Karnataka Bhagya
ಹೋಮ್

ಮಳೆಯಿಂದ ಹಾನಿಗೊಳಗಾದ ನಗರದ ವಿವಿಧ ವಾರ್ಡ್ಗಳಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಭೇಟಿ

ಮಳೆಯಿಂದ ಹಾನಿಗೊಳಗಾದ ನಗರದ ವಿವಿಧ ವಾರ್ಡ್ಗಳಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಭೇಟಿ

ತತಕ್ಷಣ ಪರಿಹಾರಕ್ಕೆ ಕ್ರಮ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಗುರುವಾರ ಸಂಜೆ ಭಾರಿ ಬಿರುಗಾಳಿ ಸಹಿತ ಮಳೆಯಿಂದಾಗಿ ಹಾನಿಗೊಳಗಾದ ಯಾದಗಿರಿ ನಗರದ ವಿವಿಧ ವಾರ್ಡ್ಗಳ ಬಡಾವಣೆಗಳಾದ ಯಾದಗಿರಿ ನಗರದ ಲಕ್ಷಿö್ಮÃ ನಗರ, ಬಸವೇಶ್ವರ ನಗರ, ಹೊಸಳ್ಳಿ ಕ್ರಾಸ್, ಫಿಲ್ಟರ್ ಬೆಡ್ ಏರಿಯಾ, ಅಜೀಜ್ ಕಾಲೋನಿ, ಗಂಜ್ ಏರಿಯಾ, ಶಶಿಧರ ಕಾಲೋನಿ, ಹೊಸ ಬಸ್‌ನಿಲ್ದಾಣ ಪ್ರದೇಶಗಳಿಗೆ ಭೇಟಿ ನೀಡಿ ಶಾಸಕ ಚೆನ್ನಾರೆಡ್ಡಿ ಪರಿಶೀಲಿಸಿದರು.

ಈ ವೇಳೆ ತಮ್ಮೊಂದಿಗೆ ಇದ್ದ ಅಧಿಕಾರಿಗಳಿಗೆ ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ಮಾಡುವಂತೆ ಖಡಕ್ ಸೂಚನೆಯನ್ನು ನೀಡಿದರು.

ಹಾನಿಗೊಳಗಾದ ರಸ್ತೆ, ಚರಂಡಿ, ವಿದ್ಯತ್ ಕಂಬ, ನಳದ ಸಂಪರ್ಕ ಇವೆಲ್ಲವುಗಳನ್ನು ತ್ವರಿತವಾಗಿ ಸರಿಪಡಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭೆ ಹಾಗೂ ಜೆಸ್ಕಾಂ ಸಿಬ್ಬಂದಿಗಳು ಹಾನಿಯಾದ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯವನ್ನು ಚುರುಕಿನಿಂದ ಮಾಡಬೇಕು. ಜನತೆಯಿಂದ ಯಾವುದೇ ಕುಂದು ಕೊರತೆಗಳು ಬಂದಲ್ಲಿ ತಕ್ಷಣವೇ ಅವುಗಳನ್ನು ನಿವಾರಿಸಲು ಅಧಿಕಾರಿಗಳು ಮುಂದಾಗಬೇಕು. ಮುಂದೆ ಬರುವ ಮಳೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಜನತೆಯೊಂದಿಗೆ ಸಹಕರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗಣೇಶ ದುಪ್ಪಲ್ಲಿ, ಚನ್ನಕೇಶವಗೌಡ, ಶರಣಗೌಡ ಮಾಲಿ ಪಾಟೀಲ, ಆರ್‌ಎಫ್ ಲಕ್ಷಿö್ಮÃಕಾಂತ, ಜೆಇ ಚಂದ್ರಕಾAತ, ಎಇಇ ರಜನೀಕಾಂತ, ಅಂಬರೀಶ ಜಾಕಾ, ಪ್ರಭಾಕರ್ ಇತರರಿದ್ದರು.

ಮಳೆಯಿಂದ ಹಾನಿಗೊಳಗಾದ ನಗರದ ವಿವಿಧ ವಾರ್ಡ್ಗಳಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಭೇಟಿ

Related posts

ಸಂಚಲನ ಮೂಡಿಸಿದ ಶಾಸಕ ಆರ್‌ವಿಎನ್ ಹುಣಸಗಿ; ಭೇಟಿ, ಖುಷಿಯಾದ ಜನರಿಂದ ಬಂದ ಬೇಡಿಕೆಗಳು

Karnataka Bhagya

ಯಾದಗಿರಿ ಜಿಲ್ಲಾ ಕಸಾಪ ಸಾಹಿತ್ಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

Mahesh Kalal

ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್

Mahesh Kalal

Leave a Comment

Share via
Copy link
Powered by Social Snap