ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ನಿಧಿಗಾಗಿ ದೇವರ ಕಲ್ಲಿನ ಮೂರ್ತಿ ಕಿತ್ತು ಹಾಕಿ ತೆಗ್ಗು ಗುಂಡಿ ಅಗೆದು ನಿಧಿ ಹುಡುಕಾಡಿದ ಘಟನೆ ವಡಗೇರಾ ತಾಲೂಕಿನ ಗೋಡಿಹಾಳ ಬಳಿ ನಡೆದಿದೆ.
ಗೋಡಿಹಾಳ ಹೋಗುವ ಮಾರ್ಗದಲ್ಲಿರುವ ಶಿಬರ ಮಲ್ಲಯ್ಯನ ದೇವಸ್ಥಾನ ಅಗೆದ ನಿಧಿಗಳ್ಳರು ಮೂರ್ತಿಗಳನ್ನು ಕಿತ್ತಿ ಅಲ್ಲಲ್ಲಿ ಹೊಗೆದು, ಅಲ್ಲಿರುವ ಮರಗಳನ್ನು ಕೂಡ ಕಡಿದು ಹಾಕಿದ ಘಟನೆ ನಡೆದಿದ್ದು, ಇಲ್ಲಿ ನೂರಾರು ವರ್ಷ ಹಳೆಯ ಕಾಲದ ಹಳೆಯ ಶಿಲಾಮೂರ್ತಿಗಳಿವೆ. ಶಿಬಿರ ಮಲ್ಲಯ್ಯನ ದೇವರ ಮೂರ್ತಿ ಎಂದು ಗುರುತಿಸಿದ್ದ ಕಲ್ಲಿನ ಮೂರ್ತಿಯನ್ನು ಕಿತ್ತು ಹಾಕಿ ಅದರ ಕೆಳ ಭಾಗದ ಭೂಮಿಯನ್ನು ಅಗೆದು ತೆಗ್ಗು ಮಾಡಿ ನಿಧಿಗಾಗಿ ಹುಡುಕಾಟ ನಡೆಸಲಾಗಿದೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ಪತ್ತೆಯಾಗಬೇಕಿದೆ.
ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಗ್ರಾಮಸ್ಥರು ನಿಧಿಗಳ್ಳರ ಪತ್ತೆಗೆ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

