ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ನಗರ ಸೇರಿದಂತೆ ಯಾದಗಿರಿ ಮತಕ್ಷೇತ್ರದ ಹಲವೆಡೆ ಭಾರಿ ಮಳೆ, ಗಾಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹಲವಾರು ಮರಗಳು ಉರುಳಿ ಹಾನಿಯಾಗಿದ್ದು ಜನರು ಸಹಕರಿಬೇಕೆಂದು ಶಾಸಕರಾದ ಚೆನ್ನಾರಡ್ಡಿ ಪಾಟೀಲ ತುನ್ನೂರ ಮನವಿ ಮಾಡಿದ್ದಾರೆ.
ಇಂದು ಮತ್ತು ನಾಳೆವರೆಗೆ ವಿದ್ಯುತ್ ಅಭಾವ ಮತ್ತು ಕೆಲವಡೆ ರಸ್ತೆ ಸಂಚಾರಕ್ಕೆ ತೊಂದರೆಯುಂಟಾದಲ್ಲಿ ನಾಗರೀಕರು ಸಹಕರಿಸಬೇಕು ಎಂದಿದ್ದಾರೆ.
ಮತಕ್ಷೇತ್ರದಲ್ಲಿ ಈ ಅವಘಡದಿಂದ ಕೋಟ್ಯಂತರ ಹಾನಿ ಸಂಭವಿಸಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಗಳಿಗೆ ಸಮಸ್ಯೆ ತಿಳಿಸಿ ಪರಿಹಾರಕ್ಕಾಗಿ ಪ್ರಯತ್ನಿಸಲಾಗುವುದು ಎಂದಿದ್ದಾರೆ.
ಶುಕ್ರವಾರ ವಾರ ನಗರ ಸೇರಿದಂತೆ ಕ್ಷೇತ್ರದಲ್ಲಿ ಸಂಚರಿಸಿ ವ್ಯವಸ್ಥೆ ಪರಿಶೀಲಿಸಲಾಗುವುದು ಎಂದು ಕರ್ನಾಟಕ ಭಾಗ್ಯದೊಂದಿಗೆ ಮಾತನಾಡಿ ಅವರು ತಿಳಿಸಿದ್ದಾರೆ.ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ನಗರ ಸೇರಿದಂತೆ ಯಾದಗಿರಿ ಮತಕ್ಷೇತ್ರದ ಹಲವೆಡೆ ಭಾರಿ ಮಳೆ, ಗಾಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹಲವಾರು ಮರಗಳು ಉರುಳಿ ಹಾನಿಯಾಗಿದ್ದು ಜನರು ಸಹಕರಿಬೇಕೆಂದು ಶಾಸಕರಾದ ಚೆನ್ನಾರಡ್ಡಿ ಪಾಟೀಲ ತುನ್ನೂರ ಮನವಿ ಮಾಡಿದ್ದಾರೆ.
ಇಂದು ಮತ್ತು ನಾಳೆವರೆಗೆ ವಿದ್ಯುತ್ ಅಭಾವ ಮತ್ತು ಕೆಲವಡೆ ರಸ್ತೆ ಸಂಚಾರಕ್ಕೆ ತೊಂದರೆಯುಂಟಾದಲ್ಲಿ ನಾಗರೀಕರು ಸಹಕರಿಸಬೇಕು ಎಂದಿದ್ದಾರೆ.
ಮತಕ್ಷೇತ್ರದಲ್ಲಿ ಈ ಅವಘಡದಿಂದ ಕೋಟ್ಯಂತರ ಹಾನಿ ಸಂಭವಿಸಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಗಳಿಗೆ ಸಮಸ್ಯೆ ತಿಳಿಸಿ ಪರಿಹಾರಕ್ಕಾಗಿ ಪ್ರಯತ್ನಿಸಲಾಗುವುದು ಎಂದಿದ್ದಾರೆ.
ಶುಕ್ರವಾರ ವಾರ ನಗರ ಸೇರಿದಂತೆ ಕ್ಷೇತ್ರದಲ್ಲಿ ಸಂಚರಿಸಿ ವ್ಯವಸ್ಥೆ ಪರಿಶೀಲಿಸಲಾಗುವುದು ಎಂದು ಕರ್ನಾಟಕ ಭಾಗ್ಯದೊಂದಿಗೆ ಮಾತನಾಡಿ ಅವರು ತಿಳಿಸಿದ್ದಾರೆ.