್ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅಲ್ಲಿನ ಕೌಲಾಲಂಪುರ್‌ದಲ್ಲಿರುವ ಜಲಾನ್ ಮಸ್ಜಿದ್ ಇಂಡಿಯಾದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಕೆಜಿಎಫ್ ಬಳಿಕ ರಿಸ್ಕ್ ತೆಗೆದುಕೊಳ್ತಿದ್ದಾರಾ ರಾಕಿ ಭಾಯ್? ಈ ಸುದ್ದಿ ನಿಜವೇ ಆದರೆ ಟೆನ್ಷನ್ ತಪ್ಪಿದ್ದಲ್ಲ! ಎಂಎಸ್ ಗೋಲ್ಡ್ ಬುಟಿಕ್‌ನ ಸಂಸ್ಥಾಪಕ ಹಾಗೂ ಕಂಪನಿಯ ಸಿಇಓ ದಟುಕ್ ಅಬ್ದುಲ್ ಮಲಿಕ್ ದಸ್ತಿಗೀರ್ ಈ ವಿಷಯವನ್ನು ಮಲೇಷ್ಯಾದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೀಗಾಗಿ ಯಶ್ ಮಲೇಷ್ಯಾಗೆ ತೆರಳುವುದು ಬಹುತೇಕ ಖಚಿತ. ಇದೇ ವೇಳೆ ಅಲ್ಲಿರುವ ತನ್ನ ಅಭಿಮಾನಿಗಳನ್ನೂ ಭೇಟಿ ಮಾಡಿ ಬರಲಿದ್ದಾರೆ.

ಶೀಘ್ರದಲ್ಲಿಯೇ ಯಶ್ 19 ಅನೌನ್ಸ್

‘ಕೆಜಿಎಫ್ 2’ ಅಂತಹ ಮೆಗಾ ಹಿಟ್ ಕೊಟ್ಮೇಲೆ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾವನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಒಂದು ಕ್ಷಣವೂ ಬಿಡದಂತೆ ಸ್ಕ್ರಿಪ್ಟ್ ಮಾಡುತ್ತಿರುವ ತಂಡ ಆದಷ್ಟು ಬೇಗ 19ನೇ ಸಿನಿಮಾವನ್ನು ಅನೌನ್ಸ್ ಮಾಡುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಯಶ್, ಸ್ಕ್ರಿಪ್ಟ್ ಲಾಕ್ ಆಗಿದೆ ಅಂತ ಹೇಳಿಕೆ ಕೊಟ್ಟಿದ್ದರು. Salaar Teaser: ‘KGF’ ಪ್ರಶಾಂತ್ ನೀಲ್ ಬತ್ತಳಿಕೆಯಲ್ಲಿದ್ದ ಸಣ್ಣ ಕಥೆ.. ಹಾಗದ್ರೆ ‘ಸಲಾರ್’? ಈಗ ಮಲೇಷ್ಯಾದಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಯಶ್ ತಮ್ಮ 19ನೇ ಸಿನಿಮಾ ಬಗ್ಗೆ ಸುಳಿವು ನೀಡುವ ಸಾಧ್ಯತೆಯಿದೆ. ಇನ್ನೊಂದು ಕಡೆ ಇಲ್ಲಿರುವ ಯಶ್ ಅಭಿಮಾನಿಗಳು 19ನೇ ಸಿನಿಮಾದ ಘೋಷಣೆಗಾಗಿ ಕಾಯುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅವರ ಮೊದಲ ಸಿನಿಮಾ ರಿಲೀಸ್ ಆಗಿದ್ದ ದಿನವೇ ಸಿನಿಮಾ ಅನೌನ್ಸ್ ಆಗಲಿದೆ ಎಂದು ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

ರಾಜ್ಯಾದ್ಯಂತ ಇಂದು ಅಪ್ಪು ಹಬ್ಬ, ‘ಜೇಮ್ಸ್’ ಜೊತೆಗೆ

Nikita Agrawal

ಲಕ‌-ಲಕ ಲಂಬರ್ಗಿನಿ ಸಾಂಗ್ ರಿಲೀಸ್ / ಫ್ಯಾನ್ಸ್ ರೆಸ್ಪಾನ್ಸ್ ಹೀಗಿದೆ

Nikita Agrawal

ಸಂಚಿನ ಸುಳಿಯಲ್ಲಿ ಕಿನ್ನರಿ ಜೋಡಿ

Nikita Agrawal
Share via
Copy link
Powered by Social Snap